ಕರಾವಳಿ

ಎಂಆರ್.ಎಸ್.ಕ್ಯೂ ಕಛೇರಿಯಲ್ಲಿ ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ಇಲ್ಲಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಅಂಚೆ ಇಲಾಖೆಯ ಆರ್.ಎಂ.ಎಸ್. ಕ್ಯೂ ಕಚೇರಿಯಲ್ಲಿ ದಿನದ 24 ಗಂಟೆಯೂ ತ್ವರಿತ  ಅಂಚೆ ಸೇವೆ ಲಭ್ಯವಿದ್ದು, ನೋಂದಾಯಿತ ಅಂಚೆ ಸೇವೆಗೆ ಸಮಯದ ಪರಿಮಿತಿ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಅಂಚೆ ಗ್ರಾಹಕರ ಅನುಕೂಲಕ್ಕಾಗಿ ದಿನದ 24 ಗಂಟೆಗಳಲ್ಲಿಯೂ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆ ಹಾಗೂ ತ್ವರಿತ ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದೆ. ಇದರೊಂದಿಗೆ ಅಂಚೆ ಚೀಟಿಗಳು ಕೂಡಾ ಲಭ್ಯವಿರುತ್ತದೆ. ಈ ಎಲ್ಲಾ […]

ಎಂಆರ್.ಎಸ್.ಕ್ಯೂ ಕಛೇರಿಯಲ್ಲಿ ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ Read More »

ಕರಾವಳಿ

ಇಂದು (ಜೂ. 16) ಎಲ್ಸಿಡಿಸಿ ಕುಷ್ಠ ರೋಗ ವಿಶೇಷ ಸಮೀಕ್ಷೆಯ ಅಂಗವಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. 2023-24ನೇ ಸಾಲಿನ ಎಲ್‍ಸಿಡಿಸಿ ಕುಷ್ಠ ರೋಗ ವಿಶೇಷ ಸಮೀಕ್ಷೆಯ ಅಂಗವಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಜೂ.16ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆಯಲಿದೆ ಎಂದು ಡಿಎಚ್ ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು (ಜೂ. 16) ಎಲ್ಸಿಡಿಸಿ ಕುಷ್ಠ ರೋಗ ವಿಶೇಷ ಸಮೀಕ್ಷೆಯ ಅಂಗವಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ Read More »

ಕರಾವಳಿ

ರಕ್ತದಾನದಿಂದ ಭ್ರಾತೃತ್ವ ವೃದ್ಧಿಸುತ್ತದೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನಕ್ಕೆ

ರಕ್ತದಾನದಿಂದ ಭ್ರಾತೃತ್ವ ವೃದ್ಧಿಸುತ್ತದೆ ➤ ಡಾ|| ಚೂಂತಾರು Read More »

ಕರಾವಳಿ

ನಗರ ರಾಜಭಾಷಾ ಸಮಿತಿಯ ಅರ್ಧ ವಾರ್ಷಿಕ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ನಗರ ರಾಜ ಭಾಷಾ ಸಮಿತಿ (TOLIC)ಯ 72ನೆಯ ಅರ್ಧ ವಾರ್ಷಿಕ ಸಭೆಯು ಜೂನ್ 14ರಂದು ಮಂಗಳೂರಿನ ಪಾಂಡೇಶ್ವರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜರಗಿತು. ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥರು ಹಾಗೂ ಮಹಾಪ್ರಬಂಧಕ ಶ್ರೀಮತಿ ರೇಣು ಕೆ ನಾಯರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರಕಾರದ ಗೃಹ ಸಚಿವಾಲಯದ ರಾಜಭಾಷಾ ವಿಭಾಗದ ಬೆಂಗಳೂರಿನ ವಲಯ ಅನುಷ್ಠಾನ ಕಚೇರಿಯ ಉಪನಿರ್ದೇಶಕರಾದ ಶ್ರೀ ಅನಿರ್ಬಾನ್ ಕುಮಾರ್ ವಿಶ್ವಾಸ್ ಅವರು ಸಭೆಯಲ್ಲಿ

ನಗರ ರಾಜಭಾಷಾ ಸಮಿತಿಯ ಅರ್ಧ ವಾರ್ಷಿಕ ಸಭೆ Read More »

ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯದಲ್ಲಿ “ಓದೋಣ ಬಾರ” ಶೀರ್ಷಿಕೆಯಲ್ಲಿ ಪುಸ್ತಕ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಜೂ. 16. ದ್ವಾರಕ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ಜೂನ್ 13 ಮಂಗಳವಾರದಂದು ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಸಭಾಂಗಣದಲ್ಲಿ “ಓದೋಣ ಬಾರ” ಶೀರ್ಷಿಕೆಯಲ್ಲಿ ಪುಸ್ತಕ ಹಸ್ತಾಂತರ ಹಾಗೂ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದು ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ  ಸಭಾಧ್ಯಕ್ಷತೆಯನ್ನು ಸರಸ್ವwà ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀ ವೆಂಕಟ್ರಮಣರಾವ್ ಮಂಕುಡೆ ವಹಿಸಿ ಮಕ್ಕಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು. ಆ ಮೂಲಕ ಜ್ಞಾನವನ್ನು ಹೆಚ್ಚು ಸಂಪಾದಿಸಿಕೊಳ್ಳಬೇಕು ಎಂದು

ಕಡಬ: ಸರಸ್ವತೀ ವಿದ್ಯಾಲಯದಲ್ಲಿ “ಓದೋಣ ಬಾರ” ಶೀರ್ಷಿಕೆಯಲ್ಲಿ ಪುಸ್ತಕ ಹಸ್ತಾಂತರ Read More »

ಕರಾವಳಿ

ಕುಂತೂರು: ಬಿ.ಇಡಿ. ಪ್ರಶಿಕ್ಷಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಕುಂತೂರು, ಜೂ. 16. ಮಂಗಳೂರು ವಿಶ್ವ ವಿದ್ಯಾನಿಲಯ 2023ರಲ್ಲಿ ನಡೆಸಿದ IV ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕುಂತೂರಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ಫಲಿತಾಂಶ ಬಂದಿರುತ್ತದೆ. ವಿದ್ಯಾಲಯದಿಂದ ಪರೀಕ್ಷೆಗೆ ಹಾಜರಾದ IV ಸೆಮಿಸ್ಟರ್‍ ನ ಪ್ರಶಿಕ್ಷಾರ್ಥಿಗಳ ಪೈಕಿ ಶೇ.98.00 ಅತಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಶೇ.2 ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕುಂತೂರು: ಬಿ.ಇಡಿ. ಪ್ರಶಿಕ್ಷಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟ Read More »

ಕರಾವಳಿ, ಕರ್ನಾಟಕ

ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ನೂತನ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯನುಸಾರ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಗೊಂಡಿದೆ. ಈ ಕುರಿತು ಮಾತನಾಡಿದ ಮಂಗಳೂರು ಕಮಿಷನರ್ ಕುಲದೀಪ್ ಕುಮಾರ್ ಜೈನ್, ಗೃಹ ಸಚಿವರಾಗಿ ಮಂಗಳೂರಿಗೆ ಪ್ರಥಮವಾಗಿ ಭೇಟಿ ನೀಡಿದ ಸಂದರ್ಭ ಡಾ.ಜಿ.ಪರಮೇಶ್ ಅವರು ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರು. ಅವರ ಸೂಚನೆಯಂತೆ ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಳೆದರೆಡು ದಿನದ ಹಿಂದೆ ಸಿಟಿ ಸ್ಪೆಷಲ್ ಬ್ರಾಂಚ್ (ಸಿ ಎಸ್ ಬಿ) ಇನ್

ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ Read More »

ಕರಾವಳಿ

ಉಡುಪಿ: ಪಾದಚಾರಿಗೆ ಜೀಪು ಢಿಕ್ಕಿ- ಮೃತ್ಯು

(ನ್ಯೂಸ್ ಕಡಬ) newskadaba.com ಕೋಟ, ಜೂ. 15. ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ರಾ.ಹೆ.66ರ ಸಾಸ್ತಾನದ ಮಧುರಾ ಹೋಟಲ್ ಸಮೀಪ ನಡೆದಿದೆ. ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ. ಇವರು ಸಾಸ್ತಾನ ಕೋಡಿ ರಸ್ತೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹೋಟೆಲ್ ನಿಂದ ಊಟ ಪಾರ್ಸೆಲ್ ಪಡೆದು ರಸ್ತೆಬದಿ ನಡೆದುಕೊಂಡು ಬರುತ್ತಿದ್ದಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಜೀಪು ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ರಮೇಶ್ ರನ್ನು ಆಸ್ಪತ್ರೆಗೆ ದಾಖಲಿಸುವ

ಉಡುಪಿ: ಪಾದಚಾರಿಗೆ ಜೀಪು ಢಿಕ್ಕಿ- ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ಕಳೆದ ನವೆಂಬರ್‌ನಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಪ್ರಕರಣದ ಆರೋಪಿಯೊಂದಿಗೆ ನಂಟು ಹೊಂದಿದ್ದನೆಂಬ ಆರೋಪದಡಿ ಒಡಿಶಾ ಮೂಲದ ಓರ್ವನನ್ನು ಒಡಿಶಾದ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತನನ್ನು ಒಡಿಶಾ ಮೂಲದ ಪ್ರೀತಂಕಾರ್‌ (31) ಎಂದು ಗುರುತಿಸಲಾಗಿದೆ. ಈತನ ಬಂಧನದ ಬೆನ್ನಲ್ಲೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರೀಕ್ ​ಗೆ ಐಸೀಸ್​ ಏಜೆಂಟ್​​ಗಳ ಜೊತೆ ನಂಟು ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರೀತಂಕಾರ್‌ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ವಿಚಾರಣಾಧೀನ ಕೈದಿಯ ಬಳಿ ಮಾದಕ ವಸ್ತು ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯ ಬಳಿ ಮಾದಕ ವಸ್ತು ಪತ್ತೆಯಾಗಿದ್ದು, ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಬಂಧಿತನಾಗಿರುವ ಬಂಟ್ವಾಳ ತಾಲೂಕಿನ ಇಬ್ರಾಹೀಂ ಖಲೀಲ್ ಎಂಬ ವಿಚಾರಣಾಧೀನ ಕೈದಿಯನ್ನು ಬುಧವಾರದಂದು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕಾರಾಗೃಹಕ್ಕೆ ಕರೆತಂದಾಗ ಮಾದಕ ವಸ್ತು ‘ಎಂಡಿಎಂಎ’ ಲಭಿಸಿದೆ ಎನ್ನಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ವಿಚಾರಣಾಧೀನ ಕೈದಿಯ ಬಳಿ ಮಾದಕ ವಸ್ತು ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top