ಕರಾವಳಿ

ವರ್ಷದ ಮೊದಲ ಸೂರ್ಯ ಗ್ರಹಣ ನಾಳೆ

(ನ್ಯೂಸ್ ಕಡಬ) newskadaba.com , ಮಾ.28: ಈ ವರ್ಷದ ಮೊದಲ ಸೂರ್ಯ ಗ್ರಹಣವು ನಾಳೆ ಸಂಭವಿಸಲಿದ್ದು, ಇದು ಭಾಗಶಃ ಸೂರ್ಯ ಗ್ರಹಣ ಎನ್ನಲಾಗಿದೆ. ಸಮಯದ ವ್ಯತ್ಯಾಸ ಇರುವ ಕಾರಣ ಈ ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರಿಸುವುದಿಲ್ಲ.ಆಫ್ರಿಕಾ, ಅಮೇರಿಕಾ, ಏಷ್ಯಾದ ಕೆಲ ಭಾಗಗಳು, ಯುರೋಪ್ ನಲ್ಲಿ ಈ ವಿದ್ಯಮಾನವನ್ನು ಕಾಣಬಹುದಾಗಿದೆ ಎಂದು ನಾಸಾ ತಿಳಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.20ಕ್ಕೆ ಆರಂಭವಾಗುವ ಗ್ರಹಣ ಸಂಜೆ 6.13ಕ್ಕೆ ಮುಕ್ತಾಯಗೊಳ್ಳಲಿದೆ.

ವರ್ಷದ ಮೊದಲ ಸೂರ್ಯ ಗ್ರಹಣ ನಾಳೆ Read More »

ಕರಾವಳಿ

ಇಂದು ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

(ನ್ಯೂಸ್ ಕಡಬ) newskadaba.com, ಮಾ. 25: ಮಾ.25ರ ಮಂಗಳವಾರ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ ಮತ್ತು ಮೈಸೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ/ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ

ಇಂದು ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ Read More »

ಕರಾವಳಿ, ಕರ್ನಾಟಕ

ಉಡುಪಿ: ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

(ನ್ಯೂಸ್ ಕಡಬ) newskadaba.com, ಮಾ. 25: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ನನ್ನು ಮಣಿಪಾಲ ಪೊಲೀಸರು ಸೋಮವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಲಯ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಬೆಂಗಳೂರಿನ ನೆಲಮಂಗಲದ ಪೊಲೀಸರಿಂದ ಮಣಿಪಾಲದಲ್ಲಿ ತಪ್ಪಿಸಿ ಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕಿಗೆ ಗುದ್ದಿ ಪರಾರಿಯಾಗಿದ್ದ ಇಸಾಕ್‌ನನ್ನು ಮಣಿಪಾಲ ಪೊಲೀಸರು ಮಾ.12ರಂದು ಹಾಸನದಲ್ಲಿ ಬಂಧಿಸಿದ್ದರು. ಅಲ್ಲಿಂದ ಆತನನ್ನು ಕರೆ ತರುವಾಗ ದಾರಿ ಮಧ್ಯೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ

ಉಡುಪಿ: ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ Read More »

ಕರಾವಳಿ

ಉಡುಪಿ: ಮಲ್ಪೆ ಹಲ್ಲೆ ಕೇಸ್; ದೌರ್ಜನ್ಯ ಪ್ರಕರಣ ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿ

(ನ್ಯೂಸ್ ಕಡಬ) newskadaba.com, ಮಾ. 24: ಮಲ್ಪೆ ಹಲ್ಲೆ ಪ್ರಕರಣದ ಸಂತ್ರಸ್ತೆ ಮತ್ತು ಅವರ ಸಮುದಾಯದ ಸದಸ್ಯರು ಇಂದು ಮಣಿಪಾಲದ ಡಿಸಿ ಕಚೇರಿಯಲ್ಲಿ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಪೆ ಹಲ್ಲೆ ಪ್ರಕರಣದ ಸಂತ್ರಸ್ತೆ ಲಕ್ಕಿಬಾಯಿ, “ಘಟನೆ ನಡೆದ ದಿನ ನಾವು ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಂಡೆವು. ಮರುದಿನ ಅವರು ನನ್ನನ್ನು ಕರೆದರು. ಆದರೆ ನನ್ನ ಜನರು ಕಾರ್ಯನಿರತರಾಗಿದ್ದರಿಂದ ನಾನು ಹೋಗಲಿಲ್ಲ. ನಂತರ, ಅವರು ಆಟೋರಿಕ್ಷಾದಲ್ಲಿ ಬಂದು ನನ್ನನ್ನು ಕರೆದುಕೊಂಡು

ಉಡುಪಿ: ಮಲ್ಪೆ ಹಲ್ಲೆ ಕೇಸ್; ದೌರ್ಜನ್ಯ ಪ್ರಕರಣ ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿ Read More »

ಕರಾವಳಿ

ಬಂಟ್ವಾಳ: ಒಂದೇ ಟಯರ್‌ನಲ್ಲಿ ಬಸ್ ಸಂಚಾರ; ಸಾರ್ವಜನಿಕರ ಆಕ್ರೋಶ

(ನ್ಯೂಸ್ ಕಡಬ) newskadaba.com, ಮಾ. 24: ವಿಟ್ಲ ಮತ್ತು ಮುಡಿಪು ನಡುವೆ ಸತತ ಎರಡು ದಿನಗಳಿಂದ ಒಂದೇ ಹಿಂಬದಿಯ ಟೈರ್‌ನೊಂದಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಿಟ್ಲ, ಮುಡಿಪು ಮತ್ತು ಮಂಗಳೂರು ನಡುವೆ ಸಂಚರಿಸುವ ‘ಸಾರಾ’ ಎಂಬ ಖಾಸಗಿ ಬಸ್ಸಿನ ಬಸ್ಸಿನ ಹಿಂದಿನ ಎಡಭಾಗದಲ್ಲಿ ಒಂದೇ ಚಕ್ರದಲ್ಲಿ ಸಂಚರಿಸುತ್ತಿತ್ತು. ಇನ್ನೊಂದು ಟಯರ್ ಒಡೆದು ವಿಚಿತ್ರ ಶಬ್ದ ಬರುತ್ತಿದ್ದರೂ ಚಾಲಕ, ನಿರ್ವಾಹಕ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಶನಿವಾರ ಮಧ್ಯಾಹ್ನದಿಂದ ರವಿವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು

ಬಂಟ್ವಾಳ: ಒಂದೇ ಟಯರ್‌ನಲ್ಲಿ ಬಸ್ ಸಂಚಾರ; ಸಾರ್ವಜನಿಕರ ಆಕ್ರೋಶ Read More »

ಕರಾವಳಿ

ಮುಂಬೈನಿಂದ ಮಂಗಳೂರಿಗೆ ವಂದೇ ಭಾರತ್ ರೈಲು ಸೇವೆ: ಎರಡು ಮಾರ್ಗಗಳ ವಿಲೀನಕ್ಕೆ ರೈಲ್ವೆ ಚಿಂತನೆ

(ನ್ಯೂಸ್ ಕಡಬ) newskadaba.com, ಮಾ. 24: ಭಾರತೀಯ ರೈಲ್ವೆ ಪ್ರಸ್ತುತ ಮುಂಬೈ-ಗೋವಾ ಮತ್ತು ಮಂಗಳೂರು-ಗೋವಾ ಮಾರ್ಗಗಳನ್ನು ಸಂಯೋಜಿಸುವ ಮೂಲಕ ಮುಂಬೈನಿಂದ ಮಂಗಳೂರಿಗೆ ವಂದೇ ಭಾರತ್ ರೈಲು ಸೇವೆಯನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಪ್ರಸ್ತುತ, ಎರಡೂ ರೈಲುಗಳು ಸರಾಸರಿ 70 ಪ್ರತಿಶತದಷ್ಟು ಪ್ರಯಾಣಿಕರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ಸೇವೆಯು ದಕ್ಷತೆಯನ್ನು ಸುಧಾರಿಸುವ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಪ್ರಯಾಣಿಕರು ಮುಂಬೈನಿಂದ ಮಂಗಳೂರಿಗೆ ಸುಮಾರು 12 ಗಂಟೆಗಳಲ್ಲಿ ತಲುಪಬಹುದು. ಮಂಗಳೂರು-ಗೋವಾ ವಂದೇ ಭಾರತ್ ಮಾರ್ಗವು ಅತಿ ಕಡಿಮೆ

ಮುಂಬೈನಿಂದ ಮಂಗಳೂರಿಗೆ ವಂದೇ ಭಾರತ್ ರೈಲು ಸೇವೆ: ಎರಡು ಮಾರ್ಗಗಳ ವಿಲೀನಕ್ಕೆ ರೈಲ್ವೆ ಚಿಂತನೆ Read More »

ಕರಾವಳಿ

ಉಪ್ಪಿನಂಗಡಿ: SYS ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಮೀಟ್ “ಇಫ್ತಾರ್ ಕೂಟ ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದೆ”- ಅಬ್ದುಲ್ ಮಜೀದ್ ಸಖಾಫಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 22. ಸುನ್ನೀ ಯುವಜನ ಸಂಘ SYS ತೆಕ್ಕಾರು ವತಿಯಿಂದ ಬೃಹತ್ ಇಫ್ತಾರ್ ಮೀಟ್ ಇಂದು ತೆಕ್ಕಾರು ಮಸೀದಿ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.   ಓರ್ವ ಉಪವಾಸಿಗನಿಗೆ ಇಫ್ತಾರ್ ಕೂಟ ಏರ್ಪಡಿಸುವುದು ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ SYSನ ಈ ಕಾರ್ಯ ಮಹತ್ವದ್ದಾಗಿದೆ ಎಂದು ತೆಕ್ಕಾರು ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ಸಖಾಫಿ ಇಫ್ತಾರ್ ಕೂಟಕ್ಕೆ ನೇತೃತ್ವ ನೀಡಿ ಶುಭ ಹಾರೈಸಿದರು. ನೂರಾರು ಮುಸ್ಲಿಂ ಭಾಂದವರು ಪವಿತ್ರ

ಉಪ್ಪಿನಂಗಡಿ: SYS ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಮೀಟ್ “ಇಫ್ತಾರ್ ಕೂಟ ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದೆ”- ಅಬ್ದುಲ್ ಮಜೀದ್ ಸಖಾಫಿ Read More »

ಕರಾವಳಿ

ಸುಳ್ಯ : ರೇಬಿಸ್ ರೋಗಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಮಾ. 22: ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದ ಮಹಿಳೆ ಮೃತಪಟ್ಟ ಘಟನೆ ಸುಳ್ಯದ ಸಂಪಾಜೆಯಲ್ಲಿ ಸಂಭವಿಸಿದೆ. ಸಂಪಾಜೆಯ ಕಲ್ಲುಗುಂಡಿ ಸಮೀಪದ 42 ವರ್ಷದ ಮಹಿಳೆ ಫೆ.7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದಾಗ ಅವರಿಗೆ ನಾಯಿಮರಿಯೊಂದು ಕಚ್ಚಿತ್ತು. ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ. ಸೋಮವಾರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ

ಸುಳ್ಯ : ರೇಬಿಸ್ ರೋಗಕ್ಕೆ ಮಹಿಳೆ ಬಲಿ Read More »

ಕರಾವಳಿ

ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

(ನ್ಯೂಸ್ ಕಡಬ) newskadaba.com ಮಾ. 22:  ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಂದ್ ಯಾವುದೇ ಪರಿಣಾಮವನ್ನು ಬೀರದೇ ಎಂದಿನಂತೆ ಜನಜೀವನ ಯಾವುದೇ ಅಡಚಣೆಯಿಲ್ಲದೆ ಮುಂದುವರೆಯಿತು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಿದವು. ಆಟೋರಿಕ್ಷಾಗಳು ಮತ್ತು ಕ್ಯಾಬ್‌ಗಳು ಸೇವೆಯಲ್ಲಿವೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಯಾವುದೇ ಅಂಗಡಿಗಳು, ಸಂಸ್ಥೆಗಳು ಮುಚ್ಚಿರುವ ಬಗ್ಗೆ ವರದಿಯಾಗಿಲ್ಲ.

ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ Read More »

ಕರಾವಳಿ

ಸುಳ್ಯ: ಬಸ್‌ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ

(ನ್ಯೂಸ್ ಕಡಬ) newskadaba.com ಮಾ. 22: ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಸ್ಫೋಟಗೊಂಡು ಟಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಬಾಕಿಯಾದ ಘಟನೆ ಅರಂಬೂರು ಬಳಿ ಮಾ.21ರಂದು ನಡೆದಿದೆ. ಕೊಯನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಅರಂಬೂರು ಬಳಿ ಬರುತ್ತಿದ್ದಂತೆ ಬಸ್‌ನ ಟಯರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ಈ ಬಸ್‌ನಲ್ಲಿ ಪ್ರಯಾಣಿಕರಲ್ಲದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಸುಳ್ಯಕ್ಕೆ ಬರುತ್ತಿದ್ದರು. ಬಸ್ ಕೈಕೊಟ್ಟ ನಂತರ ವಿದ್ಯಾರ್ಥಿಗಳು ರಿಕ್ಷಾ, ಬೈಕ್ ಹಾಗೂ ಜೀಪ್‌ಗಳಲ್ಲಿ ತೆರಳಿದರೆಂದು ತಿಳಿದುಬಂದಿದೆ.

ಸುಳ್ಯ: ಬಸ್‌ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ Read More »

ಕರಾವಳಿ
Scroll to Top