ಕರಾವಳಿ

ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಏ.24. ದೋಣಿ ಮಗುಚಿ ಬಿದ್ದು ನಾಲ್ವರು ಯುವಕರು ಮೃತಪಟ್ಟ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದ್ದು, ಓರ್ವನ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಈದ್ ಆಚರಣೆಗೆಂದು ತನ್ನ ಮನೆಗೆ ಬಂದಿದ್ದ 6 ಮಂದಿ ಯುವಕರೊಂದಿಗೆ ಹೂಡೆ ನಿವಾಸಿ ಫೈಝಾನ್ ದೋಣಿಯಲ್ಲಿ ತೆರಳುವಾಗ ಅವಘಡ ನಡೆದಿದೆ ಎನ್ನಲಾಗಿದೆ.  

ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು Read More »

ಕರಾವಳಿ

ಮಂಗಳೂರು: ವಾಹನಗಳ ಪ್ರಖರ ಬೆಳಕಿನ ವಿರುದ್ಧ ಕಾರ್ಯಾಚರಣೆ   ➤ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.24. ಸಂಚಾರಿ ನಿಯಮಗಳನ್ನು ಮೀರಿ ಪ್ರಖರ ಬೆಳಕು ಅಳವಡಿಸಿರುವ ವಾಹನಗಳ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸುಮಾರು 25 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಜರಗಿಸಿದ್ದಾರೆ. ವಾಹನಗಳಲ್ಲಿ ಅತ್ಯಾಕರ್ಷಣೆಯ ಉದ್ದೇಶದಿಂದ ಅನಗತ್ಯವಾಗಿ ಅಳವಡಿಸುವ ಇಂತಹ ಬೆಳಕುಗಳಿಂದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಪ್ರಖರ ಬೆಳಕಿನ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

ಮಂಗಳೂರು: ವಾಹನಗಳ ಪ್ರಖರ ಬೆಳಕಿನ ವಿರುದ್ಧ ಕಾರ್ಯಾಚರಣೆ   ➤ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ Read More »

ಕರಾವಳಿ

ಬಂಟ್ವಾಳ: ಎ.26 ರಂದು ಯೋಗಿ ಆದಿತ್ಯನಾಥ್ ರೋಡ್ ಶೋ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.24. ದಕ್ಷಿಣ ಕನ್ನಡ ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪರ ಪ್ರಚಾರಕ್ಕೆ ಈ ಬಾರಿ ಮತ್ತೆ ಯೋಗಿ ಆದಿತ್ಯನಾಥ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಲಭ್ಯವಾಗಿದೆ. ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪರವಾಗಿ ಮತಯಾಚನೆಗಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ. ಕಳೆದ ಬಾರಿ ಕೂಡ ರಾಜೇಶ್ ನಾಯ್ಕ್ ಅವರ ಪರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ

ಬಂಟ್ವಾಳ: ಎ.26 ರಂದು ಯೋಗಿ ಆದಿತ್ಯನಾಥ್ ರೋಡ್ ಶೋ Read More »

ಕರಾವಳಿ

ಸುರತ್ಕಲ್: ದ್ವಿಚಕ್ರ ವಾಹನ ಅಪಘಾತ ➤ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಸುರತ್ಕಲ್, ಏ.24. ದ್ವಿಚಕ್ರ ವಾಹನ ಅಪಘಾತದಲ್ಲಿ ಬಾಲಕ ಮೃತಪಟ್ಟ ಘಟನೆ ಸೂರಿಂಜೆಯ ಕೋಟೆ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸೂರಿಂಜೆ ಕೋಟೆ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಅವರ ಪುತ್ರ ಮೊಹಮ್ಮದ್ ಸೈಪ್(13) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಸುರತ್ಕಲ್: ದ್ವಿಚಕ್ರ ವಾಹನ ಅಪಘಾತ ➤ ಬಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.24. ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೋನ್ ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿರುವ ವೇಳೆ ಡಿಸಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಯೊಬ್ಬ ಕೆಟ್ಟ ಶಬ್ದಗಳಿಂದ ಬೈದ ಬಗ್ಗೆ ದೂರು ದಾಖಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ ➤ ದೂರು ದಾಖಲು Read More »

ಕರಾವಳಿ

ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ನಿರ್ಮಲಾನಂದ ಶ್ರೀಗಳಿಂದ..!

(ನ್ಯೂಸ್ ಕಡಬ)Newskadaba.com ಮಣಿಪಾಲ್,ಏ.24 ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯವರನ್ನು ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಹೆಚ್‌ಡಿ ಕುಮಾರಸ್ವಾಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ಅವರು, ಪಕ್ಷವನ್ನು ಸಂಘಟಿಸಲು ಹಗಲಿರುಳು ದಣಿವರಿಯದೆ ದುಡಿದಿದ್ದರು.

ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ನಿರ್ಮಲಾನಂದ ಶ್ರೀಗಳಿಂದ..! Read More »

ಕರಾವಳಿ

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.24. ರಾಷ್ಟ್ರೀಯ ಹೆದ್ದಾರಿ 66ರ ಕುಂಭಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಎದುರುಗಡೆ ಜೀಪು, ಸ್ಕೂಟಿ ಬೈಕ್ ಹಾಗೂ ಸೈಕಲ್ ನಡುವೆ ಸರಣಿ ಅಪಘಾತದಿಂದ ಸ್ಕೋಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತೆಕ್ಕಟೆ ನಾಗರಾಜ್ ದೇವಾಡಿಗ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗ ಅಜಾಗ್ರತೆಯಿಂದ ಬಂದ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸ್ಕೋಟಿಗೆ ಢಿಕ್ಕಿ ಹೊಡೆದು ಮುಂದೆ ಸಾಗಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.24. ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಮೂರು ಸ್ಥಳಗಳಿಗೆ ಇಂದು ಬೆಳಗ್ಗೆ ದಾಳಿ ಸಂಭವಿಸಿದೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ Read More »

ಕರಾವಳಿ

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.23. ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ದೇವಕಿಯವರ ಪುತ್ರಿ ಕೌಶಲ್ಯ ಮೃತಪಟ್ಟ ನವವಿವಾಹಿತೆ ಎಂದು ಗುರುತಿಸಲಾಗಿದೆ. ಇನ್ನು ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆತ್ಮ ಹತ್ಯೆಗೆ

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಮೃತ್ಯು Read More »

ಕರಾವಳಿ

ಮಂಗಳೂರು: ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ ಕುಟುಂಬ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.23. ಬಾಲಿವುಡ್ ನಟಿ, ಕರಾವಳಿಯ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ಧಾರೆ. ದೇವಳದ ವತಿಯಿಂದ ನಟಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಆಶೀರ್ವದಿಸಲಾಯಿತು. ಇನ್ನು ದೇವಿಯ ದರ್ಶನ ಪಡೆದ ನಂತರ ಶಿಲ್ಪಾ ಶೆಟ್ಟಿ ಯಕ್ಷಗಾನವನ್ನು ವೀಕ್ಷಿಸಿ ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಈ ವೇಳೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ಕುಟುಂಬ ವರ್ಗದವರು,

ಮಂಗಳೂರು: ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ ಕುಟುಂಬ Read More »

ಕರಾವಳಿ
Scroll to Top