ಕರಾವಳಿ

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ.) ► ರಾಜ್ಯ ಸಂಯೋಜಕರಾಗಿ ಎ.ಸಿ.ಕುರಿಯನ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ನ.02. ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್(ರಿ.) ಇದರ ರಾಜ್ಯ ಸಂಯೋಜಕರನ್ನಾಗಿ ಉದ್ಯಮಿ ಎ.ಸಿ. ಕುರಿಯನ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಂಘದ ನಿಬಂಧನೆಗಳ ಅನುಸಾರ ರಾಜ್ಯದಲ್ಲಿರುವ ಕ್ರೈಸ್ತ ಧರ್ಮದ ವಿವಿಧ ಧರ್ಮ ಸಭೆಗಳಲ್ಲಿರುವ ಕ್ರೈಸ್ತ ಬಾಂಧವರನ್ನು ಸಂಘಟಿಸಿ ಸಂಘದ ಸದಸ್ಯರನ್ನಾಗಿಸುವ ಮೂಲಕ ಮಲೆಯಾಳಿ ಕ್ರೈಸ್ತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಕೋರಿ ಎ.ಸಿ.ಕುರಿಯನ್ ರವರನ್ನು ನೇಮಿಸಿ‌ ಅಧ್ಯಕ್ಷರಾದ ಎ.ಸಿ.ಜಯರಾಜ್ ರವರು ಆದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ.) ► ರಾಜ್ಯ ಸಂಯೋಜಕರಾಗಿ ಎ.ಸಿ.ಕುರಿಯನ್ ನೇಮಕ Read More »

ಕರಾವಳಿ

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.2. ಶಿಕ್ಷಕನ ಹುದ್ದೆಯ ಮಹತ್ವ ಅರಿತು ಗುಣಾತ್ಮಕ ಶಿಕ್ಷಣವನ್ನು ನೀಡುವುದೆ ಪ್ರತಿಯೊಬ್ಬ ಶಿಕ್ಷಕನ ಧೈಯವಾಗಬೇಕು ಎಂದು ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಮರನಾಥ ಗೌಡ ಹೇಳಿದರು. ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಯ್ಕೆ ಸಭೆ ಹಾಗೂ ಪ.ಪ್ರಾ.ಶಿಕ್ಷಕರ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಅರ್ಹತೆ ಅಧರಿಸಿ ಶಿಕ್ಷಕರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯದ ಹಕ್ಕನ್ನು ಪಡೆಯುವುದು ಸಂಘದ

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಚಾಲನೆ Read More »

ಕರಾವಳಿ

ಆಲಂಕಾರು: ಸಾಮಾನ್ಯ ಸಭೆ ► ಅಕ್ರಮ ಅಂಗಡಿಗಳ ತೆರವಿಗೆ ನಿರ್ಣಯ

(ನ್ಯೂಸ್ ಕಡಬ) newskadaba.com ಕಡಬ, ನ.2. ಆಲಂಕಾರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಲಿ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಾರ ಪರವಾನಿಗೆ ಇಲ್ಲದೆ ಕಾರ್ಯಾಚರಿಸುವ ಅಂಗಡಿಗಳ ಮೇಲೆ ಆಡಳಿತ ಮಂಡಳಿಯ ಸೂಕ್ತ ಕ್ರಮಕೈಗೊಳ್ಳುವ ನಿರ್ಣಯವನ್ನು ಅಂಗಿಕರಿಸಲಾಯಿತು. ಪಂಚಾಯಿತಿ ಸದಸ್ಯ ಕೇಶವ ಗೌಡ ಆಲಡ್ಕ ವಿಚಾರ ಪ್ರಸ್ತಾಪಿಸಿ, ಆಲಂಕಾರು ಪೇಟೆಯಲ್ಲಿ ಕೇವಲ ಕಟ್ಟಡ ಮಾಲಿಕರು ಕಟ್ಟಡ ಪರವಾನಿಗೆ ಮಾತ್ರ ಪಡೆದುಕೊಂಡು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವ್ಯಾಪಾರಸ್ಥರು ವ್ಯಾಪರ ಪರವಾನಿಗೆ ಪಡೆದುಕೊಳ್ಳದೆ ಗ್ರಾಮ ಪಂಚಾಯಿತಿಗೆ ಆದಾಯಕ್ಕೆ ವಂಚನೆ

ಆಲಂಕಾರು: ಸಾಮಾನ್ಯ ಸಭೆ ► ಅಕ್ರಮ ಅಂಗಡಿಗಳ ತೆರವಿಗೆ ನಿರ್ಣಯ Read More »

ಕರಾವಳಿ

ಕಡಬ: ಬೆಥನಿ ಬೆಥನಿ ಪ.ಪೂ.ಕಾಲೇಜು ► ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.2. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಆಚರಿಸಲಾಯಿತು. ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ಫಾ| ಆ್ಯಂಟನಿ ಒಐಸಿರವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಕನ್ನಡ ರಾಜ್ಯೋತ್ಸವದ ಸಂದೇಶ ಸಾರಿ ವಿದ್ಯಾರ್ಥಿಗಳು ಕನ್ನಡಾಭಿಮಾನಿಗಳಾಗಿ ಮುಂದುವರೆಯಬೇಕೆಂದು ಕರೆ ನೀಡಿದರು. ಪ್ರೌಢ ವಿಭಾಗದ ಮುಖ್ಯಗುರು ತೋಮಸ್ ಎ.ಕೆ, ಉಪನ್ಯಾಸಕಿ ಶಾಂಭವಿ ಮಾತನಾಡಿ ಶುಭ ಕೋರಿದರು. ಪದವಿಪೂರ್ವ ಕಾಲೇಜಿನ ಹಾಗೂ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನಿಸಿಕೆ ವ್ಯಕ್ತಪಡಿಸಿ ಕನ್ನಡ

ಕಡಬ: ಬೆಥನಿ ಬೆಥನಿ ಪ.ಪೂ.ಕಾಲೇಜು ► ಕನ್ನಡ ರಾಜ್ಯೋತ್ಸವ ಆಚರಣೆ Read More »

ಕರಾವಳಿ

ಕೆನರಾ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಪ್ರಾಧ್ಯಾಪಕರಿಗೆ ►ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ಡಾಕ್ಟರೇಟ್ ಪದವಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.2. ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಶ್ರೀಮತಿ ಸುಮತಿ ಹಾಗೂ ಸಹ ಪ್ರಾಧ್ಯಾಪಕ ಸದಾಶಿವ ಪ್ರಭು ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇನ್ಫರ್ಮೇಶನ್ ಸೈನ್ಸ್‌ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ಸುಮತಿ ಅವರು ನಿಟ್ಟೆ ಎನ್,ಎಂ.ಎ.ಎಂ.ಐ.ಟಿ. ಡಾ.ನಿರಂಜನ ಚಿಪಳೂಣ್ಕರ್ ಅವರ ಮಾರ್ಗದರ್ಶನದಲ್ಲಿ ‘ಡಿಸ್ಕವರಿ ಆ್ಯಂಡ್ ಇಂಟಿಗ್ರೇಶನ್ ಆಫ್ ವೆಬ್ ಸರ್ವೀಸಸ್ ಯೂಸಿಂಗ್ ಡಾಟಾ ಮೈನಿಂಗ್ ಟೆಕ್ನಿಕ್’ ವಿಷಯದಲ್ಲಿ ಮಂಡಿಸಿದ್ದರು. ಹಾಗೂ  ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಸದಾಶಿವ

ಕೆನರಾ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಪ್ರಾಧ್ಯಾಪಕರಿಗೆ ►ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ಡಾಕ್ಟರೇಟ್ ಪದವಿ Read More »

ಕರಾವಳಿ

ಕಡಬ: ಕೆರೆಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ.02. ಇಲ್ಲಿನ ಕುಟ್ರುಪ್ಪಾಡಿ ಎಂಬಲ್ಲಿ ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತ ಮಹಿಳೆಯನ್ನು ಕುಟ್ರುಪ್ಪಾಡಿ ಗ್ರಾಮದ ಹಳ್ಳಿ ನಿವಾಸಿ ರತ್ನಾವತಿ(65) ಎಂದು ಗುರುತಿಸಲಾಗಿದೆ. ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರು ಬುಧವಾರ ರಾತ್ರಿ ವೇಳೆಗೆ ಕೆರೆಗೆ ಬಿದ್ದಿದ್ದಾರೆನ್ನಲಾಗಿದೆ. ಗುರುವಾರದಂದು ಸ್ಥಳಕ್ಕೆ ಭೇಟಿ ನೀಡಿರುವ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ: ಕೆರೆಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskdaba.com ಕಡಬ, ನ.01. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಂಟ್ರ ಗ್ರಾಮದ ಮರ್ಧಾಳ ಸಮೀಪ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ತಾಲೂಕು ಪಂಚಾಯತ್ ಸದಸ್ಯೆ ಕುಸುಮಾರವರು ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ. ಅವರು ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಸುಜಾತ್ರವರಲ್ಲಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ Read More »

ಕರಾವಳಿ

ಮರ್ಧಾಳ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ನ.01. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಐತ್ತೂರು ಗ್ರಾಮದ 72 ಕಾಲನಿ ನಿವಾಸಿ ಕೆ.ಎಫ್.ಡಿ.ಸಿ ನಿವೃತ್ತ ಉದ್ಯೋಗಿ ಪನ್ನಯ್ಯ(64) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬಂಟಿಯಾಗಿದ್ದು, ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಇದರಿಂದಾಗಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ಧಾಳ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಗುರು ಪಟ್ಟಾಭಿಷೇಕಕ್ಕೆ ಒಂದು ತಿಂಗಳು ಇರುವಾಗಲೇ ► ಶಿವಮೊಗ್ಗದಲ್ಲಿ ನೇಣಿಗೆ ಶರಣಾದ ಉಜಿರೆಯ ಕ್ರೈಸ್ತ ಪಾದ್ರಿ!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.1. ಉಜಿರೆಯ ವ್ಯಕ್ತಿಯೋರ್ವರು ಶಿವಮೊಗ್ಗದ ಆಲ್ಕೋಳದಲ್ಲಿರುವ ಚೈತನ್ಯ ರೂರಲ್ ಡೆವಲಪ್‌ಮೆಂಟ್‌ ಸೊಸೈಟಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉಜಿರೆ ಮೂಲದ ಸುನೀಲ್‌ ಫರ್ನಾಂಡಿಸ್(33) ಎಂದು ಗುರುತಿಸಲಾಗಿದೆ. ಮೇ ತಿಂಗಳಲ್ಲಿ ಉಜಿರೆಯಿಂದ ಪಾದ್ರಿ ತರಬೇತಿಗಾಗಿ ಶಿವಮೊಗ್ಗಕ್ಕೆ ತೆರಳಿದ್ದ ಸುನೀಲ್, ಬ್ರದರ್‌ ದೀಕ್ಷೆ ಪಡೆದು ತರಬೇತಿ ಪಡೆಯುತ್ತಿದ್ದರು. 14 ವರ್ಷಗಳ ಗುರು ಸೇವೆ ಪೂರ್ಣಗೊಂಡು ಮುಂದಿನ ತಿಂಗಳು ಪಟ್ಟಾಭಿಷೇಕಕ್ಕೆ ತಯಾರಿ ನಡೆಯುತ್ತಿತ್ತು. ಈ ವೇಳೆಯೇ

ಗುರು ಪಟ್ಟಾಭಿಷೇಕಕ್ಕೆ ಒಂದು ತಿಂಗಳು ಇರುವಾಗಲೇ ► ಶಿವಮೊಗ್ಗದಲ್ಲಿ ನೇಣಿಗೆ ಶರಣಾದ ಉಜಿರೆಯ ಕ್ರೈಸ್ತ ಪಾದ್ರಿ! Read More »

ಕರಾವಳಿ

ಕಡಬ: ಸೈಂಟ್ ಜೋಕಿಮ್ಸ್‌ ವಿದ್ಯಾಸಂಸ್ಥೆಯಲ್ಲಿ ಸ್ನೇಹ ಸಂಗಮ ಕಾರ್ಯಕ್ರಮ ► ವಿದ್ಯಾರ್ಥಿ ಹಾಗೂ ವಿದ್ಯಾಸಂಸ್ಥೆಯ ಬಾಂಧವ್ಯ ಗಟ್ಟಿಗೊಳಿಸಲು ಇದು ಸೂಕ್ತ ವೇದಿಕೆ- ಈಶೋ ಪಿಲಿಫ್

(ನ್ಯೂಸ್ ಕಡಬ) newskadaba.com ಕಡಬ, ನ.1. ಇಲ್ಲಿನ ಸೈಂಟ್ ಜೋಕಿಮ್ಸ್‌ ವಿದ್ಯಾಸಂಸ್ಥೆಯಲ್ಲಿ ಫಾ| ರೋನಾಲ್ಡೋ ಲೋಬೋರವರ ಅಧ್ಯಕ್ಷತೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯಗುರು ಈಶೋ ಪಿಲಿಫ್ರವರು ಸಂಘಟನಾ ಶಕ್ತಿಯ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾಸಂಸ್ಥೆಯ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸ್ನೇಹ ಸಂಗಮ ಕಾರ್ಯಕ್ರಮವು ಸೂಕ್ತ ವೇದಿಕೆ ಆಗಲಿದೆ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಚಾಲಕರಾದ ರೆ|ಫಾ| ರೋನಾಲ್ಡ್‌

ಕಡಬ: ಸೈಂಟ್ ಜೋಕಿಮ್ಸ್‌ ವಿದ್ಯಾಸಂಸ್ಥೆಯಲ್ಲಿ ಸ್ನೇಹ ಸಂಗಮ ಕಾರ್ಯಕ್ರಮ ► ವಿದ್ಯಾರ್ಥಿ ಹಾಗೂ ವಿದ್ಯಾಸಂಸ್ಥೆಯ ಬಾಂಧವ್ಯ ಗಟ್ಟಿಗೊಳಿಸಲು ಇದು ಸೂಕ್ತ ವೇದಿಕೆ- ಈಶೋ ಪಿಲಿಫ್ Read More »

ಕರಾವಳಿ
Scroll to Top