ಕರಾವಳಿ

ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಭೂ- ಕರಾವಳಿಯಲ್ಲಿ ನಡೆಯಿತು ಹೇಯಕೃತ್ಯ

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ, ಜುಲೈ, 11. ದೈವದ ಜಾಗದ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೋರ್ವ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ನಡೆದಿದೆ. ಬಾಡಾರಿನ ಕೊರಗಕಲ್ಲು ಎಂಬಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ವಿಚಾರವಾಗಿ ಗಲಾಟೆ ನಡೆದು, ಬಳಿಕ ಅದು ತಾರಕಕ್ಕೇರಿ ಗುಡಿಯ ಬದಿಯಲ್ಲಿರುವ ನಿವಾಸಿ ಈ ರೀತಿಯ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇಲ್ಲಿನ ಸಾರ್ವಜನಿಕರು ಸ್ವಾಮಿ ಕೊರಗಜ್ಜ ಸಮಿತಿಯನ್ನು ರಚಿಸಿ ವರ್ಷಂಪ್ರತಿ ಕೊರಗಜ್ಜನಿಗೆ ಕೋಲ, ಅಗೇಲು […]

ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಭೂ- ಕರಾವಳಿಯಲ್ಲಿ ನಡೆಯಿತು ಹೇಯಕೃತ್ಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸಿಡಿಲು ಬಡಿದು ಸುಟ್ಟು ಕರಕಲಾದ ದಿನಸಿ ಅಂಗಡಿ- ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 11. ಸಿಡಿಲು ಬಡಿದು ದಿನಸಿ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ರಾಣಿಪುರದಲ್ಲಿ ದು ಮುಂಜಾನೆ ಸಂಭವಿಸಿದೆ. ಪಕ್ಕದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು, ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಣಿಪುರ ಚರ್ಚ್ ಎದುರಿನಲ್ಲಿರುವ ಪೀಟರ್ ಆಪ್ರೋಸ್ ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ಘಟನೆಯ ವೇಳೆ ಪೀಟರ್ ನಿದ್ರಿಸುತ್ತಿದ್ದರು. ಅಂಗಡಿ‌ಗೆ ಬೆಂಕಿ ಬಿದ್ದಿರುವುದನ್ನು ಕಂಡು ದಾರಿಯಲ್ಲಿ ತೆರಳುತ್ತಿದ್ದ ವ್ಯಕ್ತಿ

ಸಿಡಿಲು ಬಡಿದು ಸುಟ್ಟು ಕರಕಲಾದ ದಿನಸಿ ಅಂಗಡಿ- ಲಕ್ಷಾಂತರ ರೂ. ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಏರ್ ಇಂಡಿಯಾ ವಿಮಾನ ವಿಳಂಬ- ಪ್ರಯಾಣಿಕರ ಪರದಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಸೋಮವಾರ ತಡರಾತ್ರಿ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ ಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಬೆಳಗ್ಗೆಯಾದರೂ ಇನ್ನೂ ಹೊರಡದೆ ಪ್ರಯಾಣಿಕರು ಪರದಾಡುತ್ತಿರುವ ಬಗ್ಗೆ ವರದಿಯಾಗಿದೆ. ಇಂಜಿನ್ ಹಾಳಾಗಿದೆಯೆಂದು ಉತ್ತರಿಸುತ್ತಿರುವ ಅಧಿಕಾರಿಗಳು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸದೇ ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತೆ ಮಾಡಿರುವುದು ಸರಿಯಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಕೇಂದ್ರ ಸರ್ಕಾರ

ಮಂಗಳೂರು: ಏರ್ ಇಂಡಿಯಾ ವಿಮಾನ ವಿಳಂಬ- ಪ್ರಯಾಣಿಕರ ಪರದಾಟ Read More »

ಕರಾವಳಿ

ಕಾಪು ಬೀಚ್ ನ ಲೈಟ್ ಹೌಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

(ನ್ಯೂಸ್ ಕಡಬ) newsadaba.com ಕಾಪು, ಜು. 11. ಸಮುದ್ರ ತೀರದಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಲೈಟ್‌ ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಡಲು ಪ್ರಕ್ಷುಬ್ಧಗೊಂಡು, ಲೈಟ್‌ಹೌಸ್ ಬಳಿಯಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದ್ದು, ಇದರಿಂದಾಗಿ ಲೈಟ್‌ ಹೌಸ್ ಇರುವ ಬಂಡೆ ಮೇಲೆ ಪ್ರವೇಶಿಸುವುದೇ ಕಷ್ಟವಾಗಿದೆ. ಹೀಗಿದ್ದರೂ ಕೆಲವು ಪ್ರವಾಸಿಗರು ಪ್ರಯಾಸದಿಂದ ಮೆಟ್ಟಿಲುಗಳನ್ನೇರಿ ಲೈಟ್ ಹೌಸ್ ಪಕ್ಕಕ್ಕೆ ಹೋಗಲು ಯತ್ನಿಸುತ್ತಿರುವುದರಿಂದ ಆ ಪ್ರದೇಶಕ್ಕೆ ಹೋಗುವುದನ್ನೇ ನಿರ್ಬಂಧಿಸಿ ಹಗ್ಗ ಕಟ್ಟಿ ಎಚ್ಚರಿಕೆ

ಕಾಪು ಬೀಚ್ ನ ಲೈಟ್ ಹೌಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ Read More »

ಕರಾವಳಿ

ಮಂಗಳೂರು: ಐಎಎಸ್ ಪ್ರೋಬೇಷನರಿ ಅಧಿಕಾರಿಯಾಗಿ ಮುಕುಲ್ ಜೈನ್ ಕರ್ತವ್ಯಕ್ಕೆ ಹಾಜರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಮುಕುಲ್ ಚೈನ್ ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕರ್ತವ್ಯಕ್ಕೆ ಸೋಮವಾರದಂದು ಹಾಜರಾಗಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಪ್ರೊಬೇಷನರಿ ಅಧಿಕಾರಿಯನ್ನು ಸ್ವಾಗತಿಸಿ, ಅವರ ಕರ್ತವ್ಯಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. 2022ರ ಕರ್ನಾಟಕ ಕೆಡರ್ ನ ಐಎಎಸ್ ಅಧಿಕಾರಿಯಾಗಿರುವ ಮುಕುಲ್ ಜೈನ್, ಮೂಲತಃ ರಾಜಸ್ಥಾನದ ಆಲ್ವಾರ್ ನವರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ ಟೆಕ್ ಪದವಿ ಪಡೆದಿರುವ ಅವರು

ಮಂಗಳೂರು: ಐಎಎಸ್ ಪ್ರೋಬೇಷನರಿ ಅಧಿಕಾರಿಯಾಗಿ ಮುಕುಲ್ ಜೈನ್ ಕರ್ತವ್ಯಕ್ಕೆ ಹಾಜರ್ Read More »

ಕರಾವಳಿ

ಕಡಬ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶೀಘ್ರದಲ್ಲೇ ಹೊಸ ಸಮಿತಿ- ಸುಧೀರ್ ಕುಮಾರ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಜು. 11. ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಈ ಹಿಂದೆ ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಎಲ್ಲಾ ಗ್ರಾಮಗಳಿಗೆ ಪ್ರಾತಿನಿಧ್ಯ ಇರುವಂತೆ ರಚಿಸಿದ್ದೇವೆ, ಇದೀಗ ಆ ಸಮಿತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬರ್ಖಾಸ್ತುಗೊಳಿಸಲಾಗಿದೆ. ಪಕ್ಷದ ಬಲವರ್ಧನೆಗೋಸ್ಕರ ಶೀಘ್ರದಲ್ಲಿ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಕಡಬ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶೀಘ್ರದಲ್ಲೇ ಹೊಸ ಸಮಿತಿ- ಸುಧೀರ್ ಕುಮಾರ್ ಶೆಟ್ಟಿ Read More »

ಕರಾವಳಿ

ಅಡ್ಡಾದಿಡ್ಡಿ ಚಲಿಸಿ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆದ ಕಾರು- ಮೂವರು ಕಾಡಿನತ್ತ ಪರಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಜು. 11. ಕಾರೊಂದು ಅಡ್ಡಾದಿಡ್ಡಿ ಚಲಿಸಿ ಇತರ ವಾಹನಗಳಿಗೆ ಢಿಕ್ಕಿ ಹೊಡೆದು ಮೂವರು ಅಪರಿಚಿತರು ಪರಾರಿಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಪರ್ಕಳದಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರೊಂದು ಕೆಎಂಸಿ ಆಸ್ಪತ್ರೆ ನಿಲ್ದಾಣ ಸಮೀಪ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು, ಬಳಿಕ ರಿವರ್ಸ್‌ ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರರಿಗೆ ಗಾಯವಾಗಿದೆ. ಇನ್ನು ಪರ್ಕಳದಿಂದ ಬರುವಾಗಲೇ ಅಡ್ಡಾದಿಡ್ಡಿ ಸಂಚರಿಸಿದ್ದ ಕಾರು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೊಳಿಸಿ, ಮಣಿಪಾಲದಲ್ಲಿ

ಅಡ್ಡಾದಿಡ್ಡಿ ಚಲಿಸಿ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆದ ಕಾರು- ಮೂವರು ಕಾಡಿನತ್ತ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಒದಗಿಸಲು ಕೂಡಲೇ ಕ್ರಮವಹಿಸಿ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಹಾಗೂ ಕುಡಿಯುವ ನೀರು ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು ಸೋಮವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿ/ಮ್ಯಾನ್ಯುವಲ್ ಸ್ಕ್ಯಾವೆಂಜರ್‍ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಗರ

ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಒದಗಿಸಲು ಕೂಡಲೇ ಕ್ರಮವಹಿಸಿ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ Read More »

ಕರಾವಳಿ

ಕನ್ನಡ ಪ್ರವೇಶ, ಕಾವ, ಜಾಣ-ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಕನ್ನಡ ಸಾಹಿತ್ಯ ಪರಿಷತ್ ನಡೆಸುವ 2023-24ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2023ನೇ ಸಾಲಿನ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು 2023ರ ಆಗಸ್ಟ್ 31 ಕೊನೆಯ ದಿನ. 2023ರ ಸೆಪ್ಟೆಂಬರ್ 15ರ ವರೆಗೆ ದಂಡ ಶುಲ್ಕ 50ರೂ. ಗಳನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಪರೀಕ್ಷಾ

ಕನ್ನಡ ಪ್ರವೇಶ, ಕಾವ, ಜಾಣ-ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ವೈದ್ಯಾಧಿಕಾರಿ ಕಚೇರಿ, ರಾಷ್ಟ್ರೀಯ ಸೇವಾ ಯೋಜನೆ, ಸ್ನಾತಕೋತ್ತರ ವಿಭಾಗಗಳು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ-2023 ಕಾರ್ಯಕ್ರಮ ಇಂದು ಬೆಳಗ್ಗೆ 10 ಗಂಟೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯ

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ Read More »

ಕರಾವಳಿ
Scroll to Top