ಕರಾವಳಿ

ಪತ್ರಕರ್ತರಿಗೆ ಹಲ್ಲೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

 (ನ್ಯೂಸ್ ಕಡಬ) newskadaba.com ಮ0ಗಳೂರು. ಆ.05. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ  ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೇಳಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ವಿರುದ್ಧ  ಯಾವುದೇ ದೂರುಗಳಿದ್ದರೂ ಸಮಿತಿಗೆ ಸಲ್ಲಿಸಬಹುದು. ಅದು ಬಿಟ್ಟು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ನಡೆಯಲಿದೆ. […]

ಪತ್ರಕರ್ತರಿಗೆ ಹಲ್ಲೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ Read More »

ಕರಾವಳಿ

ಹಟ್ಟಿಯ ಮೇಲೆ ಗುಡ್ಡ ಜರಿದು 4 ಹಸುಗಳ ದಾರುಣ ಸಾವು

(ನ್ಯೂಸ್ ಕಡಬ) newskadaba.com ಕಡಬ, ಆ.05. ಗುಡ್ಡದ ಬದಿಯಲ್ಲಿದ್ದ ಹಟ್ಟಿಯೊಂದರ ಮೇಲೆ ಗುಡ್ಡ ಜರಿದು 4 ದನಗಳು ದಾರುಣವಾಗಿ ಸಾವಿಗೀಡಾದ ಘಟನೆ ಶನಿವಾರದಂದು ಪುತ್ತೂರು ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕುಡಾಲ ಎಂಬಲ್ಲಿ ನಡೆದಿದೆ. ಕುಡಾಲ ನಿವಾಸಿ ಕೃಷಿಕ ಸುಭಾಶ್ಚಂದ್ರ ಎಂಬವರು ತನ್ನ ಮನೆಯ ಪಕ್ಕದಲ್ಲೇ ಹಟ್ಟಿ ನಿರ್ಮಿಸಿ ಹೈನುಗಾರಿಕೆ ನಡೆಸುತ್ತಿದ್ದರು. ಶನಿವಾರದಂದು ಸಂಜೆ ಸುರಿದ ಮಳೆಗೆ ಗುಡ್ಡ ಜರಿದು ಹಟ್ಟಿಯ ಮೇಲೆ ಬಿದ್ದ ಪರಿಣಾಮ 3 ದನ, 3 ಕರುಗಳು ಮಣ್ಣಿನಡಿಯಲ್ಲಿ ಬಾಕಿಯಾಗಿದ್ದವು. ಜೆಸಿಬಿ ಮೂಲಕ

ಹಟ್ಟಿಯ ಮೇಲೆ ಗುಡ್ಡ ಜರಿದು 4 ಹಸುಗಳ ದಾರುಣ ಸಾವು Read More »

ಕರಾವಳಿ

ಮರ್ಧಾಳ: ಬೈಕಿಗೆ ಢಿಕ್ಕಿ ಹೊಡೆದು ಹೊಟೇಲಿಗೆ ನುಗ್ಗಿದ ಜೀಪು ► ಎರಡು ಬೈಕ್ ಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಆ.05. ಜೀಪೊಂದು ಎರಡು ಬೈಕುಗಳಿಗೆ ಢಿಕ್ಕಿ ಹೊಡೆದು ಹೋಟೆಲೊಂದಕ್ಕೆ ನುಗ್ಗಿದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದ್ದು, ಹೊಟೇಲಿನ ಕಂಬಗಳೆರಡು ಹಾನಿಯಾದ ಘಟನೆ ಶನಿವಾರ ಸಂಜೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಜಂಕ್ಷನ್ ನಲ್ಲಿ ನಡೆದಿದೆ. ಜೀಪು ಚಲಾಯಿಸಲು ಕಲಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಬೈಕಿಗೆ ಢಿಕ್ಕಿ ಹೊಡೆದು ಹೊಟೇಲಿನ ಕಂಬಕ್ಕೆ ಢಿಕ್ಕಿಯಾಗಿ ಜೀಪು ನಿಂತಿದೆ. ಸಂಜೆ ಸಮಯದಲ್ಲಿ ಶಾಲಾ ಮಕ್ಕಳು ಇದೇ ಹೊಟೇಲಿನ ಮುಂಭಾಗದಲ್ಲಿ ಬಸ್ಸಿಗೆ ಕಾಯುತ್ತಿದ್ದು, ಅಪಘಾತದ

ಮರ್ಧಾಳ: ಬೈಕಿಗೆ ಢಿಕ್ಕಿ ಹೊಡೆದು ಹೊಟೇಲಿಗೆ ನುಗ್ಗಿದ ಜೀಪು ► ಎರಡು ಬೈಕ್ ಗಳಿಗೆ ಹಾನಿ Read More »

ಕರಾವಳಿ

ಮರ್ದಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ಚಂದ್ರ ರೈ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.05. ಮರ್ದಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆಯು ಇತ್ತೀಚೆಗೆ ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸುರೇಶ್ ರೈ ನೈಲ, ಅಧ್ಯಕ್ಷರಾಗಿ ಸತೀಶ್ಚಂದ್ರ ರೈ ಮೈಕಾಜೆ, ಕಾರ್ಯದರ್ಶಿಯಾಗಿ ಪ್ರಮೋದ್ ರೈ ಕುಡಾಲ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಅನೂಪ್ ಕುಮಾರ್ ಮರ್ದಾಳ ಬೀಡು, ಶಿವಪ್ರಸಾದ್ ಕೈಕುರೆ, ನಾರಾಯಣ ಶೆಟ್ಟಿ ಅತ್ಯಡ್ಕ, ಮನೋಹರ ರೈ ಅಲಿಮಾರು, ಜನಾರ್ಧನ ಗೌಡ

ಮರ್ದಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ಚಂದ್ರ ರೈ ಆಯ್ಕೆ Read More »

ಕರಾವಳಿ

ಬಾಲ್ಯ ವಿವಾಹ ನಡೆಯುತ್ತಿದೆಯೇ…?? ► ನೀವು ಏನು ಮಾಡಬೇಕೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಮ0ಗಳೂರು, ಆ.05. ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಮಾಜದಲ್ಲಿನ ಸರ್ವರ ಸಹಕಾರ ಅತ್ಯಗತ್ಯವಾಗಿದೆ. ಬಾಲ್ಯವಿವಾಹ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದರೂ ಕೂಡ ಇನ್ನೂ ಕೂಡ ಬೆರಳಿಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ತೀರ ವಿಷಾಧನೀಯವಾಗಿದೆ. ಈ ಕಾಯಿದೆಯಲ್ಲಿರುವ ತೀವ್ರ ಮತ್ತು  ಕಠಿಣ ಸ್ವರೂಪವಾದ  ದಂಡನೆ ಇದ್ದರೂ ಸಹ ಇದರ ಅರಿವು ಕೆಲವರಿಗೆ ತಿಳಿಯದ ಹಿನ್ನೆಲೆಯಲ್ಲಿ ಈ ರೀತಿ ಮರುಕಳಿಸುತ್ತಿದ್ದು, ಈ ಕಾಯಿದೆಯಂತೆ ಬಾಲ್ಯವಿವಾಹ ಪ್ರಕರಣಗಳು ಸಾಬೀತಾದಲ್ಲಿ ಒಂದು ವರ್ಷಕ್ಕಿಂತ ಕಡಿಮೆ

ಬಾಲ್ಯ ವಿವಾಹ ನಡೆಯುತ್ತಿದೆಯೇ…?? ► ನೀವು ಏನು ಮಾಡಬೇಕೆಂದು ಗೊತ್ತೇ…? Read More »

ಕರಾವಳಿ

ನಾಳೆ ನೆಕ್ಕಿತ್ತಡ್ಕ ದರ್ಗಾದಲ್ಲಿ ಮಾಸಿಕ ಕೂಟು ಝಿಯಾರತ್

ಕಡಬ, (newskadaba.com) ಕಡಬ, ಆ.05. ತಕ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಮರ್ಧಾಳ ಇದರ ಅಧೀನದಲ್ಲಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಕ್ಕಿತ್ತಡ್ಕ ಎಂಬಲ್ಲಿ ಜಾತಿ, ಧರ್ಮ ಭೇದವೆನ್ನದೆ ಹಲವಾರು ಸಮಸ್ಯೆಗಳಿಗೆ ಹರಕೆಯ ಮೂಲಕ ಪರಿಹಾರ ಕಂಡುಕೊಂಡಿರುವ ಮಾಸಿಕವಾಗಿ ನಡೆಸಿಕೊಂಡು ಬರುತ್ತಿರುವ ನೆಕ್ಕಿತ್ತಡ್ಕ ಕೂಟು ಝಿಯಾರತ್ ಆಗಸ್ಟ್ 06 ನೇ ಭಾನುವಾರ ರಾತ್ರಿ 7 ಗಂಟೆಯಿಂದ ನಡೆಯಲಿದೆ. ಮರ್ಧಾಳ ಜಮಾಅತಿನ ಖತೀಬರಾದ ಮಹಮ್ಮದ್ ಹನೀಫ್ ಸಖಾಫಿ ಎಮ್ಮೆಮ್ಮಾಡು ನೇತೃತ್ವ ವಹಿಸಲಿದ್ದಾರೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.

ನಾಳೆ ನೆಕ್ಕಿತ್ತಡ್ಕ ದರ್ಗಾದಲ್ಲಿ ಮಾಸಿಕ ಕೂಟು ಝಿಯಾರತ್ Read More »

ಕರಾವಳಿ

ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಲೇವಡಿ

(ನ್ಯೂಸ್ ಕಡಬ) newskadaba.com ಕಡಬ, ಆ.04. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿಯ ಬಗ್ಗೆ ಐಟಿ ದಾಳಿಯನ್ನು ಖಂಡಿಸಿ ಕಡಬದಲ್ಲಿ ಕಾಂಗ್ರೇಸ್ ಮಾಡಿರುವ ಪ್ರತಿಭಟನೆ ಭ್ರಷ್ಟಾಚಾರ ಪರ ಹೋರಾಟವಾಗಿದ್ದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಲೇವಡಿ ಮಾಡಿದ್ದಾರೆ. ಹೇಳಿಕೆ ನೀಡಿರುವ ಅವರು ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡಿರುವ ಕಾಂಗ್ರೇಸ್ ಮುಖಂಡರ ಅಕ್ರಮವನ್ನು ಅಧಿಕಾರಿಗಳು ತನಿಖೆ ನಡೆಸುವುದಕ್ಕೂ ಕಾಂಗ್ರೇಸ್ ಅಡ್ಡಿಪಡಿಸುತ್ತಿದೆ. ಇವರ ಹೋರಾಟ ಭ್ರಷ್ಟಾಚಾರದ ಪರವಾಗಿದೆ ಎನ್ನುವುದನ್ನು

ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಲೇವಡಿ Read More »

ಕರಾವಳಿ

ಸಚಿವ ಡಿಕೆಶಿ ನಿವಾಸದ ಮೇಲೆ ಐಟಿ ದಾಳಿ ► ಕಡಬ ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.04. ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿರುವುದರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ಶುಕ್ರವಾರದಂದು ಕಡಬ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು. ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ ಅವರ ನೇತೃತ್ವದಲ್ಲಿ ತಹಶಿಲ್ದಾರ್ ಕಛೇರಿ ಎದುರು ಜಮಾಯಿಸಿದ ಕಾಂಗ್ರೇಸ್ ಕಾರ್ಯಕರ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ

ಸಚಿವ ಡಿಕೆಶಿ ನಿವಾಸದ ಮೇಲೆ ಐಟಿ ದಾಳಿ ► ಕಡಬ ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ Read More »

ಕರಾವಳಿ

ಆಗಸ್ಟ್‌ 13 ರಂದು ಕಡಬದಲ್ಲಿ ಅಖಂಡ ಭಾರತ ಸಂಕಲ್ಪ ದಿನ ► ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ

(ನ್ಯೂಸ್ ಕಡಬ) newskadaba.com ಕಡಬ, ಆ.04. ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಆಗಸ್ಟ್‌ 13 ರಂದು ಸಂಜೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ ಹೇಳಿದರು. ಅವರು ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 71 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 1947 ರ ಆಗಸ್ಟ್‌ 14 ಮಧ್ಯರಾತ್ರಿ ದೇಶವಿಭನೆಯ ಕರಾಳ ದುರಂತವನ್ನು

ಆಗಸ್ಟ್‌ 13 ರಂದು ಕಡಬದಲ್ಲಿ ಅಖಂಡ ಭಾರತ ಸಂಕಲ್ಪ ದಿನ ► ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ Read More »

ಕರಾವಳಿ

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.04. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೋಡಂದೂರು ಎಂಬಲ್ಲಿ ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರದಂದು ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳಾದ ಸತೀಶ್ ಹಾಗೂ ಗಫೂರ್ ಎಂದು ಗುರುತಿಸಲಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ Read More »

ಕರಾವಳಿ
Scroll to Top