ಕರಾವಳಿ

ಕರಾವಳಿ ಜಿಲ್ಲೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ- ಬಿ ವೈ ವಿಜಯೇಂದ್ರ ಆರೋಪ

(ನ್ಯೂಸ್ ಕಡಬ) newskadaba.com ಅ.16. ರಾಜ್ಯ ಸರಕಾರದ ಪ್ರಸ್ತುತ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಉಸ್ತುವಾರಿ ಸಚಿವರು ಹೊರತುಪಡಿಸಿ ಯಾವುದೇ ಸಚಿವರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡದೇ ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತು ಮಂಗಳವಾರದಂದು ಅಂಬಾಗಿಲುನಲ್ಲಿ ನಡೆದ ಉಡುಪಿ ಜಿಲ್ಲಾ ಬಿಜೆಪಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರತಿ ಕ್ಷೇತ್ರಕ್ಕೆ 2 ಸಾವಿರ ಕೋಟಿ […]

ಕರಾವಳಿ ಜಿಲ್ಲೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ- ಬಿ ವೈ ವಿಜಯೇಂದ್ರ ಆರೋಪ Read More »

ಕರಾವಳಿ, ಕರ್ನಾಟಕ

ಮರಕ್ಕೆ ಸ್ಕೂಟರ್ ಢಿಕ್ಕಿ- ಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ಅ.16. ಸವಾರನ ನಿಯಂತ್ರನ ತಪ್ಪಿದ ಸ್ಕೂಟರ್ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮದ್ದೂರಿನ ಶಾರದಾ ನಗರದಲ್ಲಿ ಬುಧವಾರದಂದು ನಡೆದಿದೆ. ಮೃತರನ್ನು ಮಡೂರು ನಿವಾಸಿ ನಾಗೇಶ್ (51) ಎಂದು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದ ನಾಗೇಶ್, ರಜೆಯ ಮೇಲೆ ಬೀರಿ ಮಾರುಕಟ್ಟೆಯಿಂದ ತೆಂಗಿನಕಾಯಿ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆನ್ನಲಾಗಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆ ಎಎಸ್‌ಐ ಯಶವಂತ್ ಭೇಟಿ

ಮರಕ್ಕೆ ಸ್ಕೂಟರ್ ಢಿಕ್ಕಿ- ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಸೂಕ್ತ ಪರವಾನಗಿ ಇಲ್ಲದೇ ಸಂಗ್ರಹಿಸಿಡಲಾದ್ದ 40 ಕೆ.ಜಿ ಪಟಾಕಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಅ.16. ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಡಲಾಗಿದ್ದ 40 ಕೆ.ಜಿ. ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ಅವರು ನೀಡಿದ ಮಾಹಿತಿಯ ಮೇರೆಗೆ ಕಬ್ರಾಲ್ ಗನ್ ಹೌಸ್ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಸೂಕ್ತ ಪರವಾನಗಿ ಇಲ್ಲದೇ ಸಂಗ್ರಹಿಸಿಡಲಾಗಿದ್ದ ಪಟಾಕಿಗಳ ದಾಸ್ತಾನು ಪತ್ತೆಯಾಗಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ರೊನಾಲ್ಡ್ ಜಿ ಕ್ಯಾಬ್ರಾಲ್ ಎಂಬವರನ್ನು ವಿಚಾರಣೆ ನಡೆಸಿದಾಗ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು

ಸೂಕ್ತ ಪರವಾನಗಿ ಇಲ್ಲದೇ ಸಂಗ್ರಹಿಸಿಡಲಾದ್ದ 40 ಕೆ.ಜಿ ಪಟಾಕಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಫೆ. 17ರಿಂದ ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ LHB ಬೋಗಿಗಳ ಜೋಡಣೆ- ಈಡೇರಿದ ಕರಾವಳಿಗರ ಬೇಡಿಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ. 16. ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕೆ ಅಗತ್ಯವಾದ LHB ಬೋಗಿಗಳನ್ನು ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ ಫೆಬ್ರವರಿ 17ನೇ ತಾರೀಕಿನಿಂದ ಜೋಡಿಸಲಾಗುತ್ತಿದ್ದು, ಕರಾವಳಿಗರ ದಶಕಗಳ ಬೇಡಿಕೆ ಈಡೇರಿದಂತಾಗಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಜನಪ್ರತಿನಿಧಿಗಳ ಮೂಲಕ ಸಾರ್ವಜನಿಜರು ನಿರಂತರವಾಗಿ ಮತ್ಸಗಂಧ ಹಳೆಯ ಬೋಗಿಯ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರೂ ಇಪ್ಪತ್ತು 25 ವರ್ಷಗಳಷ್ಟು ಹಳೆಯ ಬೋಗಿಗಳಲ್ಲೇ ಮತ್ಸಗಂಧ ರೈಲು ಓಡುತ್ತಿರುವ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ

ಫೆ. 17ರಿಂದ ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ LHB ಬೋಗಿಗಳ ಜೋಡಣೆ- ಈಡೇರಿದ ಕರಾವಳಿಗರ ಬೇಡಿಕೆ Read More »

ಕರಾವಳಿ

ಲಾರಿ ತಡೆದು 1.64 ಲಕ್ಷ ರೂ. ದರೋಡೆ: ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಅ. 16. ಲಾರಿ ತಡೆದು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ 1.64 ಲಕ್ಷ ರೂ. ದರೋಡೆ ಗೈದ ಘಟನೆ ಇಂದು ಮುಂಜಾನೆ ಪೈವಳಿಕೆ ಸಮೀಪದ ಅಟ್ಟೆಗೋಳಿಯಲ್ಲಿ ನಡೆದಿದೆ. ಮೀನು ತರಲು ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಲಾರಿ ಚಾಲಕ ಯೂಸಫ್ ನನ್ನು ತಡೆದು ಚಾಕು ತೋರಿಸಿ ಹಣವನ್ನು ದರೋಡೆ ಮಾಡಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೋಲಿಸರು ತನಿಖೆ ಆರಂಭಿಸಿದ್ದು, ಸಿ ಸಿ ಟಿ ವಿ ಕ್ಯಾಮರಾ ತಪಾಸಣೆ ನಡೆಸಿದ್ದಾರೆ.

ಲಾರಿ ತಡೆದು 1.64 ಲಕ್ಷ ರೂ. ದರೋಡೆ: ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ

(ನ್ಯೂಸ್ ಕಡಬ) newskadaba.com ಉಡುಪಿ, ಅ. 16. ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳ ಕಾಲ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ (ಅ.15) ಸೂಚಿಸಿದೆ. ಪ್ರವಾಸಿಗರು, ಸಾರ್ವಜನಿಕರು, ಮೀನುಗಾರರು ನದಿ, ಜಲಪಾತ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು ಎಂದು ಜಿಲ್ಲಾಡಳಿತ

ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ Read More »

ಕರಾವಳಿ
crime, arrest, suspected

ಆಟೋ ರಿಕ್ಷಾದಲ್ಲಿ ಅಕ್ರಮ ದನ ಸಾಗಾಟ – ತಡೆಹಿಡಿದ ಬಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಅ. 16. ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದನ್ನು ಬಜರಂಗದಳ ಕಾರ್ಯಕರ್ತರು ತಡೆಹಿಡಿದ ಘಟನೆ ಪುತ್ತೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬುಧವಾರದಂದು ಮಧ್ಯಾಹ್ನ ದರ್ಬೆಯಿಂದ ನೆಹರೂನಗರ ಕಡೆಗೆ ಬೈಪಾಸ್ ರಸ್ತೆಯಲ್ಲಿ ತೆರಳುತ್ತಿದ್ದ ರಿಕ್ಷಾದಲ್ಲಿ ದನವೊಂದನ್ನು ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಿಕ್ಷಾದಲ್ಲಿ ಇಬ್ಬರು ಮಹಿಳೆಯರಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಆಟೋ ರಿಕ್ಷಾದಲ್ಲಿ ಅಕ್ರಮ ದನ ಸಾಗಾಟ – ತಡೆಹಿಡಿದ ಬಜರಂಗದಳ ಕಾರ್ಯಕರ್ತರು Read More »

ಕರಾವಳಿ, ಕ್ರೈಮ್ ನ್ಯೂಸ್

ವಾಯುಭಾರ ಕುಸಿತ- ಅ.19ರ ವರೆಗೆ ಮಳೆ ಸಾಧ್ಯತೆ; ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ.16. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆ ಅ.16ರಿಂದ 19ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಸೂಚಿಸಿದೆ. ಜೊತೆಗೆ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರರು ಕೂಡಲೇ ದಡ ಸೇರುವಂತೆಯೂ ತಿಳಿಸಿದೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರೀ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರು

ವಾಯುಭಾರ ಕುಸಿತ- ಅ.19ರ ವರೆಗೆ ಮಳೆ ಸಾಧ್ಯತೆ; ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ನೆಹರೂ ಮೈದಾನದ ಇಂದಿರಾ ಕ್ಯಾಂಟಿನ್ ಪರಿಸರದಲ್ಲಿ ಪತೆಯಾಗಿದೆ. ಮೃತ ವ್ಯಕ್ತಿಯನ್ನು ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್ ರಾಜೇಶನ ಜರ್ಜರಿತವಾದ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಮೃತದೇಹವನ್ನು ವಾರೀಸುದಾರರು ಯಾರೂ ಬಂದಿಲ್ಲದ ಕಾರಣ ವೆನ್ಲಾಕ್ ಶವಾಗಾರದಲ್ಲಿ ಇರಿಸಿದ್ದಾರೆ.

ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಜನ ಸಂಚಾರದಿಂದ 50 ಮೀಟರ್ ದೂರದಲ್ಲಿ ಪಟಾಕಿ ಮಳಿಗೆ – ಕಡಬದ 5 ಕಡೆ ಪಟಾಕಿ ಸ್ಟಾಲ್ ಗೆ ಅವಕಾಶ…!

(ನ್ಯೂಸ್ ಕಡಬ) newskadaba.com ಅ.16. ಇದೇ ತಿಂಗಳ ಅಂದರೆ ಅಕ್ಟೋಬರ್ 31ರಿಂದ ನವೆಂಬರ್ 2ರ ತನಕ ನಡೆಯುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡ ಮತ್ತು ಇತರ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ರಾಜ್ಯ ಅಗ್ನಶಾಮಕ ದಳ ಸುತ್ತೋಲೆ ಹೊರಡಿಸಿದ್ದು ಪುತ್ತೂರು ಮತ್ತು ಕಡಬದಲ್ಲಿ ಜನ ಸಂಚಾರ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಪಟಾಕಿ ಸ್ಟಾಲ್ ಇರಿಸಲು ಸೂಚನೆ ನೀಡಿದ್ದು, ಪುತ್ತೂರು ಮತ್ತು ಕಡಬದಲ್ಲಿ 5 ಕಡೆ 69 ಪಟಾಕಿ ಮಳಿಗೆಗಳಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ

ಜನ ಸಂಚಾರದಿಂದ 50 ಮೀಟರ್ ದೂರದಲ್ಲಿ ಪಟಾಕಿ ಮಳಿಗೆ – ಕಡಬದ 5 ಕಡೆ ಪಟಾಕಿ ಸ್ಟಾಲ್ ಗೆ ಅವಕಾಶ…! Read More »

ಕರಾವಳಿ
Scroll to Top