ಕರಾವಳಿ

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 22. ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಮೇಲೆ ಬಿದ್ದ ಘಟನೆ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಭಜರಂಗಿ ರೋಡ್ ಲೈನ್ಸ್ ಸಂಸ್ಥೆಗೆ ಸೇರಿದ ಲಾರಿ, ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಕೆಂಪು ಇಟ್ಟಿಗೆ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ರಸ್ತೆ ಬದಿ ರಾಷ್ಟ್ರೀಯ ಹೆದ್ದಾರಿಯವರು ಹಾಕಿದ್ದ ತಡೆ ಬೇಲಿ ಮುರಿದು ಮನೆಯ ಶೆಡ್ ಮೇಲೆ ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ. […]

ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ Read More »

ಕರಾವಳಿ

ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 22. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ವಿವರ ಇಂತಿದೆ: ಶನಿವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ಬೆಳಿಗ್ಗೆ 11.15ಕ್ಕೆ ನಗರದ ಜೆಪ್ಪುವಿನ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಆಡಿಟೋರಿಯಂನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ರಿ)ದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಸಮ್ಮೇಳನ

ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ Read More »

ಕರಾವಳಿ

ಭಾರೀ ಮಳೆಗೆ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ- ವಾಹನ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 22. ಭಾರೀ ಮಳೆಗೆ ಮರವೊಂದು ಹೆದ್ದಾರಿಗೆ ಅಡ್ಡಲಾಗಿ ಬಿದ್ದು, ಸಂಚಾರಕ್ಕೆ ತೊಡಕುಂಟಾದ ಘಟನೆ ನೇರಳಕಟ್ಟೆ ಎಂಬಲ್ಲಿ ಶನಿವಾರದಂದು ಬೆಳಗ್ಗೆ ನಡೆದಿದೆ. ಮರದ ಜೊತೆಗೆ ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ತಂತಿಗಳು ನೆಲದ ಮೇಲೆ ಹರಿದಾಡಿತ್ತು. ಘಟನೆಯಿಂದಾಗಿ ಮಾಣಿ-ಮೈಸೂರು ಹೆದ್ದಾರಿ ರಸ್ತೆ ಸಂಚಾರಕ್ಕೆ ತೊಡಕಾಗಿದ್ದು, ಸುಮಾರು ಒಂದು ತಾಸುಗಿಂತಲೂ ಹೆಚ್ಚು ಕಾಲ ವಾಹನ ಸವಾರರು ಪರದಾಡುವಂತಾಯಿತು. ಎರಡೂ ಬದಿಯ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿವೆ. ಸ್ಥಳೀಯರು ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಭಾರೀ ಮಳೆಗೆ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ- ವಾಹನ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಜಪಾನ್ ಮೂಲದ ವ್ಯಕ್ತಿ ಉಪ್ಪಿನಂಗಡಿಯಲ್ಲಿ ಪತ್ತೆ- ಸ್ಥಳೀಯರ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 22. ಜಪಾನ್ ಮೂಲದ ವ್ಯಕ್ತಿಯೋರ್ವ ಗಡಿಯಾರ ಸಮೀಪ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಜಪಾನ್ ನ ಸುಯೋಷಿ ಎಂಬ ವ್ಯಕ್ತಿ ಗಡಿಯಾರ ಸಮೀಪ ಪತ್ತೆಯಾಗಿದ್ದು, ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು, ಬಳಿಕ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಆತ ಹೇಗೆ ಮತ್ತು ಯಾಕೆ ಇಲ್ಲಿಗೆಬಂದ ಎಂಬುವುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.

ಜಪಾನ್ ಮೂಲದ ವ್ಯಕ್ತಿ ಉಪ್ಪಿನಂಗಡಿಯಲ್ಲಿ ಪತ್ತೆ- ಸ್ಥಳೀಯರ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಪೊಲೀಸರು Read More »

ಕರಾವಳಿ

ವೇಶ್ಯಾವಾಟಿಕೆ ಅಡ್ಡೆಗೆ ದಾಳಿ- ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ, ಜು.‌ 22. ವೇಶ್ಯಾವಾಟಿಕೆ ನಡೆಸುತಿದ್ದ ಮನೆಗೆ ದಾಳಿ ನಡೆಸಿದ ಪೋಲಿಸರು ಇಬ್ಬರನ್ನು ಬಂಧಿಸಿದ್ದು ದಾಳಿಯ ವೇಳೆ ಮತ್ತೋರ್ವ ಪರಾರಿಯಾದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ನಡೆದಿದೆ. ಬಂಧಿತರನ್ನು ಸಲಾಮತ್ ಮತ್ತು ಚಂದ್ರ ಎಂದು ಗುರುತಿಸಲಾಗಿದೆ. ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೋಲಿಸ್ ನಿರೀಕ್ಷಕರಾದ‌ ದೇವರಾಜ್ ಟಿವಿ ಮತ್ತು‌‌ ಸಿಬ್ಬಂದಿಗಳು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದೆ.‌ ಈ

ವೇಶ್ಯಾವಾಟಿಕೆ ಅಡ್ಡೆಗೆ ದಾಳಿ- ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ

ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ – ವಿದ್ಯಾರ್ಥಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 22. ಕಾಲೇಜು ವಿದ್ಯಾರ್ಥಿಯ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮುಹಮ್ಮದ್ ಹಫೀಝ್ (20) ಎಂದು ಗುರುತಿಸಲಾಗಿದೆ. 6 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಗುಂಪೊಂದು ಪಣಂಬೂರು ಬೀಚ್ ಗೆ ವಿಹಾರಕ್ಕೆಂದು ತೆರಳಿದ್ದ ವೇಳೆ ಹಿಂಬಾಲಿಸಿಕೊಂಡು ಬಂದ ತಂಡವೊಂದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ 4 ಮಂದಿ ವಿದ್ಯಾರ್ಥಿನಿಯರು ತೆರಳಿದ್ದು, ಬೀಚ್ ನಿಂದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಬೈಕ್

ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ – ವಿದ್ಯಾರ್ಥಿಗೆ ಹಲ್ಲೆ Read More »

ಕರಾವಳಿ

ಸುಳ್ಯ: ತಲವಾರು ಹಿಡಿದು ಹಲ್ಲೆಗೆ ಯತ್ನ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 22. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ತಲವಾರು ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ನಡೆದಿದೆ. ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ಪೆಟ್ರೋಲ್ ಪಂಪ್ ಬಳಿ ಇರುವ ನಿಸರ್ಗ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯವಿರುವ ಪ್ರವೀಣ ಎಂಬವರು ಇನ್ನೊರ್ವ ನಿವಾಸಿ ಧರ್ಮಲಿಂಗಂ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ತಮ್ಮ ವಾಹನದಿಂದ ತಲವಾರು ತೆಗೆದು ಹಲ್ಲೆ ನಡೆಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ತಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಧರ್ಮಲಿಂಗಂ ಎಂಬವರು ಬೆಳ್ಳಾರೆ

ಸುಳ್ಯ: ತಲವಾರು ಹಿಡಿದು ಹಲ್ಲೆಗೆ ಯತ್ನ- ಪ್ರಕರಣ ದಾಖಲು Read More »

ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜು. 21. ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಬಳಿಕ ಆರೋಪಿ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ನಡೆದಿದೆ. ಆರೋಪಿಯನ್ನು ಅಬ್ದುಲ್‌ ಸಮೀರ್‌ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಆರೋಪಿಯು ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದು, ಬಳಿಕ ಮದುವೆಯಾಗುವುದಾಗಿ ನಂಬಿಸಿ 2019ರಲ್ಲಿ ಕನ್ಯಾನ ಗ್ರಾಮದ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದನು. ಬಳಿಕ ಮದುವೆಯಾಗದೇ ಮೋಸ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಇನ್ಮುಂದೆ ಪೊಲೀಸರಿಗೆ ಹೇಳದೆ ದಾಳಿ ನಡೆಸುತ್ತೇವೆ ➤ಭಜರಂಗದಳ ಮುಖಂಡ ಪುನೀತ್ ಅತ್ತಾವರ..!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.21. ಭಜರಂಗದಳದ ಕಾರ್ಯಕರ್ತರ ಮೃಲೆ ಗಡಿಪಾರು ಆದೇಶ ಹಿನ್ನೆಲೆ, ಮಂಗಳೂರು ಪೊಲೀಸರ ಕ್ರಮದ ಬಗ್ಗೆ ಭಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಭಜರಂಗ ದಳ ಮುಖಂಡ ಪುನೀತ್ ಅತ್ತಾವರ, ನಾವು ಇಲ್ಲಿ ತನಕ ಪೊಲೀಸರಿಗೆ ಸೂಚನೆ ನೀಡಿ ನಡೆಯುತ್ತಿದ್ದು, ಇನ್ನು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡೋದಿಲ್ಲ. ಮಾಹಿತಿ ನೀಡಿರೋದಕ್ಕೆ ಗಡಿಪಾರಿನ ನೋಟಿಸ್ ನೀಡಿದ್ದಾರೆ. ಕಣ್ಣೆದುರೇ ಅಕ್ರಮಗಳು ನಡೆದಾಗ ಸುಮ್ಮನೆ ಇರಬೇಕಾ ? ಗೋ ಹತ್ಯೆ ನಿಷೇಧದ ಬಗ್ಗೆ ಸರ್ಕಾರದ ಆದೇಶವೇ ಇದೆ.

ಇನ್ಮುಂದೆ ಪೊಲೀಸರಿಗೆ ಹೇಳದೆ ದಾಳಿ ನಡೆಸುತ್ತೇವೆ ➤ಭಜರಂಗದಳ ಮುಖಂಡ ಪುನೀತ್ ಅತ್ತಾವರ..! Read More »

ಕರಾವಳಿ

ಅವರು ನಮಗೆ ಆರೋಪಿಗಳಷ್ಟೇ, ಯಾವ ಸಂಘಟನೆ ಅನ್ನೋದು ನಮಗೆ ಬೇಡ ➤ ಕಮಿಷನರ್ ಕುಲದೀಪ್ ಜೈನ್..

(ನ್ಯೂಸ್ ಕಡಬ)newskadaba.com ಮಂಗಳೂರು, ಜು.21. ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಹೇಳಿಕೆ ನೀಡಿದ್ದಾರೆ. ನಮ್ಮ ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗ್ತಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ. ಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ಮಾಡಲಾಗಿದ್ದು, ನೈತಿಕ ಪೊಲೀಸ್

ಅವರು ನಮಗೆ ಆರೋಪಿಗಳಷ್ಟೇ, ಯಾವ ಸಂಘಟನೆ ಅನ್ನೋದು ನಮಗೆ ಬೇಡ ➤ ಕಮಿಷನರ್ ಕುಲದೀಪ್ ಜೈನ್.. Read More »

ಕರಾವಳಿ, ಕರ್ನಾಟಕ
Scroll to Top