ಕರಾವಳಿ

ಕಡಬ: ಮಿತಿಮೀರಿದ ಕಾಡಾನೆಗಳ ಉಪಟಳ ➤ ‘ಆಪರೇಷನ್ ಎಲಿಫೆಂಟ್’ ಪುನರಾರಂಭಿಸುವಂತೆ ನೀತಿ ತಂಡ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ. 17. ಕಳೆದ ತಿಂಗಳು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬಳಿಕವೂ ಕಾಡಾನೆಗಳ ಉಪಟಳ ಜನರನ್ನು ತಲ್ಲಣಗೊಳಿಸಿದ್ದು, ಆನೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೂಡಲೇ ಪುನರಾರಂಭಿಸಬೇಕು ಎಂದು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ. ಅವರು ಆಗ್ರಹಿಸಿದ್ದಾರೆ. ಈ ಕುರಿತಂತೆ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಜೀವಭಯ ಹುಟ್ಟಿಸಿರುವ ಎಲ್ಲ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆಯು, ಒಂದು ಸಾಧು […]

ಕಡಬ: ಮಿತಿಮೀರಿದ ಕಾಡಾನೆಗಳ ಉಪಟಳ ➤ ‘ಆಪರೇಷನ್ ಎಲಿಫೆಂಟ್’ ಪುನರಾರಂಭಿಸುವಂತೆ ನೀತಿ ತಂಡ ಆಗ್ರಹ Read More »

ಕರಾವಳಿ, ಕರ್ನಾಟಕ

ಸುಳ್ಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ ರಮೇಶ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಸುಳ್ಯ‌, ಮಾ. 17. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಬಿ.ಇ. ರಮೇಶ್ ರವರು ಅಧಿಕಾರ ಸ್ವೀಕರಿಸಿದರು. ಪ್ರಭಾರ ಬಿಇಒ ಶ್ರೀಮತಿ ವೀಣಾ ಎಂಟಿ ಅವರು ಅಧಿಕಾರ ಹಸ್ತಾಂತರಿಸಿದರು. ಬಿಇಒ ಕಚೇರಿ ಸಿಬ್ಬಂದಿಗಳು ನೂತನ ಶಿಕ್ಷಣಾಧಿಕಾರಿಗಳನ್ನು ಸ್ವಾಗತಿಸಿದರು.

ಸುಳ್ಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ ರಮೇಶ್ ಅಧಿಕಾರ ಸ್ವೀಕಾರ Read More »

ಕರಾವಳಿ

ಪುರುಷರ ವ್ಯಕ್ತಿತ್ವ ರೂಪಿಸುವುದು ಮಹಿಳೆಯೇ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 17.  ಉಳ್ಳಾಲ ಘಟಕ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ  ಅಂಗವಾಗಿ ಗೃಹರಕ್ಷಕಿಯರಾದ ಶ್ರೀಮತಿ ರೇಖಾ ಮೆಟಲ್ ಸಂಖ್ಯೆ 148, ಶ್ರೀಮತಿ ರೇಖಾ ಮೆಟಲ್ ಸಂಖ್ಯೆ 842 ಇವರಿಗೆ ಶಾಲು ಹೊದಿಸಿ, ಹಾರಹಾಕಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು.  ಗಂಡನ

ಪುರುಷರ ವ್ಯಕ್ತಿತ್ವ ರೂಪಿಸುವುದು ಮಹಿಳೆಯೇ ➤ ಡಾ|| ಚೂಂತಾರು Read More »

ಕರಾವಳಿ
crime, arrest, suspected

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ

(ನ್ಯೂಸ್ ಕಡಬ)newskadaba.com ಪುತ್ತೂರು, ಮಾ.17. ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡಲು ಉದ್ದೇಶದಿಂದ ಕಾರಿನಲ್ಲಿ ಸಾಗಾದ ಮಾಡುತ್ತಿದ್ದ ಸಂಧರ್ಭ ಸಂಪ್ಯ ಪೊಲೀಸ್ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರಿನ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಪರಾರಿಯಾದವನನ್ನು ಸುಳ್ಯದ ಸರ್ಪುದ್ದಿನ್ ಎಂದು ಗುರುತಿಸಲಾಗಿದೆ.

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ನಾಳೆ (ಮಾ.18) ಕೊಯಿಲದಲ್ಲಿ ವಿದ್ಯುತ್ ಅದಾಲತ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17.  ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮಾ.18ರ ಶನಿವಾರ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಮಂಗಳೂರು ತಾಲೂಕಿನ ಕೊಂಪದವು, ಮುನ್ನೂರು, ಮುಲ್ಕಿ ತಾಲೂಕಿನ ಕಟೀಲು, ಮೂಡಬಿದ್ರೆ ತಾಲೂಕಿನ ವಾಲ್ಪಾಡಿ, ಪುತ್ತೂರು ತಾಲೂಕಿನ ಅರಿಯಡ್ಕ, ಸುಳ್ಯ ತಾಲೂಕಿನ ಕನಕಮಜಲು, ಕಡಬ ತಾಲೂಕಿನ ಕೊಯಿಲ, ಶಿರಾಡಿ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಕಾವಳಪಡೂರು, ವಿಟ್ಲಮುಡ್ನೂರು, ಬೆಳ್ತಂಗಡಿ ತಾಲೂಕಿನ ನಡ, ಮಿತ್ತಬಾಗಿಲು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ ಎಂದು

ನಾಳೆ (ಮಾ.18) ಕೊಯಿಲದಲ್ಲಿ ವಿದ್ಯುತ್ ಅದಾಲತ್ Read More »

ಕರಾವಳಿ

ಇಂದು ಅರಿವು ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17.  ಇಲ್ಲಿಗೆ ಹತ್ತಿರದಲ್ಲಿರುವ ಕಿನ್ನಿಗೋಳಿಯ ನೇಕಾರ ಸೌಧ ಸಭಾ ಭವನದಲ್ಲಿ ಮಾ.17ರ ಶುಕ್ರವಾರ ಬೆಳಿಗ್ಗೆ 11 ರಿಂದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ, ಅನುವಂಶಿಕ ಕಸುಬುದಾರರ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿದ ಕಡುಬಡವರ್ಗದ ಜನರಿಗೆ ಜೀವನಾಧಾರ ಕಲ್ಪಿಸಿ, ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ

ಇಂದು ಅರಿವು ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ಕಟ್ಟಡ ದುರಸ್ತಿ ಕಾಮಗಾರಿ ಹಿನ್ನೆಲೆ ➤ ತಾತ್ಕಾಲಿಕವಾಗಿ ದಹನ ಕಾರ್ಯ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17.  ಇಲ್ಲಿನ ಮಹಾನಗರ ಪಾಲಿಕೆಯ ಬೋಳೂರು ಸ್ಮಶಾನದಲ್ಲಿ ಕಟ್ಟಿಗೆ ಮೂಲಕ ಶವದಹನ ಮಾಡುವ ಕಟ್ಟಡದ ದುರಸ್ತಿ ಕಾಮಗಾರಿಯು ಮಾ.17 ರಿಂದ 30ರವರೆಗೆ ನಡೆಯಲಿರುವ ಕಾರಣ ಅಲ್ಲಿ ತಾತ್ಕಾಲಿಕವಾಗಿ ಶವದಹನ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಅದೇ ಸ್ಮಶಾನದಲ್ಲಿ ಲಭ್ಯವಿರುವ ವಿದ್ಯುತ್ ಮೂಲಕ ಶವದಹನ ಸೇವೆಯನ್ನು ಬಳಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಕಟ್ಟಡ ದುರಸ್ತಿ ಕಾಮಗಾರಿ ಹಿನ್ನೆಲೆ ➤ ತಾತ್ಕಾಲಿಕವಾಗಿ ದಹನ ಕಾರ್ಯ ಸ್ಥಗಿತ Read More »

ಕರಾವಳಿ

ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸ್ ದಾಳಿ        ➤ 6 ಲಾರಿಗಳು ವಶಕ್ಕೆ 

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.17. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ 5 ಕಡೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ಅಡ್ಡೆಗಳಿಗೆ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಮರಳು ಸಮೇತ 6 ಲಾರಿಗಳನ್ನು ವಶ ಪಡೆಸಿಕಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೆಂಜಾರು ಪಡುಪೆರಾರು ದ್ವಾರ, ಪೊಳಲಿ ದ್ವಾರ, ಅಡ್ಡೂರು ಸಮೀಪದ ನೂಯಿ ತಲಾ ಒಂದೊಂದು ಹಾಗೂ ಬಡಗ ಎಡಪದವಿನಲ್ಲಿ 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ

ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸ್ ದಾಳಿ        ➤ 6 ಲಾರಿಗಳು ವಶಕ್ಕೆ  Read More »

ಕರಾವಳಿ

ಮೀನುಗಾರರ ಕಲ್ಯಾಣಕ್ಕಾಗಿ ಮಾ. 19ರಂದು ಸಾಗರ ಪರಿಕ್ರಮ-2023 ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ಮೀನುಗಾರರ ಸರ್ವತೋಮುಖ ಕಲ್ಯಾಣಕ್ಕಾಗಿ ಸಾಗರ ಪರಿಕ್ರಮ-2023 (ಹಂತ-4) ಕಾರ್ಯಕ್ರಮವನ್ನು ಮಾ.19ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಡಾ. ಟಿ.ಎಂ.ಎ. ಪೈ ಕನ್ವೆಷನ್ ಸೆಂಟರ್‍ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಪರಶೋತ್ತಮ ರೂಪಾಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆಯ ರಾಜ್ಯ ಸಚಿವರಾದ ಡಾ. ಸಂಜೀವ್ ಕುಮಾರ್ ಬಲ್ಯಾನ್, ಮೀನುಗಾರಿಕೆ ಪಶುಸಂಗೋಪನೆ, ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರ

ಮೀನುಗಾರರ ಕಲ್ಯಾಣಕ್ಕಾಗಿ ಮಾ. 19ರಂದು ಸಾಗರ ಪರಿಕ್ರಮ-2023 ಕಾರ್ಯಕ್ರಮ Read More »

ಕರಾವಳಿ

ಪುತ್ತೂರು: ಪುಲ್ವಾರಿ ಶರೀಫ್ ಪ್ರಕರಣ ➤ ಪ್ರವೀಣ್ ಹಂತಕರಿಗೂ ಹಣ ಸಂದಾಯ..?

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 17. ಫುಲ್ವಾರಿ ಶರೀಫ್‌ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿದ್ದಾರೆ ಎಂಬ ಆರೋಪದಡಿ ಐವರನ್ನು ಜುಲೈ ತಿಂಗಳಿನಲ್ಲಿ ಎನ್‌ಐಎ ಅಧಿಕಾರಿಗಳು ವಶಪಡಿಸಿದ್ದು, ಇದೀಗ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳಿಗೂ ಹಣ ಸಂದಾಯ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಫುಲ್ವಾರಿ ಪ್ರಕರಣದಲ್ಲಿ ಬಂಧಿತರಾಗಿರುವ ಪುತ್ತೂರು ಹಾಗೂ ಬಂಟ್ವಾಳದ ಐವರು ಕಳೆದ ಜುಲೈನಲ್ಲಿ ಹತ್ಯೆಯಾಗಿದ್ದ ಪ್ರವೀಣ್‌ ನೆಟ್ಟಾರು ಅವರನ್ನು  ಕೊಲೆ ಮಾಡಿರುವ ಹಂತಕರಿಗೂ ಹಣಕಾಸಿನ ನೆರವು ನೀಡಿದ್ದಾರೆ

ಪುತ್ತೂರು: ಪುಲ್ವಾರಿ ಶರೀಫ್ ಪ್ರಕರಣ ➤ ಪ್ರವೀಣ್ ಹಂತಕರಿಗೂ ಹಣ ಸಂದಾಯ..? Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top