ಕರಾವಳಿ

ವಿದ್ಯಾರ್ಥಿಗಳಿಬ್ಬರ ಅಪಹರಿಸಿ ಹಲ್ಲೆ ಪ್ರಕರಣ – 7 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಆರೋಪದಡಿ 7 ಮಂದಿಯನ್ನು ಬಂದರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19), ಬಜಾಲ್ ನಂತೂರಿನ ಯುಪಿ ತನ್ವೀರ್ (20), ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ […]

ವಿದ್ಯಾರ್ಥಿಗಳಿಬ್ಬರ ಅಪಹರಿಸಿ ಹಲ್ಲೆ ಪ್ರಕರಣ – 7 ಮಂದಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸರಣಿ ಕಳ್ಳತನ- ಅಂತರ್ಜಿಲ್ಲಾ ಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 27. ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವೆಡೆ ಸರಣಿ ಕಳ್ಳತನಗೈದಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಬಂಧಿತನನ್ನು ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ (50) ಎಂದು ಗುರುತಿಸಲಾಗಿದೆ. ಈತನ ಬಂಧನದೊಂದಿಗೆ ಇತ್ತೀಚೆಗೆ ಮುಂಡಾಜೆ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ ನೆರಿಯ, ವೇಣೂರು ಮೊದಲಾದೆಡೆ ಸರಣಿ ಕಳ್ಳತನಗೈದಿದ್ದ ಅಂತರ್ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈತ ಬೆಳ್ತಂಗಡಿ

ಸರಣಿ ಕಳ್ಳತನ- ಅಂತರ್ಜಿಲ್ಲಾ ಕಳ್ಳನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ಠಾಣೆಯ ಕಾವಲು ಕಾಯುತ್ತಿದ್ದ ನಾಯಿ ಮೃತ್ಯು; ಕಣ್ಣೀರು ಹಾಕಿದ ಠಾಣಾ ಸಿಬ್ಬಂದಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 27. ಪೊಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ‘ಬೊಗ್ಗಿ’ ಹೆಸರಿನ ನಾಯಿಯೊಂದು ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರು ಕಣ್ಣೀರು ಹಾಕಿದ ಅಪರೂಪದ ಘಟನೆ ನಡೆಯಿತು. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಸದಸ್ಯೆಯಾಗಿ ರಾತ್ರಿ ವೇಳೆ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ. ಘಟನೆಯ ವಿವರ- ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ

ರಸ್ತೆ ಅಪಘಾತ- ಠಾಣೆಯ ಕಾವಲು ಕಾಯುತ್ತಿದ್ದ ನಾಯಿ ಮೃತ್ಯು; ಕಣ್ಣೀರು ಹಾಕಿದ ಠಾಣಾ ಸಿಬ್ಬಂದಿಗಳು Read More »

ಕರಾವಳಿ, ಕ್ರೈಮ್ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ – ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವರಿಂದ 64 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚ್ಛೇದಿತ ಮಹಿಳೆಯೋರ್ವರಿಗೆ ಮರುಮದುವೆ ಮಾಡುವ ಉದ್ದೇಶದಿಂದ ಆಕೆಯ ಸಹೋದರರು ಮುಸ್ಲಿಂ ಮ್ಯಾಟ್ರಿಮೋನಿಯಲ್‌ ಎಂಬ ಆ್ಯಪ್‌ನಲ್ಲಿ 2022ರಲ್ಲಿ ಆಕೆಯ ಪ್ರೊಫೈಲ್‌ ಹಾಕಿದ್ದು, ಅದಕ್ಕೆ ತಮಿಳುನಾಡಿನ ಪಳ್ಳಪಟ್ಟಿ ಮೂಲದ ಮೊಹಮ್ಮದ್‌ ಫ‌ರೀದ್‌ ಶೇಖ್‌ ಎಂಬಾತನ ರಿಕ್ವೆಸ್ಟ್‌ ಬಂದಿತ್ತು. ಅಲ್ಲದೇ ಮೊಹಮ್ಮದ್‌ ಶೇಖ್‌ ಮಹಿಳೆಯ ಮೊಬೈಲ್‌ ನಂಬರ್‌ ಪಡೆದು ಆಕೆಯನ್ನು ಮದುವೆಯಾಗುವುದಾಗಿ ಹೇಳಿದಾಗ,

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ಸಹಸವಾರ SSLC ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅಡ್ಯಾರ್ ಎಂಬಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಡ್ಯಾರ್ ಪದವು ನಿವಾಸಿ ಶರಫುದ್ದೀನ್ (16) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಶರಫುದ್ದೀನ್ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತ ಸ್ರಾವವಾಗಿದ್ದು, ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತ- ಸಹಸವಾರ SSLC ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನ; ಎಂಡೋಪೀಡಿತ ಯುವಕನಿಗೆ ಮನಬಂದಂತೆ ಥಳಿಸಿದ ಗುಂಪು- ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 25. ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಾಗಿದ್ದ ಮನೆಗೆ ಏಕಾಏಕಿ ನುಗ್ಗಿದ ಐವರು ದುಷ್ಕರ್ಮಿಗಳ ತಂಡವೊಂದು ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಸಂಭವಿಸಿದೆ.   ಹಲ್ಲೆಗೊಳಗಾದ ಮಗ ಎಂಡೋ ಪೀಡಿತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ತಾಯಿ ಹಾಗೂ ಮಗ ವಾಸವಿದ್ದ ಮನೆಗೆ ಗುರುವಾರದಂದು ಸಂಜೆ ಉಪ್ಪಿನಂಗಡಿ

ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನ; ಎಂಡೋಪೀಡಿತ ಯುವಕನಿಗೆ ಮನಬಂದಂತೆ ಥಳಿಸಿದ ಗುಂಪು- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ವಿದೇಶಿ ಹಾಗೂ ಇ-ಸಿಗರೇಟ್ ಮಾರಾಟ – ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವಂತೆ ಪೊಲೀಸರಿಂದ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 25. ನಿಷೇಧಿತ ಇ-ಸಿಗರೇಟ್ ಮಾರಾಟ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ನಗರದ ಮೂರು ಅಂಗಡಿಗಳ ಟ್ರೇಡ್‌ ಲೈಸನ್ಸ್‌ ನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಆ. 21ರಂದು ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನ ಮೂರು ಅಂಗಡಿಗಳಿಗೆ ದಾಳಿ ನಡೆಸಿದ್ದ ಪೊಲೀಸರು ಒಟ್ಟು 2.70 ಲಕ್ಷ ರೂ. ಮೌಲ್ಯದ ಇ-ಸಿಗರೇಟ್‌ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಕ್ಕೆ ಪಡೆದು ಮೂವರ

ವಿದೇಶಿ ಹಾಗೂ ಇ-ಸಿಗರೇಟ್ ಮಾರಾಟ – ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವಂತೆ ಪೊಲೀಸರಿಂದ ಪತ್ರ Read More »

ಕರಾವಳಿ, ಕ್ರೈಮ್ ನ್ಯೂಸ್

ಮೋಸ ವಂಚನೆ ಮಾಡದೆ ದುಡಿದು ಅಲ್ಲಾಹನ ತೃಪ್ತಿ ಪಡೆಯಿರಿ- ಬಹು | ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ

(ನ್ಯೂಸ್ ಕಡಬ) newskadaba.com ಮಾಣಿ, ಆ. 25. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಇದರ ವತಿಯಿಂದ “ಕಾರ್ಮಿಕ ಸಂಗಮ” ಕಾರ್ಯಕ್ರಮವು ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ಗುರುವಾರದಂದು ನಡೆಯಿತು. ಸರ್ಕಲ್ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿದರು. ಅಧ್ಯಕ್ಷ ಹೈದರ್ ಸಖಾಫಿ ಶೇರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರ್ಮಿಕ ಚೌಕಟ್ಟಿನಲ್ಲೇ ಹಲಾಲ್ ಆದ ವೃತ್ತಿಯನ್ನು ಯಾವುದೇ ಅನ್ಯಾಯ ಮೋಸ ವಂಚನೆ ಕಳ್ಳತನ ಇಲ್ಲದೆ ನಿರ್ವಹಿಸಿ ಅಲ್ಲಾಹನ ತೃಪ್ತಿ ಪಡೆದರೆ ಅದರಲ್ಲಿ ಬರ್ಕತ್

ಮೋಸ ವಂಚನೆ ಮಾಡದೆ ದುಡಿದು ಅಲ್ಲಾಹನ ತೃಪ್ತಿ ಪಡೆಯಿರಿ- ಬಹು | ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ Read More »

ಕರಾವಳಿ

ಬಂಧನದ ವೇಳೆ ಕೀಟನಾಶಕ ಸೇವಿಸಿದ ಆರೋಪಿ- ಅಸ್ವಸ್ಥ

(ನ್ಯೂಸ್ ಕಡಬ) newskadaba.com ಮುಲ್ಕಿ, ಆ. 25. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಬಂಧಿಸಲು ಹೋದ ಸಂದರ್ಭ ಆರೋಪಿಯೋರ್ವ ಕೀಟನಾಶಕ ಸೇವಿಸಿದ್ದು, ಪೊಲೀಸರು ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಆರೋಪಿ ಕರುಣಾಕರ್ ಎಂಬಾತ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣದ ಆರೋಪಿಯಾಗಿದ್ದು, ಈತನ ಮೇಲೆ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯ ಆದೇಶಿಸಿತ್ತು. ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿಯ ಬಾರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಖಚಿತ ಮಾಹಿತಿಯ ಮೇರೆಗೆ

ಬಂಧನದ ವೇಳೆ ಕೀಟನಾಶಕ ಸೇವಿಸಿದ ಆರೋಪಿ- ಅಸ್ವಸ್ಥ Read More »

ಕರಾವಳಿ, ಕ್ರೈಮ್ ನ್ಯೂಸ್

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವಂತೆ ಕಿರಿಕ್ – ನಗ್ನ ಚಿತ್ರ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 25. ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟು, ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿರೋರ್ವಳು ಗೂಗಲ್ ಪ್ಲೇ ಸ್ಟೋರ್‌ನ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಮೂಲಕ 10,000 ರೂ. ಸಾಲಕ್ಕೆ ಅರ್ಜಿ ಹಾಕಿದ್ದಳು. ತಕ್ಷಣ ಆಕೆಯ ಖಾತೆಗೆ 7,500 ರೂ. ಜಮೆಯಾಗಿತ್ತು. ಕೆಲವು ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದಳು.

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವಂತೆ ಕಿರಿಕ್ – ನಗ್ನ ಚಿತ್ರ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top