ಕರಾವಳಿ

crime, arrest, suspected

ಆಸ್ಪತ್ರೆಯಿಂದ ಪರಾರಿಯಾದ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಸುಳ್ಯ, ಅ.28. ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಘವನ್ ಕೆದೀಶ್ವರನ್ ಆಲಿಯಾಸ್ ಕೋಳಿ ಕರಣ್ ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ, ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದ ಆರೋಪಿ ರಾಘವನ್ ಕೆದೀಶ್ವರನ್ ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿ ಕರೆ ತಂದ ಸಂದರ್ಭದಲ್ಲಿ ಆತ ಸುಳ್ಯದ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಪೊಲೀಸರು ಆರೋಪಿಯನ್ನು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.    

ಆಸ್ಪತ್ರೆಯಿಂದ ಪರಾರಿಯಾದ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದಲ್ಲಿ ಇಂದು (ಅ.28) ‘ಕ್ಯೂ ಮೊಬೈಲ್ಸ್ ಮತ್ತು ಕ್ಯೂ ಮೆನ್ಸ್ ಹಬ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.28. ಇಲ್ಲಿನ ಮುಖ್ಯ ಪೇಟೆಯ ಸಂಗೀತಾ ಇಲೆಕ್ಟ್ರಾನಿಕ್ ಸಮೀಪದ ಇಂಪಾಲ ಕಾಂಪ್ಲೆಕ್ಸ್ ನಲ್ಲಿ ‘ಕ್ಯೂ ಮೊಬೈಲ್ಸ್ & ಕ್ಯೂ ಮೆನ್ಸ್ ಹಬ್’ ಇಂದು (ಅಕ್ಟೋಬರ್ 28) ಶುಭಾರಂಭಗೊಳ್ಳಲಿದೆ. ನೂತನ ಮೊಬೈಲ್ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಮಾರಾಟ, ರಿಪೇರಿ, ಬಿಡಿಭಾಗಗಳು, ವಾಚ್ ಹಾಗೂ ಪರ್ಫ್ಯೂಮ್ ಗಳು ಲಭ್ಯವಿರಲಿದೆ. ಅದೇ ರೀತಿ ನೂತನ ಕ್ಯೂ ಮೆನ್ಸ್ ಹಬ್ ಮಳಿಗೆಯಲ್ಲಿ ಶರ್ಟ್, ಪ್ಯಾಂಟ್, ಟಿಶರ್ಟ್, ಶೂ ಗಳು ದೊರೆಯಲಿದೆ. ಶುಭಾರಂಭದ ಪ್ರಯುಕ್ತ Buy 2

ಕಡಬದಲ್ಲಿ ಇಂದು (ಅ.28) ‘ಕ್ಯೂ ಮೊಬೈಲ್ಸ್ ಮತ್ತು ಕ್ಯೂ ಮೆನ್ಸ್ ಹಬ್’ ಶುಭಾರಂಭ Read More »

ಕರಾವಳಿ
crime, arrest, suspected

ಪರಾರಿಯಾಗಿದ್ದ ದರೋಡೆ ಪ್ರಕರಣದ ಆರೋಪಿ ಕೊನೆಗೂ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಅ.26. ಕೆಲ ದಿನಗಳ ಹಿಂದೆ ಸರಕಾರಿ ಆಸ್ಪತ್ರೆಯ ಬಳಿ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದ ಕಳ್ಳನೋರ್ವನನ್ನು ಸುಳ್ಯ ಪೊಲೀಸರು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಕಾರ್ತಿಕ್ ಎಂದು ಗುರುತಿಸಲಾಗಿದೆ. ಸಂಪಾಜೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ ಈತ​ನನ್ನು ಪೊಲೀಸರು ತಮಿಳುನಾಡಿನಿಂದ ಸೆರೆಹಿಡಿದು ಸುಳ್ಯಕ್ಕೆ ಕರೆ ತಂದು, ಆತನ ಆರೋಗ್ಯ ತಪಾಸಣೆಗೆಂದು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿ

ಪರಾರಿಯಾಗಿದ್ದ ದರೋಡೆ ಪ್ರಕರಣದ ಆರೋಪಿ ಕೊನೆಗೂ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಭಟ್ಕಳ: ಹಿರಿಯ ಸಾಮಾಜಿಕ ಹೋರಾಟಗಾರ ನಿಧನ

(ನ್ಯೂಸ್ ಕಡಬ) newskadaba.com ಅ.26, ಭಟ್ಕಳ: ಭಟ್ಕಳದ ಹಿರಿಯ ಸಾಮಾಜಿಕ ಹೋರಾಟಗಾರ, ಎಸ್.ಜೆ. ಸೈಯದ್ ಖಾಲಿದ್ ರವರು ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು 28 ವರ್ಷಗಳ ಕಾಲ ಅಬುಧಾಬಿಯಲ್ಲಿ ಉದ್ಯೋಗಿಯಾಗಿದ್ದ ಸೈಯದ್ ಖಾಲಿದ್ ಅಲ್ಲಿ ನವಾಯತ್ ಸಮುದಾಯದ ಮರ್ಕಝಿ ಅನ್ ನವಾಯತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಟ್ಕಳ ಮುಸ್ಲಿಮ್ ಜಮಾಅತೆ ಅಬುಧಾಬಿಯ ಎರಡು ಅವಧಿಯ ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂಜುಮನ್,

ಭಟ್ಕಳ: ಹಿರಿಯ ಸಾಮಾಜಿಕ ಹೋರಾಟಗಾರ ನಿಧನ Read More »

ಕರಾವಳಿ
crime, arrest, suspected

ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿ..! ಬಂಟ್ವಾಳ ಮೂಲದ ಚಾಲಕನ ಬಂಧನ

(ನ್ಯೂಸ್ ಕಡಬ) newskadaba.com ಅ.26. ಕರ್ತವ್ಯನಿರತ ಸಂಚಾರಿ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಕಾರು ಚಲಾಯಿಸಿ, ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕೊಡಗು ಪೊಲೀಸರು ಬಂಟ್ವಾಳ ಮೂಲದ ಚಾಲಕನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ತಾಲ್ಲೂಕಿನ ಮುನ್ನೂರು ಗ್ರಾಮದ ನಂದವಾರಕೋಟೆ ನಿವಾಸಿ ನಝೀರ್‌ (27) ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭ ಆತ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದ ಬಳಿ ಅ.20 ರಂದು ಎರಡು ವಾಹನಗಳ ನಡುವೆ ಢಿಕ್ಕಿಯಾಗಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ

ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿ..! ಬಂಟ್ವಾಳ ಮೂಲದ ಚಾಲಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಈಜಲು ಹೋದ ಇಬ್ಬರು ಸಮುದ್ರಪಾಲು

(ನ್ಯೂಸ್ ಕಡಬ) newskadaba.com ಅ.26, ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಅ.26 ರಂದು ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ. ಕುಂದಾಪುರ ಮೂಲದ ಅಜಯ್ ಮೃತಪಟ್ಟಿದ್ದು, ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರುಪಾಲಾದ ಮತ್ತೊಬ್ಬ ಯುವಕನಾಗಿದ್ದು, ಈತನಿಗಾಗಿ ಹುಡುಕಾಟ ಮುಂದುವರೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ. ಕುಂದಾಪುರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಜಲು ಹೋದ ಇಬ್ಬರು ಸಮುದ್ರಪಾಲು Read More »

ಕರಾವಳಿ

8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ‘ಕ್ಯಾಪ್ಟನ್’ ಶ್ವಾನಗೆ ನಿವೃತ್ತಿ ಸನ್ಮಾನ

(ನ್ಯೂಸ್ ಕಡಬ) newskadaba.com ಉಡುಪಿ, ಅ.26. ಎಂಟು ವರ್ಷಗಳ ಕಾಲ ನಿಷ್ಠಾವಂತ ಸೇವೆ ಸಲ್ಲಿಸಿದ ಪೊಲೀಸ್ ಶ್ವಾನ ‘ಕ್ಯಾಪ್ಟನ್’ ತನ್ನ ಸೇವೆಯಿಂದ ಅ.25ರಂದು ನಿವೃತ್ತಿ ಹೊಂದಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್‌ಗೆ ಪೊಲೀಸ್ ಅಧೀಕ್ಷಕರು ನಿವೃತ್ತಿ ಸನ್ಮಾನ ಮಾಡಿದರು. ಮಾನ್ಯ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಐಪಿಎಲ್ ಟೂರ್ನಿ, ವಿಶ್ವಕಪ್, ಏರ್ ಶೋ, ಬೇರೆ ದೇಶಗಳ ಗೌರವಾನ್ವಿತ ಪ್ರಧಾನಿಗಳು ಹೀಗೆ ರಾಜ್ಯ ಹೊರರಾಜ್ಯ ಹೊರ ಜಿಲ್ಲೆಗಳಲ್ಲಿ ಸರಿ ಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣಾ

8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ‘ಕ್ಯಾಪ್ಟನ್’ ಶ್ವಾನಗೆ ನಿವೃತ್ತಿ ಸನ್ಮಾನ Read More »

ಕರಾವಳಿ

ನಿಯಮ ಉಲ್ಲಂಘನೆ – 2 ಬಾರ್ ಗಳ ಲೈಸೆನ್ಸ್ ರದ್ದುಪಡಿಸುವಂತೆ ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಅ.26. ನಿಯಮ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಪರವಾನಿಗೆಯನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ನಗರಸಭೆ ಪೌರಾಯುಕ್ತರಿಗೆ ಸೂಚಿಸಿರುವ ಕುರಿತು ಮಣಿಪಾಲದಿಂದ ವರದಿಯಾಗಿದೆ. ಮೂಲಗಳ ಪ್ರಕಾರ, ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ ಬಾರ್ ಹಾಗೂ ಪರ್ಕಳ ರಸ್ತೆಯಲ್ಲಿರುವ ಪಬ್ ಪರವಾನಿಗೆ ರದ್ದತಿಗೆ ಡಿಸಿ ಸೂಚನೆ ನೀಡಿದ್ದಾರೆ. ಈ ಎರಡೂ ಬಾರ್ ಅಲ್ಲದೇ ಇನ್ನೂ ಹಲವು ಬಾರ್‌ಗಳಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಪಬ್‌ಗಳನ್ನು ತೆರೆದಿಡುತ್ತಿರುವುದು, ಅಲ್ಲದೇ ಪಬ್‌ನಲ್ಲಿ ಪಾರ್ಟಿ, ಫ್ಯಾಶನ್

ನಿಯಮ ಉಲ್ಲಂಘನೆ – 2 ಬಾರ್ ಗಳ ಲೈಸೆನ್ಸ್ ರದ್ದುಪಡಿಸುವಂತೆ ಡಿಸಿ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಗೂಡ್ಸ್ ವಾಹನ ಡಿಕ್ಕಿ- ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಅ.26. ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಅಜೆಕಾರು ಸಮೀಪದ ಗುಡ್ಡೆಯಂಗಡಿ ಬಳಿಯ ಓಟೆಹಳ್ಳ ಸೇತುವೆಯ ಬಳಿ ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಆಸೈ ತಂಬಿ(21) ಎಂದು ಗುರುತಿಸಲಾಗಿದೆ. ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತಿವೇಗವಾಗಿ ಹೋಗುತ್ತಿದ್ದ ಕೊರಿಯರ್ ಕಂಪೆನಿಯ ಗೂಡ್ಸ್ ವಾಹನವೊಂದು ರಸ್ತೆ ಬಲಭಾಗಕ್ಕೆ ಬಂದು ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಈ ದುರ್ಘಟನೆ

ಗೂಡ್ಸ್ ವಾಹನ ಡಿಕ್ಕಿ- ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top