ಕರಾವಳಿ

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 22. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿ ದಿನದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು.   ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿ ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ನಮ್ಮ ರಾಷ್ಟ್ರದ […]

ಚಂದ್ರಯಾನ-3 ಯಶಸ್ಸಿಗೆ ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಕುಕ್ಕೇ ಶ್ರೀ ಆಡಳಿತ ಮಂಡಳಿಯಿಂದ ವಿಶೇಷ ಸೇವೆ Read More »

ಕರಾವಳಿ

ಬ್ಯಾಂಕ್ ಆಫ್ ಬರೋಡಾದಿಂದ ಕುಕ್ಕೇ ಶ್ರೀ ದೇವಳಕ್ಕೆ ಕಂಪ್ಯೂಟರ್ ಕೊಡುಗೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 22. ನಾಗಾರಾಧನೆಯ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡಾದಿಂದ 5 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಶ್ರೀಮತಿ ಗಾಯತ್ರಿ ಆರ್ ಅವರು ಕುಕ್ಕೇ ಶ್ರೀ ದೇವಳಕ್ಕೆ ಸುಮಾರು 1 ಲಕ್ಷದ 25 ಸಾವಿರ ರೂ. ಮೌಲ್ಯದ 5 ಕಂಪ್ಯೂಟರ್‌ಗಳನ್ನು ಮಂಜೂರಾತಿಗೊಳಿಸಿದ್ದರು. ಅದರಂತೆ ಸೋಮವಾರದಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ

ಬ್ಯಾಂಕ್ ಆಫ್ ಬರೋಡಾದಿಂದ ಕುಕ್ಕೇ ಶ್ರೀ ದೇವಳಕ್ಕೆ ಕಂಪ್ಯೂಟರ್ ಕೊಡುಗೆ Read More »

ಕರಾವಳಿ

ತಮಿಳುನಾಡು ಮೂಲದ ದಂಪತಿ ಸುಳ್ಯದಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 22. ತಮಿಳುನಾಡು ಮೂಲದ ದಂಪತಿ ಎಲಿಮಲೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಜನ್ ಎಂದು ಗುರುತಿಸಲಾಗಿದೆ. ಎಲಿಮಲೆಯ ಪರಿಸರದಲ್ಲಿ ಕಳೆದ ಅನೇಕ ವರ್ಷಗಳಿಂದ ಟ್ಯಾಪಿಂಗ್ ಮಾಡುತ್ತಿದ್ದ ರಾಜನ್ ಮತ್ತು ಅವರ ಪತ್ನಿ ಕಳೆದ ಕೆಲ ಸಮಯಗಳಿಂದ ರಬ್ಬರ್ ತೋಟವನ್ನು ಸ್ವತಃ ಖರೀದಿಸಿ ಟ್ಯಾಪಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ. ರಾಜನ್ ರವರು ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೂ ತುತ್ತಾಗಿದ್ದರು. ಮನೆಯಲ್ಲಿ ದಂಪತಿಗಳು ಮಾತ್ರ ಇದ್ದು ಇಂದು

ತಮಿಳುನಾಡು ಮೂಲದ ದಂಪತಿ ಸುಳ್ಯದಲ್ಲಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 22. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ಮಹಿಳೆಯೊಬ್ಬರು ಶಾಲನ್ನು ಕೊರಳಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ದಿವ್ಯಾ ಎಂದು ಗುರುತಿಸಲಾಗಿದೆ. ಆದಿತ್ಯವಾರದಂದು ರಜೆ ಹಿನ್ನೆಲೆ ಪತಿ ಜಯರಾಮ ಮತ್ತು ಮಕ್ಕಳು ಬೆಳಂದೂರಿನಲ್ಲಿರುವ ತಂಗಿಯ ಮನೆಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಮನೆಯಲ್ಲಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಮೃತರ ತಾಯಿ ನೀಡಿದ

ವಿವಾಹಿತ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಶಾಲೆಗೆಂದು ತೆರಳಿದ್ದ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 22. ಬಾಲಕರ ವಿದ್ಯಾರ್ಥಿ ನಿಲಯದಿಂದ ಶಾಲೆಗೆಂದು ತೆರಳಿದ್ದ ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಗಳನ್ನು ದೀಕ್ಷಿತ್(15) ಮತ್ತು ಗಗನ್(14) ಎಂದು ಗುರುತಿಸಲಾಗಿದೆ. ಇವರಿಬ್ಬರು ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ತೆರಳಿದ್ದು, ಸಂಜೆ ವಾಪಾಸ್ಸು ಬಂದಿಲ್ಲ. ಈ ಬಗ್ಗೆ ಉಳಿದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದಾಗ ಶಾಲೆಗೆ ಹೋಗದೇ ಇರುವ ವಿಚಾರ ತಿಳಿದುಬಂದಿದೆ. ಬಾಲಕರ ಮನೆಯಲ್ಲಿ ವಿಚಾರಿಸಿ, ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆ ವಿದ್ಯಾರ್ಥಿ

ಶಾಲೆಗೆಂದು ತೆರಳಿದ್ದ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಗೃಹರಕ್ಷಕ ದಳದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಆ. 22. ತಾಲೂಕಿನ ಗೃಹರಕ್ಷಕ ದಳದ ನೂತನ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮತ್ತು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಬೇಕು ಎಂದು ಶುಭ ಹಾರೈಸಿದರು. ಇನ್ನು ಮುಂದೆ

ಕಡಬ: ಗೃಹರಕ್ಷಕ ದಳದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ Read More »

ಕರಾವಳಿ

ಎಟಿಎಂ ಕಳ್ಳತನಕ್ಕೆ ಯತ್ನ- ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಸುರತ್ಕಲ್‌ನಲ್ಲಿ ಎಸ್‌ಕಾವೇಟರ್ ಬಳಸಿ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ನಗರ ಪೊಲೀಸರು ಬಂಧಿಸಿರುವ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಬಂಧಿತರನ್ನು ಶಿವಮೊಗ್ಗ ಮೂಲದ ದೇವರಾಜ್, ಭರತ್ ಎಚ್, ನಾಗರಾಜ ನಾಯ್ಕ್ ಮತ್ತು ಧನರಾಜ್ ನಾಯ್ಕ್ ಎಂದು ಗುರುತಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳಿಂದ 50 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್‌ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡು, ಅವರ ವಿರುದ್ಧ ಐಪಿಸಿ ಸೆಕ್ಷನ್

ಎಟಿಎಂ ಕಳ್ಳತನಕ್ಕೆ ಯತ್ನ- ನಾಲ್ವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪೊಲೀಸ್ ಅಧಿಕಾರಿಯೆಂದು ನಂಬಿಸಿ ವಂಚನೆಗೆ ಯತ್ನ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಪೊಲೀಸ್ ಅಧಿಕಾರಿಯೆಂದು ನಂಬಿಸಿ ವಂಚಿಸಲೆತ್ನಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಉರ್ವ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ಬೆನೆಡಿಕ್ಟ್ ಸಾಬೂ (25) ಎಂದು ಗುರುತಿಸಲಾಗಿದೆ. ಈತನಿಂದ ಕೇರಳದ ‘ರಾ’ ಅಧಿಕಾರಿ ಮತ್ತು ಅಗ್ರಿಕಲ್ಚರ್ ಹಾಗೂ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್‌ಮೆಂಟ್ ಎಂಬ 380 ಐಡಿ ಕಾರ್ಡ್ ಗಳನ್ನು ಹಾಗೂ ಒಂದು ಜೊತೆ ಪಿಎಸ್ಸೈ ಪೊಲೀಸ್ ಸಮವಸ್ತ್ರ, ಪೊಲೀಸ್ ಶೂಸ್, ಲೋಗೋ, ಮೆಡಲ್, ಬೆಲ್ಟ್, ಕ್ಯಾಪ್, 1 ಲ್ಯಾಪ್ ಟಾಪ್

ಪೊಲೀಸ್ ಅಧಿಕಾರಿಯೆಂದು ನಂಬಿಸಿ ವಂಚನೆಗೆ ಯತ್ನ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಬೈಕ್ ಗಳ ನಡುವೆ ಢಿಕ್ಕಿ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಪಂಪ್ ವೆಲ್ ಬಳಿ ಭಾನುವಾರದಂದು ರಾತ್ರಿ ಸಂಭವಿಸಿದೆ. ಮೃತರನ್ನು ಮೆಫಿನ್ ಥಾಮ್ಸ್ (25) ಎಂದು ಗುರುತಿಸಲಾಗಿದೆ. ಬೈಕೊಂದು ಇನ್ನೊಂದು ಬೈಕ್ ಗೆ ಹಿಂಬದಿನಿಂದ ಢಿಕ್ಕಿ ಹೊಡೆದಿದ್ದು, ಈ ವೇಳೆ ಮೆಫಿನ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೈಕ್ ಗಳ ನಡುವೆ ಢಿಕ್ಕಿ- ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕರಾವಳಿಯಾದ್ಯಂತ ಸಂಭ್ರಮದ ನಾಗರ ಪಂಚಮಿ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಇಂದು ಕರಾವಳಿಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ವಿವಿಧ ಕುಟುಂಬಗಳ ಮನೆಗಳಲ್ಲೇ ನಾಗಾರಾಧನೆ ನಡೆಯುತ್ತದೆ. ಕರಾವಳಿಯಲ್ಲಿ ನಾಗಾರಾಧನೆಗೆ ತನ್ನದೇ ಆದ ಮಹತ್ವವಿದ್ದು, ತುಳುನಾಡ ಜನರ ಪಾಲಿನ ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ಮಂಗಳೂರಿನ ನಗರ ವ್ಯಾಪ್ತಿಯಲ್ಲಿ ಕುಡುಪು ಅನಂತಪದ್ಮನಾಭ ದೇವಸ್ಥಾನ, ಉರ್ವ ಮಾರಿಯಮ್ಮ, ಕದ್ರಿ ಹಾಗೂ ಶ್ರೀ ಕ್ಷೇತ್ರ ಮಂಗಳಾದೇವಿ ಸಹಿತ ವಿವಿಧ ದೇವಸ್ಥಾನಗಳಲ್ಲಿ ನಾಗರ ಪಂಚಮಿ ಆಚರಣೆ ನಡೆಯಲಿದೆ.

ಕರಾವಳಿಯಾದ್ಯಂತ ಸಂಭ್ರಮದ ನಾಗರ ಪಂಚಮಿ ಆಚರಣೆ Read More »

ಕರಾವಳಿ
Scroll to Top