ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ 2 ಹೆದ್ದಾರಿ ಕಾಮಗಾರಿಗೆ ಸಚಿವ ಗಡ್ಕರಿಯಿಂದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ದಕ್ಷಿಣ ಕನ್ನಡ ಜಿಲ್ಲೆಯ 2 ಹೆದ್ದಾರಿ ಕಾಮಗಾರಿಗಳ ಸಹಿತ 13 ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಇಂದು ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ಮಾಡಲಿದ್ದಾರೆ. ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ- ಧರ್ಮಸ್ಥಳ-ಪೆರಿಯಶಾಂತಿ ವರೆಗಿನ 614 ಕೋಟಿ ರೂ. ವೆಚ್ಚದ ಸುಮಾರು 28.50 ಕಿ.ಮೀ. ಉದ್ದದ ದ್ವಿಪಥ ರಸ್ತೆ ಹಾಗೂ ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ 344 ಕೋಟಿ […]

ದಕ್ಷಿಣ ಕನ್ನಡ ಜಿಲ್ಲೆಯ 2 ಹೆದ್ದಾರಿ ಕಾಮಗಾರಿಗೆ ಸಚಿವ ಗಡ್ಕರಿಯಿಂದ ಶಿಲಾನ್ಯಾಸ Read More »

ಕರಾವಳಿ, ಕರ್ನಾಟಕ

ನ್ಯುಮೋನಿಯಾ ಜ್ವರಕ್ಕೆ ತುತ್ತಾಗಿ ಬಾಲಕಿ ನಿಧನ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಫೆ. 22. ನ್ಯುಮೋನಿಯಾಕ್ಕೆ ಜ್ವರದಿಂದಾಗಿ ಒಂದನೇ ತರಗತಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಅಶ್ರಿಜಾ ಎಂದು ಗುರುತಿಸಲಾಗಿದೆ. ಬಾಲಕಿ ನ್ಯುಮೋನಿಯಾ ಜ್ವರಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಪಲಿಸದೇ ಮೃತಪಟ್ಟಿದ್ದಾಳೆ. ಇನ್ನು ವಿದ್ಯಾರ್ಥಿನಿಯ ನಿಧನದ ಸಂತಾಪ ಸೂಚಕವಾಗಿ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಲಾಗಿದೆ.

ನ್ಯುಮೋನಿಯಾ ಜ್ವರಕ್ಕೆ ತುತ್ತಾಗಿ ಬಾಲಕಿ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸಂವಿಧಾನ ಜಾಥಾ- ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಪುತ್ತೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ, ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಕೌಕ್ರಾಡಿ ಗ್ರಾಮ ಪಂಚಾಯತ್ ಗೆ ಬುಧವಾರ ಬೆಳಗ್ಗೆ ಆಗಮಿಸಿತು. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಅಂಬೇಡ್ಕರ್ ಪುತ್ತಳಿಗೆ ಹಾರಾರ್ಪಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬ್ಯಾಂಡ್ ಸೆಟ್ ಮೂಲಕ ಶಾಲಾ ವಿಧ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಕೌಕ್ರಾಡಿ ಜಂಕ್ಷನ್

ಸಂವಿಧಾನ ಜಾಥಾ- ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ Read More »

ಕರಾವಳಿ

ಸ್ಪರ್ಧಾತ್ಮಕ ಪರೀಕ್ಷೆ- ನಿಷೇಧಾಜ್ಞೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಫೆಬ್ರವರಿ 20ರಿಂದ ಮಾರ್ಚ್ 7ರ ವರೆಗೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಗರದ ಐಓನ್ ಡಿಜಿಟಲ್ ಝೋನ್, ಬೋಂದೆಲ್ ನಲ್ಲಿ ನಡೆಸಲಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು

ಸ್ಪರ್ಧಾತ್ಮಕ ಪರೀಕ್ಷೆ- ನಿಷೇಧಾಜ್ಞೆ Read More »

ಕರಾವಳಿ

ಸರ್ವಜ್ಞ ವಚನಗಳಿಂದ ಸಮಾಜದಲ್ಲಿ ನೈತಿಕತೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಸಮಾಜದ ಅಂಕುಡೊಂಕು ಮೂಢನಂಬಿಕೆಗಳನ್ನು ಜನರಿಗೆ ಸರಳವಾಗಿ ತಮ್ಮ ವಚನಗಳ ಮೂಲಕ ತಿಳಿಸಿದ ಕವಿ ಸರ್ವಜ್ಞರ ವಚನಗಳನ್ನು ಶಾಲಾ ಮಕ್ಕಳಿಗೆ ತಿಳಿಸುವ ಮೂಲಕ ನೈತಿಕ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಭಾರತೀಯ ಸೇವಾದಳದ ಅಧ್ಯಕ್ಷ ರೊ. ಟಿ. ಶೇಷಪ್ಪ ಹೇಳಿದ್ದಾರೆ. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಕುಂಬಾರರ ಮಹಾಸಂಘ ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ/ಕುಂಬಾರರ ಯುವವೇದಿಕೆ

ಸರ್ವಜ್ಞ ವಚನಗಳಿಂದ ಸಮಾಜದಲ್ಲಿ ನೈತಿಕತೆ ನಿರ್ಮಾಣ Read More »

ಕರಾವಳಿ

ಪ್ರಚಾರ ಬಯಸದ ಮೌನ ಸಾಧಕ – ಕೆ.ಟಿ ಗಟ್ಟಿ; ಶ್ರದ್ಧಾಂಜಲಿ ಸಭೆಯಲ್ಲಿ ಡಾ|ಮೀನಾಕ್ಷಿ ರಾಮಚಂದ್ರ ಅಭಿಪ್ರಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಪ್ರಚಾರ ಬಯಸದ ಸಹೃದಯಿ ಕೆ.ಟಿ ಗಟ್ಟಿಯವರು ಮೌನವಾಗಿಯೇ ನಿರಂತರ ಸಾಧನೆಯಿಂದ ಸಾಹಿತ್ಯ ಲೋಕದ ತಾರೆಯಾದವರು ಎಂದು ಡಾ । ಮೀನಾಕ್ಷಿ ರಾಮಚಂದ್ರ ಅಭಿಪ್ರಾಯಪಟ್ಟರು. ನಮ್ಮನ್ನಗಲಿದ ಖ್ಯಾತ ಕಾದಂಬರಿಕಾರ ಕೆ.ಟಿ ಗಟ್ಟಿಯವರಿಗೆ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕದಿಂದ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ, ರಘು ಇಡ್ಕಿದು, ಬೆನೆಟ್ ಜಿ ಅಮ್ಮನ್ನ ನುಡಿ

ಪ್ರಚಾರ ಬಯಸದ ಮೌನ ಸಾಧಕ – ಕೆ.ಟಿ ಗಟ್ಟಿ; ಶ್ರದ್ಧಾಂಜಲಿ ಸಭೆಯಲ್ಲಿ ಡಾ|ಮೀನಾಕ್ಷಿ ರಾಮಚಂದ್ರ ಅಭಿಪ್ರಾಯ Read More »

ಕರಾವಳಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಕಾರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 21. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿ ಯದ್ವಾತದ್ವಾ ಚಲಿಸಿದ ಘಟನೆ ಮಾಣಿ ಸಮೀಪದ ಪೆರಾಜೆಯಲ್ಲಿ ನಡೆದಿದೆ. ಪುತ್ತೂರಿನಿಂದ ಮಾಣಿ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯಿಂದ ಬದಿಗೆ ಸರಿದು ಅಡ್ಡಾದಿಡ್ಡಿಯಾಗಿ ಚಲಿಸಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದಿದೆ. ಇನ್ನು ಚಾಲಕನ ನಿಯಂತ್ರಣ ತಪ್ಪಿ ಚಲಿಸಿದ್ದ ಕಾರು ಪಲ್ಟಿಯಾಗುವ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ.

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಕಾರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉದ್ಯೋಗದ ನೆಪದಲ್ಲಿ ವಂಚನೆ – ಬಂಧಿತ ಯುವತಿಯರ ಸಹಿತ ಮೂವರಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 21. ಉದ್ಯೋಗದ ನೆಪದಲ್ಲಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವ ಕುರಿತು ವರದಿಯಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಫೀಸ್ ಖಾಲಿ ಇದೆ. ಉದ್ಯೋಗ ಇಲ್ಲದೇ ಇರುವವರಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಬಂದ ಬಳಿಕ ಫೀಸ್ ಕೊಡಬೇಕು ಎಂದು ನಂಬಿಸಿ 7 ತಿಂಗಳಿನಿಂದ ಆನ್-ಲೈನ್ ಮುಖಾಂತರ ಒಟ್ಟು 2,25,001 ರೂ. ಗಳನ್ನು

ಉದ್ಯೋಗದ ನೆಪದಲ್ಲಿ ವಂಚನೆ – ಬಂಧಿತ ಯುವತಿಯರ ಸಹಿತ ಮೂವರಿಗೆ ಜಾಮೀನು Read More »

ಕರಾವಳಿ

ಪುತ್ತೂರು ಸಂಚಾರ ಠಾಣೆಗೆ ನೂತನ ಎಸ್ಐ ಶಾಹಿದ್ ಅಫ್ರಿದಿ ಕರ್ತವ್ಯಕ್ಕೆ ಹಾಜರ್..!

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 21. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗದ ಆದೇಶದಂತೆ ಪುತ್ತೂರು ಠಾಣೆಗೆ ವರ್ಗಾವಣೆಗೊಂಡಿರುವ ನೂತನ ಎಸ್ಐ ಶಾಹಿದ್ ಅಫ್ರಿದಿ ಅವರು ಫೆಬ್ರವರಿ 20ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶಾಹಿದ್ ಅಫ್ರಿದಿ ಅವರು ಚಿಕ್ಕಮಗಳೂರು ಠಾಣೆಯಲ್ಲಿ ಎಸ್ಐ ಆಗಿ ಕರ್ತವ್ಯದಲ್ಲಿದ್ದು, ಚುನಾವಣಾ ಆಯೋಗದ ಆದೇಶದಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪುತ್ತೂರು ಸಂಚಾರ ಠಾಣೆಗೆ ನೂತನ ಎಸ್ಐ ಶಾಹಿದ್ ಅಫ್ರಿದಿ ಕರ್ತವ್ಯಕ್ಕೆ ಹಾಜರ್..! Read More »

ಕರಾವಳಿ

ಕಂಬಳವನ್ನು ರಾಜ್ಯಕ್ರೀಡೆಯಾಗಿ ಘೋಷಿಸಲು ಮಂಜುನಾಥ ಭಂಡಾರಿ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು, ಕಂಬಳ ಸಮಿತಿಯ ಸದಸ್ಯರು ಹಾಗೂ ಕಂಬಳ ಆಯೋಜಕರ ಸಭೆ ನಡೆಸಿ ಕಂಬಳ ಸಮಿತಿ ರಚಿಸುವಂತೆ ಸಭಾಪತಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈವರೆಗೆ ಸಮಿತಿ ರಚನೆಯಾಗದೇ ಇರುವುದನ್ನು ಸರಕಾರದ ಗಮನಕ್ಕೆ ತಂದು ಶೀಘ್ರವೇ ಸಮಿತಿ ರಚಿಸುವಂತೆ ವಿಧಾನಮಂಡಲದ 2024ರ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಎಂ. ಮಂಜುನಾಥ್ ಭಂಡಾರಿ ಅವರು ಸರಕಾರವನ್ನು ಆಗ್ರಹಿಸಿದರು. ಕಳೆದ ವರ್ಷ ಪುತ್ತೂರು ಶಾಸಕ ಅಶೋಕ ಕುಮಾರ್‌ ರೈ ನೇತೃತ್ವದಲ್ಲಿ

ಕಂಬಳವನ್ನು ರಾಜ್ಯಕ್ರೀಡೆಯಾಗಿ ಘೋಷಿಸಲು ಮಂಜುನಾಥ ಭಂಡಾರಿ ಆಗ್ರಹ Read More »

ಕರಾವಳಿ, ಕರ್ನಾಟಕ
Scroll to Top