ಕರಾವಳಿ

ಕರಾವಳಿಯಾದ್ಯಂತ ಗುಡುಗು ಸಹಿತ ಸಾಧರಣ ಮಳೆಯಾಗುವ ಸಾಧ್ಯತೆ     ➤ ಹವಾಮಾನ ‌ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.21. ಮಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ‌ಇಲಾಖೆ ನೀಡಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ […]

ಕರಾವಳಿಯಾದ್ಯಂತ ಗುಡುಗು ಸಹಿತ ಸಾಧರಣ ಮಳೆಯಾಗುವ ಸಾಧ್ಯತೆ     ➤ ಹವಾಮಾನ ‌ಇಲಾಖೆ ಮುನ್ಸೂಚನೆ Read More »

ಕರಾವಳಿ

ಕಡಬ: ಐಪೋನ್ ಪಡೆಯಲು ಮೈಸೂರಿನಿಂದ ಕಡಬಕ್ಕೆ ಬಂದ ಯುವತಿ

(ನ್ಯೂಸ್ ಕಡಬ)newskadaba.com ಕಡಬ, ಏ.21. ಕಳೆದುಕೊಂಡ ಮೊಬೈಲ್ ಪಡೆಯಲು ಯುವತಿಯೊಬ್ಬಳು ತಮ್ಮ ಕುಟುಂಬ ಬಳಗದ ಜೊತೆ ಕಡಬ ಬಂದು ಪಡೆದುಕೊಂಡ ಘಟನೆ ವರದಿಯಾಗಿದೆ. ಬಟ್ಟೆ ಖರೀದಿಸಲು ಊಟಿಗೆ ಹೋಗಿದ್ದ ಕಡಬ ನಿವಾಸಿ ನಾಗರಾಜ್ ಎಂಬವರಿಗೆ  ಮೈಸೂರು ಬಳಿ ಬಸ್ ನಲ್ಲಿ ಅಧಿಕ ಬೆಲೆ ಬಾಳುವ ಐಪೋನ್ ಸಿಕ್ಕಿತ್ತು.  ಮೊಬೈಲ್  ಆನ್ ಮಾಡಿದ  ಕೆಲ ಸಮಯದ ಬಳಿಕ ಕರೆ ಬಂದಿದ್ದು ಖಚಿತ ಮಾಹಿತಿ ಪಡೆದುಕೊಂಡು ಸುಬ್ರಹ್ಮಣ್ಯ ಸಮೀಪದ ಕಡಬದಲ್ಲಿ ತಾನು ಇದ್ದು ಮೊಬೈಲ್ ತನ್ನ ಬಳಿಯೇ ಇದೆ ಎಂದು

ಕಡಬ: ಐಪೋನ್ ಪಡೆಯಲು ಮೈಸೂರಿನಿಂದ ಕಡಬಕ್ಕೆ ಬಂದ ಯುವತಿ Read More »

ಕರಾವಳಿ

ಬಂಟ್ವಾಳ: ಮಹಡಿ ಮೇಲಿನಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.21. ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ನಡೆದಿದೆ. ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು ಎಂದು ಗುರುತಿಸಲಾಗಿದೆ. ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.  

ಬಂಟ್ವಾಳ: ಮಹಡಿ ಮೇಲಿನಿಂದ ಬಿದ್ದು ಯುವಕ ಮೃತ್ಯು Read More »

ಕರಾವಳಿ

ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಪಘಾತ..! ➤ ಕರಾವಳಿ ಮೂಲದ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.21. ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಕರಾವಳಿ ಮೂಲದ ಯುವಕನೊಬ್ಬ ಮೃತಪಟ್ಟ ಬಗ್ಗೆ ವರದಿಯಾಗಿದೆ. ವಿಟ್ಲ ಸಮೀಪದ ಉಕ್ಕುಡ ನಿವಾಸಿ ಮಹಮ್ಮದ್ ಮೊಯ್ಲಿರ್ ಎಂಬವರ ಪುತ್ರ ಹಮೀಬ್ ಮೃತ ಯುವಕ. ಹಮೀಬ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ನಿಯಂತ್ರಣ ಕಳೆದುಕೊಂಡ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಪಘಾತ..! ➤ ಕರಾವಳಿ ಮೂಲದ ಯುವಕ ಮೃತ್ಯು Read More »

ಕರಾವಳಿ

ಪಾನಮತ್ತ ವ್ಯಕ್ತಿಗಳಿಬ್ಬರ ಜಗಳ   ➤ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ)newskadaba.com ಉದ್ಯಾವರ, ಏ.21. ಪಾನಮತ್ತರಾಗಿರುವ ವ್ಯಕ್ತಿಗಳಿಬ್ಬರ ನಡುವೆ ಜಗಳ ಉಂಟಾಗಿ, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಿತ್ರೋಡಿ ನಿವಾಸಿ ದಯಾನಂದ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಭರತ್ ನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.  

ಪಾನಮತ್ತ ವ್ಯಕ್ತಿಗಳಿಬ್ಬರ ಜಗಳ   ➤ ಕೊಲೆಯಲ್ಲಿ ಅಂತ್ಯ Read More »

ಕರಾವಳಿ

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆ ಮೂಲಕ 90 ಸಾವಿರ ರೂ.ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.21. ಇನ್‌ಸ್ಟಾಗ್ರಾಂ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಕುರಿತಂತೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಇನ್‌ಸ್ಟಾ ಗ್ರಾಂ ಖಾತೆಯನ್ನು ವೀಕ್ಷಿಸುತ್ತಿರುವಾಗ ಸಮಯ ಅವರ ಗೆಳೆಯನ ಖಾತೆಯಿಂದ “ರಿಸಿವ್ಡ್ ರುಪೀಸ್‌ 4,16,000 ಇನ್‌ ಯುವರ್‌ ಇನ್‌ಸ್ಟಾಗ್ರಾಂ ವಾಲೆಟ್‌’ ಎಂಬ ಪೋಸ್ಟ್‌ ಬಂದಿದೆ. ತತ್‌ಕ್ಷಣ ಅವರಿಗೆ “ಲಿಝಿ ಹೋಪರ್‌’ ಎನ್ನುವ ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ಅದು ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ ಎ. 12ರಂದು 40,000

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆ ಮೂಲಕ 90 ಸಾವಿರ ರೂ.ವಂಚನೆ Read More »

ಕರಾವಳಿ

ನಾಳೆ ರಾಜ್ಯಕ್ಕೆ ಅಮಿತ್ ಷಾ ಭೇಟಿ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಏ.20. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಯ ಚುನಾವಣಾ ಚಾಣುಕ್ಯ ಕೇಂದ್ರ ಗೃಹ ಸಚಿವ ಅಮಿತ್ ಷಾ, ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ದೇವನಹಳ್ಳಿಯಲ್ಲಿ ಧೀರಜ್ ಮುನಿರಾಜು ಅಭ್ಯರ್ಥಿ ಪರವಾಗಿ ಅಮಿತ್ ಷಾ ರೋಡ್ ಶೋ ನಡೆಸಲಿದ್ದಾರೆ. ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಲಿರುವ ಅಮಿತ್ ಷಾ, ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಲಿದ್ದಾರೆ. ಮಧ್ಯಾಹ್ನ

ನಾಳೆ ರಾಜ್ಯಕ್ಕೆ ಅಮಿತ್ ಷಾ ಭೇಟಿ Read More »

ಕರಾವಳಿ

ಪುತ್ತೂರು: ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.20. ಬೆದ್ರಾಳ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಟಿಪ್ಪರ್‌ ಲಾರಿಯೊಂದು ಬೆದ್ರಾಳ ರೈಲ್ವೇ ಸೇತುವೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಬಸಕ್ಕೆ ವಿದ್ಯತ್‌ ಕಂಬ ಧರೆಗೆ ಉರುಳಿ ಬಿದ್ದಿದ್ದು, ತಂತಿಗಳು ತುಂಡಾಗಿ ಬಿದ್ದಿದೆ. ಇನ್ನು ಟಿಪ್ಪರ್‌ ಚಾಲಕನ ಕೈಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್‌ ನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ವರದಿಯಾಗಿದೆ.

ಪುತ್ತೂರು: ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ Read More »

ಕರಾವಳಿ

ಕಡಬ: ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ

(ನ್ಯೂಸ್ ಕಡಬ)newskadaba.com ಕಡಬ, ಏ.20. ನ್ಯೂ ಫ್ರೆಂಡ್ಸ್ ಕ್ಲಬ್ ರಿ ಕಡಬ ಇದರ ವತಿಯಿಂದ ದಿನಾಂಕ 16/04/2023ರಂದು ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ವತಾರದಲ್ಲಿ ನಡೆಯಿತು. ಸುಮಾರು 400 ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕಡಬ,ಕಾರ್ಯದರ್ಶಿ ಇರ್ಷಾದ್,ಕಜಾಂಜಿ ಜಾಫರ್,ಉಸ್ತುವಾರಿ ಷರೀಫ್ ಟಿ, ಮಸೀದಿಯ ಅಧ್ಯಕ್ಷರಾದ ಕೆ ಅಬ್ದುಲ್ ಖಾದರ್ ಹಾಜಿ,ಕಾರ್ಯದರ್ಶಿ ಹಮೀದ್ ಹಾಜಿ,ಉಪಾಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ, ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಫೈಝಲ್ ಕಡಬ ಮುಂತಾದವರು ಭಾಗವಹಿಸಿದ್ದರು.

ಕಡಬ: ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ Read More »

ಕರಾವಳಿ

ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.20. ಜೆಸಿಬಿಯಿಂದ ಮಣ್ಣು ಅಗೆತದ ವೇಳೆ ಮಣ್ಣು ಕುಸಿದು ಜೆಸಿಬಿಯ ಮೇಲೆ ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಜೆಸಿಬಿಯ ಚಾಲಕ ಝಾರ್ಖಂಡ್‌ ಕೊಸಾರ್‌ ಅನ್ಸಾರಿ (22) ಮೃತರು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಧಾವಿಸಿ ಬಂದಿದ್ದರು. ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲಾಯಿತಾದರೂ, ಅದಾಗಲೇ ಚಾಲಕ ಮೃತಪಟ್ಟಿದ್ದರು ಎನ್ನಲಾಗಿದೆ.

ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು Read More »

ಕರಾವಳಿ
Scroll to Top