ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕೇಂದ್ರ ಗೃಹಮಂತ್ರಿ ಷಾ ಪುತ್ರ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು. 31. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಸಿಸಿಐ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಮುಖ್ಯಮಂತ್ರಿ ಅಮಿತ್ ಷಾ ಪುತ್ರ ಜಯ್ ಷಾ ಭೇಟಿ ನೀಡಿದ್ದಾರೆ. ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ದೇವರಿಗೆ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು. ಇವರ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಆರಂಭದಲ್ಲಿ ಸಂಪರ್ಕ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದ್ದು, ಬಳಿಕ ಆಶ್ಲೇಷ ಬಲಿ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ […]

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕೇಂದ್ರ ಗೃಹಮಂತ್ರಿ ಷಾ ಪುತ್ರ ಭೇಟಿ Read More »

ಕರಾವಳಿ, ಕರ್ನಾಟಕ

ಇನ್ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ- ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಜು. 31. ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಗ್ರ ಕೋಬ್ರಾ ಎಂಬ ಖಾತೆಯನ್ನು ಹೊಂದಿದ್ದ ಆರೋಪಿಯು, ನೊಂದ ಯುವತಿಯ ಇನ್ಸ್ಟಾಗ್ರಾಮ್‌ ಖಾತೆಯನ್ನು ಫಾಲೋ ಮಾಡಿ, ಶುಕ್ರವಾರದಂದು ಆಕೆಯನ್ನು ಭಯಪಡಿಸುವ ರೀತಿಯಲ್ಲಿ ಕೆಟ್ಟ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಇದು ಆಕೆಗೆ ಪರಿಚಯದವರಿಂದ ತಿಳಿದು ಬಂದಿದ್ದು, ಇದರಿಂದ ತನ್ನ ಮಾನಸಿಕ ನೆಮ್ಮದಿಗೆ ಭಂಗ ಉಂಟು

ಇನ್ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ- ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಮೂವರನ್ನು ಬಂಧಿಸಿದ ವಿಟ್ಲ ಪೊಲೀಸರು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.31. ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಮೂಡಬಿದರೆ ಮೂಲದ ಪ್ರಸ್ತುತ ಬೆರಿಪದವಿನ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28) ಎಂದು ಗುರುತಿಸಲಾಗಿದೆ. ಅಕ್ಷಯ್ ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದು, ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ನಡೆಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಮೂವರನ್ನು ಬಂಧಿಸಿದ ವಿಟ್ಲ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

5ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com com ಮಂಗಳೂರು, ಜು. 31. ಅಪಾರ್ಚ್‌ಮೆಂಟ್‌ ನ 5ನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮೂಲತಃ ಅಡ್ಯಾರು ನಿವಾಸಿ, ಪ್ರಸ್ತುತ ಕದ್ರಿ ಶಿವಭಾಗ್‌ ನಲ್ಲಿ ವಾಸವಾಗಿದ್ದ ಸಮಯ್‌ (21) ಎಂದು ಗುರುತಿಸಲಾಗಿದೆ. ಈತ ತನ್ನ ಫ್ಲ್ಯಾಟ್‌ ನ ಬಾಲ್ಕನಿಯಲ್ಲಿ ಬೆಳಗ್ಗಿನ ಸಮಯ ಓದುತ್ತಿದ್ದಾಗ ಅವರ ತಾಯಿ ಕಾರು ತೊಳೆಯಲೆಂದು ನೆಲಮಹಡಿಗೆ ಹೋಗೋಣ ಎಂದು ಹೇಳಿ ಕೆಳಗೆ ಹೋಗಿದ್ದರು. ಅವರಿಗೆ ಸಹಾಯ

5ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ದಲಿತರ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು – ಯು.ಟಿ ಖಾದರ್ ಆಶ್ವಾಸನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31. ಡಿಸಿ ಮನ್ನಾ ಭೂಮಿ ಹಂಚಿಕೆ ಸೇರಿದಂತೆ ದಲಿತ ಸಂಘಟನೆಗಳ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುವುದಾಗಿ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಆಶ್ವಾಸನೆ ನೀಡಿದ್ದಾರೆ. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮಹಾಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ದಲಿತ ಸಂಘಟನೆಗಳು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸೌಹಾರ್ದತೆಯಿಂದ ಒಂದಾಗಿ ಮಹಾಸಂಗಮ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ

ದಲಿತರ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು – ಯು.ಟಿ ಖಾದರ್ ಆಶ್ವಾಸನೆ Read More »

ಕರಾವಳಿ, ಕರ್ನಾಟಕ

ಹಳ್ಳದಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 31. ಹಳ್ಳವೊಂದಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟವರನ್ನು ವರುಣ್‌ (27) ಮತ್ತು ವೀಕ್ಷಿತ್‌ (28) ಎಂದು ಗುರುತಿಸಲಾಗಿದೆ. ವರುಣ್‌ ಮತ್ತು ವೀಕ್ಷಿತ್‌ ಹಳ್ಳದ ದಡದಲ್ಲೇ ಕುಳಿತ್ತಿದ್ದರು. ಕೆಲವೇ ಹೊತ್ತಿನಲ್ಲಿ ದಡದಲ್ಲಿ ಕುಳಿತಿದ್ದ ವರುಣ್‌ ಆಯತಪ್ಪಿ ನೀರಿಗೆ ಬಿದ್ದಿದ್ದರು. ಇದನ್ನು ಗಮನಿಸಿದ ವೀಕ್ಷಿತ್‌ ಕೂಡಲೇ ಹಳ್ಳಕ್ಕೆ ದುಮುಕಿದರು. ಆದರೆ, ಹಳ್ಳದಲ್ಲಿ ಹೂಳು ತುಂಬಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಘಟನಾ

ಹಳ್ಳದಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಕೆ.ಬೈರಪ್ಪ ವಿಧಿವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.31. ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ.ಕೆ.ಬೈರಪ್ಪ(69) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ವಿಶ್ವ ವಿದ್ಯಾಲಯದಲ್ಲಿ 2014 ಜೂನ್ ನಿಂದ 2019 ಜೂನ್ ವರೆಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿ ಆ ಬಳಿಕ ಆದಿ ಚುಂಚನ ಗಿರಿಯಲ್ಲಿ ಕುಲಪತಿಗಳಾಗಿ ಕಾರ್ಯ ನಿರ್ವ ಹಿಸುತಿದ್ದರು ಎನ್ನಲಾಗಿದೆ. ಇನ್ನು ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ತೀವ್ರ ಹೃದಯಾಘಾತಗೊಂಡು ವಿಧಿವಶರಾಗಿದ್ದಾರೆ ಎನ್ನಲಾಗಿದೆ.

ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಕೆ.ಬೈರಪ್ಪ ವಿಧಿವಶ Read More »

ಕರಾವಳಿ
Theft, crime, Robbery

ಸುಬ್ರಹ್ಮಣ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು. 31. ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ಬಳಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ವರದಿಯಾಗಿದೆ. ಕೃಷ್ಣರಾಜ್ ಭಟ್ ಎಂಬವರು ಕಳೆದ 4 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ತೆರಳಿದ್ದರು. ಆದಿತ್ಯವಾರದಂದು ಸಂಜೆ ಮನೆಗೆ ಹಿಂತಿರುಗಿದಾಗ ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ Read More »

ಕರಾವಳಿ, ಕ್ರೈಮ್ ನ್ಯೂಸ್

‘ಖಾತೆ ಬ್ಲಾಕ್’ ಎಂಬ ಸಂದೇಶದ ಲಿಂಕ್ ಮೂಲಕ ಲಾಗಿನ್ – ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಹಣ ಗುಳುಂ.!

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 31. ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಬಂದ ಲಿಂಕ್ ಮೂಲಕ ಇಂಟರ್‌ ನೆಟ್ ಬ್ಯಾಂಕಿಂಗ್ ಲಾಗಿನ್ ಆದ ವೇಳೆ ಉಳಿತಾಯ ಖಾತೆಯಲ್ಲಿದ್ದ 24,998 ರೂ. ಕಡಿತಗೊಂಡಿರುವ ಬಗ್ಗೆ ಉಪ್ಪಿನಂಗಡಿ ನಿವಾಸಿ ಮೋಹನ ಕುಮಾರ ಕೆ.ಎಸ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜು. 28ರಂದು ಸಂಜೆ 5 ಗಂಟೆಗೆ ಮೋಹನ ಕುಮಾರ ಅವರ ಮೊಬೈಲ್ ಪೋನ್‌ ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿಮ್ಮ ಎಸ್‌ ಬಿಐ

‘ಖಾತೆ ಬ್ಲಾಕ್’ ಎಂಬ ಸಂದೇಶದ ಲಿಂಕ್ ಮೂಲಕ ಲಾಗಿನ್ – ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಹಣ ಗುಳುಂ.! Read More »

ಕರಾವಳಿ, ಕ್ರೈಮ್ ನ್ಯೂಸ್

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.30. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೋಪಿಯನ್ನು ಶಾಫಿ ಎಂದು ಗುರುತಿಸಲಾಗಿದೆ. 12 ವರ್ಷದ ಬಾಲಕಿಯನ್ನು ಆರೋಪಿಯು ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ಮಹಿಳಾ ಠಾಣೆಗೆ ದೂರು ನೀಡಲಾಗಿತ್ತು. ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ಆಕೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top