ಕರಾವಳಿ

ಕುಂತೂರು: ಮಾರ್ ಇವಾನಿಯೋಸ್ ದಿನಾಚರಣೆ

(ನ್ಯೂಸ್ ಕಡಬ) newskadaba.com ಕುಂತೂರು, ಜು. 19. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪನೆಗೆ ಪ್ರೇರಕರಾಗಿ ಕಾರಣಕರ್ತರಾದ ಮಾರ್ ಇವಾನಿಯೋಸ್ ಅವರ 70ನೇ ಪುಣ್ಯದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಓ.ಐ.ಸಿ. ಅವರು ಮಾರ್ ಇವಾನಿಯೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ಮೊಂಬತ್ತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೇರಳದ ತಿರುವನಂತಪುರದಲ್ಲಿ ಹುಟ್ಟಿ ಬೆಳೆದು ಮಲಂಕರ ಕೆಥೋಲಿಕ್ ಚರ್ಚ್‍ನ […]

ಕುಂತೂರು: ಮಾರ್ ಇವಾನಿಯೋಸ್ ದಿನಾಚರಣೆ Read More »

ಕರಾವಳಿ

ಮಂಗಳೂರು: ಚಪ್ಪಲಿ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾದ ಬಗ್ಗೆ 112 ತುರ್ತು ಸ್ಪಂದನಕ್ಕೆ ಕರೆ ಮಾಡಿ ಪೊಲೀಸರಿಂದ ಹುಡುಕಾಟ ಮಾಡಿಸಿದ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದ. ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ. ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ಗೆ ಕರೆ ಮಾಡಿದ್ದಾನೆ. ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು

ಮಂಗಳೂರು: ಚಪ್ಪಲಿ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ ವ್ಯಕ್ತಿ Read More »

ಕರಾವಳಿ

ಸುಳ್ಯ: ಅಣ್ಣನ ಹತ್ಯೆ ಪ್ರಕರಣ..!   ➤ ಬಂಧಿತ ಸಹೋದರರನ್ನು ಕರೆತಂದು ಮಹಜರು

(ನ್ಯೂಸ್ ಕಡಬ)newskadaba.com  ಸುಳ್ಯ, ಜು.18. ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿಂತೆ ಸಹೋದರರಿಂದ ಕೊಲೆಯಾದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿ ಸಹೋದರರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು ಅವರನ್ನು ಘಟನಾ ಸ್ಥಳಕ್ಕೆ ಕೊಂಡೊಯ್ದು ಮಹಜರು ನಡೆಸಲಾಗಿದೆ ಎನ್ನಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ಉಸ್ಮಾನ್ ರನ್ನ ಚೂರಿಯಿಂದ ಇರಿದು ಜುಲೈ 14ರಂದು ಕೊಲೆ ಮಾಡಿ ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು. ಆರೋಪಿಗಳನ್ನು ಕೊಡಗು

ಸುಳ್ಯ: ಅಣ್ಣನ ಹತ್ಯೆ ಪ್ರಕರಣ..!   ➤ ಬಂಧಿತ ಸಹೋದರರನ್ನು ಕರೆತಂದು ಮಹಜರು Read More »

ಕರಾವಳಿ

ಉಡುಪಿ: ದೋಷ ಪೂರಿತ ಟೈಲ್ಸ್‌ ಪೂರೈಕೆ   ➤ ಕಂಪನಿ ಮತ್ತು ಡೀಲರ್‌ ಗೆ 1 ಲಕ್ಷ ರೂ. ದಂಡ

(ನ್ಯೂಸ್ ಕಡಬ)newskadaba.com  ಉಡುಪಿ, ಜು.18. ದೋಷ ಪೂರಿತ ಟೈಲ್ಸ್ ಗಳನ್ನು ಪೂರೈಕೆ ಮಾಡಿದ ಕಂಪನಿ ಮತ್ತು ಡೀಲರ್ ಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 1 ಲಕ್ಷ ರೂ ಕ್ಕೂ ಹೆಚ್ಚಿನ ದಂಡ ವಿಧಿಸಿದೆ. ಕುಂದಾಪುರದ ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ರವರು ತಮ್ಮ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ಬಳಿಯಿರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂ ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿಸಿದ್ದಾರೆ.

ಉಡುಪಿ: ದೋಷ ಪೂರಿತ ಟೈಲ್ಸ್‌ ಪೂರೈಕೆ   ➤ ಕಂಪನಿ ಮತ್ತು ಡೀಲರ್‌ ಗೆ 1 ಲಕ್ಷ ರೂ. ದಂಡ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಕೊಲೆಗಳ ಪ್ರಕರಣ ➤ ಎಸ್‌ಐಟಿ ತನಿಖೆಗೆ ಕಾಂಗ್ರೆಸ್ ನಾಯಕ ಒತ್ತಾಯ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ಬಿ ರಮಾನಾಥ್ ರೈ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರೈ, ಕಾಂಗ್ರೆಸ್ ಸರ್ಕಾರ ಆಡಳಿತ ವಹಿಸಿಕೊಂಡು ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸುತ್ತಿದ್ದಾರೆ. ಕಟೀಲು ತಪ್ಪು ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಕೊಲೆಗಳ ಪ್ರಕರಣ ➤ ಎಸ್‌ಐಟಿ ತನಿಖೆಗೆ ಕಾಂಗ್ರೆಸ್ ನಾಯಕ ಒತ್ತಾಯ Read More »

ಕರಾವಳಿ

ಮಂಗಳೂರು: ಮಟ್ಕ ಚೀಟಿ ದಂಧೆ !!! ➤ ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಉರ್ವ ಪೊಲೀಸ್ ಥಾಣಾ ವ್ಯಾಪ್ತಿಯ ಉರ್ವಾ ಜಂಕ್ಷನ್ ಹತ್ತಿರದ ಮೈದಾನದಲ್ಲಿ ಮಟ್ಕ ಚೀಟಿ ದಂದೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ದೀಪಕ್ ಶೆಟ್ಟಿ ಕೋಡಿಕಲ್, ಅನಿಲ್ ಶೆಟ್ಟಿ, ಗಿರೀಶ್ ರೈ ವಾಮಂಜುರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  

ಮಂಗಳೂರು: ಮಟ್ಕ ಚೀಟಿ ದಂಧೆ !!! ➤ ಮೂವರು ಆರೋಪಿಗಳು ಅರೆಸ್ಟ್ Read More »

ಕರಾವಳಿ

ಇನ್ಮುಂದೆ ದೇವಾಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ತಮಿಳುನಾಡಿನ ಬಳಿಕ ಕರ್ನಾಟಕದ ದೇವಾಸ್ಥಾನಗಳ ಒಳಗಡೆ ಮೊಬೈಲ್ ಫೋನ್ ನಿಷೇಧ ಹೇರಲಾಗಿದ್ದು, ಮೊಬೈಲ್ ಫೋನ್ ಬಳಕೆ ನಿಷೇಧದ ಬಗ್ಗೆ ಮೊದಲಿನಿಂದ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಅಧಿಕೃತವಾಗಿ ಫೋನ್ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧ ಹೇರಿ ಆದೇಶ ಪ್ರಕಟಿಸಿದೆ. ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗುತ್ತಿದೆ ಎಂದು ಪ್ರಕಟಣೆ

ಇನ್ಮುಂದೆ ದೇವಾಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ Read More »

ಕರಾವಳಿ

ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆ್ಯಪ್ ➤ ಜಾಗ್ರತೆ ವಹಿಸಲು SP ಸೂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಜು.18. ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಅಪ್ಲಿಕೇಷನ್‌ ಗಳ ಕುರಿತು ಸಾರ್ವಜನಿಕರು ಎಚ್ಚರ ವಹಿಸುವಂತೆ ಉಡುಪಿ ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ರೀತಿಯ ನಕಲಿ ಅಪ್ಲಿಕೇಷನ್‌ಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್‌ ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್‌ ನ್ನು

ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆ್ಯಪ್ ➤ ಜಾಗ್ರತೆ ವಹಿಸಲು SP ಸೂಚನೆ Read More »

ಕರಾವಳಿ

ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಕಣ್ಣೂರು ಅಡ್ಯಾರ್‌ ನಿವಾಸಿ ಹಸೈನಾರ್‌ ಆಲಿಯಾಸ್‌ ಹಸೈನ್‌(35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಯುವತಿಯೋರ್ವಳು ಲೇಡಿಹಿಲ್‌ ಸಮೀಪ ಫ್ಲ್ಯಾಟ್‌ ಕಡೆಗೆ ಹೋಗುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು 4 ತಿಂಗಳ ಕಾರಾಗೃಹ ಶಿಕ್ಷೆ

ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ➤ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ)newskadaba.com ಕಾಪು, ಜು.18. ಕಟಪಾಡಿಯಲ್ಲಿ ಇಬ್ಬರು ಕಾರ್ಮಿಕರ ನಡುವಿನ ಗಲಾಟೆಯಾಗಿ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಕಾಪುವಿನಲ್ಲಿ ವರದಿಯಾಗಿದೆ. ಮೃತ ಕಾರ್ಮಿಕನನ್ನು ಒರಿಸ್ಸಾ ಮೂಲದ ಗಣೇಶ್ (50) ಎಂದು ಗುರುತಿಸಲಾಗಿದೆ. ಇವರು ಕಟಪಾಡಿ ಶಿರ್ವ ರಸ್ತೆ ಬಳಿಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರೂ ಹೊಡೆದಾಟ ನಡೆಸಿದ್ದು, ಈ ವೇಳೆ ಗಣೇಶ್ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ➤ ಕೊಲೆಯಲ್ಲಿ ಅಂತ್ಯ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top