ಕರಾವಳಿ

ಭಾರತೀಯ ಸೇನೆಯಲ್ಲಿ ಉದ್ಯೋಗ – ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ಭಾರತೀಯ ಸೇನೆ ಅಥವಾ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಯ ಬಾಲಕರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆಗಳು: ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಟ ವಾರ್ಷಿಕ ಆದಾಯ […]

ಭಾರತೀಯ ಸೇನೆಯಲ್ಲಿ ಉದ್ಯೋಗ – ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಉದ್ಯೋಗ, ಕರಾವಳಿ

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ- ಆಕ್ಷೇಪಣೆಗಳಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ಮೂಡಬಿದರೆಯ ಉಪನೋಂದಣಿ ಕಚೇರಿ ವ್ಯಾಪ್ತಿಯ ಗ್ರಾಮಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು 2023ರ ಸಾಲಿನಲ್ಲಿ ಪರಿಷ್ಕರಿಸಲಾಗಿದೆ. ಈ ದರಗಳಿಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಮೂಡಬಿದರೆಯ ಉಪನೋಂದಣಿ ಕಚೇರಿಯ ಹಿರಿಯ ಉಪನೋಂದಣಾಧಿಕಾರಿಗೆ 15 ದಿನಗಳೊಳಗೆ ಸಲ್ಲಿಸುವಂತೆ ಮೂಡಬಿದರೆ ಉಪನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ- ಆಕ್ಷೇಪಣೆಗಳಿಗೆ ಆಹ್ವಾನ Read More »

ಕರಾವಳಿ

ಮಂಗಳೂರು: ಆ. 25ರಂದು ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ಉಳ್ಳಾಲ ತಾಲೂಕಿನ ಆಡಳಿತ ಸೌಧಕ್ಕೆ ಆ. 25ರ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಭೇಟಿ ನೀಡಲಿದ್ದಾರೆ. ಅಂದು ಸಂಜೆ 4.30 ರಿಂದ 5.30ರ ವರೆಗೆ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಾರೆ ಎಂದು ಉಳ್ಳಾಲ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮಂಗಳೂರು: ಆ. 25ರಂದು ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ Read More »

ಕರಾವಳಿ

ಮಂಗಳೂರು: ನಾಳೆ(ಆ 24) ಜಮಾ ಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ಜೋಕಟ್ಟೆ ಗ್ರಾಮ ಪಂಚಾಯತ್‍ನ ಸಭಾಂಗಣದಲ್ಲಿ 2022-23ನೇ ಸಾಲಿನ ಜಮಾಬಂದಿ ಆ. 24ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ನಾಳೆ(ಆ 24) ಜಮಾ ಬಂದಿ Read More »

ಕರಾವಳಿ

ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆ ಇದರ ವತಿಯಿಂದ, ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ ಆ. 24ರ ಗುರುವಾರದಂದು ನಗರದ ನೇತ್ರಾವತಿ ಸಭಾಂಗಣದಲ್ಲಿ ಗೃಹರಕ್ಷಕರಿಗೆ ಒಂದು ದಿನದ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಇಸಿಜಿ, ಅಧಿಕ ರಕ್ತದೊತ್ತಡ ತಪಾಸಣಾ, ಕಣ್ಣಿನ ತಪಾಸಣೆ ಶಿಬಿರವನ್ನು ನಡೆಸಲಾಗುವುದು. ಈ ಕಾರ್ಯಕ್ರಮದ

ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಶಿಬಿರ Read More »

ಕರಾವಳಿ

ದಕ್ಷಿಣ ಕನ್ನಡದ 6 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ದಕ್ಷಿಣ ಕನ್ನಡದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಜ್ಪೆ ಇನ್‌ಸ್ಪೆಕ್ಟರ್ ನಿರಂಜನ್ ಕುಮಾರ್ ಸಕಲೇಶಪುರ ಗ್ರಾಮಾಂತರ ವೃತ್ತಕ್ಕೆ , ಐಎಸ್‌ಡಿಯಲ್ಲಿದ್ದ ಸಂದೇಶ್ ಮೂಡುಬಿದಿರೆ ಠಾಣೆಗೆ, ಡಿಸಿಆ‌ರ್‌ಇ ನಲ್ಲಿದ್ದ ಅಜ್ಮತ್ ಅಲಿಗೆ ಬಜ್ಪೆ ಠಾಣೆಗೆ, ಸಿಟಿ ಎಸ್‌ಬಿಯಲ್ಲಿದ್ದ ಮುಹಮ್ಮದ್ ಶರೀಫ್‌ ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಕದ್ರಿ ಠಾಣೆಗೆ ಹಾಗೂ ಕದ್ರಿಯ ಅನಂತ ಪದ್ಮನಾಭರನ್ನು ಕರ್ನಾಟಕ

ದಕ್ಷಿಣ ಕನ್ನಡದ 6 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ Read More »

ಕರಾವಳಿ

ಸುಳ್ಯ: ವಿದ್ಯಾರ್ಥಿಯನ್ನು 50 ಮೀಟರ್ ವರೆಗೆ ಎಳೆದೊಯ್ದ ಬಸ್

(ನ್ಯೂಸ್ ಕಡಬ) newskadaba.com ಸುಳ್ಯ, ಆ. 23. ಬಸ್ಸಿಗೆ ಓಡಿ ಹೋಗಿ ಹತ್ತುವ ಸಂದರ್ಭ ಆಯ ತಪ್ಪಿ ಬಿದ್ದ ಇಲ್ಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯೋರ್ವನನ್ನು ಬಸ್‌ ಸುಮಾರು 50 ಮೀಟರ್‌ನಷ್ಟು ದೂರ ಎಳೆದೊಯ್ದ ಘಟನೆ ನಡೆದಿದೆ. ಸುಳ್ಯದಿಂದ ಕೊಯ್ನಾಡಿಗೆ ಹೋಗುತ್ತಿದ್ದ ಸರಕಾರಿ ಬಸ್‌ ಕಾಲೇಜು ಬಳಿ ವಿದ್ಯಾರ್ಥಿಗಳನ್ನು ಹತ್ತಿಸಲು ನಿಂತಿದ್ದು ವಿದ್ಯಾರ್ಥಿಗಳು ಹತ್ತಿದ ಬಳಿಕ ಮುಂದಕ್ಕೆ ಸಾಗಿದೆ. ಈ ವೇಳೆ ಹತ್ತನೇ ತರಗತಿಯ ಅನಸ್‌ ಎಂಬಾತ ಓಡಿ ಬಂದು ಬಸ್‌ ಹತ್ತಲೆತ್ನಿಸಿದ್ದು, ಈ ಸಂದರ್ಭ ಆಯತಪ್ಪಿ

ಸುಳ್ಯ: ವಿದ್ಯಾರ್ಥಿಯನ್ನು 50 ಮೀಟರ್ ವರೆಗೆ ಎಳೆದೊಯ್ದ ಬಸ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ನಾನದ ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ – ದೂರು ದಾಖಲು

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಆ. 23. ನೆರೆಮನೆಯ ಮಹಿಳೆಯೋರ್ವರು ಸ್ನಾನಮಾಡುತ್ತಿದ್ದ ವೇಳೆ ಬಚ್ಚಲು ಮನೆಗೆ ನುಗ್ಗಿದ ಯುವಕನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಮಹಿಳೆ ರಾತ್ರಿ ವೇಳೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕ ಮನೋಜ್ ಎಂಬಾತ ಅಕ್ರಮವಾಗಿ ಬಚ್ಚಲು ಮನೆಗೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಮಹಿಳೆಯ ಮನೆಯವರು ಹೊರಬರುವ ವೇಳೆ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ. ಈ

ಸ್ನಾನದ ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ- ಸುಬ್ರಮಣ್ಯ ರಾಜ್ಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ – ದುರಸ್ತಿಗಾಗಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಲೋಕೋಪಯೋಗಿ ಇಲಾಖೆ ಮತ್ತು ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 23. ಉಪ್ಪಿನಂಗಡಿ- ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಹಳೆಗೇಟುವಿನಿಂದ ಕೆಮ್ಮಾರ ಕೊಯಿಲದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅವೈಜ್ಞಾನಿಕ ಮತ್ತು ಅಸಮರ್ಪಕ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆ ಮಧ್ಯೆ ನೀರು ಹರಿದು ನಿಂತಿರುತ್ತದೆ. ಇದರಿಂದ ವಾಹನಗಳು ಸಂಚರಿಸುವಾಗ ಬಸ್ಸಿಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರು ನೀರು ಎರಚಿ ತೊಂದರೆಯಾಗುತ್ತಿದೆ. ಮಾತ್ರವಲ್ಲದೇ ಶಾಲಾ ವಠಾರ ಸ್ಥಳ ಗುರುತಿಸುವ ಕಿಲೋಮೀಟರ್, ತಿರುವು, ಅಪಘಾತ ವಲಯ ಸೇರಿದಂತೆ ಯಾವುದೇ ಸೂಚನಾ ಫಲಕ ಇಲ್ಲದಿರುವುದನ್ನು ಮತ್ತು ಸರಿಯಾದ

ಉಪ್ಪಿನಂಗಡಿ- ಸುಬ್ರಮಣ್ಯ ರಾಜ್ಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ – ದುರಸ್ತಿಗಾಗಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಲೋಕೋಪಯೋಗಿ ಇಲಾಖೆ ಮತ್ತು ಶಾಸಕರಿಗೆ ಮನವಿ Read More »

ಕರಾವಳಿ

ಕಡಬ: ಕಾಡು ಪ್ರಾಣಿಗಳ ಬೇಟೆ – ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ.22. ಕಾಡು ಪ್ರಾಣಿಗಳ ಬೇಟೆಯಾಡಿ ಕಾರಿನಲ್ಲಿ ತೆರಳುತ್ತಿದ್ದ ಮೂವರು ಕಡಬ ಪೋಲಿಸರ ಬಲೆಗೆ ಬಿದ್ದ ಘಟನೆ ಠಾಣಾ ವ್ಯಾಪ್ತಿಯ ಕುಂತೂರು ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಬಂಧಿತ ಆರೋಪಿಗಳನ್ನು ನೆಲ್ಯಾಡಿ ನಿವಾಸಿಗಳಾದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬಲ್ಯ ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಇನ್ನೋವಾ ಕಾರಿನಲ್ಲಿ ಬೆಳಗಿನ ಜಾವ ಮನೆಯ ಕಡೆ ತೆರಳುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಕಡಬ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕಡಬ: ಕಾಡು ಪ್ರಾಣಿಗಳ ಬೇಟೆ – ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top