ಕರಾವಳಿ

ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮ ಅಗತ್ಯ

(ನ್ಯೂಸ್ ಕಡಬ) newskadaba.com ಜೂ. 13. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಗುರುವಾರದಂದು ನಗರದ ಪುರಭವನ ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.   ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಮಾತನಾಡಿ, […]

ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮ ಅಗತ್ಯ Read More »

ಕರಾವಳಿ

ರಾಜ್ಯ ಸರಕಾರದ 2 ವರ್ಷಗಳ ಸಂಭ್ರಮ: ಮಾಹಿತಿ ಪ್ರದರ್ಶನ

(ನ್ಯೂಸ್ ಕಡಬ) newskadaba.com ಜೂ. 13. ಕರ್ನಾಟಕ ಸರಕಾರ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನಾ ಸಂಭ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತ ಮಾಹಿತಿ ಪ್ರದರ್ಶನಕ್ಕೆ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಅವರು ಗುರುವಾರ ಚಾಲನೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿ ಜನರ ಗಮನ ಸೆಳೆಯುವಂತೆ ಮಾಡುತ್ತಿದ್ದು, ಈ ಯೋಜನೆಗಳು ಜನರ

ರಾಜ್ಯ ಸರಕಾರದ 2 ವರ್ಷಗಳ ಸಂಭ್ರಮ: ಮಾಹಿತಿ ಪ್ರದರ್ಶನ Read More »

ಕರಾವಳಿ, ಕರ್ನಾಟಕ

ಅತಿಯಾದ ವೇಗ- ರಸ್ತೆ ಬದಿಯ ಹೊಂಡಕ್ಕೆ ವಾಲಿನಿಂತ ಕೆಎಸ್ಸಾರ್ಟಿಸಿ ಬಸ್..!

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 13. ಪುತ್ತೂರಿನಿಂದ ಉಪ್ಪಳ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಚಾಲಕನ ಅತಿಯಾದ ವೇಗದಿಂದ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ಮಾರ್ಗ ಬಿಟ್ಟು ಹೊಂಡಕ್ಕೆ ವಾಲಿನಿಂತ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಿತ್ಯವೂ ಹೀಗೆ ಬಸ್ ಚಾಲಕರ ಅತಿಯಾದ ವೇಗದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು ಭಯಭೀತರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅತಿಯಾದ ವೇಗ- ರಸ್ತೆ ಬದಿಯ ಹೊಂಡಕ್ಕೆ ವಾಲಿನಿಂತ ಕೆಎಸ್ಸಾರ್ಟಿಸಿ ಬಸ್..! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹೆತ್ತವರಿಲ್ಲದೇ ಪೋಷಕರ ಆಸರೆಯಲ್ಲಿ ಬೆಳೆದು ಅಗ್ನಿವೀರನಾಗಿ ಆಯ್ಕೆಗೊಂಡ ಕಡಬದ ಯುವಕ..!

(ನ್ಯೂಸ್ ಕಡಬ) newskadaba.com ಕಡಬ, ಜೂ. 13. ಸಣ್ಣ ಪ್ರಾಯದಲ್ಲೇ ಹೆತ್ತವರನ್ನು ಕಳೆದುಕೊಂಡರೂ ಸಾಕು ತಂದೆ-ತಾಯಿಯ ಆಸರೆಯಲ್ಲಿ ಬೆಳೆದು ಬಂದ ಯುವಕನೋರ್ವನಿಗೆ ತನ್ನ ಸಾಧನೆಯ ಮೂಲಕ ದೇಶಸೇವೆಗೆ ಆವಕಾಶ ಒದಗಿ ಬಂದಿದ್ದು, ಇಡೀ ಊರೇ ಹೆಮ್ಮೆ ಪಡುವಂತಾಗಿದೆ. 21ರ ಹರೆಯದ ಯುವಕ ಕಡಬದ ಐತ್ತೂರು ಗ್ರಾಮದ ಮಾಲ ನಿವಾಸಿ ಪುನೀತ್‌ರಾಜ್ ಇಂತಹ ಸಾಧನೆಯ ಶಿಖರವನ್ನೇರಿದ ಪ್ರತಿಭೆ. 2024ರ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದ ಅಗ್ನಿವೀರ ನೇಮಕಾತಿ ಶಿಬಿರದಲ್ಲಿ ಸುಮಾರು 25,೦೦೦ ಅಭ್ಯರ್ಥಿಗಳು ಭಾಗವಹಿಸಿ ಈ

ಹೆತ್ತವರಿಲ್ಲದೇ ಪೋಷಕರ ಆಸರೆಯಲ್ಲಿ ಬೆಳೆದು ಅಗ್ನಿವೀರನಾಗಿ ಆಯ್ಕೆಗೊಂಡ ಕಡಬದ ಯುವಕ..! Read More »

ಕರಾವಳಿ, ವಿಶೇಷ ಲೇಖನಗಳು

12ನೇ ಮಹಡಿಯ ಬಾಲ್ಕನಿಯಿಂದ ಬಿದ್ದು 15ರ ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಜೂ. 13. ವಸತಿ ಸಮುಚ್ಚಯದ 12ನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು 15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹ್ಮದ್ ಮತ್ತು ಖಮರ್ಜಹಾ ಬಾನು ಎಂಬವರ ಪುತ್ರಿ ಹಿಬಾ ಐಮನ್(15) ಎಂದು ಗುರುತಿಸಲಾಗಿದೆ. ಹಿಬಾ ಐಮನ್ ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ

12ನೇ ಮಹಡಿಯ ಬಾಲ್ಕನಿಯಿಂದ ಬಿದ್ದು 15ರ ಬಾಲಕಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಅಕ್ರಮ ಮರಳು ಸಾಗಾಟ- ಪಿಕಪ್ ಸಹಿತ ಚಾಲಕ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಿಕಪ್‌ ಸಹಿತ ಚಾಲಕನನ್ನು ಕಂಕನಾಡಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ಮಹಮ್ಮದ್‌ ನಿಜಾಂ ಎಂದು ಗುರುತಿಸಲಾಗಿದೆ. ಪಡೀಲ್ ಜಂಕ್ಷನ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಕಣ್ಣೂರು ಕಡೆಯಿಂದ ಬಂದ ವಾಹನವನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದಾಗ ಪಿಕಪ್‌ನಲ್ಲಿ ಮರಳು ಕಂಡು ಬಂದಿದ್ದು, ಈತನಲ್ಲಿ ಯಾವುದೇ ಪರವಾನಿಗೆ ಇರಲಿಲ್ಲ. ಈ ಸಂಬಂಧ ಪಿಕಪ್‌ ವಾಹನ ಮತ್ತು

ಅಕ್ರಮ ಮರಳು ಸಾಗಾಟ- ಪಿಕಪ್ ಸಹಿತ ಚಾಲಕ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕೋಮು ಸಂಘರ್ಷ ತಡೆಯುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್(ಎಸ್ಎಎಫ್) ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಕರಾವಳಿಯಲ್ಲಿ ನಡೆಯುವ ಕೋಮು ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾದ ವಿಶೇಷ ಕಾರ್ಯ ಪಡೆಯನ್ನು (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ಇಂದು (ಜೂ.13) ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ಈ ವೇಳೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ‌ಪರಿಷತ್ ಸದಸ್ಯರಾದ ‌ಐವನ್ ಡಿ’ಸೊಜಾ, ಮಂಜುನಾಥ ಭಂಡಾರಿ, ರಾಜ್ಯ ಪೊಲೀಸ್ ‌ಮಹಾ‌ ನಿರ್ದೇಶಕ ಡಾ.ಎಂ.ಎ.ಸಲೀಂ, ಎಡಿಜಿಪಿ

ಕೋಮು ಸಂಘರ್ಷ ತಡೆಯುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್(ಎಸ್ಎಎಫ್) ಉದ್ಘಾಟನೆ Read More »

ಕರಾವಳಿ

ಡಾ.ಚೂಂತಾರು ರೆಡ್‌ಕ್ರಾಸ್ ರಾಜ್ಯ ಘಟಕಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ 2025-2028ರ ಮೂರು ವರ್ಷದ ಅವಧಿಗೆ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಡಾ.ಮುರಲೀ ಮೋಹನ್ ಚೂಂತಾರು ಅವರು  ಆಯ್ಕೆಯಾಗಿದ್ದಾರೆ. ರಾಜ್ಯಪಾಲರ ಸಚಿವಾಲಯ ಅವರ ನೇಮಕಾತಿ ಆದೇಶ ಹೊರಡಿಸಿದೆ. ಡಾ.ಮುರಲೀ ಮೋಹನ್ ಚೂಂತಾರು ಅವರು ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಶಾಖೆಯ ಚೇರ್‌ಮನ್ ಮತ್ತು  ಲೇಡಿಗೋಶನ್ ಆಸ್ಪತ್ರೆಯಲ್ಲಿರುವ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನ ಚೇರ್‌ಮೆನ್ ಆಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ

ಡಾ.ಚೂಂತಾರು ರೆಡ್‌ಕ್ರಾಸ್ ರಾಜ್ಯ ಘಟಕಕ್ಕೆ ಆಯ್ಕೆ Read More »

ಕರಾವಳಿ

“ಹಸಿರೇ ಉಸಿರು”- ಡಾ ಚೂಂತಾರು ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಜೂ. 13. ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರದಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು.   ಈ ಸಂದರ್ಭ ಸುಮಾರು 55 ಮಂದಿಗೆ ಮಾವು, ಹಲಸು, ಸಫೋಟ, ಪೇರಳೆ, ನೇರಳೆ ಮುಂತಾದ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಶ್ರೀ ಅಬ್ದುಲ್ ನೌಷಾದ್ ಅವರಿಗೆ ಹಲಸಿನಹಣ್ಣಿನ ಗಿಡವನ್ನು ಡಾ.ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ರಾಜಶ್ರೀ ಮೋಹನ್, ಡಾ ಪ್ರಜ್ವಲ್, ದಂತ ಪರಿಚಾರಕಿಯರಾದ

“ಹಸಿರೇ ಉಸಿರು”- ಡಾ ಚೂಂತಾರು ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಪರಿಸರ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಆಟೋ ರಿಕ್ಷಾಕ್ಕೆ ಬಸ್ ಢಿಕ್ಕಿ- ಪ್ರಯಾಣಿಕ ಮೃತ್ಯು..!

(ನ್ಯೂಸ್ ಕಡಬ) newskadaba.com ಜೂ. 12. ಆಟೋ ರಿಕ್ಷಾಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೊರ್ವ ಮೃತಪಟ್ಟು, ರಿಕ್ಷಾ ಚಾಲಕ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಗುರುವಾರ ಪಡುಬಿದ್ರಿ ಕಾಂಜರಕಟ್ಟೆಯಲ್ಲಿ‌ ನಡೆದಿದೆ. ಗಾಯಗೊಂಡವರನ್ನು ಅಟೊ ಚಾಲಕ ಕಂಚಿನಡ್ಕ ನಿವಾಸಿ‌ ಹಂಝ ಎಂದು ಗುರುತಿಸಲಾಗಿದೆ. ಬಸ್ ಢಿಕ್ಕಿ ಹೊಡೆದ ಪರಿಣಾಮ‌ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪಡುಬಿದ್ರಿ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆಟೋ ರಿಕ್ಷಾಕ್ಕೆ ಬಸ್ ಢಿಕ್ಕಿ- ಪ್ರಯಾಣಿಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top