ಕರಾವಳಿ

ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ದ.ಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ 2024ರ ಕಾರ್ಯಕ್ರಮವು ವೆನ್‍ ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಆರ್ ತಿಮ್ಮಯ್ಯ ಮಾತನಾಡಿ, ಮಾನವನ ಸಾವಿನ […]

ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ Read More »

ಕರಾವಳಿ, ಕರ್ನಾಟಕ

ಸುಳ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 27. ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಹರ್ಲಡ್ಕ ನಿವಾಸಿ ವೆಂಕಪ್ಪ ನಾಯ್ಕ್ ಎಂಬವರ ಪುತ್ರ ರುಕ್ಮಯ್ಯ(45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರು ತಂದೆ, ತಾಯಿ, ಹಾಗೂ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 27.  ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಮಧ್ಯರಾತ್ರಿಯ ನಂತರ ಮಠದ ಇತರ ಸ್ವಾಮೀಜಿಗಳ ಜೊತೆಗೂಡಿ ಶ್ರೀಕೃಷ್ಣನಿಗೆ ಪ್ರಸಾದ (ಅರ್ಘ್ಯ) ಅರ್ಪಿಸಿದರು. ಮಧ್ಯಾಹ್ನ 12.07ರ ಸುಮಾರಿಗೆ ಧಾರ್ಮಿಕ ವಿಧಿವಿಧಾನ ನೆರವೇರಿತು. ಬಳಿಕ ಭಕ್ತರಿಗೆ ಶ್ರದ್ಧಾ ಭಕ್ತಿಯಿಂದ ಅರ್ಘ್ಯ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ರಾಕ್ಷಸ ಸಂಹಾರಕ್ಕಾಗಿ ಭಗವಾನ್ ಶ್ರೀಕೃಷ್ಣನು ಭೂಮಿಯಲ್ಲಿ ಕಾಣಿಸಿಕೊಂಡಿದ್ದನ್ನು ಆಚರಿಸಲು ಭಕ್ತರು ಶುಕ್ರವಾರ ಇಡೀ ದಿನ ಉಪವಾಸವನ್ನು ಆಚರಿಸಿದರು.

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಕರಾವಳಿ

ಹೆದ್ದಾರಿ ಅಗಲೀಕರಣ- ಮರಗಳ ತೆರವು; ಸೆಪ್ಟೆಂಬರ್ 2ರಂದು ಅಹವಾಲು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿ -66 ರಲ್ಲಿ ಹೆದ್ದಾರಿ ಪ್ರಾಧಿಕಾರದವರು ಭೂಸ್ವಾಧೀನಪಡಿಸಿದ ಕೆ.ಪಿ.ಟಿ ಯಿಂದ ನಂತೂರು ವರೆಗಿನ ಪದವು, ಕದ್ರಿ ಬಿ ಮತ್ತು ಮರೋಳಿ  ಗ್ರಾಮ ವ್ಯಾಪ್ತಿಯಲ್ಲಿನ ಚೈನೇಜ್ 1+900 ರಿಂದ 2.500 ರಲ್ಲಿ 0.350 ಕಿ.ಮೀ ವ್ಯಾಪ್ತಿಯಲ್ಲಿ ನಡೆಯಲಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ 99 ಮರಗಳನ್ನು ಕಡಿಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅರ್ಜಿ ಸಲ್ಲಿಸಿದ್ದಾರೆ.   ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯನ್ವಯ

ಹೆದ್ದಾರಿ ಅಗಲೀಕರಣ- ಮರಗಳ ತೆರವು; ಸೆಪ್ಟೆಂಬರ್ 2ರಂದು ಅಹವಾಲು ಸಭೆ Read More »

ಕರಾವಳಿ, ಕರ್ನಾಟಕ

ಶ್ರೀ ಕೃಷ್ಣನ ಆದರ್ಶಗಳು ಎಲ್ಲರಿಗೂ ಪ್ರೇರಣೆ – ಶಾಸಕ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಯಾವುದೇ ಜಾತಿ, ಮತದ ಭೇದವಿಲ್ಲದೆ  ಅನ್ಯ ಜಾತಿಯವರು  ತಮ್ಮ ಮಕ್ಕಳಿಗೆ ಕೃಷ್ಣವೇಶವನ್ನು  ಹಾಕುವ ಸನ್ನಿವೇಶವನ್ನು  ಕಾಣುತ್ತೇವೆ. ಶ್ರೀಕೃಷ್ಣ ಪರಮಾತ್ಮನ ಆದರ್ಶಗಳು  ಜಾತಿ ಮತವನ್ನು ಮೀರಿರುವಂಥದ್ದು. ಎಲ್ಲಾ ಜಾತಿ ಧರ್ಮದವರಿಗೂ ಪ್ರೇರಣೆಯಾಗುವಂತದ್ದು ಎಂದು ಮಂಗಳೂರು ದಕ್ಷಿಣ ಶಾಸಕ ವೇದ ವ್ಯಾಸ್ ಕಾಮತ್  ಹೇಳಿದರು. ಅವರು ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ನೌಕರರ ಸಂಘ ನಂದಿನಿ ಸಭಾಭವನದಲ್ಲಿ

ಶ್ರೀ ಕೃಷ್ಣನ ಆದರ್ಶಗಳು ಎಲ್ಲರಿಗೂ ಪ್ರೇರಣೆ – ಶಾಸಕ ಕಾಮತ್ Read More »

ಕರಾವಳಿ

ಐಟಿಐ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮಂಗಳೂರಿನ ಸರ್ಕಾರಿ ಐಟಿಐ ಮಹಿಳಾ ಸಂಸ್ಥೆಯಲ್ಲಿ ತರಬೇತಿಗಾಗಿ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಕರ್ನಾಟಕದಲ್ಲಿ 5 ವರ್ಷ ವ್ಯಾಸಂಗ ಮಾಡಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅಗಸ್ಟ್ 31ರವರೆಗೆ ಪ್ರವೇಶಕ್ಕಾಗಿ  ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಸೀಟುಗಳ ವಿವರ– ಎಲೆಕ್ಟ್ರಾನಿಕ್ ಮೆಕ್ಯಾನಿಕ್ ತರಬೇತಿ ಅವಧಿ 2 ವರ್ಷ, ಖಾಲಿ ಇರುವ ಸೀಟುಗಳು 18 ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ತರಬೇತಿ ಅವಧಿ ಎರಡು ವರ್ಷ,  ಖಾಲಿ ಇರುವ ಸೀಟುಗಳು 10. ಎಲೆಕ್ಟ್ರಿಷಿಯನ್

ಐಟಿಐ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪಿಎಂ ಸೂರ್ಯಘರ್ ಯೋಜನೆ ಕುಟುಂಬಗಳನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತದೆ ; ಸಂಸದ ಕ್ಯಾ.ಚೌಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ(ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಟಾನಗೊಂಡಿದ್ದು, ಈ ಯೋಜನೆಯ  ಫಲಾನುಭವಿಗೆ ಮಂಗಳೂರಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಬ್ಸಿಡಿ ಪತ್ರವನ್ನುವಿತರಿಸಿದರು. ‘ಇನರ್ಜಿಯ ಸೋಲಾರ್ ಕಂಪನಿ’ಯ ಸಹಯೋಗದಲ್ಲಿ ಅನುಷ್ಟಾನಗೊಂಡಿರುವ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆಯ 100ನೇ ಫಲಾನುಭವಿಯಾದ ಶಕ್ತಿನಗರದ ಡಾ. ಸುಧಾಕರ್ ಕುಟುಂಬಕ್ಕೆ 78,000 ರೂ. ಸಬ್ಸಿಡಿ

ಪಿಎಂ ಸೂರ್ಯಘರ್ ಯೋಜನೆ ಕುಟುಂಬಗಳನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತದೆ ; ಸಂಸದ ಕ್ಯಾ.ಚೌಟ Read More »

ಕರಾವಳಿ, ಕರ್ನಾಟಕ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಆಂತರಿಕ ಚುನಾವಣೆ- ರಝಾಕ್ ಕೆನರಾ ಅಧ್ಯಕ್ಷರಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 26. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳ ಸಭೆ ಮತ್ತು ಸಮಿತಿಯ ಆಂತರಿಕ ಚುನಾವಣೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರು ರವರು ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿಯವರಾದ ಆನಂದ ಮಿತ್ತಬೈಲ್ ರವರು ಮಾತನಾಡಿ ಕಳೆದ ಸಾಲಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಆಂತರಿಕ ಚುನಾವಣೆ- ರಝಾಕ್ ಕೆನರಾ ಅಧ್ಯಕ್ಷರಾಗಿ ಆಯ್ಕೆ Read More »

ಕರಾವಳಿ

ಕಡಬ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು; ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಇನ್ನೋವಾ ಕಾರು

(ನ್ಯೂಸ್ ಕಡಬ) newskadaba.com ಕಡಬ, ಆ.26. ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸಮೀಪದ ನೂಜಿಬಾಳ್ತಿಲ ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಎಂದು ಗುರುತಿಸಲಾಗಿದೆ. ದೇವರಾಜ್ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ‌ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ‌

ಕಡಬ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು; ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಇನ್ನೋವಾ ಕಾರು Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಈಜಲು ಹೋದ ವಿದ್ಯಾರ್ಥಿ ಕೆರೆ ನೀರಿನಲ್ಲಿ ಮುಳುಗಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಡುಪಿ, ಆ. 26. ಈಜಲೆಂದು ಕೆರೆಗೆ ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಉಡುಪಿಯ ಕರಂಬಳಿ ಎಂಬಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಇಂದ್ರಾಳಿ ನಿವಾಸಿ ಸಿದ್ದಾರ್ಥ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಮೃತ ಸಿದ್ದಾರ್ಥ್ ಮತ್ತಿಬ್ಬರೊಂದಿಗೆ ಕರಂಬಳಿ ಕೆರೆಗೆ ಈಜಲೆಂದು ತೆರಳಿದ್ದ. ಆದರೆ ಸಿದ್ದಾರ್ಥ್ ಮಾತ್ರ ನೀರಿಗಿಳಿದಿದ್ದು, ಇನ್ನಿಬ್ಬರು ನೀರಿಗೆ ಇಳಿದಿರಲಿಲ್ಲ ಎನ್ನಲಾಗಿದೆ. ಸ್ಥಳೀಯರು ಕೂಡಲೇ ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಈಜಲು ಹೋದ ವಿದ್ಯಾರ್ಥಿ ಕೆರೆ ನೀರಿನಲ್ಲಿ ಮುಳುಗಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top