ಕರಾವಳಿ

ಹಾರ, ಹೂಗುಚ್ಚ ಬದಲು ಪುಸ್ತಕ ಕೊಡಿ ➤ ಡಿಸಿ ಮುಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರನ್ನು ಅಧಿಕಾರಿಗಳು ಭೇಟಿ ಮಾಡುವ ಸಂದರ್ಭದಲ್ಲಿ ಹಾಗೂ ಜಿಲ್ಲಾಧಿಕಾರಿ ಭಾಗವಹಿಸುವ ಯಾವುದೇ ಸರಕಾರಿ, ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಹೂಗುಚ್ಛ ನೀಡುವುದನ್ನು ನಿಷೇಧಿಸಲಾಗಿದೆ. ಹೂಗುಚ್ಛ ನೀಡುವ ಆಸಕ್ತಿ ಇರುವವರು ಅದರ ಬದಲಿಗೆ ಪುಸ್ತಕ ನೀಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿರುವುದಾಗಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಹಾರ, ಹೂಗುಚ್ಚ ಬದಲು ಪುಸ್ತಕ ಕೊಡಿ ➤ ಡಿಸಿ ಮುಲೈ ಮುಗಿಲನ್ Read More »

ಕರಾವಳಿ

ಪುತ್ತೂರು: ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 20. ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಕಲ್ಲರ್ಪೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಮೃತ ಸವಾರನನ್ನು ನೈತಾಡಿಯ ಇಸ್ಮಾಯಿಲ್‌ ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ

ಪುತ್ತೂರು: ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಆತೂರು: ಕೆಮ್ಮಾರ ಸ.ಉ.ಹಿ.ಪ್ರಾ.ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕ ಅಶೋಕ್ ರೈಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 20. ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೋರಿ ಸ್ಥಳೀಯ ಶಾಸಕರಾದ ಅಶೋಕ್ ಕುಮಾರ್ ರೈ ಯವರಿಗೆ ಕೆಮ್ಮಾರ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. 1954 ರಲ್ಲಿ ಪ್ರಾರಂಭಗೊಂಡು 69 ವರ್ಷ ಹಳೆಯದಾದ ಕೆಮ್ಮಾರ ಸರಕಾರಿ ಶಾಲೆಯ ಕಟ್ಟಡವು ತೀರಾ ಶಿಥಿಲಗೊಂಡಿದ್ದು, ಮೇಲ್ಚಾವಣಿ ಗೆದ್ದಲು ಹಿಡಿದಿರುತ್ತದೆ. ಆದರೆ ಇಷ್ಟರವರೆಗೆ ಸರಕಾರದಿಂದ ಯಾವುದೇ ಹೊಸ ಕಟ್ಟಡಕ್ಕೆ ಅನುದಾನ ಒದಗಿ ಬಂದಿರುವುದಿಲ್ಲ. ಪ್ರಾರಂಭದಿಂದ ಈ

ಆತೂರು: ಕೆಮ್ಮಾರ ಸ.ಉ.ಹಿ.ಪ್ರಾ.ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕ ಅಶೋಕ್ ರೈಗೆ ಮನವಿ Read More »

ಕರಾವಳಿ

ಕಡಬ: ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ➤ ನಾಯಕಿಯಾಗಿ ರಿದ್ದಿ ಶೆಟ್ಟಿ, ಉಪನಾಯಕಿಯಾಗಿ ಯಾನ್ವಿತಾ ಎಂ.ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 19. ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ ನೇರ ಚುನಾವಣೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಹತ್ತನೇ ತರಗತಿಯ ರಿದ್ದಿ ಶೆಟ್ಟಿ, ಉಪನಾಯಕಿಯಾಗಿ ಒಂಬತ್ತನೇ ತರಗತಿಯ ಯಾನ್ವಿತ ಎಂ.ಕೆ, ಜನರಲ್ ಕ್ಯಾಪ್ಟನ್ ಆಗಿ ಹತ್ತನೇ ತರಗತಿಯ ಕೃಷ್ಣಕಾರ್ತಿಕ ಯು, ಸಹಪಠ್ಯ ಚಟುವಟಿಕೆಗಳ ಕಾರ್ಯದರ್ಶಿಯಾಗಿ ಹತ್ತನೇ ತರಗತಿಯ ಅಬಿನ್ ಬೈಜು

ಕಡಬ: ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ➤ ನಾಯಕಿಯಾಗಿ ರಿದ್ದಿ ಶೆಟ್ಟಿ, ಉಪನಾಯಕಿಯಾಗಿ ಯಾನ್ವಿತಾ ಎಂ.ಕೆ Read More »

ಕರಾವಳಿ

ಕಡಬ: ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ➤ ನಾಯಕಿಯಾಗಿ ಹರ್ಷಿಣಿ, ಕಾರ್ಯದರ್ಶಿಯಾಗಿ ಸನೂಷ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 19. ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ 2023 -24ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ ನೇರ ಚುನಾವಣೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಹರ್ಷಿಣಿ, ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸನೂಷ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರ್ಷಿತ ಹಾಗೂ ಅಬ್ದುಲ್ ಸಪ್ರಾಜ್ ದ್ವಿತೀಯ ವಾಣಿಜ್ಯ ವಿಭಾಗ, ಜೊತೆ

ಕಡಬ: ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ➤ ನಾಯಕಿಯಾಗಿ ಹರ್ಷಿಣಿ, ಕಾರ್ಯದರ್ಶಿಯಾಗಿ ಸನೂಷ ಆಯ್ಕೆ Read More »

ಕರಾವಳಿ

ಸುಳ್ಯ ಠಾಣಾ ನೂತನ ಎಸ್ಐ ಆಗಿ ಈರಯ್ಯ ದೂಂತುರು ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 19. ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ನೇಮಕಗೊಂಡ ಈರಯ್ಯ ದೂಂತೂರು ಅವರು ಅಧಿಕಾರ ಸ್ವೀಕರಿಸಿದರು. ಇವರಿಗೆ ವರ್ಗಾವಣೆಗೊಂಡ ಎಸ್‌ಐ ದಿಲೀಪ್ ಜಿ.ಆರ್ ಅವರು ಅಧಿಕಾರ ಹಸ್ತಾಂತರಿಸಿದರು. ಈರಯ್ಯ ದೂಂತೂರು ಅವರನ್ನು ಸುಳ್ಯ ಎಸ್‌ಐ ಆಗಿ ನೇಮಕ‌ ಮಾಡಿ ಸರಕಾರ ಆದೇಶ ಹೊರಡಿಸಿತ್ತು. 2014ನೇ ಬ್ಯಾಚ್‌ನ ಅಧಿಕಾರಿಯಾದ ಈರಯ್ಯ ದೂಂತುರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿ, ಕುಂದಾಪುರದಲ್ಲಿ

ಸುಳ್ಯ ಠಾಣಾ ನೂತನ ಎಸ್ಐ ಆಗಿ ಈರಯ್ಯ ದೂಂತುರು ಅಧಿಕಾರ ಸ್ವೀಕಾರ Read More »

ಕರಾವಳಿ

ಅರಂತೋಡಿನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭ

(ನ್ಯೂಸ್ ಕಡಬ) newskadaba.com ಅರಂತೋಡು, ಜೂ. 19. ಇಲ್ಲಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಸೋಮವಾರದಂದು ಶುಭಾರಂಭಗೊಂಡಿತು. ಅಂಗಡಿ ಉದ್ಘಾಟನೆಯನ್ನು ಕರಾವಳಿ ಕೊಕೋನೆಟ್ ಪೈಚಾರು ಇದರ ಮಾಲಕ ಅಬೂಬಕ್ಕರ್ ಬೊಳುಬೈಲು ನೆರವೇರಿಸಿದರು. ಅಧ್ಯಕ್ಷತೆಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲರು ಕೆ. ಆರ್. ಗಂಗಾಧರ ಕುರುಂಜಿ ವಹಿಸಿದ್ದರು. ಅತಿಥಿಗಳಾಗಿ ಕೆಪಿಸಿಸಿ ವಕ್ತಾರರಾದ ಟಿ.ಎಂ. ಶಹೀದ್ ತೆಕ್ಕಿಲ್, ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜಾಲ್ಸೂರು ಗ್ರಾ. ಪಂ. ಸದಸ್ಯರಾದ

ಅರಂತೋಡಿನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭ Read More »

ಕರಾವಳಿ

ಕೋಮುರಾಜಕೀಯಕ್ಕೆ ಬಲಿಯಾದ 6 ಕುಟುಂಬಗಳಿಗೆ 25 ಲಕ್ಷ ರೂ.ಗಳ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 19. ಮತೀಯ ದ್ವೇಷದಿಂದ ಹತ್ಯೆಗೀಡಾದ ಆರು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್ ನ ಮುಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್, ದೀಪಕ್ ರಾವ್, ಮಂಡ್ಯದ ಇದ್ರೀಸ್ ಪಾಶಾ ಹಾಗೂ ನರಗುಂದದ ಶಮೀರ್ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,

ಕೋಮುರಾಜಕೀಯಕ್ಕೆ ಬಲಿಯಾದ 6 ಕುಟುಂಬಗಳಿಗೆ 25 ಲಕ್ಷ ರೂ.ಗಳ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ Read More »

ಕರಾವಳಿ, ಕರ್ನಾಟಕ

ಚೂರಿ ಇರಿದ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಕೋರ್ಟ್ ಗೆ ಹಾಜರ್

(ನ್ಯೂಸ್ ಕಡಬ) newskadaba.com  ಮಂಗಳೂರು, ಜೂ. 19 . ಯುವಕನಿಗೆ ಚೂರಿಯಿಂದ ಇರಿದಿರುವ ಘಟನೆ ಸುರತ್ಕಲ್ ಜನತಾ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ಇದೀಗ ಆರೋಪಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿರುವ  ಮೂಲಕ ಬಿಡುಗಡೆಯಾಗಿದ್ದಾನೆ. ಕಾನ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದು ಪರಾರಿಯಾಗಿದ್ದ.ಇದೀಗ ಆರೋಪಿಗೆ ಮಂಗಳೂರಿನ ಎರಡನೇ J M F C ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಜೂ.17ರಂದು ನೀಡಿದೆ. ಆರೋಪಿ ಪರ ವಕೀಲರಾದ ಜೀಶಾನ್

ಚೂರಿ ಇರಿದ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಕೋರ್ಟ್ ಗೆ ಹಾಜರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಕ್ರಮ ಗೋಸಾಗಾಟ ➤ ಇಬ್ಬರು ಅರೆಸ್ಟ್, ಇಬ್ಬರು ಪರಾರಿ

(ನ್ಯೂಸ್ ಕಡಬ) newskadab.com ಬೆಳ್ಳಾರೆ, ಜೂ.19. ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವೇಳೆ ವಾಹನವನ್ನು ತಡೆದ ಬೆಳ್ಳಾರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂರು ಗಂಡು ಕರುಗಳು, ಆಕ್ಟಿವಾ ಸ್ಕೂಟರ್ ಹಾಗೂ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ತಡರಾತ್ರಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಐ ಸುಹಾಸ್ ಆರ್. ಹಾಗೂ ಸಿಬ್ಬಂದಿಗಳು ಕರ್ತವ್ಯ ದಲ್ಲಿದ್ದ ವೇಳೆ ಪಿಕಪ್ ವಾಹನದಲ್ಲಿ

ಬೆಳ್ಳಾರೆ: ಅಕ್ರಮ ಗೋಸಾಗಾಟ ➤ ಇಬ್ಬರು ಅರೆಸ್ಟ್, ಇಬ್ಬರು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top