ಕರಾವಳಿ

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ

(ನ್ಯೂಸ್ ಕಡಬ)newskadaba.com ಬೈಂದೂರು, ಅ. 04. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಅವರು ಇಂದು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕನಾಯ್ಕ್, ಶ್ರೀಮತಿ ಧನಾಕ್ಷಿ, ಶ್ರೀಮತಿ ಸುಧಾ ಕೆ, […]

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ Read More »

ಕರಾವಳಿ

ಮಂಗಳೂರು: ಬಸ್ ಟಿಕೆಟ್ ಬಲು ದುಬಾರಿ

(ನ್ಯೂಸ್ ಕಡಬ)newskadaba.com,ಮಂಗಳೂರು (ಅ.04): ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ- ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ

ಮಂಗಳೂರು: ಬಸ್ ಟಿಕೆಟ್ ಬಲು ದುಬಾರಿ Read More »

ಕರಾವಳಿ

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು..!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 04. ದ್ವಿಚಕ್ರಗಳೆರಡರ ಮಧ್ಯೆ ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಅ. 2ರಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಅ. 3ರಂದು ಮೃತಪಟ್ಟಿದ್ದಾರೆ. ಮೃತನನ್ನು ಬರಿಮಾರು ನಿವಾಸಿ ಸರ್ಪಾಝ್ (33) ಎಂದು ಗುರುತಿಸಲಾಗಿದೆ. ಸಹ ಸವಾರಿಣಿ ವಿದ್ಯಾರ್ಥಿ ಜಾಸ್ಮೀನ್ (18) ಗಾಯಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಪಾಝ್ ತನ್ನ ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್ ನಲ್ಲಿ

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ಭಟ್ಕಳ ತಾಲೂಕಿಗೆ ಸತತ 2ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ

(ನ್ಯೂಸ್ ಕಡಬ)newskadaba.com ಭಟ್ಕಳ, ಅ.04.  ಶಿರ್ಸಿ ತಾಲೂಕಿನ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ 2 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸಿದ್ದು, ಭಟ್ಕಳದ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 800 ಮೀ., 1,500 ಮೀ., 3,000 ಮೀ,, 4×400 ಮೀ. ರಿಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ

ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ಭಟ್ಕಳ ತಾಲೂಕಿಗೆ ಸತತ 2ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ Read More »

ಕರಾವಳಿ, ಕ್ರೀಡಾ ನ್ಯೂಸ್

ದನಗಳ ಅಕ್ರಮ ಸಾಗಾಟ: ನಾಲ್ವರ ಬಂಧನ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಅ.04.  ತಾಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆ ಹಚ್ಚಿರುವ ಬೆಳ್ತಂಗಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಎರಡು ಪಿಕಪ್ ವಾಹನಗಳು ಹಾಗೂ ಐದು ದನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ ( 36) ಹಾಗೂ ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಎಂದು ಗುರುತಿಸಲಾಗಿದೆ. ಮಲವಂತಿಗೆ

ದನಗಳ ಅಕ್ರಮ ಸಾಗಾಟ: ನಾಲ್ವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ಕಸ್ತೂರಿ ರಂಗನ್ ವರದಿ ಜನವಿರೋಧಿ ಎಂದು ಪ್ರತಿಭಟನೆ

(ನ್ಯೂಸ್ ಕಡಬ)newskadaba.com, ಕುಂದಾಪುರ(ಅ.04): ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯು ಜನ ವಿರೋಧಿಯಾಗಿದೆ. ಕೇಂದ್ರ ಸರಕಾರ ಈಗ 6ನೇ ಭಾರಿಗೆ ಅಧಿಸೂಚನೆ ನೀಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನವಸತಿ ಪ್ರದೇಶವನ್ನು ವರದಿಯಿಂದ ದೂರ ಇಟ್ಟು, ದಟ್ಟಕಾಡನ್ನು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಇಲ್ಲ. ಭೂ ಸರ್ವೇ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕು. ಜನರಿಗೆ ಇರುವ ಆತಂಕವನ್ನು ದೂರ ಮಾಡಲು ಎಲ್ಲಾ ಜನಪ್ರತಿನಿಧಿಗಳು ಸೇರಿ ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು

ಕುಂದಾಪುರ: ಕಸ್ತೂರಿ ರಂಗನ್ ವರದಿ ಜನವಿರೋಧಿ ಎಂದು ಪ್ರತಿಭಟನೆ Read More »

ಕರಾವಳಿ

ರಸ್ತೆ ಅಪಘಾತ: ಮಹಿಳೆ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಅ.04.  ಸ್ಕೂಟರ್ ಮಗುಚಿ ರಸ್ತೆ ಗೆಸೆಯಲ್ಪಟ್ಟು ಮಹಿಳೆಯೋರ್ವಳ ಮೇಲೆ ಲಾರಿ ಹಾದು ಹೋದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಪೈಕ ಚಂದ್ರಪಾರೆಯ ಮಣಿ ಎಂಬವರ ಪತ್ನಿ ಶಶಿಕಲಾ (31) ಎಂದು ಗುರುತಿಸಲಾಗಿದೆ.  ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಚಟ್ಟಂಚಾಲ್ – ಚೆರ್ಕಳ ರಸ್ತೆಯ ತೆಕ್ಕಿಲ್ ಬಳಿ ಅಪಘಾತ ನಡೆದಿದೆ. ಶಶಿಕಲಾ, ಪತಿ ಮಣಿ ಹಾಗೂ ಇಬ್ಬರು ಮಕ್ಕಳ ಜೊತೆ ಸ್ಕೂಟರ್ ನಲ್ಲಿ ಚೆರ್ಕಳ ದಿಂದ ಚಟ್ಟಂ ಚಾಲ್ ಕಡೆಗೆ

ರಸ್ತೆ ಅಪಘಾತ: ಮಹಿಳೆ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಟಾಕಿ ಮಾರಾಟ ಲೈಸನ್ಸ್‌ ಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com, ಮಂಗಳೂರು, ಅ.04.  ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಹಾಗೂ ನವೆಂಬರ್ 12 ಮತ್ತು 13 ರವರೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪಟಾಕಿ ಸುಡುಮದ್ದು ಮಾರಾಟ ಮಾಡಲು ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಅಕ್ಟೋಬರ್ 4ರಿಂದ 16ರವರೆಗೆ ರೂ. 200/- ಬ್ಯಾಂಕ್ ಚಲನ್ ಮೂಲಕ ಸರಕಾರಕ್ಕೆ ಪಾವತಿಸಿ ಪಡೆದುಕೊಳ್ಳಬೇಕು. ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ನೀಡಲಾಗುವುದಿಲ್ಲ. ಅರ್ಜಿ ಸ್ವೀಕರಿಸಿದ

ಪಟಾಕಿ ಮಾರಾಟ ಲೈಸನ್ಸ್‌ ಗೆ ಅರ್ಜಿ ಆಹ್ವಾನ Read More »

ಕರಾವಳಿ

ಮಂಗಳೂರು: ಗಾಂಜಾ ಸಾಗಾಟ; ಓರ್ವನ ಬಂಧನ

(ನ್ಯೂಸ್ ಕಡಬ)newskadaba.com, ಮಂಗಳೂರು(ಅ.04): ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ 4 ಕೆಜಿ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಮನೆ ನಿವಾಸಿ ಅಬುತಾಹಿರ್ ಅಲಿಯಾಸ್ ಅನ್ವರ್ ಎಂದು ಗುರುತಿಸಲಾಗಿದೆ.1 ಲಕ್ಷ ಮೌಲ್ಯದ 4 ಕೆಜಿ ಗಾಂಜಾ, ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು: ಗಾಂಜಾ ಸಾಗಾಟ; ಓರ್ವನ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ವಿಧಾನಪರಿಷತ್ ಉಪಚುನಾವಣೇ ಉಸ್ತುವಾರಿ- ಕೋಟ ಶ್ರೀನಿವಾಸ್ ಪೂಜಾರಿ

(ನ್ಯೂಸ್ ಕಡಬ)newskadaba.com, ಮಂಗಳೂರು(ಅ.03): ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಗೆ ಸಂಬಂಧಿಸಿ ಕೋಟ ಶ್ರೀನಿವಾಸ್‌ ಪೂಜಾರಿ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಶಾಸಕ ರಾಜೇಶ್ ನಾಯ್ಕ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯ್ಕ್‌ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ನಿರ್ದೇಶಿಸಿದ್ದಾರೆ.

ವಿಧಾನಪರಿಷತ್ ಉಪಚುನಾವಣೇ ಉಸ್ತುವಾರಿ- ಕೋಟ ಶ್ರೀನಿವಾಸ್ ಪೂಜಾರಿ Read More »

ಕರಾವಳಿ
Scroll to Top