ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅನೈತಿಕ ಪೋಲಿಸ್‌ಗಿರಿ – ಎಸ್‌ಡಿಪಿಐ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 24. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬೆಂಗಳೂರಿನಿಂದ ಹಿಂತಿರುಗುವ ಸಂದರ್ಭ ಹಿಂದೂ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತಿದ್ದನೆಂಬ ಕಾರಣಕ್ಕೆ ಮುಸ್ಲಿಂ ಯುವಕನನ್ನು ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸರ್ಕಾರಿ ಬಸ್ಸಿನ ನಿರ್ವಾಹಕ ಥಳಿಸಿದ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮೀರಾಝ್ ಸುಳ್ಯ‌ರವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಬೆಂಗಳೂರಿನಿಂದ ಹಿಂತಿರುಗುವ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅನೈತಿಕ ಪೋಲಿಸ್‌ಗಿರಿ – ಎಸ್‌ಡಿಪಿಐ ಆಕ್ರೋಶ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಮರ ವ್ಯಾಪಾರಸ್ಥರ ಸಂಘ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಮರ ವ್ಯಾಪಾರಾಸ್ಥರಿಗೆ ಆಗುವ ತೊಂದರೆ ಹಾಗೂ ಬೇರೆ ರಾಜ್ಯಗಳ ವ್ಯಾಪಾರಿಗಳ ದಬ್ಬಾಳಿಕೆಯನ್ನು ಎದುರಿಸುವ ಸಲುವಾಗಿ ಕಡಬದಲ್ಲಿ ತಾಲೂಕು ಮಟ್ಟದ ಮರ ವ್ಯಾಪಾರಸ್ಥರ ಸಂಘ ರಚನೆಗೊಂಡಿದ್ದು, ಇದರ ಮೊದಲ ಸಭೆಯು ಸೆಪ್ಟೆಂಬರ್ 20ರಂದು ಕಡಬ ಒಕ್ಕಲಿಗರ ಸಭಾಭವನದಲ್ಲಿ ನಡೆಯಿತು. ಜಿಎಸ್ಟಿ ಮುಖಾಂತರ ತೆರಿಗೆ ಪಾವತಿ ಮಾಡುತ್ತಿದ್ದರೂ ಮರ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಸಾಂಘಿಕ ಹೋರಾಟದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಈ ಸಂಘ ಕೆಲಸ ನಿರ್ವಹಿಸಲಿದೆ. ಕೆ.ಕೆ.ಅಬೂಬಕ್ಕರ್ ಅವರ ಅಧ್ಯಕ್ಷತೆಯಲ್ಲಿ

ಕಡಬ: ಮರ ವ್ಯಾಪಾರಸ್ಥರ ಸಂಘ ರಚನೆ Read More »

ಕರಾವಳಿ

ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಲೆ – ಮಲೆನಾಡು ಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಕಸ್ತೂರಿ ರಂಗನ್ ವರದಿ ಜಾರಿಗೆ ಬರುವ ಮತ್ತು ಪರಿಸರ ಪರ ಯೋಜನೆ ಹಾಗೂ ಜಂಟಿ ಸರ್ವೇ ಮಾಡುವ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಹೋರಾಟದ ರೂಪುರೇಷೆಗಳನ್ನು ತಯಾರಿಸಲು ಗುಂಡ್ಯ, ಶಿರಾಡಿ, ಸಿರಿಬಾಗಿಲು, ಕೊಂಬಾರು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನಾ ಸಭೆಯು ಗುಂಡ್ಯದ ಮಾಡ ಮೈದಾನದಲ್ಲಿ ಭಾನುವಾರದಂದು ನಡಯಿತು. ಸಭೆಯ ವೇದಿಕೆಯಲ್ಲಿ ಮಲೆನಾಡು ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಧರ್ಮಗುರು ಆದರ್ಶ ಜೋಸೆಫ್, ಪ್ರಸನ್ನ ಕುಮಾರ ಕುಮಾರಪುರ, ದಾಮೋದರ ಗುಂಡ್ಯ,

ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಲೆ – ಮಲೆನಾಡು ಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನಾ ಸಭೆ Read More »

ಕರಾವಳಿ, ಕರ್ನಾಟಕ

ಅಮೀಬಾ ಸೋಂಕಿನಿಂದ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 23. ಅಮೀಬಾ ಸೋಂಕಿ (ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್)ನಿಂದ ಕಾಸರಗೋಡಿನ ಯುವಕನೋರ್ವ ಮೃತಪಟ್ಟ ವರದಿಯಾಗಿದೆ. ಮೃತಪಟ್ಟವರನ್ನು ಚಟ್ಟಂಚಾಲ್ ಉಕ್ರಂಪಾಡಿಯ ಮಣಿಕಂಠ (36) ಎಂದು ಗುರುತಿಸಲಾಗಿದೆ. ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಅನಾರೋಗ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಕಡಿಮೆಯಾಗದ ಕಾರಣ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಿಂದ ಅಮಿಬಿಕ್ ಸೋಂಕು ದೃಢಪಟ್ಟಿತ್ತು. ಮುಂಬೈಯಿಂದ ಸೋಂಕು ತಗಲಿರಬಹುದು ಎಂದು

ಅಮೀಬಾ ಸೋಂಕಿನಿಂದ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ – ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಬಾಯಿ ನಮ್ಮ ದೇಹದ ಆರೋಗ್ಯದ ಹೆಬ್ಬಾಗಿಲು. ನಾವು ತಿನ್ನುವ  ಆಹಾರ ಬಾಯಿಯ ಮುಖಾಂತರವೇ ಹೊಟ್ಟೆಗೆ ಹೋಗುತ್ತದೆ.  ನಾವು ತಿನ್ನುವ  ಆಹಾರ  ಸರಿಯಾಗಿ  ಜಗಿಯಲು, ಪಚನವಾಗಲು  ಮತ್ತು ಜೀರ್ಣವಾಗಲು ಆರೋಗ್ಯವಂತ ಬಾಯಿ ಮತ್ತು ಸದೃಢವಾದ  ಹಲ್ಲುಗಳು  ಅತೀ ಅಗತ್ಯ. ಹಾಲು ಹಲ್ಲುಗಳು ಕೂಡಾ ಶಾಶ್ವತ ಹಲ್ಲಿನಷ್ಟೇ  ಪ್ರಾಮುಖ್ಯವಾಗಿರುತ್ತದೆ. ಈ ಕಾರಣದಿಂದ  ಬಾಯಿ ಆರೋಗ್ಯ ಯಾವತ್ತೂ ನಿರ್ಲಕ್ಷಿಸಲೇಬಾರದು. ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಂಡು ನಿರಂತರ ದಂತ ವೈದ್ಯರ ಸಂದರ್ಶನ ಮಾಡಿಕೊಂಡು ಹಲ್ಲಿನ ಆರೋಗ್ಯ

ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ – ಡಾ. ಚೂಂತಾರು Read More »

ಕರಾವಳಿ

2024-25ನೇ ಸಾಲಿನ ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 23. ಸಾಂಸ್ಕೃತಿಕ ಸಂಘಟನೆ ತುಳುಕೂಟ, ಉಡುಪಿ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ. ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಸ್ಥೆಯ ಇತರ ಪದಾಧಿಕಾರಿಗಳಾದ ಸಂಸ್ಥಾಪಕ ಅಧ್ಯಕ್ಷ ಡಾ.ಭಾಸ್ಕರಾನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕೆಡಿಯೂರು, ಖಜಾಂಚಿ ಚೈತನ್ಯ ಎಂ.ಜಿ, ಉಪಾಧ್ಯಕ್ಷರಾದ ಭುವನಪ್ರಸಾದ್ ಹೆಗ್ಡೆ, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ ಸನಿಲ್, ರಶ್ಮಿ ಶೆಣೈ, ಜಂಟಿ ಕಾರ್ಯದರ್ಶಿಗಳಾದ

2024-25ನೇ ಸಾಲಿನ ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ Read More »

ಕರಾವಳಿ

ಅಲ್ಪಸಂಖ್ಯಾತರ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. 2024-25ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಸಾಮಾನ್ಯ ಪದವಿ ಮಟ್ಟದ ಕೋರ್ಸು, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸುಗಳ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ದಿನ. ಎಸ್.ಎಚ್.ಪಿ (ರಾಜ್ಯ ಹಾಸ್ಟೆಲ್ ಪೋರ್ಟಲ್) https://shp.karnataka.gov.in/ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸುವ  ವಿಧಾನ ಮತ್ತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ

ಅಲ್ಪಸಂಖ್ಯಾತರ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಪ್ರೋತ್ಸಾಹಧನಕ್ಕೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. 2024-25ನೇ ಸಾಲಿನಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಮತ್ತು ಪಾರ್ಸಿ) ಸಮುದಾಯದ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‍ಎಂ ನರ್ಸಿಂಗ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 10ಕೊನೆಯ ದಿನ. ವಿದ್ಯಾರ್ಥಿಗಳು https://sevasindhu.karnataka.gov.in/Sevasindhu/DepartmentSer Vices ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು. ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್

ಪ್ರೋತ್ಸಾಹಧನಕ್ಕೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಸೆ.25ರಂದು ಉಳ್ಳಾಲದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11 ಗಂಟೆಯಿಂದ  ಉಳ್ಳಾಲ ನಗರಸಭೆ ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ನಡೆಯಲಿದೆ. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದು. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಅರ್ಜಿದಾರರು ನಮೂನೆ I & II ರಲ್ಲಿ

ಸೆ.25ರಂದು ಉಳ್ಳಾಲದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ Read More »

ಕರಾವಳಿ

ಕನ್ನಡ ಸಾಹಿತ್ಯ ಅಕಾಡೆಮಿ ಕಮ್ಮಟ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಗಿರಿಜನ ಉಪ ಯೋಜನೆಯಡಿ “ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು” ಎಂಬ ಮೂರು ದಿನಗಳ ಕಮ್ಮಟವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯಲ್ಲಿ ಏರ್ಪಡಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಅಕಾಡೆಮಿ ಕಮ್ಮಟ- ಅರ್ಜಿ ಆಹ್ವಾನ Read More »

ಕರಾವಳಿ
Scroll to Top