ಕರಾವಳಿ

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡಿಪಾರಿಗೆ ನೋಟಿಸ್

(ನ್ಯೂಸ್ ಕಡಬ) newskadaba.com ಕಡಬ, ಜೂ.02:   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಇದೀಗ ಪೊಲೀಸರು ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಕಠಿಣ ಕ್ರಮದ ಭಾಗವಾಗಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ಜಾರಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ನೋಟಿಸ್​​ನಲ್ಲಿ […]

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡಿಪಾರಿಗೆ ನೋಟಿಸ್ Read More »

ಕರಾವಳಿ, ಕರ್ನಾಟಕ

ಬಂಟ್ವಾಳ:ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಜೂ.02: ಸುಹಾಸ್ ಶೆಟ್ಟಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ  ಭಾಷಣ ಮಾಡಿದ್ದಾರೆ ಎಂದು ಆರೋಪಿ ಆ‌ರ್.ಎಸ್.ಎಸ್. ಮುಖಂಡ ಡಾ.ಪ್ರಭಾಕರ ಭಟ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡುವ ವೇಳೆ, ಸಮಾಜದ ಸ್ವಾಸ್ತ್ರ ಕೆಡುವಂತೆ, ಮತಿಯ ಗುಂಪುಗಳ ನಡುವೆ ವೈಮನಸ್ಸುಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಹೇಳಿಕೆಯನ್ನು ನೀಡಿರುತ್ತಾರೆ.

ಬಂಟ್ವಾಳ:ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದ.ಕ. ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ವಿರುದ್ಧ ಜಂಟಿ ಕಾರ್ಯಾಚರಣೆ : ಸುಧೀರ್ ರೆಡ್ಡಿ

(ನ್ಯೂಸ್ ಕಡಬ) newskadaba.com ಕಡಬ, ಮೇ. 31. ಮಂಗಳೂರು : ದ.ಕ. ಜಿಲ್ಲೆಯ ನಗರ ಆಗಿರಲಿ, ಗ್ರಾಮಾಂತರ ಆಗಿರಲಿ ಎಲ್ಲೇ ಯಾವುದೇ ರೀತಿಯ ಅಪರಾಧ ಕೃತ್ಯ ನಡೆದಾಗ ಅಥವಾ ಅಕ್ರಮ ಚಟುವಟಿಕೆಗಳು ನಡೆದಾಗ ಅದನ್ನು ಜಂಟಿ ಕಾರ್ಯಾಚರಣೆಯ ಮೂಲಕ ನಿಭಾಯಿಸಲಿದ್ದೇವೆ ಎಂದು ಮಂಗಳೂರಿನ ನೂತನ ಕಮಿಷನ‌ರ್ ಸುಧೀರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿಚಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರಿಮಿನಲ್‌ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ

ದ.ಕ. ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ವಿರುದ್ಧ ಜಂಟಿ ಕಾರ್ಯಾಚರಣೆ : ಸುಧೀರ್ ರೆಡ್ಡಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್; ಮತ್ತೆ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 31. ಮೇ 27ರಂದು ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಶುಕ್ರವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳದ ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ (27) ಹಾಗೂ ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ರವಿರಾಜ್

ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್; ಮತ್ತೆ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಯುವಕನ ಕೊಲೆ- ಸರಕಾರದ ವೈಫಲ್ಯ ಆರೋಪ ಕಡಬ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 28. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಲ್ತಮಜಲು ಎಂಬಲ್ಲಿ ಅಮಾಯಕ ಯುವಕ ಅಬ್ದುಲ್ ರಹೀಂ ಎಂಬಾತನ ಹತ್ಯೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿಯಾಬುದ್ದೀನ್ ಸುಂಕದಕಟ್ಟೆ ಅವರು ಬುಧವಾರದಂದು ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಸರಕಾರದ ಆಡಳಿತ ವ್ಯವಸ್ಥೆಯಿಂದ ತಾನು ಬೇಸೆತ್ತಿದ್ದು, ಜನರಲ್ಲಿ ಕಾನೂನಿನ ಮೇಲಿನ ನಂಬಿಕೆ ಕಡಿಮೆಯಾಗಿದೆ. ಈ ಘಟನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರವಾಗಿದೆ ಎಂದು ಅವರು

ಕರಾವಳಿಯಲ್ಲಿ ಯುವಕನ ಕೊಲೆ- ಸರಕಾರದ ವೈಫಲ್ಯ ಆರೋಪ ಕಡಬ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೀನಾಮೆ Read More »

ಕರಾವಳಿ, ಕರ್ನಾಟಕ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವಾಂತರ – ಕೃತಕ ಹೊಳೆ ಸೃಷ್ಟಿ

(ನ್ಯೂಸ್ ಕಡಬ) newskadaba.com, ಮೇ.27. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಆಂಧ್ರಪ್ರದೇಶದ ಕೆಎನ್‌ಆರ್ ಕಂಪೆನಿಯ ಬೇಜವಾಬ್ದಾರಿತನದ ಕೆಲಸಗಳಿಂದ ಮಾಣಿ ಸೂರಿಕುಮೇರು ಮಧ್ಯೆ ಹಲವಾರು ಅವಾಂತರಗಳು ಸೃಷ್ಠಿಯಾಗಿದೆ. ರಾಜ್ ಕಮಲ್ ಹಾಲ್ ಬಳಿ ಮತ್ತು ಟಿಕ್ಕಾ ಪಾಯಿಂಟ್ ಹೋಟೆಲ್ ಸಮೀಪ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯದೇ ಇರುವುದರಿಂದ ಮಳೆಯ ನೀರೆಲ್ಲಾ ರಸ್ತೆಯಲ್ಲೇ ತುಂಬಿ ಕೃತಕ ಹೊಳೆ ನಿರ್ಮಾಣವಾಗಿ ವಾಹನ ಸಂಚಾರ ಸುಗಮವಾಗುತ್ತಿಲ್ಲ, ಅದೇ ರೀತಿ ಹಳೀರ ಮಾನಸ ತೆಂಗಿನ ಎಣ್ಣೆಯ ಮಿಲ್ ಸಮೀಪ ಎತ್ತರದಲ್ಲಿ ಇರುವ ಮೂರು

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವಾಂತರ – ಕೃತಕ ಹೊಳೆ ಸೃಷ್ಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ: ವ್ಯಾಪಕ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ

(ನ್ಯೂಸ್ ಕಡಬ) newskadaba.com , ಮೇ.26. ಮಂಗಳೂರು: ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನ ಘಟ್ಟ ಮುಳುಗಡೆಯಾಗಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು ಭಕ್ತಾಧಿಗಳಿಗೆ ಸ್ನಾನಘಟ್ಟದ ಬಳಿ ಇಳಿಯದಂತೆ ಸೂಚಿಸಲಾಗಿದ್ದು, ಭಕ್ತಾಧಿಗಳು ಕೇವಲ ನದಿ ನೀರನ್ನು ತಲೆಗೆ ಚಿಮುಕಿಸಲು ಮಾತ್ರ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ನಾನಘಟ್ಟದ ಸುತ್ತ ಹಗ್ಗವನ್ನು ಕಟ್ಟಿ ಹೆಚ್ಚುವರಿ ದೇವಸ್ಥಾನದ ಸಿಬ್ಬಂದಿಗಳನ್ನು ನೇಮಕ ಮಾಡಿದೆ. ಪ್ರಕೃತಿ ವಿಕೋಪ ತಡೆ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯರು

ಕುಕ್ಕೆ ಸುಬ್ರಹ್ಮಣ್ಯ: ವ್ಯಾಪಕ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ Read More »

ಕರಾವಳಿ, ಕರ್ನಾಟಕ

ಕುಂಬಳೆ: ಹಾರ್ಡ್ ವೇರ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ-ಅಪಾರ ಹಾನಿ

(ನ್ಯೂಸ್ ಕಡಬ) newskadaba.com , ಮೇ.17: ಕಾಸರಗೋಡು: ಹಾರ್ಡ್‌ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿ ಮುಖಾರಿಗದ್ದೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಬದಿಯಡ್ಕ ನಿವಾಸಿ ಹರ್ಷಾದ್ ಎಂಬವರ ಮಾಲಕತ್ವದ ಅರ್ಶ್ ಎಂಟರ್ ಪ್ರೈಸಸ್‌ ನ ಗೋದಾಮಿನಲ್ಲಿ ಈ ದುರಂತ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ. ಘಟನೆಯಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು, ಕಾಸರಗೋಡು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಕುಂಬಳೆ: ಹಾರ್ಡ್ ವೇರ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ-ಅಪಾರ ಹಾನಿ Read More »

ಕರಾವಳಿ

ಕುಂಬಳೆ: ಹಾರ್ಡ್ ವೇರ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ-ಅಪಾರ ಹಾನಿ

(ನ್ಯೂಸ್ ಕಡಬ) newskadaba.com , ಮೇ.17: ಕಾಸರಗೋಡು: ಹಾರ್ಡ್‌ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿ ಮುಖಾರಿಗದ್ದೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಬದಿಯಡ್ಕ ನಿವಾಸಿ ಹರ್ಷಾದ್ ಎಂಬವರ ಮಾಲಕತ್ವದ ಅರ್ಶ್ ಎಂಟರ್ ಪ್ರೈಸಸ್‌ ನ ಗೋದಾಮಿನಲ್ಲಿ ಈ ದುರಂತ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ. ಘಟನೆಯಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು, ಕಾಸರಗೋಡು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಕುಂಬಳೆ: ಹಾರ್ಡ್ ವೇರ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ-ಅಪಾರ ಹಾನಿ Read More »

ಕರಾವಳಿ

ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ

(ನ್ಯೂಸ್ ಕಡಬ) newskadaba.com , ಮೇ.17: ದ.ಕ ಸುಳ್ಯ ಕೋರಂಬಡ್ಕದಲ್ಲಿ ನಡೆದ ಕೊರಗಜ್ಜನ ಹರಕೆ ನೇಮೋತ್ಸವದಲ್ಲಿBJP ರಾಜ್ಯಾಧ್ಯಕ್ಷ BYವಿಜಯೇಂದ್ರ ಭಾಗಿಯಾದರು. ಸುಳ್ಯ ಜಯನಗರದ ಶ್ರೀನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಗುಳಿಗ ದೈವ &ಕೊರಗಜ್ಜ ದೈವಸ್ಥಾನದಲ್ಲಿ ಶ್ರೀಕೊರಗಜ್ಜ ದೈವದ ನೇಮ& ಪರಿವಾರ ದೈವಗಳ ತಂಬಿಲ ಸೇವೆ ನಡೆಯಿತು. ಮೂರನೇ ಬಾರಿ ಮೋದಿ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ BJP ಜಯನಗರ ಬೂತ್ ಸಮಿತಿ ಹರಕೆ ಹೇಳಿತ್ತು. ಇದೀಗ BJP ವತಿಯಿಂದ ಹರಕೆ ನೇಮೋತ್ಸವ ನಡೆದಿದ್ದು, ವಿಜಯೇಂದ್ರಗೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಸಂಸದ

ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ Read More »

ಕರಾವಳಿ, ಕರ್ನಾಟಕ
Scroll to Top