ಕರಾವಳಿ

ಹೆಲ್ಮೆಟ್‌ ಕಳವು: ಸಿಸಿ ಕೆಮರಾದಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.23. ನಗರದ ಹಲವೆಡೆ ಹೆಲ್ಮೆಟ್‌ ಕಳವು ಮಾಡಲಾಗುತ್ತಿದ್ದು, ಓರ್ವ ಹೆಲ್ಮೆಟ್‌ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ನಗರದ ವಾಣಿಜ್ಯ ಕಟ್ಟಡವೊಂದರ ಸಮೀಪ ನಿಲ್ಲಿಸಿದ್ದ ಬೈಕ್‌ನಲ್ಲಿದ್ದ ಹೊಸ ಹೆಲ್ಮೆಟನ್ನು ಕಳ್ಳ ಕಳವು ಮಾಡಿದ್ದು, ಆತನ ಬಳಿ ಇದ್ದ ಹಳೆಯ ಹೆಲ್ಮೆಟನ್ನು ಬೈಕ್‌ನ ಮೇಲಿಟ್ಟು ಹೋಗಿದ್ದಾನೆ. ಬಳಿಕ ತಾನು ಬಂದಿದ್ದ ಸ್ಕೂಟರ್‌ನಲ್ಲಿ ಮರಳಿದ್ದಾನೆ. ಈತ ಇದೇ ರೀತಿ ಹಲವೆಡೆ ಹೆಲ್ಮೆಟ್‌ ಕದ್ದಿರುವ ಶಂಕೆ ವ್ಯಕ್ತವಾಗಿದೆ.  

ಹೆಲ್ಮೆಟ್‌ ಕಳವು: ಸಿಸಿ ಕೆಮರಾದಲ್ಲಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಆಯುಷ್ ಆಸ್ಪತ್ರೆ: ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಅ.23. ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಮಂಗಳೂರಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಮೂಲವ್ಯಾಧಿ, Piles, Fistula and Fissure ಇನ್ನಿತರ ಗುದಗತ ರೋಗಗಳಿಂದ ಬಳಲುತ್ತಿರುವಂತಹ ರೋಗಿಗಳ ಉಪಯೋಗಕ್ಕಾಗಿ ಆಯುರ್ವೇದದ ಯಶಸ್ವಿ ಶಸ್ತ್ರಚಿಕಿತ್ಸಾ ವಿಧಾನವಾದ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನವನ್ನು ಜಿಲ್ಲೆಯ ಹೆಸರಾಂತ ಆಯುರ್ವೇದ ಶಸ್ತ್ರಚಿಕಿತ್ಸಕ ಡಾ.ರವಿಶಂಕರ್ ಪೆರುವಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಬಡರೋಗಿಗಳಿಗೆ ಆಯುರ್ವೇದ ಚಿಕಿತ್ಸೆಗಳ ಉಪಯೋಗವನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು

ಆಯುಷ್ ಆಸ್ಪತ್ರೆ: ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ ಉದ್ಘಾಟನೆ Read More »

ಕರಾವಳಿ

ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ- ಜಿ.ಪಂ ಸಿಇಓ ಡಾ. ಆನಂದ್ ಕೆ

(ನ್ಯೂಸ್ ಕಡಬ) newskadaba.com ಅ.23.  ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದಿಂದ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪ ಅನಾಹುತಗಳನ್ನು ಗುರುತಿಸಿ ಅವುಗಳ ಅಪಾಯ ತಗ್ಗಿಸಲು ಅಗತ್ಯ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಿಟಿಗೇಶನ್ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ ಕಡಲತೀರದ ನಿರ್ವಹಣಾ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ- ಜಿ.ಪಂ ಸಿಇಓ ಡಾ. ಆನಂದ್ ಕೆ Read More »

ಕರಾವಳಿ

ಅ. 31 ರಂದು ದೀಪಾವಳಿಯ ಪ್ರಯುಕ್ತ ಸದಾ ಸಿದ್ದಿ ಬಳಗದ ಆಶಯದಲ್ಲಿ ಸಾಂಸ್ಕೃತಿಕ ಸಂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ದೀಪಾವಳಿ ಹಬ್ಬದ ಪ್ರಯುಕ್ತ ಸದಾ ಸಿದ್ದಿ ಮಿತ್ರ ಬಳಗದ ಅಶಯದಲ್ಲಿ ಅ. 31 ರಂದು ಸಂಜೆ 9 ಕ್ಕೆ ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆ ವಥಾರದಲ್ಲಿ  21ನೇ ಸದಾ ಸಿದ್ದಿ ಸಾಂಸ್ಕೃತಿಕ ಸಂಜೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು ನಡೆಯಲಿದೆ. ರಾತ್ರಿ 9ಕ್ಕೆ ‘ಕುಸಾಲ್ದ ಗುರಿಕಾರೆ ‘ ದಿನೇಶ್‌ ಕೊಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹ್ಯಾಸಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಮನರಂಜಿಸಲಿದೆ.  

ಅ. 31 ರಂದು ದೀಪಾವಳಿಯ ಪ್ರಯುಕ್ತ ಸದಾ ಸಿದ್ದಿ ಬಳಗದ ಆಶಯದಲ್ಲಿ ಸಾಂಸ್ಕೃತಿಕ ಸಂಜೆ Read More »

ಕರಾವಳಿ

ಬಾಯಿಯ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಅ.23.  ಬಾಯಿ ಎನ್ನುವುದು ನಮ್ಮ ದೇಹದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕೇಂದ್ರವಾಗಿರುತ್ತದೆ. ಹಲ್ಲು ನೋವಿನ ಹೊರತಾದ ಹತ್ತಾರು ರೋಗಗಳು ಪ್ರಕಟಗೊಳ್ಳುತ್ತದೆ. ರಕ್ತಹೀನತೆ, ವಿಟಮಿನ್ ಕೊರತೆ, ಲಿವರ್ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹಿಡಿದು ರಕ್ತದ ಕ್ಯಾನ್ಸರ್ ವರೆಗಿನ ಎಲ್ಲ ಮಾಹಿತಿಗಳು ಆರಂಭಿಕ ಹಂತದಲ್ಲಿಯೇ ಬಾಯಿಯಲ್ಲಿ ಕಂಡು ಬರುತ್ತದೆ. ದಂತ ವೈದ್ಯರು ಇದನ್ನು ಗುರುತಿಸಿ ತಿಳಿಹೇಳಿ ರೋಗಿಯನ್ನು ಜಾಗೃತಿಗೊಳಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿರುತ್ತದೆ. ಈ ಸಾಮಾಜಿಕ  ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸುಂದರ ಸಮೃದ್ಧ, ಸುದೃಢ

ಬಾಯಿಯ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ- ಡಾ. ಚೂಂತಾರು Read More »

ಕರಾವಳಿ

ಕಾಡಾನೆ ದಾಳಿ- ಅಪಾರ ಕೃಷಿ ಹಾನಿ..!

(ನ್ಯೂಸ್ ಕಡಬ) newskadaba.com ಅ.23. ಕಾಡಾನೆಗಳ ಹಿಂಡೊಂದು ಕೃಷಿ ಭೂಮಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಿತ್ತಬಾಗಿಲು ಗ್ರಾಮದ ಬಾನೊಟ್ಟು ಯೋಗೀಶ್ ಎಂಬವರ ಸೋಲಾರ್ ಬೇಲಿಯನ್ನು ಮುರಿದು ಹಾಕಿರುವ ಕಾಡಾನೆಗಳು ಕೋಡಿ ಶೀನಪ್ಪ ಗೌಡ ಎಂಬವರ ಬಾಳೆ ಗಿಡ ಮತ್ತು ಗದ್ದೆಗಳಿಗೆ ದಾಳಿ ನಡೆಸಿ ಹಾನಿ ಉಂಟು ಮಾಡಿವೆ. ಹಿಂಡಿನಲ್ಲಿ ಎರಡಕ್ಕಿಂತ ಅಧಿಕ ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದ್ದು, ಸೋಮವಾರ ರಾತ್ರಿ ಸಮೀಪದ

ಕಾಡಾನೆ ದಾಳಿ- ಅಪಾರ ಕೃಷಿ ಹಾನಿ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಅ.22. ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ರ ಕ್ಲಸ್ಟರ್ ಹಾಗೂ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇದರ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರಗಿದ ಕಡಬ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಸುಬ್ರಹ್ಮಣ್ಯ ಇದರ ಕಾರ್ಯದರ್ಶಿಗಳಾದ ಶ್ರೀಕೃಷ್ಣ ಶರ್ಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,

ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ Read More »

ಕರಾವಳಿ, ಕ್ರೀಡಾ ನ್ಯೂಸ್

ನಟ ದರ್ಶನ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಅ.22 ಬಳ್ಳಾರಿ : ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್ ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್  ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸೂಚನೆ ಕೊಟ್ಟಿದ್ದರು. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿ ನಟ ದರ್ಶನ್ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದಾನೆ. ನಟ ದರ್ಶನ್‌ ಬೆನ್ನು ನೋವಿನಿಂದ ಸರಿಯಾಗಿ ನಿದ್ದೆ ಮಾಡದೆ ಸೊರಗಿ

ನಟ ದರ್ಶನ್ ಆಸ್ಪತ್ರೆಗೆ ದಾಖಲು Read More »

ಕರಾವಳಿ

ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ

(ನ್ಯೂಸ್ ಕಡಬ) newskadaba.com ಅ.22 ಬೆಂಗಳೂರು: ಭಾರತದ 1998 ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ಗಳನ್ನು ಕಡ್ಡಾಯಗೊಳಿಸಿದೆ. ತಪ್ಪಾದ ಅಥವಾ ಹೆಲ್ಮೆಟ್ ಬಳಸದಿದ್ದರೆ ₹1000-₹2000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಕಡ್ಡಾಯ ಮಾತ್ರವಲ್ಲ ಹೆಲ್ಮೆಟ್ಗಳನ್ನು ತಪ್ಪಾಗಿ ಧರಿಸುತ್ತಾರೆ. ಹೊಸ ನಿಯಮಗಳು ಅನಧಿಕೃತ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದರೂ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ನೀವು ಉತ್ತಮ ಹೆಲ್ಮೆಟ್ ಖರೀದಿಸಿ ಅದನ್ನು ಸರಿಯಾಗಿ ಧರಿಸದಿದ್ದರೂ ದಂಡ ವಿಧಿಸಲಾಗುತ್ತದೆ. ಪೊಲೀಸರು ಇದ್ದಾರೆ, ಕ್ಯಾಮೆರಾ ಇದೆ

ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ Read More »

ಕರಾವಳಿ

ಮಾಣಿ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾವರಿಗೆ ರಾಜ್ಯ ಮಟ್ಟದ ‘ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 22. ಅನುದಾನರಹಿತ ಖಾಸಗಿ ಶಾಲೆಗಳ ಸಂಘ (RUPSA) ನೀಡುವ ರಾಜ್ಯ ಮಟ್ಟದ ‘ವಿದ್ಯಾರತ್ನ’ ಪ್ರಶಸ್ತಿಗೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಭಾಜನರಾಗಿದ್ದಾರೆ. ಅಕ್ಟೋಬರ್ 21ರಂದು ಬೆಂಗಳೂರಿನ ಜುಬಿಲಿ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಪ್ರಿಯಾ ಪ್ರಶಸ್ತಿ ಸ್ವೀಕರಿಸಿದರು. ಇವರು ಮಂಗಳೂರಿನ ಜೆಪ್ಪು ನಿವಾಸಿ, ಮೆಸ್ಕಾಂ

ಮಾಣಿ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾವರಿಗೆ ರಾಜ್ಯ ಮಟ್ಟದ ‘ವಿದ್ಯಾರತ್ನ ಪ್ರಶಸ್ತಿ’ ಪ್ರದಾನ Read More »

ಕರಾವಳಿ
Scroll to Top