ಕರಾವಳಿ

ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.15. ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆದಿದೆ. ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು Read More »

ಕರಾವಳಿ

ಪುತ್ತೂರು: ಬಿಜೆಪಿ ನಾಯಕರ ಫೋಟೋಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ➤ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.15. ಬಿಜೆಪಿ ನಾಯಕರ ಫೋಟೋ ಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು, ಚಪ್ಪಲಿ ಹಾರ ಹಾಕಿರುವ ಬ್ಯಾನರ್ ಅನ್ನು ಅಳವಡಿಸಿರುವ ಘಟನೆ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಬಿಜೆಪಿ ನಾಯಕರಾಗಿರುವ ಮಾಜಿ ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರ ವಿರುವ ಬ್ಯಾನರ್ ನಲ್ಲಿ ‘ಭಾವಪೂರ್ಣ ಶ್ರದ್ಧಾಂಜಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ, ನೊಂದ ಹಿಂದೂ ಕಾರ್ಯಕರ್ತರು’ ಎಂದು

ಪುತ್ತೂರು: ಬಿಜೆಪಿ ನಾಯಕರ ಫೋಟೋಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ➤ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ Read More »

ಕರಾವಳಿ

ಬೆಳ್ತಂಗಡಿ: ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.15. ಉಜಿರೆ ಟೆಲಿಪೋನ್ ಎಕ್ಸ್ ಚೇಂಜ್ ಟರ್ ಬಳಿ ವ್ಯಕ್ತಿಯೊಬ್ಬರ ಮೃತದೇಹದ ಪಕ್ಕದಲ್ಲಿದ್ದ ಚೀಲದಲ್ಲಿ 6.65 ಲಕ್ಷ ನಗದು ಪತ್ತೆಯಾಗಿದೆ. ತಮ್ಮಯ್ಯ (55) ಮಡಿಕೇರಿಯ ಕುಶಾಲನಗರ ಮೂಲದ ವ್ಯಕ್ತಿಯಾಗಿದ್ದು, ಇವರು ಹಲವು ವರ್ಷಗಳಿಂದ ಉಜಿರೆಯಲ್ಲಿ ವಾಸಿಸುತ್ತಿದ್ದರು. ಅವರು ಬಸ್‌ ನಿಲ್ಡಾಣ, ಅಂಗಡಿಗಳು ಮುಚ್ಚಿದಾಗ ಅವುಗಳ ಮುಂಭಾಗದಲ್ಲಿ, ಬಿಎಸ್ಎನ್ಎಲ್ ಕಚೇರಿ ಪಕ್ಕದಲ್ಲಿ ವಸತಿ ಹೂಡಿ ದಿನ ಕಳೆಯುತ್ತಿದ್ದರು. ಈ ಘಟನೆ ಬಗ್ಗೆ ಕುಟುಂಬದಲ್ಲಿ ಯಾರಿಗೂ ತಿಳಿದಿಲ್ಲ. ಇವರ ಮೃತದೇಹ ಟೆಲಿಪೋನ್ ಎಕ್ಸ್ ಚೇಂಜ್ ಟರ್

ಬೆಳ್ತಂಗಡಿ: ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ Read More »

ಕರಾವಳಿ

ಬೆಳ್ತಂಗಡಿ: ಮಹಿಳೆಗೆ ಲೈಂಗಿಕ ಕಿರುಕುಳ ➤ ಉದ್ಯಮಿ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಮೇ.15. ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತ ಮಹಿಳೆಗೆ  ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದಂತ ಆರೋಪದ ಮೇಲೆ ಉದ್ಯಮಿಯೋರ್ವನ ವಿರುದ್ದ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದಂತ ದೂರಿನ ಮೇಲೆ, ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ದ ಎಫ್ಐಆರ್ ದಾಖಲಾಗಿದೆ.  ಸಂತ್ರಸ್ತ ಮಹಿಳೆ ಪತಿಯ ಜೊತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ, ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನ ಸೂಪರ್ ಮಾರ್ಕೇಟ್​ನ ಬಿಲ್ಲಿಂಗ್

ಬೆಳ್ತಂಗಡಿ: ಮಹಿಳೆಗೆ ಲೈಂಗಿಕ ಕಿರುಕುಳ ➤ ಉದ್ಯಮಿ ವಿರುದ್ದ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಎರಡು ಬಸ್‌‌ಗಳ ನಡುವೆ ಅಪಘಾತ  ➤ 30ಕ್ಕೂ ಹೆಚ್ಚು ಮಂದಿಗೆ ಗಾಯ 

(ನ್ಯೂಸ್ ಕಡಬ)Newskadaba.com ಸುರತ್ಕಲ್, ಮೇ.13. ಸುರತ್ಕಲ್‌ನ ಮುಕ್ಕದಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಗಳ ನಡುವೆ ನಡೆದ ಅಪಘಾತದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಎರಡು ಬಸ್ ಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಮಳೆಯಾಗುತ್ತಿದ್ದ ಪರಿಣಾಮ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಎದುರಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್ ಗೆ ಢಿಕ್ಕಿ ಹೊಡೆದಿದೆ.  

ಎರಡು ಬಸ್‌‌ಗಳ ನಡುವೆ ಅಪಘಾತ  ➤ 30ಕ್ಕೂ ಹೆಚ್ಚು ಮಂದಿಗೆ ಗಾಯ  Read More »

ಕರಾವಳಿ

ಕದ್ರಿ ದೇವಸ್ಥಾನಕ್ಕೆ ಸೂಕ್ತ ಭದ್ರತೆಗೆ ವಿಶ್ವಹಿಂದೂ ಪರಿಷತ್ ಮನವಿ       

(ನ್ಯೂಸ್ ಕಡಬ)Newskadaba.com ಮಂಗಳೂರು, ಮೇ.13. ಕದ್ರಿ ದೇವಸ್ಥಾನದ ಅಂಗಣಕ್ಕೆ ದ್ವಿಚಕ್ರ ವಾಹನದಲ್ಲಿ ಮೂವರು ಮುಸ್ಲಿಂ ಯುವಕರು ನುಗ್ಗಿ ಅನುಮಾನಸ್ಪದವಾಗಿ ವರ್ತಿಸಿದ ಘಟನೆ ಕುರಿತಂತೆ ಇದೀಗ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಭದ್ರತಾ ಸಿಬ್ಬಂದಿ ಇರುವಾಗಲೇ ದೇವಸ್ಥಾನದ ಗೇಟ್ ಅಕ್ರಮ ಪ್ರವೇಶಿಸಿ ಪವಿತ್ರವಾದ ದೇವಸ್ಥಾನದ ಅಂಗಣದಲ್ಲಿ ಪಾದರಕ್ಷೆ ಸಹಿತ ದ್ವಿಚಕ್ರ ವಾಹನದಲ್ಲಿ ಸುತ್ತು ಬಂದು ಅಪವಿತ್ರಗೊಳಿಸುವ ಸಂಚು ನಡೆಸಿದ್ದು, ಈ ಹಿಂದೆ

ಕದ್ರಿ ದೇವಸ್ಥಾನಕ್ಕೆ ಸೂಕ್ತ ಭದ್ರತೆಗೆ ವಿಶ್ವಹಿಂದೂ ಪರಿಷತ್ ಮನವಿ        Read More »

ಕರಾವಳಿ

ಮಂಗಳೂರು: ‘ಕಾಂಗ್ರೆಸ್ ಗೆ ಸ್ಪಷ್ಟ ಜನಾದೇಶ ‘ ➤ ಸತತ ಐದನೇ ಬಾರಿ ಗೆದ್ದ ಯು.ಟಿ ಖಾದರ್

(ನ್ಯೂಸ್ ಕಡಬ)Newskadaba.com ಮಂಗಳೂರು, ಮೇ.13. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಮಂಗಳೂರು- ಉಳ್ಳಾಲ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಬೃಹತ್ ಮತಗಳಿಂದ ಮಣಿಸಿದ್ದು ಈ ಮೂಲಕ ಉಳ್ಳಾಲ ಪ್ರತಿನಿಧಿಸುವ ಐದನೇ ಅವಧಿಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಯು.ಟಿ.ಖಾದರ್ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. 2018 ರ ರಾಜ್ಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಗೆದ್ದ

ಮಂಗಳೂರು: ‘ಕಾಂಗ್ರೆಸ್ ಗೆ ಸ್ಪಷ್ಟ ಜನಾದೇಶ ‘ ➤ ಸತತ ಐದನೇ ಬಾರಿ ಗೆದ್ದ ಯು.ಟಿ ಖಾದರ್ Read More »

ಕರಾವಳಿ

ಕೊನೆಗೂ ಜಯದತ್ತ ದಾಪುಗಾಲಿಟ್ಟ ಕಾಂಗ್ರೆಸ್ ನ ಅಶೋಕ್ ರೈ ➤ ಅಂತಿಮ ಘೋಷಣೆ ಮಾತ್ರ ಬಾಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆಲುವು ಬಹುತೇಕ ಖಚಿತಗೊಂಡಿದ್ದು, 15ನೇ ಸುತ್ತಿನ ಮತ ಎಣಿಕೆಯಲ್ಲಿ 2673 ಮತಗಳಿಂದ ಅಶೋಕ್ ರೈ ಮುನ್ನಡೆ ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ದ ಬಹುತೇಕ ಗೆಲುವು ಫಿಕ್ಸ್ ಆದಂತಿದ್ದು, ಅಂತಿಮ ಘೋಷಣೆ ಮಾತ್ರ ಬಾಕಿ ಉಳಿದಿದೆ. ಅಶೋಕ್ ರೈ ಒಟ್ಟು 61797 ಮತಗಳನ್ನು ಪಡೆದಿದ್ದು, 59124 ಮತಗಳನ್ನು ಅರುಣ್ ಪುತ್ತಿಲ ಪಡೆದುಕೊಂಡಿದ್ದಾರೆ. ಕೊನೆ ಕ್ಷಣದವರೆಗೂ ಜಿದ್ದಾಜಿದ್ದಿನ ಹೋರಾಟ ನೀಡಿದ ಪಕ್ಷೇತರ ಅಭ್ಯರ್ಥಿ

ಕೊನೆಗೂ ಜಯದತ್ತ ದಾಪುಗಾಲಿಟ್ಟ ಕಾಂಗ್ರೆಸ್ ನ ಅಶೋಕ್ ರೈ ➤ ಅಂತಿಮ ಘೋಷಣೆ ಮಾತ್ರ ಬಾಕಿ Read More »

ಕರಾವಳಿ

ಪುತ್ತೂರು ವಿಧಾನಸಭಾ ಕ್ಷೇತ್ರ ➤ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆಲುವು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ. 13. ಪುತ್ತೂರು ವಿಧಾನ ಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಕೊನೆವರೆಗೂ ತೀವ್ರ ಪೈಪೋಟಿ ನೀಡಿ, ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಮೂರನೇ ಸ್ಥಾನ ಪಡೆದುಕೊಂಡಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ ➤ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆಲುವು Read More »

ಕರಾವಳಿ

ತೀವ್ರ ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ➤ ಕೇವಲ 256 ಮತಗಳ ಅಂತರದಿಂದ ಅಶೋಕ್ ರೈ ಮುನ್ನಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ತೀವ್ರ ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರವು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ‌ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿದ್ದು, ಇದೀಗ ಹನ್ನೆರಡನೇ ಸುತ್ತಿನ ಮತ ಎಣಿಕೆಯಲ್ಲಿ ಕೇವಲ 256 ಮತಗಳ ಅಂತರದಿಂದ ಅಶೋಕ್ ರೈ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಐದು ಸುತ್ತಿನ ಮತ ಎಣಿಕೆ ಬಾಕಿ ಉಳಿದಿದ್ದು, ಕೊನೆ ಕ್ಷಣದಲ್ಲಿ ಫಲಿತಾಂಶ ತಲೆ ಕೆಳಗಾಗುವ ಸಂಭವವಿದೆ.

ತೀವ್ರ ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ➤ ಕೇವಲ 256 ಮತಗಳ ಅಂತರದಿಂದ ಅಶೋಕ್ ರೈ ಮುನ್ನಡೆ Read More »

ಕರಾವಳಿ
Scroll to Top