ಕುಂತೂರು ಮಾರ್ ಇವಾನಿಯೋಸ್ ಬಿ ಎಡ್ ಕಾಲೇಜು ವಾರ್ಷಿಕೋತ್ಸವ – ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸೋಣ- ಹರಿಶ್ಚಂದ್ರ ಕೆ
(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆ ಅತ್ಯಂತ ಮೌಲ್ಯಯುತವಾದದ್ದು ಪ್ರಸ್ತುತ ಸಮಾಜದ ಬದಲಾದ ಕಾಲಘಟ್ಟದ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ಶೈಲಿಯ ಆಕರ್ಷಣೆಗಳಿಗೆ ಒಳಗಾಗದೆ ಶಿಕ್ಷಣವನ್ನು ಪಡೆಯಲು ಉತ್ತಮ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ನಿರ್ಮಿಸಿ ಕೊಡಬೇಕು. ಇವುಗಳ ಜೊತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಹೊಂದಿರುವ ಶಿಕ್ಷಕರು ಉತ್ತಮ ಗುಣ-ನಡತೆಗಳೊಂದಿಗೆ ಸಚ್ಚಾರಿತ್ರ್ಯವನ್ನು ಹೊಂದಿ ಶಿಕ್ಷಣ ವೃತ್ತಿಯ ಘನತೆ-ಗೌರವವನ್ನು ಸದಾ ಕಾಲವೂ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಜ್ಞೆಯನ್ನು ಹೊಂದಿರುವುದು ಅತೀ ಮುಖ್ಯವಾಗಿದೆ ಎಂದು […]

