ಕರಾವಳಿ

ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಗೋವಾದ ಮಾದರಿಯಲ್ಲಿ ರಾಜ್ಯದ ಬೀಚ್‌ಗಳಲ್ಲಿ ಟೆಂಟ್ ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ನಡೆದ ‘ಕನೆಕ್ಟ್ 2024’ನಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆವಿ, ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾವು ಬೀಚ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ , ಬೀಚ್​ ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ ಎಂದರು. ಬೀಚ್​ ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, […]

ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ Read More »

ಕರಾವಳಿ, ಕರ್ನಾಟಕ

ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನ – ಸಂಸದ ಚೌಟರಿಂದ ಸದಸ್ಯತ್ವ ಮರು ನೋಂದಣಿ

(ನ್ಯೂಸ್ ಕಡಬ) newskadaba.com ಅ.24. ಸಕ್ರಿಯ ಸದಸ್ಯತ್ವ ಅಭಿಯಾನದ ಭಾಗವಾಗಿ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯನಾಗಿ ಕ್ಯಾ. ಬ್ರಿಜೇಶ್ ಚೌಟ ಅವರು ತಮ್ಮ ಸದಸ್ಯತ್ವವನ್ನು ಮರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸಕ್ರಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರ ಸಮ್ಮುಖದಲ್ಲಿ ಕ್ಯಾ. ಚೌಟ ಅವರು ಸಕ್ರಿಯ ಸದಸ್ಯನಾಗಿ ನೋಂದಣಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು

ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನ – ಸಂಸದ ಚೌಟರಿಂದ ಸದಸ್ಯತ್ವ ಮರು ನೋಂದಣಿ Read More »

ಕರಾವಳಿ

ಮಂಗಳೂರು: ಇಂದು ವಿಧಾನಪರಿಷತ್ ಉಪಚುನಾವಣೆಯ ಮತೆಎಣಿಕೆ ಆರಂಭ

(ನ್ಯೂಸ್ ಕಡಬ) newskadaba.com ಅ.24, ಮಂಗಳೂರು: ಕರಾವಳಿಯಲ್ಲಿ ನಡೆದ ವಿಧಾನ ಪರಿಷತ್ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದೆ. ಬ್ಯಾಲೆಟ್ ಪೇಪರ್ ಮೂಲಕ ನಡೆದ ಮತದಾನ ಪ್ರಕ್ರಿಯೆಯ ಎಣಿಕೆಗೆ ಕಾಲೇಜಿನ ಒಂದು ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಮತ ಪತ್ರಗಳ ಎಣಿಕೆಗೆ 12 ಮೇಜುಗಳ ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು “ಡಿ” ಗ್ರೂಪ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಒಟ್ಟು 392 ಮತ

ಮಂಗಳೂರು: ಇಂದು ವಿಧಾನಪರಿಷತ್ ಉಪಚುನಾವಣೆಯ ಮತೆಎಣಿಕೆ ಆರಂಭ Read More »

ಕರಾವಳಿ

ವಿಧಾನ ಪರಿಷತ್ ಉಪಚುನಾವಣೆ- ಮತ ಎಣಿಕೆ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ಅ.24. ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ಅ. 22ರಂದು ನಡೆದ ವಿಧಾನ ಪರಿಷತ್‌ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ 8 ಗಂಟೆಯಿಂದ ಮಂಗಳೂರಿನ ಸಂತ ಅಲೋಷಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದೆ. ಪ್ರಾರಂಭದಲ್ಲಿ ಮತಪೆಟ್ಟಿಗೆಗಳನ್ನು ತೆರೆದು ಮೊದಲ ಹಂತದ ಒಟ್ಟು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಲಾಗುವುದು. ನಂತರ ನಿಗದಿತ ಕೋಟಾವನ್ನು ಮೊದಲ ಪ್ರಾಶಸ್ತ್ಯದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆ ಮಾಡಿ, ಘೋಷಣೆ

ವಿಧಾನ ಪರಿಷತ್ ಉಪಚುನಾವಣೆ- ಮತ ಎಣಿಕೆ ಕಾರ್ಯ ಆರಂಭ Read More »

ಕರಾವಳಿ, ಕರ್ನಾಟಕ

ವಿವಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕ ಕಡಿತಕ್ಕೆ ಸಂಸದ ಚೌಟ ಮನವಿ – ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡುವಂತೆ ಶಿಕ್ಷಣ ಸಚಿವರಿಗೆ ಪತ್ರ

(ನ್ಯೂಸ್ ಕಡಬ) newskadaba.com ಅ.24. ತುಳು ಭಾಷೆ ಉತ್ತೇಜನ ಹಾಗೂ ಬೆಳವಣಿಗೆಗೆ ಪೂರಕವಾಗಿ ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.   ಈ ಕುರಿತು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿರುವ ಕ್ಯಾ. ಚೌಟ ಅವರು, ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ

ವಿವಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕ ಕಡಿತಕ್ಕೆ ಸಂಸದ ಚೌಟ ಮನವಿ – ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡುವಂತೆ ಶಿಕ್ಷಣ ಸಚಿವರಿಗೆ ಪತ್ರ Read More »

ಕರಾವಳಿ, ಕರ್ನಾಟಕ

ಕಡಬ: ದೀಪಾವಳಿ ಪ್ರಯುಕ್ತ ‘ಎಸ್ಇಎಸ್ ಬರ್ಲಿನ್’ ಮೆನ್ಸ್ ಶೋರೂಂ ನಲ್ಲಿ ಭರ್ಜರಿ ಆಫರ್..!

(ನ್ಯೂಸ್ ಕಡಬ) newskadaba.com ಕಡಬ, ಅ. 24. ಇಲ್ಲಿನ ಸೈಂಟ್ ಜೋಕಿಮ್ಸ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ಎಸ್ಇಎಸ್ ಬರ್ಲಿನ್’ ಮೆನ್ಸ್ ಶೋರೂಂ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ನಡೆಯಲಿದೆ. ಪ್ಯಾಂಟ್ ಶರ್ಟ್ ವಿಥ್ ಸ್ಟಿಚ್ಚಿಂಗ್ ಕೇವಲ 899ರೂ., ಕುರ್ತಾ ಸೆಟ್ ಚಿಕನ್ ವರ್ಕ್ ವಿಥ್ ಸ್ಟಿಚ್ಚಿಂಗ್ ಕೇವಲ 1099 ರೂ., ಸಿಲ್ಕ್ ಮೆಟೀರಿಯಲ್ ಕುರ್ತಾ ಸೆಟ್ ಎಂವಿ ಕೋಟ್ ವಿಥ್ ಸ್ಟಿಚ್ಚಿಂಗ್ ಕೇವಲ 1799ರೂ. ಈ ಆಫರ್ ಇಂದಿನಿಂದ(ಅ.24) ನವೆಂಬರ್ 10ರ

ಕಡಬ: ದೀಪಾವಳಿ ಪ್ರಯುಕ್ತ ‘ಎಸ್ಇಎಸ್ ಬರ್ಲಿನ್’ ಮೆನ್ಸ್ ಶೋರೂಂ ನಲ್ಲಿ ಭರ್ಜರಿ ಆಫರ್..! Read More »

ಕರಾವಳಿ

ತೋಟಕ್ಕೆ ನುಗ್ಗಿದ ಕಾಡಾನೆ- ಸುಳ್ಯದಲ್ಲಿ ಕೃಷಿ ಹಾನಿ

(ನ್ಯೂಸ್ ಕಡಬ) newskadaba.com ಅ.23. ಕಳೆದ ಎರಡು ಮೂರು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳು ಪ್ರತಿನಿತ್ಯ ರಾತ್ರಿ ಸುಳ್ಯದ ಕಾಯರ್ತೋಡಿ ಪರಿಸರದಲ್ಲಿ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ಹಾನಿ ನಡೆಸುತ್ತಿರುವ ಕುರಿತು ವರದಿಯಾಗಿದೆ. ಹಗಲು ಹೊತ್ತಿನಲ್ಲಿ ಸಮೀಪದ ಪೂಮಲೆ ಕಾಡಿನಲ್ಲಿ, ಇರುವ ಅನೆಗಳು ರಾತ್ರಿ ವೇಳೆ ಕೃಷಿಕರ ತೋಟಕ್ಕೆ ಬಂದು ಕೃಷಿ ಹಾನಿ ನಡೆಸುತ್ತಿದೆ. ವಿಜಯ ಪಡ್ಡು ಎಂಬವರ ತೋಟಕ್ಕೆ ನುಗ್ಗಿದ ಆನೆಗಳು 3 ತೆಂಗಿನ ಗಿಡ ಮತ್ತು ಬಾಳೆ ಕೃಷಿ ನಾಶಪಡಿಸಿದೆ. ಈ ಭಾಗದಲ್ಲಿ ಹಳದಿ ರೋಗದಿಂದ

ತೋಟಕ್ಕೆ ನುಗ್ಗಿದ ಕಾಡಾನೆ- ಸುಳ್ಯದಲ್ಲಿ ಕೃಷಿ ಹಾನಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.23. ಕೆಎಸ್‌ಆರ್‌ಟಿಸಿ ವಿಭಾಗದ ನಿರ್ವಾಹಕರಿಗೆ ಈಗಾಗಲೇ 570 ಅಂಡ್ರಾಯಿಡ್ ಮಿಷನ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಮುಂದೆ ಪುತ್ತೂರು ವಿಭಾಗದ ಜಿಲ್ಲೆಯ 5 ತಾಲೂಕು ಹಾಗೂ ಕೊಡಗು ಜಿಲ್ಲೆಯ ಸರ್ಕಾರಿ ಬಸ್ಸು ನಿರ್ವಾಹಕರು ಯುಪಿಐ ಮೂಲಕ ಕ್ಯಾಶ್‌ಲೆಸ್ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಳ್ಳಲಿದ್ದಾರೆ. ಪುತ್ತೂರು ವಿಭಾಗದಲ್ಲಿ 5 ತಾಲೂಕುಗಳಲ್ಲಿ ಒಟ್ಟು ನಾಲ್ಕು ಡಿಪೋ ಹಾಗೂ ಮಡಿಕೇರಿಯ ಒಂದು ಡಿಪೋದಲ್ಲಿ ಈ ಮೆಷಿನ್ ವಿತರಣೆಯಾಗಿದೆ. ಸುಮಾರು 715 ಮಂದಿ ನಿರ್ವಾಹಕರು ಇರುವ ಈ

ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ Read More »

ಕರಾವಳಿ

ಅಪಘಾತದ ಗಾಯಾಳುವನ್ನು ತನ್ನ ಸ್ಕೂಟರ್ ನಲ್ಲೇ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೇದೆ..! ಕಮಿಷನರ್ ಅನುಪಮ್ ಅಗರ್ವಾಲ್ ಶ್ಲಾಘನೆ

(ನ್ಯೂಸ್ ಕಡಬ) newskadaba.com ಅ.23. ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿರುವ ಕುರಿತು ಮಂಗಳೂರಿನಿಂದ ವರದಿಯಾಗಿದೆ. ಬುಧವಾರದಂದು ಮುಂಜಾವ ಸುಮಾರು 3:40ರ ಸುಮಾರಿಗೆ ನಗರದ ಕೆಪಿಟಿ ಬಳಿ ಪಿಕ್ ಅಪ್ ವಾಹನ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕ್ಲೀನರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಕದ್ರಿ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮನ್ಶಿದಾ ಬಾನು ತಕ್ಷಣ

ಅಪಘಾತದ ಗಾಯಾಳುವನ್ನು ತನ್ನ ಸ್ಕೂಟರ್ ನಲ್ಲೇ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೇದೆ..! ಕಮಿಷನರ್ ಅನುಪಮ್ ಅಗರ್ವಾಲ್ ಶ್ಲಾಘನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪುತ್ತೂರು: ವಿಹಿಂಪ ಕಾರ್ಯಾಲಯ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪುತ್ತಿಲ ಬಳಗ-ಸಂಘ ಪರಿವಾರಗಳ ನಡುವೆ ಜಟಾಪಟಿ

(ನ್ಯೂಸ್ ಕಡಬ) newskadaba.com ಅ.23, ಪುತ್ತೂರು: ವಿಶ್ವ ಹಿಂದೂ ಪರಿಷತ್ ನ ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಆಕ್ಷೇಪಿಸಿ ತಡೆದ ಘಟನೆ ಇಂದು ನಡೆದಿದೆ. ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಇಂದು ಶಿಲಾನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಪುತ್ತಿಲ ಪರಿವಾರದ ಹೆಸರಿನಲ್ಲಿ ಪಕ್ಷೇತರನಾಗಿ

ಪುತ್ತೂರು: ವಿಹಿಂಪ ಕಾರ್ಯಾಲಯ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪುತ್ತಿಲ ಬಳಗ-ಸಂಘ ಪರಿವಾರಗಳ ನಡುವೆ ಜಟಾಪಟಿ Read More »

ಕರಾವಳಿ
Scroll to Top