ಕರಾವಳಿ

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ

(ನ್ಯೂಸ್ ಕಡಬ) newskadaba.com ಕಡಬ, ಸೆ. 26. ತಾಲೂಕಿನ ನೂಜಿಬಾಳ್ತಿಲ-ರೆಂಜಿಲಾಡಿಯ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಅ.20ರಂದು ನಡೆಯಲಿರುವ ಕೆಸರುಗದ್ದೆಯಲ್ಲಿ ಕಂಬಳ ಸ್ನೇಹಕೂಟದ ಕಂಬಳ ಕರೆ ನಿರ್ಮಾಣಕ್ಕೆ ಮುಹೂರ್ತ ಕಾರ್ಯಕ್ರಮವು ಗುರುವಾರದಂದು ರೆಂಜಿಲಾಡಿ ಗ್ರಾಮದ ದಿ.ಸಾಂತಪ್ಪ ಗೌಡ ಸಾಕೋಟೆಜಾಲು ಅವರ ಗದ್ದೆಯಲ್ಲಿ ನಡೆಯಿತು. ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪರಿಚಾರಕ ವಿಜಯಕುಮಾರ್ ಕೇಪುಂಜ ಅವರು ಕಂಬಳದ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಜಾಗದ ಮಾಲಿಕರಾದ ಚಂದ್ರಾವತಿ ಸಾಕೋಟೆಜಾಲು, ಸ್ಥಳೀಯರಾದ ಪುರುಷೋತ್ತಮ ಗೌಡ ಸಂಕೇಶ, […]

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ Read More »

ಕರಾವಳಿ
crime, arrest, suspected

ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ಹಣ ವಂಚನೆ –  ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಅಜೆಕಾರು, ಸೆ. 26. ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್‌ ಬಳಸಿಕೊಂಡು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಸೆ. 24ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಶ್ರವಣ್‌ ಸತೀಶ ಮಿನಜಗಿ (27), ಪ್ರದೀಪ ಮಾರುತಿ ಇಂಗ್ಲೆ (27) ಹಾಗೂ ಕಿರಣ್‌ ಬಾಲು ಚೌಹಾಣ್‌ (28) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ

ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ಹಣ ವಂಚನೆ –  ಮೂವರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್- ಅಶೋಕ್ ರೈ ಖಂಡನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 26. ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ನೀಡಿರುವುದನ್ನು ಪುತ್ತೂರು ಶಾಸಕ ಅಶೋಕ್ ರೈ ಖಂಡನೆ ಮಾಡಿದ್ದಾರೆ. ಅಡಿಕೆ ದರ ಇಳಿಕೆಯಾಗಿ ಎರಡೂ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ ಬೀಳಲಿದ್ದು, ಭೂತಾನ್ನಿಂದ ಅಡಿಕೆ ಆಮದು ಮಾಡುವ ನೀತಿ ಅತ್ಯಂತ ಆತಂಕಕಾರಿ ವಿಚಾರವಾಗಿದೆ. ಭೂತಾನ್ ನಿಂದ ನಿರಂತರವಾಗಿ ಅಡಿಕೆ ಆಮದುಗೊಂಡರೆ ಇಲ್ಲಿ ಅಡಿಕೆ ದರ ಕೇವಲ ರೂ.120 ಕ್ಕೆ ತಲುಪುವ ಅಪಾಯವಿದೆ ಇದರಿಂದ ಜಿಲ್ಲೆಯ ಜನತೆಯ ಬದುಕು ಬೀದಿಗೆ

ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್- ಅಶೋಕ್ ರೈ ಖಂಡನೆ Read More »

ಕರಾವಳಿ

ದ್ವಿಚಕ್ರ ವಾಹನ ಪಲ್ಟಿ- ಕಡಬದ ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸೆ. 26. ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪದ ಕಟ್ಟತ್ತಡ್ಕ ಎಂಬಲ್ಲಿ ಇಂದು ನಡೆದಿದೆ. ಗಾಯಗೊಂಡ ಸವಾರನನ್ನು ಕಡಬದ ಶಬೀಬ್ ಎಂದು ಗುರುತಿಸಲಾಗಿದೆ. ಶಬೀಬ್ ರವರು ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಟ್ಟತ್ತಡ್ಕ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಪೆ ರಿಕ್ಷಾಗೆ ಸೈಡ್ ಕೊಡುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಕಡಬದ ಯುವಕ ಶಬೀಬ್ ಅವರ ಮುಖ ಹಾಗೂ ಕಾಲಿಗೆ

ದ್ವಿಚಕ್ರ ವಾಹನ ಪಲ್ಟಿ- ಕಡಬದ ಯುವಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ-2024 – ದಕ್ಷಿಣ ಕನ್ನಡ ಜಿಲ್ಲೆಯಿಂದ ಪೃಥ್ವಿರಾಜ್ ಪಿ.ಶೆಟ್ಟಿ ಆಯ್ಕೆ

(ನ್ಯೂಸ್ ಕಡಬ) newskadaba.com ಸೆ. 26. ರಾಜ್ಯ ಸರಕಾರದಿಂದ ಕೊಡಮಾಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೃಥ್ವಿರಾಜ್‌ ಪಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕುರಿತು ರಾಜ್ಯ ಸರಕಾರವು ಆದೇಶವನ್ನು ಹೊರಡಿಸಿದೆ. ಈ ಪ್ರಶಸ್ತಿಯನ್ನು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅಚ್ಚುಕಟ್ಟಾಗಿ ಒದಗಿಸಿರುವ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರುಗಳಿಗೆ, ತಹಶೀಲ್ದಾರಗಳಿಗೆ ಹಾಗೂ ಗ್ರಾಮಾಡಳಿತ ಅಧಿಕಾರಿಗಳಿಗೆ ಕೊಡಲಾಗುತ್ತದೆ. ಹೀಗಾಗಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ನೀಡಿರುವ ಅಧಿಕಾರಿಗಳ

ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ-2024 – ದಕ್ಷಿಣ ಕನ್ನಡ ಜಿಲ್ಲೆಯಿಂದ ಪೃಥ್ವಿರಾಜ್ ಪಿ.ಶೆಟ್ಟಿ ಆಯ್ಕೆ Read More »

ಕರಾವಳಿ

ರಸ್ತೆ ಅಪಘಾತ: ಶಿಕ್ಷಕಿ ಮೃತ್ಯು..!

(ನ್ಯೂಸ್ ಕಡಬ) newskadaba.com  ಮಡಿಕೇರಿ, ಸೆ. 26. ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನೊ(50) ಮೃತಪಟ್ಟಿದ್ದಾರೆ. ಬುಧವಾರ ತಮ್ಮ ಪುತ್ರನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದ ಸಂದರ್ಭ ಬನ್ನಿಕುಪ್ಪೆ ಬಳಿ ಬೊಲೆರೋ ವಾಹನ ಢಿಕ್ಕಿಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ಟಲಿನೊರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ರಸ್ತೆ ಅಪಘಾತ: ಶಿಕ್ಷಕಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್ ನಿಧನ

(ನ್ಯೂಸ್ ಕಡಬ) newskadaba.com  ಕಾಸರಗೋಡು, ಸೆ. 26. ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್(75) ಇಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೆ.4ರಂದು ರಾಷ್ಟ್ರೀಯ ಹೆದ್ದಾರಿಯ ನೀಲೇಶ್ವರ ಕರುವೆಚ್ಚರಿ ಪೆಟ್ರೋಲ್ ಬಂಕ್ ಸಮೀಪ ಕುಂಞಿಕಣ್ಣನ್ ಸಂಚರಿಸುತ್ತಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿತ್ತು. ಈ ವೇಳೆ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ

ಉದುಮ ಮಾಜಿ ಶಾಸಕ ಕೆ.ಪಿ.ಕು೦ಞಿಕಣ್ಣನ್ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ನೂತನ ಅಧ್ಯಕ್ಷರಾಗಿ ರೊನಾಲ್ಡ್ ಗೋಮ್ಸ್ ಆಯ್ಕೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 26. ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ (CASK) ಇದರ ನೂತನ ಅಧ್ಯಕ್ಷರಾಗಿ ಮಾಜಿ ಲಯನ್ಸ್ ಗವರ್ನರ್ ರೊನಾಲ್ಡ್ ಗೋಮ್ಸ್ ಆಯ್ಕೆಯಾಗಿದ್ದಾರೆ. CASK 111ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಮಾರ್ಜೋರಿ ಟೆಕ್ಸೀರಾ ಮತ್ತು ಡಾ.ರೋಹನ್ ಮೋನಿಸ್, ಕಾರ್ಯದರ್ಶಿಯಾಗಿ ಪೀಟರ್ ಪಿಂಟೋ, ಜೊತೆ ಕಾರ್ಯದರ್ಶಿ ಟೈಟಸ್ ನೊರೊನ್ಹಾ ಮತ್ತು ಕೋಶಾಧಿಕಾರಿಯಾಗಿ ರೊನಾಲ್ಡ್ ಮೆಂಡೋನ್ಸಾ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾಗಿ ಇಯಾನ್ ಲೋಬೊ, ಇರ್ವಿನ್ ಲೋಬೊ, ಡಾರಿಲ್

ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ನೂತನ ಅಧ್ಯಕ್ಷರಾಗಿ ರೊನಾಲ್ಡ್ ಗೋಮ್ಸ್ ಆಯ್ಕೆ Read More »

ಕರಾವಳಿ

ಫ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ- ಮಹಾನಗರಪಾಲಿಕೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಸೆ. 25. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ನಗರದ ಮುಖ್ಯ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿರುತ್ತದೆ. ಹಲವಾರು ಸ್ಥಳಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಘ ಸಂಸ್ಥೆಗಳು ತಮ್ಮ ತಮ್ಮ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಿದ್ದು, ಈ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳಿಗೆ ಅಲಂಕಾರಿಕ ದೀಪಗಳನ್ನು ಅಳವಡಿಸಲು ಮಂಗಳೂರು ನಗರ ಪಾಲಿಕೆಯಿಂದ ಅಳವಡಿಸಿರುವ ಕಂಬ ಮತ್ತು ವಿದ್ಯುತ್ ದೀಪಗಳ ಸಂಪರ್ಕದಿಂದ ಅತಿಕ್ರಮಣವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಕಂಡುಬಂದಿದೆ.

ಫ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ- ಮಹಾನಗರಪಾಲಿಕೆ ಎಚ್ಚರಿಕೆ Read More »

ಕರಾವಳಿ

ನಾಳೆ (ಸೆ.27) ಪಾಲಿಟೆಕ್ನಿಕ್ ಸಮ್ಮೇಳನ

(ನ್ಯೂಸ್ ಕಡಬ) newskadaba.com ಸೆ. 25. ISTE, ನವದೆಹಲಿ ಮತ್ತು ISTE ಕರ್ನಾಟಕ ಶಾಖೆ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 27ರಂದು “4th ISTE State Level Student Convention for Polytechnics 2024” ಎಂಬ ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನವು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ISTE ಕಾರ್ಯಕಾರಿ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಆಗಮಿಸುತ್ತಿದ್ದು, ರಾಜ್ಯದ ಸರ್ಕಾರಿ/ ಅನುದಾನಿತ/ ಅನುದಾನರಹಿತ ಪಾಲಿಟೆಕ್ನಿಕ್ ಗಳ  ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು ಎಂದು ಕರ್ನಾಟಕ (ಸರ್ಕಾರಿ)

ನಾಳೆ (ಸೆ.27) ಪಾಲಿಟೆಕ್ನಿಕ್ ಸಮ್ಮೇಳನ Read More »

ಉದ್ಯೋಗ, ಕರಾವಳಿ
Scroll to Top