ಕರಾವಳಿ

ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ- ನ್ಯಾಯಾಧೀಶೆ ಶೋಭಾ ಬಿ.ಜಿ

(ನ್ಯೂಸ್ ಕಡಬ) newskadaba.com ಅ. 11. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಪಡುವವರನ್ನು ಎಲ್ಲರಂತೆ ಕಾಣಬೇಕು. ಅವರ ಮೇಲೆ ದಯೆ ಮತ್ತು ಕರುಣೆ ಇರಲಿ. ಅವರನ್ನು ನಮ್ಮಂತೆ ಉಪಚರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ. ಜಿ. ತಿಳಿಸಿದರು. ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, […]

ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ- ನ್ಯಾಯಾಧೀಶೆ ಶೋಭಾ ಬಿ.ಜಿ Read More »

ಕರಾವಳಿ

ಸುಳ್ಯ: ಕಳ್ಳತನ ಪ್ರಕರಣದ ಆರೋಪ ಸಾಬೀತು; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

(ನ್ಯೂಸ್ ಕಡಬ)newskadaba.com, ಅ. 11ಬೆಂಗಳೂರು: ಸಂಪಾಜೆಯ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಆರೋಪಿಗಳಿಬ್ಬರ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಅಹ್ಮದ್‌ ಕಬೀರ್‌ ಹಾಗೂ ಸಾಜುದೀನ್‌ ಫಾರೂಖ್‌ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದರು.ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಲಾಗಿದೆ. ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್‌

ಸುಳ್ಯ: ಕಳ್ಳತನ ಪ್ರಕರಣದ ಆರೋಪ ಸಾಬೀತು; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ Read More »

ಕರಾವಳಿ

ಬೈಕ್ ಅಪಘಾತ: ಸವಾರ ಮೃತ್ಯು..!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಅ. 11.  ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಎಂದು ಗುರುತಿಸಲಾಗಿದೆ. ಸುಧೀಶ್‌ ಅವರು ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಅವಘಡದಲ್ಲಿ ಸುಧೀಶ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು

ಬೈಕ್ ಅಪಘಾತ: ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಆಯುಷ್ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ

(ನ್ಯೂಸ್ ಕಡಬ) newskadaba.com ಅ. 11. ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಜಿಲ್ಲಾ ಆಯುಷ್ ಆಸ್ಪತ್ರೆ ವೆನ್‍ಲಾಕ್ ಆವರಣ ಮಂಗಳೂರು ಇಲ್ಲಿ ಪ್ರತೀ ತಿಂಗಳ 3ನೇ ಶುಕ್ರವಾರ ಮೂಲವ್ಯಾಧಿ, Piles Fistula and Fissure ಇನ್ನಿತರ ಗುದಗತ ರೋಗಗಳಿಂದ ಬಳಲುತ್ತಿರುವವರಿಗೆ ಉಚಿತ ಪರಿಣಾಮಕಾರಿ ಆಯುರ್ವೇದ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ|| ರವಿಶಂಕರ್ ಪೆರುವಾಜೆ ಇವರು ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡುವರು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಕೋರಿದೆ. ಹೆಚ್ಚಿನ ಮಾಹಿತಿಗೆ

ಆಯುಷ್ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ Read More »

ಕರಾವಳಿ

ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 11.  ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭ (ನ.1) ನೀಡಲಾಗುವ ಜಿಲ್ಲಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದ.ಕ.ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಅನುಪಮ ಸೇವೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿಯನ್ನು ನೀಡಲಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು, ಸಮಾಜ ಸೇವೆ, ಜಾನಪದ, ಪರಿಸರ ವಿಜ್ಞಾನ, ವೈದ್ಯಕೀಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದವರು ಅರ್ಜಿಯನ್ನು ಸಂಕ್ಷಿಪ್ತ ದಾಖಲೆ/ ವಿವರಣೆಯೊಂದಿಗೆ ಅ.25ರೊಳಗೆ

ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ವಿಡಿಯೋ ಲೈಕ್ ಮಾಡಿ 5 ಲಕ್ಷ ರೂ. ಕಳೆದುಕೊಂಡ ಭೂಪ..!

(ನ್ಯೂಸ್ ಕಡಬ) newskadaba.com ಅ. 09. ನಕಲಿ ಆನ್ ಲೈನ್ ಅರ್ನಿಂಗ್ ಆ್ಯಪ್ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡ ಘಟನೆ ವರದಿಯಾಗಿದೆ. ದೂರುದಾರರು ಸೆ.28ರಂದು ಇನ್ಸ್ಟಾಗ್ರಾಂ ಮೂಲಕ ಬಂದ ಆನ್ ಲೈನ್ ಅರ್ನಿಂಗ್ ಎಂಬ ಲಿಂಕ್ ನ್ನು ಕ್ಲಿಕ್ ಮಾಡಿದ್ದು, ಈ ವೇಳೆ 9733674701 ನಂಬರಿನ ವಾಟ್ಸಾಪ್ ಚಾಟ್ ತೆರೆದುಕೊಂಡಿದೆ. ಅದರಲ್ಲಿ ಅಪರಿಚಿತ ವ್ಯಕ್ತಿಯು ತಾವು ಕಳಿಸಿದ ವಿಡಿಯೋಗೆ ಲೈಕ್ ಮಾಡಿದರೆ 123ರಿಂದ 5000 ರೂ.ವರೆಗೆ ಗಳಿಸಬಹುದು ಎಂದು ತಿಳಿಸಿದ್ದು, ನಂಬಿದ ದೂರುದಾರ

ವಿಡಿಯೋ ಲೈಕ್ ಮಾಡಿ 5 ಲಕ್ಷ ರೂ. ಕಳೆದುಕೊಂಡ ಭೂಪ..! Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಪಟಾಕಿ ದಾಸ್ತಾನು:4 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ

(ನ್ಯೂಸ್ ಕಡಬ)newskadaba.com, ಅ. 09ಕುಂದಾಪುರ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಮನೆಯೊಂದಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು ಪಟಾಕಿ ವಶಪಡಿಸಿಕೊಂಡ ಘಟನೆ ಬುಧವಾರ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ. ಇಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿಯಾಗಿದ್ದಾನೆ. ಇವರ ಪಟಾಕಿ ದಾಸ್ತಾನು ಶೆಡ್ ಸಮೀಪವೇ ಕಾಂಕ್ರೀಟ್ ರಸ್ತೆ ಇದ್ದು, ಕೆಲವು ಸಮಯಗಳ ಹಿಂದೆ ರಸ್ತೆ ಮಧ್ಯೆಯೇ ಕೆಂಪು ಕಲ್ಲಿನ ಕಂಪೌಂಡ್ ನಿರ್ಮಿಸಿದ್ದರು. ಈ ಬಗ್ಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರೂ

ಅಕ್ರಮ ಪಟಾಕಿ ದಾಸ್ತಾನು:4 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ Read More »

ಕರಾವಳಿ

ಶಾಂತಿನಗರ ಸರ್ಕಾರಿ ಶಾಲೆಯಲ್ಲಿ ತುಳುನಾಡ ಆಚರಣೆ; ಕೊರಳ ಪರ್ಬ, ಹೊಸ ಅಕ್ಕಿ ಊಟ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಅ. 09. ತುಳುನಾಡ ಸಂಪ್ರದಾಯಗಳು, ಆಚರಣೆಗಳು ತೆರೆಮರೆಗೆ ಸರಿಯುತ್ತಿದೆ ಎನ್ನುವ ಅಪವಾದದ ಕಾಲಘಟ್ಟದಲ್ಲಿ ತುಳುನಾಡ ಆಚರಣೆಗಳನ್ನು ಸಂಪ್ರದಾಯ ಬದ್ದವಾಗಿ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ವಿವಿಧ ಆಚರಣೆಗಳನ್ನು ಆಚರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಅಂತೆಯೇ ಸೋಮವಾರ ಹೊಸ ಅಕ್ಕಿ ಊಟ, ಕೊರಳ ಪರ್ಬವನ್ನು ಗ್ರಾಮೀಣ ಸೊಗಡಿನಲ್ಲಿ ಆಚರಿಸಲಾಗಿದೆ. ಮಕ್ಕಳು ಕೃಷಿ ಪದ್ದತಿಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುತ್ತಾರೆ ಎನ್ನುವ ಅಚಲ ನಂಬಿಕೆಯಿಂದ ಶಾಲಾಭಿವೃದ್ದಿ ಸಮಿತಿ,

ಶಾಂತಿನಗರ ಸರ್ಕಾರಿ ಶಾಲೆಯಲ್ಲಿ ತುಳುನಾಡ ಆಚರಣೆ; ಕೊರಳ ಪರ್ಬ, ಹೊಸ ಅಕ್ಕಿ ಊಟ ಆಚರಣೆ Read More »

ಕರಾವಳಿ

ಉಳಿಯ ದ್ವೀಪ- ಮರಳುಗಾರಿಕೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಪಾವೂರು ಉಳಿಯ ಕುದ್ರು ಪರಿಸರದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ, ಪರಿಸರಕ್ಕೆ ಹಾಗೂ ಇತರೆ ಸಂಪನ್ಮೂಲಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮತ್ತು ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಉಳಿಯ ದ್ವೀಪದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಾಟ

ಉಳಿಯ ದ್ವೀಪ- ಮರಳುಗಾರಿಕೆ ನಿಷೇಧ Read More »

ಕರಾವಳಿ

ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವು  ಅಕ್ಟೋಬರ್ 10ರಂದು  ಬೆಳಿಗ್ಗೆ 10.30 ಗಂಟೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮಂಗಳೂರು ನಗರ ಪೊಲೀಸ್ ಆಯುಕ್ತ

ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ Read More »

ಕರಾವಳಿ
Scroll to Top