ಕರಾವಳಿ

ಸುಬ್ರಹ್ಮಣ್ಯ: ಅಕ್ರಮ ಗೋಸಾಗಾಟ – ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 19. ಅಕ್ರಮ ಗೋಸಾಗಾಟ ಮಾಡುತ್ತಿದ್ದ ಸಂದರ್ಭ ತಪಾಸಣಾ ನಿರತ ಪೊಲೀಸರು ವಾಹನ ಹಾಗೂ ಗೋವುಗಳನ್ನು ವಶಕ್ಕೆ ಪಡೆದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಸುಬ್ರಹ್ಮಣ್ಯದ ಕುಲ್ಕುಂದ – ಬಿಸಿಲೆ ಘಾಟ್ ರಸ್ತೆಯಲ್ಲಿ ಗುರುವಾರದಂದು ಸಂಜೆ ಸುಬ್ರಹ್ಮಣ್ಯ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸುಬ್ರಹ್ಮಣ್ಯ ಭಾಗದಿಂದ ಬಂದ ಗೂಡ್ಸ್‌ ವಾಹನವೊಂದನ್ನು ನಿಲ್ಲಿಸಲು ಸೂಚಿಸಿದ್ದು. ಈ ವೇಳೆ ವಾಹನದ ಚಾಲಕ ಹಾಗೂ ಇನ್ನೊರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾರೆ. ವಾಹನವನ್ನು […]

ಸುಬ್ರಹ್ಮಣ್ಯ: ಅಕ್ರಮ ಗೋಸಾಗಾಟ – ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ದೇವಸ್ಥಾನದಿಂದ‌ ಚಿನ್ನ, ಬೆಳ್ಳಿ ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಆ. 19. ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿನ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಿಂದ ಒಡವೆ ಹಾಗೂ ಸಿಸಿ ಕ್ಯಾಮೆರಾ ಕದ್ದೊಯ್ದ ಘಟನೆ ಶುಕ್ರವಾರದಂದು ಬೆಳಕಿಗೆ ಬಂದಿದೆ. ದೇವಸ್ಥಾನದ ಅರ್ಚಕ ರವಿಪ್ರಸಾದ್‌ ಭಟ್‌ ಅವರು ಶುಕ್ರವಾರ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆಯಲು ಮುಂದಾದಾಗ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕವನ್ನು ಹಾನಿ ಮಾಡಿರುವುದು ಕಂಡು ಬಂದಿತ್ತು. ಬಾಗಿಲು ಸರಿಸಿ ಪರಿಶೀಲಿಸಿದಾಗ ದೇವರ ಮೂರ್ತಿಗೆ ಹಾಕಲಾಗಿದ್ದ 35,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣ

ಕಡಬ: ದೇವಸ್ಥಾನದಿಂದ‌ ಚಿನ್ನ, ಬೆಳ್ಳಿ ಕಳ್ಳತನ Read More »

ಕರಾವಳಿ, ಕ್ರೈಮ್ ನ್ಯೂಸ್

ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನ – ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ಗೋವಾದ ಹಿರಿಯ ಕವಿ ಡಾ ರಾಜಯ್ ಪವಾರ್ ಸೇರಿದಂತೆ ಇಬ್ಬರಿಗೆ ಚಾರೊಳಿ ಚುಟುಕು ರಾಷ್ಟ್ರೀಯ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನವು ಆಗಸ್ಟ್ 20ರಂದು ಗೋವಾದ ಪಣಜಿಯ ಶ್ರೀ ಸರಸ್ವತಿ ಭವನದಲ್ಲಿ ನಡೆಯಲಿದೆ. ಅಲ್ಲಿ ಮಂಗಳೂರಿನ ಕೊಂಕಣಿಯ ಹಿರಿಯ ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ ಹಾಗೂ ಗೋವಾದ ಹಿರಿಯ ಕವಿ, ಗೀತೆಗಾರರಾದ ಪ್ರಾಚಾರ್ಯ ಡಾ.ರಾಜಯ್ ಪವಾರ್ ಅವರಿಗೆ ರಾಷ್ಟ್ರೀಯ ಚಾರೊಳಿ ಚುಟುಕು ಸನ್ಮಾನ ನೀಡಲಾಗುವುದು ಎಂದು ರಾಷ್ಟ್ರೀಯ ಚಾರೊಳಿ ಚುಟುಕು ಪರಿಷದ್ ನ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಹಾಗೂ ಕೊಂಕಣಿ

ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನ – ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ಗೋವಾದ ಹಿರಿಯ ಕವಿ ಡಾ ರಾಜಯ್ ಪವಾರ್ ಸೇರಿದಂತೆ ಇಬ್ಬರಿಗೆ ಚಾರೊಳಿ ಚುಟುಕು ರಾಷ್ಟ್ರೀಯ ಸನ್ಮಾನ Read More »

ಕರಾವಳಿ, ಕರ್ನಾಟಕ

ಮರ್ಧಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ – ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಮೀನಾಡಿ ಆಯ್ಕೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಆ.18. ಮರ್ಧಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 24ನೇ ವರ್ಷದ ಗಣೇಶೋತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿ ಗೌರವಾಧ್ಯಕ್ಷರಾಗಿ ಹರೀಶ್ ಕೋಡಂದೂರು, ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಮೀನಾಡಿ, ಉಪಾಧ್ಯಕ್ಷರಾಗಿ ಉಮೇಶ್ ಬೀಡು ಹೊಸಮನೆ ಹಾಗೂ ವಿನಯ ಕೇನ್ಯ, ಕೋಶಾಧಿಕಾರಿಯಾಗಿ ಗಂಗಾಧರ ರೈ ಬಸವಪಾಲು ಹಾಗೂ ಜೊತೆ ಕಾರ್ಯದರ್ಶಿಯಾಗಿ ದಿವೀಶ ಅಚ್ಚಿಲ ಆಯ್ಕೆಯಾಗಿದ್ದಾರೆ.

ಮರ್ಧಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ – ಅಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಕಾರ್ಯದರ್ಶಿಯಾಗಿ ತೀರ್ಥಪ್ರಸಾದ್ ಮೀನಾಡಿ ಆಯ್ಕೆ Read More »

ಕರಾವಳಿ

ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿಗೆ ಅಧಿಕಾರ ನೀಡಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ 250 ಚ.ಮೀ ವಿಸ್ತೀರ್ಣಕ್ಕೆ ಮೇಲ್ಪಟ್ಟ ಎಲ್ಲಾ ಕಡತಗಳು ಆಯುಕ್ತರ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕಾದ ವ್ಯವಸ್ಥೆ ಇತ್ತು. ಅದನ್ನು ಗಮನಿಸಿ ಈ ವ್ಯವಸ್ಥೆಯಲ್ಲಿನ ಕಡತಗಳ ಚಲನೆ ಹಾಗೂ ನಿರ್ವಹಣೆ ಬಗ್ಗೆ ಸಮರ್ಪಕವಾಗಿ ವಿಶ್ಲೇಷಿಸಿ, ಈ ಪದ್ದತಿಯಲ್ಲಿ ಕಂಡುಬಂದ ನ್ಯೂನ್ಯತೆಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಪರಿಹರಿಸುವ ಉದ್ದೇಶದಿಂದ,

ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿಗೆ ಅಧಿಕಾರ ನೀಡಿ ಆದೇಶ Read More »

ಕರಾವಳಿ

ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಗೆ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಪಡೆದ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ 2023-24 ನೇ ಸಾಲಿನ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಗೆ ಅರ್ಹರಿರುವ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ

ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಗೆ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ

ಕ್ರಶರ್ ಯಂತ್ರದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು – ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 18. ಜಲ್ಲಿ ಕ್ರಶರ್ ವೊಂದರಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಕಳವುಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರ ಸಹಿತ ಸ್ವತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕುರಿತು ವರದಿಯಾಗಿದೆ. ಬಂಧಿತರನ್ನು ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ವಿನಯ ಶೆಟ್ಟಿ ಎಂಬವರಿಗೆ ಸೇರಿದ ಕ್ರಶರ್ ನಿಂದ ಕ್ರಶರ್

ಕ್ರಶರ್ ಯಂತ್ರದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು – ಆರೋಪಿಗಳಿಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹಾರ್ಡ್ ವೇರ್ ಮಳಿಗೆಯಲ್ಲಿ ಕಳ್ಳರ ಕೈಚಳಕ – ನಗದು ಸಹಿತ 15 ಲಕ್ಷ ರೂಗಳ ಸೊತ್ತು ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 18. ಇಲ್ಲಿನ ಜಗದಾಂಭ ಏಜೆನ್ಸಿ ಹೆಸರಿನ ಇಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ರೂ. ನಗದು ಸಹಿತ ಸುಮಾರು 15.7 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ ಘಟನೆ ನೆಲ್ಯಾಡಿಯಲ್ಲಿ ಗುರುವಾರದಂದು ಬೆಳಕಿಗೆ ಬಂದಿದೆ. ಪ್ರಕಾಶ್ ಕೆ.ಜೆ. ಮಾಲಿಕತ್ವದ ಕಟ್ಟಡದಲ್ಲಿ ರಾಜಸ್ಥಾನದ ನಿವಾಸಿ ಕರಣ್ ಪಾಲ್ ಎಂಬವರ ಸಹೋದರ ನಡೆಸುತ್ತಿದ್ದ ಎಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಅಂಗಡಿಯ ಶಟರ್ ಅನ್ನು ಕತ್ತರಿಸಿ, ಒಳನುಗ್ಗಿರುವ ಕಳ್ಳರು ಕ್ಯಾಶ್

ಹಾರ್ಡ್ ವೇರ್ ಮಳಿಗೆಯಲ್ಲಿ ಕಳ್ಳರ ಕೈಚಳಕ – ನಗದು ಸಹಿತ 15 ಲಕ್ಷ ರೂಗಳ ಸೊತ್ತು ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

ಪಡಿತರ ಅಕ್ಕಿಯಲ್ಲಿ ಅವ್ಯವಹಾರ – ಸೂಕ್ತ ತನಿಖೆಗೆ ಆಗ್ರಹ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 18. ಪಡಿತರ ಚೀಟಿದಾರರಿಗೆ ವಿತರಿಸಲು ಆಹಾರ ಇಲಾಖೆಯಿಂದ ನೀಡಲಾಗಿದ್ದ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅವ್ಯವಹಾರ ನಡೆದಿರುವ ಕುರಿತು ಬಂಟ್ವಾಳದಿಂದ ವರದಿಯಾಗಿದೆ. ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892.95.450 ಕಿಂಟ್ವಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ನೀಡಿದ ದೂರಿನಂತೆ ಹಾಂಡ ನಗರ ಠಾಣೆಯಲ್ಲಿ

ಪಡಿತರ ಅಕ್ಕಿಯಲ್ಲಿ ಅವ್ಯವಹಾರ – ಸೂಕ್ತ ತನಿಖೆಗೆ ಆಗ್ರಹ Read More »

ಕರಾವಳಿ, ಕ್ರೈಮ್ ನ್ಯೂಸ್

ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ತಾಲೂಕಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಸೆಪ್ಟೆಂಬರ್ 18ರೊಳಗೆ ಅರ್ಜಿ ಅಹ್ವಾನಿಸಲಾಗಿದೆ. ಎಂ.ಎಸ್ಸಿ ಕೃಷಿ ಅಥವಾ ಇತರೆ ಕೃಷಿ ಸ್ನಾತಕೋತ್ತರ ಪದವಿ ಹಾಗೂ ಕೃಷಿ ವಿಸ್ತರಣೆಯಲ್ಲಿ ಎರಡು ವರ್ಷಗಳ ಅನುಭವ ಕಡ್ಡಾಯ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9008434151 ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ Read More »

ಉದ್ಯೋಗ, ಕರಾವಳಿ
Scroll to Top