ಕರಾವಳಿ

crime, arrest, suspected

ಗಾಂಜಾ ಮಾರಾಟ ಮಾಡಲು ಯತ್ನ: ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.18. ಹೊಸಬೆಟ್ಟು ಬಳಿಯ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಯುವಕನನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಸೋನಿ (27) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 30 ಸಾವಿರ ಮೌಲ್ಯದ 1.5 ಕೆಜಿ ಗಾಂಜಾ, ೧೫ ಸಾವಿರ ಮೌಲ್ಯದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕಲಂ 8 20(ಬಿ) (6), ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟ ಮಾಡಲು ಯತ್ನ: ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.18. ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್(49) ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿ ಭಾಸ್ಕರ್ ಅವರು ಅ.17 ರಂದು ಮಂಗಳೂರಿನಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ನ್ಯಾನೋ ಕಾರು ನಡುವೆ ಅಪಘಾತ ನಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.  

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದಿನಿಂದ ಬೆಂಗಳೂರಿನಲ್ಲಿ ಕರ್ನಾಟಕ vs ಕೇರಳ ರಣಜಿ ಫೈಟ್

(ನ್ಯೂಸ್ ಕಡಬ) newskadaba.com ಅ.18, ಬೆಂಗಳೂರು. ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ‌ ಮೊದಲ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ಶುಕ್ರವಾರದಿಂದ ಕೇರಳ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ನಗರದ ಹೊರವಲಯದ ಆಲೂರು ಕೆ‌ಎಸ್‌ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮಳೆಯಿಂದ ಮೈದಾನ ಕೊಂಚ ಒದ್ದೆಯಾಗಿರುವುದರಿಂದ ಟಾಸ್ ಕೊಂಚ ತಡವಾಗಲಿದೆ. ಕಳೆದ ವಾರ ಇಂದೋರ್‌ನಲ್ಲಿ ನಡೆದಿದ್ದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಮಳೆಯಿಂದಾಗಿ ಇತ್ತಂಡಗಳ ಮೊದಲ ಇನ್ನಿಂಗ್ಸ್ ಕೂಡ ಮುಗಿದಿರಲಿಲ್ಲ.

ಇಂದಿನಿಂದ ಬೆಂಗಳೂರಿನಲ್ಲಿ ಕರ್ನಾಟಕ vs ಕೇರಳ ರಣಜಿ ಫೈಟ್ Read More »

ಕರಾವಳಿ

ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರು ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಅ.18. ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು. ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯದ ತೂಗು ಸೇತುವೆಯ ಮೇಲೆ ಮೂವರು ಹೋಗುತ್ತಿದ್ದ ವೇಳೆ ರೋಪ್ ತುಂಡಾಗಿದೆ. ಮೂವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.  

ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರು ಗಾಯ Read More »

ಕರಾವಳಿ

ಚಿನ್ನದ ಬೆಲೆ ಮತ್ತೆ ಏರಿಕೆ

(ನ್ಯೂಸ್ ಕಡಬ) newskadaba.com ಅ.18, ಬೆಂಗಳೂರು. ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 80 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 87 ರೂ. ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,240 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,898 ರೂ. ಇದೆ.   22 ಕ್ಯಾರಟ್‌ ಚಿನ್ನದ ದರಗಳ ವಿವರ

ಚಿನ್ನದ ಬೆಲೆ ಮತ್ತೆ ಏರಿಕೆ Read More »

ಕರಾವಳಿ

ಮೂಡುಬಿದಿರೆ: ಅಂತರ್ ರಾಷ್ಟ್ರೀಯ ಲೇಕ್ ಸಮ್ಮೇಳನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಅ.18. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ 14ನೇ ಅಂತರ್ ರಾಷ್ಟ್ರೀಯ ಲೇಕ್ ಸಮ್ಮೇಳನಕ್ಕೆ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಗುರುವಾರ ಚಾಲನೆ ದೊರೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ

ಮೂಡುಬಿದಿರೆ: ಅಂತರ್ ರಾಷ್ಟ್ರೀಯ ಲೇಕ್ ಸಮ್ಮೇಳನಕ್ಕೆ ಚಾಲನೆ Read More »

ಕರಾವಳಿ

ಬೋಟ್ ದುರಂತದಲ್ಲಿ ನಾಪತ್ತೆಯಾದ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.18. ಪಡನ್ನ ಆಯಿತ್ತಲ ಸಮುದ್ರದಲ್ಲಿ ಬೋಟ್ ದುರಂತದಲ್ಲಿ ನಾಪತ್ತೆಯಾದ ಬೆಸ್ತನ ಮೃತದೇಹ ಪೂಂಜಾವಿ ತೀರದಲ್ಲಿ ಗುರುವಾರ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್, ಎಂ.ರಾಜ ಗೋಪಾಲ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಿ.ಶಿಲ್ಪಾ ನೇತೃತ್ವ ನೀಡಿದ್ದರು. ದುರಂತದಲ್ಲಿ ಮೃತಪಟ್ಟ ಅಬೂಬಕ್ಕರ್ ರವರ ಮೃತ ದೇಹ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ಬುಧವಾರ ಮಧ್ಯಾಹ್ನ ಆಯಿತ್ತಲ ಸಮುದ್ರದಲ್ಲಿ ಫೈಬರ್ ಬೋಟ್ ದುರಂತಕ್ಕೀಡಾಗಿತ್ತು. ದೋಣಿಯಲ್ಲಿದ್ದ 37 ಮಂದಿಯಲ್ಲಿ 35 ಮಂದಿಯನ್ನು ರಕ್ಷಿಸಲಾಗಿತ್ತು. ಓರ್ವ

ಬೋಟ್ ದುರಂತದಲ್ಲಿ ನಾಪತ್ತೆಯಾದ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರದಲ್ಲಿ ನೃತ್ಯ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಅ.18. ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ  ಪ್ರದರ್ಶನ ನೀಡಿ ಮೈಸೂರಿನ ಸಾಂಸ್ಕೃತಿಕ ತಂಡದ ತೀರ್ಪುಗಾರರ ಮೆಚ್ಚುಗೆ ಪಡೆದ ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ , ಸಾಂಸ್ಕೃತಿಕ ತಂಡ ಯುವ ದಸರದಲ್ಲಿ ದಕ್ಷಿಣ ಕನ್ನಡ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದ ಈ ತಂಡ ಸಾವಿರಾರು ಪ್ರೇಕ್ಷಕರ ಗಮನ ಸೆಳೆದರು.   ಕಾಲೇಜಿನ ಪ್ರಾಂಶುಪಾಲರಾದ ಡಾ ದಿನೇಶ್ ಪಿ ಟಿ ಅವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ತಂಡದ ಸಂಯೋಜಕರಾದ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರದಲ್ಲಿ ನೃತ್ಯ ಕಾರ್ಯಕ್ರಮ Read More »

ಕರಾವಳಿ

ಅಸಮರ್ಪಕ ರಸ್ತೆ ವ್ಯವಸ್ಥೆ; ವೃದ್ದರನ್ನು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದ ಯುವಕರು

(ನ್ಯೂಸ್ ಕಡಬ) newskadaba.com ಅ.17. ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಯುವಕರು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದಿರುವ ಘಟನೆ ತಾಲೂಕಿನ ಗುತ್ತಿಗಾರು ಮಡಪ್ಪಾಡಿ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.   ಸುಳ್ಯ ತಾಲೂಕಿನ ನಡುಬೆಟ್ಟು ಭಾಗದಲ್ಲಿ ಸುಮಾರು 14 ಮನೆಗಳಿದ್ದು, ಈ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಯಾವುದೇ ವಾಹನಗಳ ಚಾಲಕರು ಈ ಭಾಗದ ಮನೆಗಳಿಗೆ ಬರಲು ನಿರಾಕರಿಸುತ್ತಾರೆ ಎನ್ನಲಾಗಿದೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು,

ಅಸಮರ್ಪಕ ರಸ್ತೆ ವ್ಯವಸ್ಥೆ; ವೃದ್ದರನ್ನು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದ ಯುವಕರು Read More »

ಕರಾವಳಿ

ಉದ್ಯಮಿ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ

(ನ್ಯೂಸ್ ಕಡಬ) newskadaba.com  ಉಡುಪಿ, ಅ. 17. ರೆಂಜಾಳ ನಾಯಕ ಮನೆತನದ ಉದ್ಯಮಿ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್(76) ಅವರು ಅಕ್ಟೋಬರ್ 16 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ರೆಂಜಾಳ ಲಕ್ಷ್ಮಣ ಅವರು ಗ್ರಾಮದಲ್ಲಿ ಆಸ್ಪತ್ರೆಯ ಕೊರತೆಯಿದ್ದ ಸಮಯದಲ್ಲಿ, ಅವರು ಹಿಂದುಳಿದವರಿಗೆ, ವಿಶೇಷವಾಗಿ ಕಾಮಾಲೆ ಮತ್ತು ಹಾವು ಕಡಿತದಂತಹ ಕಾಯಿಲೆಗಳಿಗೆ ಉಚಿತ ಗಿಡಮೂಲಿಕೆ ಪರಿಹಾರಗಳನ್ನು ಒದಗಿಸಿದರು. ತಮ್ಮ ನೆರೆಹೊರೆಯವರ ಕಲ್ಯಾಣಕ್ಕಾಗಿ ಅವರು ಶ್ರಮಿಸಿದ್ದಾರೆ. ರೆಂಜಾಳ ಲಕ್ಷ್ಮಣ ಅವರು ಗ್ರಾಮದಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯನ್ನು ಅರಿತು ಸರ್ಕಾರಿ ಅಂಗನವಾಡಿ ನಿರ್ಮಿಸಲು

ಉದ್ಯಮಿ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top