ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತೀ ಆಂಗ್ಲಮಾಧ್ಯಮ ಶಾಲೆಯಲ್ಲಿ ಜಂಟಿಯಾಗಿ ವಿಶ್ವ ಹಿಂದಿ ದಿವಸ್ ಅನ್ನು ಗುರುವಾರದಂದು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿಂದಿ ದಿವಸ್ ಅಂಗವಾಗಿ ಹಿಂದಿ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಬಿ ವಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಭಾಷಣ, ಹಿಂದಿ ಗೀತೆಗಳು ಹಾಗೂ ನೃತ್ಯಗಳು ಮೂಡಿಬಂತು. ವೇದಿಕೆಯಲ್ಲಿ ಪ್ರೌಢವಿಭಾಗದ ಮುಖ್ಯಗುರುಗಳಾದ ಶ್ರೀಮತಿ […]

ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ Read More »

ಕರಾವಳಿ

ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 14. ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟ ಭೀಕರ ಘಟನೆ ಮಲ್ಪೆಯ ತೊಟ್ಟಂ ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಒಡಿಶಾ ಮೂಲದ  ಬಾಬುಲ್ಲ(38) ಮತ್ತು ಭಾಸ್ಕರ್(40) ಎಂದು ಗುರುತಿಸಲಾಗಿದೆ. ಇವರಿಬ್ಬರು ಮನೆಯೊಂದಕ್ಕೆ ತಂದ ಗ್ರಾನೈಟ್ ನ್ನು ಲಾರಿಯಿಂದ ಖಾಲಿ ಮಾಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ: ಗಣೇಶ ಚತುರ್ಥಿ ಪ್ರಯುಕ್ತ ಸೆ.19 ರಂದು ರಜೆ ನೀಡಲು ಸಚಿವರ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಸೆಪ್ಟೆಂಬರ್ 19ರಂದು ಕರಾವಳಿ ಜಿಲ್ಲೆಗಳು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದ್ದು, ಅದೇ ದಿನ ಸರಕಾರಿ ರಜೆ ಘೋಷಣೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿರುವ ಹಿನ್ನೆಲೆ ದ.ಕ. ಜಿಲ್ಲೆಯಾದ್ಯಂತ ಸರಕಾರಿ ರಜೆಯನ್ನು ಸೆ. 18ರ ಬದಲು 19ರಂದು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ

ದಕ್ಷಿಣ ಕನ್ನಡ: ಗಣೇಶ ಚತುರ್ಥಿ ಪ್ರಯುಕ್ತ ಸೆ.19 ರಂದು ರಜೆ ನೀಡಲು ಸಚಿವರ ಸೂಚನೆ Read More »

ಕರಾವಳಿ

ಸುಳ್ಯ ವಿಧಾನಸಭಾ ಕ್ಷೇತ್ರ ; ಅಕ್ರಮ- ಸಕ್ರಮ ಸಮಿತಿಗೆ ಬಿಜೆಪಿ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 13. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವಾಗ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ- ಸಕ್ರಮ ಸಮಿತಿ ಸದಸ್ಯರು ಬಿಜೆಪಿಗರಾಗಿರುವುದು ವಿಶೇಷ. ಸರಕಾರದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ

ಸುಳ್ಯ ವಿಧಾನಸಭಾ ಕ್ಷೇತ್ರ ; ಅಕ್ರಮ- ಸಕ್ರಮ ಸಮಿತಿಗೆ ಬಿಜೆಪಿ ಸದಸ್ಯರ ನೇಮಕ Read More »

ಕರಾವಳಿ

ಪುತ್ತೂರು: ಗೃಹರಕ್ಷಕ ಘಟಕ ಕಛೇರಿ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 13. ಇಲ್ಲಿನ ಗೃಹರಕ್ಷಕ ದಳದ ಘಟಕ ಕಛೇರಿಯನ್ನು ಪುತ್ತೂರು ಹಳೆಯ ಪೊಲೀಸ್ ಠಾಣೆಯ ಎದುರು ಭಾಗದಲ್ಲಿರುವ ಮಹಾಲಿಂಗೇಶ್ವರ ವೆಂಚರ್ಸ್ ಕಟ್ಟಡಕ್ಕೆ (ಹಳೆಯ ಬೋನಂತಾಯ ಆಸ್ಪತ್ರೆ) ಸ್ಥಳಾಂತರ ಮಾಡಲಾಯಿತು.   ಈ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಬಲ್ನಾಡು ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೃಹರಕ್ಷಕರು ಒಳೆಯ ರೀತಿಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ, ಅವರಿಗೆ ಜನರು ಹೆಚ್ಚಿನ ಸಹಕಾರವನ್ನು ಕೊಡಬೇಕು ಹಾಗೂ ಪ್ರೋತ್ಸಾಹ ಕೊಡಬೇಕು, ಶಾಂತಿ ಸುವ್ಯವಸ್ಥೆ

ಪುತ್ತೂರು: ಗೃಹರಕ್ಷಕ ಘಟಕ ಕಛೇರಿ ಸ್ಥಳಾಂತರ Read More »

ಕರಾವಳಿ

ಸೆ. 23ರಂದು ಹಿರಿಯ ನಾಗರಿಕರಿಗೆ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದಲ್ಲಿ ಹಿರಿಯ ನಾಗರಿಕ ಇಲಾಖೆಯಿಂದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆ. 23ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಎಜುಕೇಶನ್ ಸೊಸೈಟಿ ಕೆಸೆಸ್ ಕಾಂಪೌಂಡ್ ಬಲ್ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳು ಇಂತಿವೆ: 60ರಿಂದ 69 ವರ್ಷ ವಯೋಮಿತಿಯ ಪುರುಷರಿಗೆ 200 ಮೀ. ನಡಿಗೆ ಮತ್ತು ರಿಂಗ್ ಬಗೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 70ರಿಂದ 79 ವರ್ಷ ವಯೋಮಿತಿಯವರಿಗೆ 100

ಸೆ. 23ರಂದು ಹಿರಿಯ ನಾಗರಿಕರಿಗೆ ಕ್ರೀಡಾಕೂಟ Read More »

ಕರಾವಳಿ, ಕ್ರೀಡಾ ನ್ಯೂಸ್

ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ಹಾಗೂ ಮ್ಯಾನೇಜ್‍ ಮೆಂಟ್ ಕೋಟಾದ ಕೋರ್ಸ್‍ಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಅಡ್ವಾನ್ಸ್‍ಡ್ ಸಿ.ಎನ್.ಸಿ ಮ್ಯಾಚಿಂಗ್ ಕೋರ್ಸ್ ಸೇರಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹರು ಕದ್ರಿಯಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರನ್ನು ಸಂಪರ್ಕಿಸಿ, ನೇರವಾಗಿ ಅರ್ಜಿ ಸಲ್ಲಿಸಿ ಅದೇ ದಿನದಂದು

ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು – ಅರ್ಜಿ ಆಹ್ವಾನ Read More »

ಉದ್ಯೋಗ, ಕರಾವಳಿ

ಗಣೇಶೋತ್ಸವ ಆಚರಣೆ ಹಿನ್ನೆಲೆ- ಶಾಂತಿ ಮತ್ತು ಸಮನ್ವಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಜಿಲ್ಲೆಯಾದ್ಯಂತ ಸೆ. 19ರಂದು ಗಣೇಶೋತ್ಸವ ಆಚರಣೆ ಹಿನ್ನೆಲೆ ಕಾನೂನು ವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸೆ.14ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶಾಂತಿ ಮತ್ತು ಸಮನ್ವಯ ಸಭೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆ ಹಿನ್ನೆಲೆ- ಶಾಂತಿ ಮತ್ತು ಸಮನ್ವಯ ಸಭೆ Read More »

ಕರಾವಳಿ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆಗಳಿಗೆ ನೇರ ನೇಮಕಾತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಉಪನಿರ್ದೇಶಕರ ಆರು ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭೂಸೇನೆಯಲ್ಲಿ ಮೇಜರ್ /ಲೆಫ್ಟಿನೆಂಟ್ ಕರ್ನಲ್ ಹಾಗೂ ನೌಕಾಸೇನೆ, ವಾಯುಸೇನೆ ತತ್ಸಮಾನ ರ್ಯಾಂಕಿಂಗ್‍ ಗಳಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, 2024 ಜನವರಿ 1ರಂದು 52 ವರ್ಷ ಮೀರಿರದವರು ಹಾಗೂ ಪದವೀಧರರಾಗಿದ್ದು, 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ ತೇರ್ಗಡೆಯಾದವರು ಅಭ್ಯರ್ಥಿಗಳು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆಗಳಿಗೆ ನೇರ ನೇಮಕಾತಿ- ಅರ್ಜಿ ಆಹ್ವಾನ Read More »

ಉದ್ಯೋಗ, ಕರಾವಳಿ

ಸೆ. 15ರಂದು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ನೆಲ್ಲಿಕಾರು ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ಸೆ.15ರ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ನೆಲ್ಲಿಕಾರು ಗ್ರಾಮ ಪಂಚಾಯತ್ ನ ಹಳೆ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 15ರಂದು ಗ್ರಾಮ ಸಭೆ Read More »

ಕರಾವಳಿ
Scroll to Top