ಕರಾವಳಿ

ಪಿ.ಎಂ.ಇ.ಜಿ.ಪಿ ಯೋಜನೆಯಡಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಉದ್ಯೋಗ ಕೈಗೊಳ್ಳಲು ಬ್ಯಾಂಕ್‍ ಗಳ ಮೂಲಕ ಸಹಾಯಧನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಗಳು: ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಉತ್ಪಾದನೆ ಚಟುವಟಿಕೆಗಳಿಗೆ ಯೋಜನೆ ವೆಚ್ಚ 50 ಲಕ್ಷ ರೂ.ಗಳು, ಸೇವಾ ಚಟುವಟಿಕೆಗಳಿಗೆ ಯೋಜನೆ ವೆಚ್ಚ 20 ಲಕ್ಷ ರೂ.ಗಳು, ಘಟಕಗಳಿಗೆ 10 ಲಕ್ಷಕ್ಕಿಂತ ಹೆಚ್ಚಿನ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರಬೇಕು. ಸೇವಾ […]

ಪಿ.ಎಂ.ಇ.ಜಿ.ಪಿ ಯೋಜನೆಯಡಿ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಮಂಗಳೂರು: ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಇದೇ ಜೂ. 27ರ ಮಂಗಳವಾರ ಬೆಳಿಗ್ಗೆ ನಗರದ ಉರ್ವಾ ಸ್ಟೋರ್ ನಲ್ಲಿರುವ ತುಳುಭವನದ ಸಿರಿಛಾವಡಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ವಿಧಾನಸಭೆಯ ಸಭಾಪತಿಗಳಾದ ಯು.ಟಿ.

ಮಂಗಳೂರು: ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ Read More »

ಕರಾವಳಿ

ಪತ್ರಕರ್ತರಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ಇಂದು ಬೆಳಗ್ಗೆ 10 ಗಂಟೆಗೆ ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’ ವನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅರ್ಬನ್ ಹಾಥ್‍ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬಗೆಯ ಮಾವು, ಹಲಸಿನ ಹಣ್ಣುಗಳು, ಸ್ಥಳೀಯ ಮತ್ತು ವಿದೇಶೀ ಪಾನೀಯಗಳು ಹಾಗೂ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ನಗರದ

ಪತ್ರಕರ್ತರಿಗೆ ಆಹ್ವಾನ Read More »

ಕರಾವಳಿ

ಉಪ್ಪಿನಂಗಡಿ: ದ್ವಿಚಕ್ರ ವಾಹನ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 24. ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ಕಟ್ಟಡದ ಪಾರ್ಕಿಂಗ್ ಸ್ಥಳದಿಂದ ದ್ವಿಚಕ್ರ ವಾಹನವೊಂದು ಕಳವಾದ ಘಟನೆ ಜೂ. 19ರಂದು ನಡೆದಿದೆ. ಅಬ್ದುಲ್ ರಹಿಮಾನ್ ಎಂಬವರು ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕೆಎ 21 ಇಎ 1042 ನೋಂದಣಿಯ ಹೋಂಡಾ ಆಕ್ಟೀವಾ 5ಜಿ ದ್ವಿಚಕ್ರವನ್ನು ಜೂ. 19ರಂದು ಮಧ್ಯಾಹ್ನ 2.30ರಿಂದ 3.30ರ ನಡುವೆ ಕದ್ದೊಯ್ಯಲಾಗಿದೆ. ದ್ವಿಚಕ್ರ ವಾಹನದ ಮೌಲ್ಯವನ್ನು 60 ಸಾವಿರವೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ: ದ್ವಿಚಕ್ರ ವಾಹನ ಕಳವು Read More »

ಕರಾವಳಿ

ಬೆಳ್ತಂಗಡಿ: ವಿವಾಹಿತ ಮಹಿಳೆ ಮಗುವಿನೊಂದಿಗೆ ನಾಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 24. ಗುರುವಾಯನಕೆರೆಯ ಬಾಡಿಗೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆಯೋವರು ತನ್ನ ನಾಲ್ಕು ವರ್ಷದ ಮಗನೊಂದಿಗೆ ನಾಪತ್ತೆಯಾದ ಕುರಿತು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಕಡಬ ತಾಲೂಕಿನ ಬೆಳಂದೂರು ಗ್ರಾಮದ ನಿವಾಸಿ ನವೀನ್ ಕೆ.ಆರ್ ಅವರ ಪತ್ನಿ ಕವನ(25) ಜೂ. 06ರಂದು ರಾತ್ರಿ ಊಟ ಮುಗಿಸಿ ಮಲಗಿದ್ದರು. ಆದರೆ, ಬೆಳಗ್ಗೆ ಪತಿ ಎದ್ದು ನೋಡಿದಾಗ ನಾಲ್ಕು ವರ್ಷದ ಮಗ ಹಾಗೂ ಪತ್ನಿ ನಾಪತ್ತೆಯಾಗಿದ್ದರು. 2022ರಲ್ಲಿಯೂ ಕವನಾ ನಾಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ವಿವಾಹಿತ ಮಹಿಳೆ ಮಗುವಿನೊಂದಿಗೆ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಏಕಾಏಕಿ ಹಿಂದಕ್ಕೆ ಚಲಿಸಿದ ಲಾರಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 23. ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ. 66ರ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ. ಮೃತ ಚಾಲಕನನ್ನು ಹರ್ಯಾಣ ಮೂಲದ ಶಮೀಮ್ (38) ಎಂದು ಗುರುತಿಸಲಾಗಿದೆ. ಒಂದೇ ಸಂಸ್ಥೆಗೆ ಸೇರಿದ , ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಹರಿಯಾಣದಿಂದ ಕೇರಳ ಕಡೆಗೆ ಸರಕು ಸಾಗಾಟ ಮಾಡುತ್ತಿದ್ದರು. ತಲಪಾಡಿ ಟೋಲ್ ಸಮೀಪ ಚಹಾ ಕುಡಿಯಲೆಂದು ಚಾಲಕ ಶಮೀಮ್

ಉಳ್ಳಾಲ: ಏಕಾಏಕಿ ಹಿಂದಕ್ಕೆ ಚಲಿಸಿದ ಲಾರಿ ➤ ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ನಾಯಿಯನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ನಾಯಿಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಢಿಕ್ಕಿ ಹೊಡೆದು, ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಎಂಬಲ್ಲಿ ಇಂದು ನಡೆದಿದೆ.   ಮೃತರನ್ನು ಮರೋಳಿ ಬಜ್ಜೋಡಿ ನಿವಾಸಿ ನರಸಿಂಹ ಗಟ್ಟಿ (67) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ ಮನೆಯಿಂದ ಯೆಯ್ಯಾಡಿ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಡ್ಡದಾಟಿದ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್

ನಾಯಿಯನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ➤ ಸವಾರ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಆಲಂಕಾರು: ಬ್ರೈನ್ ಎಮರೇಜ್ ಗೆ ತುತ್ತಾಗಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು

(ನ್ಯೂಸ್ ಕಡಬ) newskadaba.com ಆಲಂಕಾರು, ಜೂ. 23. ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಲಂಕಾರಿನ ರಿಕ್ಷಾ ಚಾಲಕರೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಕುರಿತು ವರದಿಯಾಗಿದೆ. ಮೃತ ರಿಕ್ಷಾ ಚಾಲಕನನ್ನು ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಕಮಲಾಕ್ಷ ಗೌಡ ಎಂದು ಗುರುತಿಸಲಾಗಿದೆ. ಇವರು ಜೂ. 20ರಂದು ಬೆಳಗ್ಗೆ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಸಹೋದರ ತಕ್ಷಣ ಆಲಂಕಾರಿನ ಕ್ಲಿನಿಕ್‌ಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ

ಆಲಂಕಾರು: ಬ್ರೈನ್ ಎಮರೇಜ್ ಗೆ ತುತ್ತಾಗಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಸರ್ವರ್ ಸಮಸ್ಯೆ ➤ ಜೂನ್ ಕೊನೆಯವರೆಗೆ ಪಡಿತರ ವಿತರಣೆಗೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಜೂನ್ ತಿಂಗಳ 28ರಿಂದ ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆ ಪಡಿತರ ವಿತರಣೆಯನ್ನು ಜೂನ್ 27ರ ಒಳಗೆ ವಿತರಿಸಲು ಸರಕಾರ ಸೂಚಿಸಿತ್ತು. ಆದರೆ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ಅಡಚಣೆಯಾಗಿತ್ತು. ಇದನ್ನರಿತ ಸರಕಾರ ಈ ತಿಂಗಳ ಕೊನೆಯವರೆಗೆ ಪಡಿತರ ವಿತರಿಸಬೇಕೆಂದು ಸುತ್ತೋಲೆ ಹೊರಡಿಸಿದೆ.

ಸರ್ವರ್ ಸಮಸ್ಯೆ ➤ ಜೂನ್ ಕೊನೆಯವರೆಗೆ ಪಡಿತರ ವಿತರಣೆಗೆ ಸೂಚನೆ Read More »

ಕರಾವಳಿ

ಅರಂತೋಡು: ಟಿಟಿ ಹಾಗೂ ಪಿಕಪ್ ನಡುವೆ ಢಿಕ್ಕಿ ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಅರಂತೋಡು, ಜೂ. 23. ಪಿಕಪ್ ಹಾಗೂ ಟಿಟಿ ವಾಹನದ ನಡುವೆ ಢಿಕ್ಕಿ ಸಂಭವಿಸಿ ರ್ವ ಗಾಯಗೊಂಡ ಘಟನೆ ತೆಕ್ಕಿಲ್ ಕ್ರಾಸ್ ಬಳಿ ನಡೆದಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುವ ಟಿಟಿ ವಾಹನ ಹಾಗೂ ವಿರುದ್ದ ದಿಕ್ಕಿನಿಂದ ಬಂದ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ  ಓರ್ವ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಅರಂತೋಡು: ಟಿಟಿ ಹಾಗೂ ಪಿಕಪ್ ನಡುವೆ ಢಿಕ್ಕಿ ➤ ಓರ್ವನಿಗೆ ಗಾಯ Read More »

ಕರಾವಳಿ
Scroll to Top