ಕರಾವಳಿ

ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳ್ಳತನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14.  ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಪುದು ಗ್ರಾಮದ ಪೆರಿಯಾರ್ ನಲ್ಲಿ ನಡೆದಿರುವುದಾಗಿ ಸೆಪ್ಟೆಂಬರ್ 12ರಂದು ಬೆಳಕಿಗೆ ಬಂದಿದೆ. ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಅವರು ಸೆ. 8ರಂದು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಬೆಂಗಳೂರಿನಲ್ಲಿರುವ ಸಂಬಂಧಿಕರ […]

ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳ್ಳತನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ.    ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್(40) ಪತ್ನಿ ವಿಕ್ಟೋರಿಯಾ ಮಥಾಯಿಸ್(47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು(34) ಪ್ರಕರಣದ ಆರೋಪಿಗಳು. ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ

ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 14.  ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ ಎಂದರು. ಇದರೊಂದಿಗೆ ಅಕಾಡಮಿಯ ನೂತನ ಅಧ್ಯಕ್ಷರು ಅಕಾಡಮಿಯ

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ Read More »

ಕರಾವಳಿ
Theft, crime, Robbery

ಬ್ಯಾಂಕ್ ಶಾಖೆಯಿಂದಲೇ 1.30 ಲಕ್ಷ ರೂ. ಹಣವಿದ್ದ ಬ್ಯಾಗ್ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14. ರಾಷ್ಟ್ರೀಕೃತ ಬ್ಯಾಂಕೊಂದರ ಬಿ.ಸಿ. ರೋಡು ಶಾಖೆಯೊಳಗಿಂದಲೇ ನಿವೃತ್ತ ಸೈನಿಕ ಅಡ್ಯಾರ್‌ ರೈಮಂಡ್‌ ಲೋಬೋ ನಗರ ನಿವಾಸಿ ಅಂಬ್ರೋಸ್‌ ಡಿ’ಸೋಜಾ ಎಂಬವರ 1.30 ಲಕ್ಷ ರೂ. ಹಣವಿದ್ದ ಬ್ಯಾಗ್‌ ಕಳವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿವೃತ್ತ ಸೈನಿಕರಾಗಿರುವ ಅಂಬ್ರೋಸ್ ರವರು ಸೆ. 04ರಂದು ಮನೆಯಿಂದ 50 ಸಾವಿರ ರೂ. ಹಣ ಹಿಡಿದುಕೊಂಡು ಬಂದಿದ್ದರು. ಅಲ್ಲದೇ ಬ್ಯಾಂಕ್‌ ಶಾಖೆಗೆ ತೆರಳಿ ತಮ್ಮ ಖಾತೆಯಿಂದ ಪೆನ್ಷನ್‌ ಹಣ 80 ಸಾವಿರ ರೂ.

ಬ್ಯಾಂಕ್ ಶಾಖೆಯಿಂದಲೇ 1.30 ಲಕ್ಷ ರೂ. ಹಣವಿದ್ದ ಬ್ಯಾಗ್ ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ – ಹಂದಿ, ಕುರಿ ಸಾಕಾಣಿಕೆಗೂ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಉಪ್ಪಿನಂಗಡಿ ಸಮೀಪದ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಈ ಕುರಿತು ಸೆ. 13ರ ಶುಕ್ರವಾರದಂದು ಬೆಂಗಳೂರಿನಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಮುಖರನ್ನು ಭೇಟಿಯಾದ ಶಾಸಕರು, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಈಗಾಗಲೇ ಅಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ಖಾಲಿ ಬಿದ್ದಿದ್ದು, ಇದೇ ಕಟ್ಟಡವನ್ನು ನವೀಕರಣ ಮಾಡಿ ಮೂಲಭೂತ ಸೌಕರ್ಯಗಳಿಗಾಗಿ ಸರಕಾರ

ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ – ಹಂದಿ, ಕುರಿ ಸಾಕಾಣಿಕೆಗೂ ಅವಕಾಶ Read More »

ಕರಾವಳಿ

ಸುಳ್ಯ: KSRTC ಚಾಲಕರ ಸಂಬಳ ಕಡಿತ ಆರೋಪ- ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 14. ಕೆಎಸ್ಸಾರ್ಟಿಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಪುತ್ತೂರು ವಿಭಾಗದ ಕೆಲ ಚಾಲಕರಿಗೆ ಸಂಬಳ ಕಡಿತಗೊಳಿಸಿ ಪಾವತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಅಸಮಾಧಾನಗೊಂಡ ಗುತ್ತಿಗೆ ಆಧಾರಿತ ಚಾಲಕರು ಕರ್ತವ್ಯಕ್ಕೆ ಗೈರಾಗಿ ಶನಿವಾರದಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಳ್ಯ ಕೆ.ಎಸ್‌.ಆರ್.ಟಿ.ಸಿ. ಘಟಕದಲ್ಲಿ ಈ ಮೊದಲು ಪನ್ನಗ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 9 ಚಾಲಕರಿಗೆ 11 ತಿಂಗಳು ಸಮರ್ಪಕವಾಗಿ ಸಂಬಳ ನೀಡಲಾಗಿತ್ತು. ತಿಂಗಳ ಹಿಂದೆ ಆ

ಸುಳ್ಯ: KSRTC ಚಾಲಕರ ಸಂಬಳ ಕಡಿತ ಆರೋಪ- ಪ್ರತಿಭಟನೆ Read More »

ಕರಾವಳಿ

ಸುಬ್ರಹ್ಮಣ್ಯ: ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಘು ಬಿಜೂರು ಅವರಿಗೆ ಅಭಿನಂದನಾ ಸಮಾರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 14. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ ಎಸ್ ಪಿಯು ಕಾಲೇಜಿನ ಸಂಸ್ಕೃತ ಶಿಕ್ಷಕ ರಘು ಬಿಜೂರು ಅವರಿಗೆ ಅಭಿನಂದನಾ ಸಮಾರಂಭವು ಶನಿವಾರ ನಡೆಯಿತು. ಕಾಲೇಜಿನ ಬೆಳ್ಳಿಹಬ್ಬ ಸಮಾರಂಭದಲ್ಲಿ ರಘು ಬಿಜೂರು ಅವರನ್ನು ಗೌರವಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅಭಿನಂದಿಸಿದರು. ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್,

ಸುಬ್ರಹ್ಮಣ್ಯ: ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಘು ಬಿಜೂರು ಅವರಿಗೆ ಅಭಿನಂದನಾ ಸಮಾರಂಭ Read More »

ಕರಾವಳಿ

ಉಪ್ಪಿನಂಗಡಿ: ವಿದ್ಯಾರ್ಥಿಗೆ ಹಲ್ಲೆ ಆರೋಪ – ಶಿಕ್ಷಕನ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 14. ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ದ್ವೇಷದ ಭಾವನೆಯಿಂದ ಸತತ ಮೂರು ದಿನ ಶಿಕ್ಷಕರೋರ್ವರು ಬೆತ್ತದಿಂದ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕು ಉರುವಾಲು ನಿವಾಸಿಯಾಗಿದ್ದು, ಪದ್ಮುಂಜ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಹಲ್ಲೆ ನಡೆಸಿರುವ ಆರೋಪಿ ಇಂಗ್ಲೀಷ್ ಶಿಕ್ಷಕ ಅನಂತ ಕುಮಾರ್ ಎಂದು ಆಪಾದಿಸಲಾಗಿದೆ. ದೂರಿನ ಪ್ರಕಾರ ಆರೋಪಿ ಶಿಕ್ಷಕ ವಿದ್ಯಾರ್ಥಿಗೆ ಬೆತ್ತದಿಂದ ಸೆ. 9,10,11ರ

ಉಪ್ಪಿನಂಗಡಿ: ವಿದ್ಯಾರ್ಥಿಗೆ ಹಲ್ಲೆ ಆರೋಪ – ಶಿಕ್ಷಕನ ವಿರುದ್ದ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಆಕಸ್ಮಿಕ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14.  ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಎಲೆಕ್ಟ್ರೀಷಿಯನ್ ವೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35)ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಗುರುವಾರ ಸಂಜೆ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ಮನೆಯೊಂದರ ವಯರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ

ಆಕಸ್ಮಿಕ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
pilikula

ಪಿಲಿಕುಳ: ಸೆ.16 ಸೋಮವಾರದಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಸೆಪ್ಟೆಂಬರ್ 16ರಂದು ಸೋಮವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಪಿಲಿಕುಳ: ಸೆ.16 ಸೋಮವಾರದಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ Read More »

ಕರಾವಳಿ
Scroll to Top