ಕರಾವಳಿ

ಯಾರಿಗೂ ತಿಳಸದೆ ಮನೆಗೆ ತಲುಪಿದ ದೀಪಕ್ ರಾವ್ ಮೃತದೇಹ ► ರಸ್ತೆಯಲ್ಲೇ ಮೃತದೇಹವನ್ನಿಟ್ಟು ಗೃಹ ಸಚಿವರು ಬರಬೇಕೆಂದು ಪ್ರತಿಭಟನಾಕಾರರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರದಂದು ಕಾಟಿಪಳ್ಳದ ಕೈಕಂಬದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಮೃತದೇಹವನ್ನು ಪೊಲೀಸರು ಪೊಲೀಸರು ಯಾರಿಗೂ ತಿಳಿಸದೆ ಮೃತರ ಮನೆಗೆ ಆಂಬ್ಯುಲೆನ್ಸ್ ಮೂಲಕ ತಂದಿದ್ದು, ಮನೆಯಲ್ಲಿ ನೆರೆದಿದ್ದವರ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯುತ್ತಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಶವಯಾತ್ರೆ ನಡೆಸಲು ಸಾವಿರಾರು ಹಿಂದೂ ಸಂಘಟನೆ ಕಾರ್ಯಕರ್ತರು ಸಜ್ಜಾಗಿದ್ದರು‌. ಆದರೆ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ಶವವನ್ನು ಹಿಂಬಾಗಿಲಿನಿಂದ ಯಾರಿಗೂ ಹೇಳದೆ […]

ಯಾರಿಗೂ ತಿಳಸದೆ ಮನೆಗೆ ತಲುಪಿದ ದೀಪಕ್ ರಾವ್ ಮೃತದೇಹ ► ರಸ್ತೆಯಲ್ಲೇ ಮೃತದೇಹವನ್ನಿಟ್ಟು ಗೃಹ ಸಚಿವರು ಬರಬೇಕೆಂದು ಪ್ರತಿಭಟನಾಕಾರರಿಂದ ಆಕ್ರೋಶ Read More »

ಕರಾವಳಿ

ಭಯದ ವಾತಾವರಣದಲ್ಲಿ ಕರಾವಳಿ ► ಬಸ್ಸುಗಳಿಗೆ ಕಲ್ಲೆಸೆತ, ಕೆಲವೆಡೆ ಇರಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯ ನಂತರ ಜಿಲ್ಲೆಯ ಕೆಲವೆಡೆ ಕೋಮು ಸಂಘರ್ಷಗಳು ಆರಂಭಗೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಬುಧವಾರ ಸಂಜೆ ಕಾಟಿಪಳ್ಳದಲ್ಲಿ ಬಸ್ ಗೆ ಕಲ್ಲೆಸೆಯಲಾಗಿದ್ದು, ಬುಧವಾರದಂದು ರಾತ್ರಿಯೂ ದುಷ್ಕರ್ಮಿಗಳು ಮತ್ತೊಂದು ಬಸ್ಸಿಗೆ ಕಲ್ಲೆಸೆದಿದ್ದಾರೆ. ಅಲ್ಲದೆ ಗುರುವಾರದಂದು ದೀಪಕ್ ರ ಶವಯಾತ್ರೆಗೆ ಸಂಘಟನೆಗಳು ಸಿದ್ಧತೆ ನಡೆಸಿರುವಾಗಲೇ ಸರಕಾರ ಅನುಮತಿಯನ್ನು ನಿರಾಕರಿಸಿ ಕಮೀಷನರ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಆ್ಯಕ್ಟ್ 35 ರ ಪ್ರಕಾರ ಗುರುವಾರದಂದು ನಿಷೇಧಾಜ್ಞೆ

ಭಯದ ವಾತಾವರಣದಲ್ಲಿ ಕರಾವಳಿ ► ಬಸ್ಸುಗಳಿಗೆ ಕಲ್ಲೆಸೆತ, ಕೆಲವೆಡೆ ಇರಿತ Read More »

ಕರಾವಳಿ

ಕೊಟ್ಟಾರ: ಮಾರಕಾಯುಧಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ► ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯ ನಂತರ ಜಿಲ್ಲೆಯ ಹಲವೆಡೆ ಕೋಮು ಸಂಘರ್ಷಗಳು ಆರಂಭಗೊಂಡಿದ್ದು, ಬುಧವಾರ ರಾತ್ರಿ ಕೊಟ್ಟಾರ ಚೌಕಿಯಲ್ಲಿ ವ್ಯಕ್ತಿಯೊಬ್ಬರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಲಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಕಾಶಭವನ ನಿವಾಸಿ ಬಶೀರ್ (42) ಎಂದು ಗುರುತಿಸಲಾಗಿದೆ. ಕೊಟ್ಟಾರದಲ್ಲಿರುವ ತನ್ನ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ಸಂದರ್ಭ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆಗೆ ಕರ್ತವ್ಯ

ಕೊಟ್ಟಾರ: ಮಾರಕಾಯುಧಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ► ಓರ್ವ ಗಂಭೀರ Read More »

ಕರಾವಳಿ

ಸುರತ್ಕಲ್: ಯುವಕನಿಗೆ ತಲವಾರು ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಕಾಟಿಪಳ್ಳದಿಂದ ಮಂಗಳೂರಿಗೆ ಬೈಕಿನಲ್ಲಿ ಆಗಮಿಸುತ್ತಿದ್ದ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿರುವ ಘಟನೆ ಬುಧವಾರ ರಾತ್ರಿ ಸುರತ್ಕಲ್ ನಲ್ಲಿ ನಡೆದಿದೆ. ದಾಳಿಗೊಳಗಾದ ಯುವಕನನ್ನು ಬಂದರ್ ನಿವಾಸಿ ಅಬ್ದುರ್ರಝಾಕ್ ಎಂಬವರ ಪುತ್ರ ಮುಹಮ್ಮದ್ ಮುಬಶ್ಶಿರ್ (22) ಎಂದು ಗುರುತಿಸಲಾಗಿದೆ. ಕಾಟಿಪಳ್ಳದಲ್ಲಿ ನೆರವೇರಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳ ತಂಡವೊಂದು ತಡೆದು ತಲವಾರು ದಾಳಿ ನಡೆಸಿದೆ. ದಾಳಿಯಿಂದ ಮುಬಶ್ಶಿರ್ ರ ತಲೆಗೆ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್: ಯುವಕನಿಗೆ ತಲವಾರು ದಾಳಿ Read More »

ಕರಾವಳಿ

ಕಾಟಿಪಳ್ಳ: ಯುವಕನ ಬರ್ಬರ ಕೊಲೆ ಪ್ರಕರಣ ► ಮುಲ್ಕಿ ನೌಷಾದ್ ತಂಡದ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಬುಧವಾರದಂದು ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ದೀಪಕ್ ರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮುಲ್ಕಿ ನೌಷಾದ್, ರಿಝ್ವಾನ್, ಪಿಂಕಿ ನವಾಝ್ ಹಾಗೂ ನಿರ್ಷಾನ್ ಎಂದು ಗುರುತಿಸಲಾಗಿದೆಯೆಂದು ದೃಶ್ಯ ಮಾಧ್ಯಮವೊಂದು ವರದಿ ಮಾಡಿದೆ. ಇವರು ಕೊಲೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿದ್ದ ಕಾರನ್ನು ಪತ್ತೆಹಚ್ಚಿದ ಸುರತ್ಕಲ್ ಹಾಗೂ ಮುಲ್ಕಿ ಠಾಣೆಯ ಪೊಲೀಸರು, ದುಷ್ಕರ್ಮಿಗಳ ಕಾರನ್ನು ಬೆನ್ನತ್ತಿದ್ದರು. ಮುಲ್ಕಿ –

ಕಾಟಿಪಳ್ಳ: ಯುವಕನ ಬರ್ಬರ ಕೊಲೆ ಪ್ರಕರಣ ► ಮುಲ್ಕಿ ನೌಷಾದ್ ತಂಡದ ಬಂಧನ Read More »

ಕರಾವಳಿ

ಕಾಟಿಪಳ್ಳ: ಯುವಕನ ಕೊಲೆ ಪ್ರಕರಣ ► ಕಾರಿಗೆ ಗುಂಡು ಹಾರಿಸಿ ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಸುರತ್ಕಲ್ ಹಾಗೂ ಮುಲ್ಕಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಿಂದ ಬುಧವಾರ ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರದಂದು ಹಾಡುಹಗಲೇ ಕಾಟಿಪಳ್ಳದಲ್ಲಿ ದೀಪಕ್ ರನ್ನು ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿತ್ತು. ಕಾರಿನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿದ್ದ ಕಾರನ್ನ ಪತ್ತೆಹಚ್ಚಿದ ಸುರತ್ಕಲ್ ಹಾಗೂ ಮುಲ್ಕಿ ಠಾಣೆಯ ಪೊಲೀಸರು ,

ಕಾಟಿಪಳ್ಳ: ಯುವಕನ ಕೊಲೆ ಪ್ರಕರಣ ► ಕಾರಿಗೆ ಗುಂಡು ಹಾರಿಸಿ ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಸೆರೆ Read More »

ಕರಾವಳಿ

ಕಲ್ಲಡ್ಕ: ಚೂರಿ‌ ಇರಿತ ಪ್ರಕರಣ ► ಮೂವರು ಪಿಎಫ್ಐ ಕಾರ್ಯಕರ್ತರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.03. ಕಳೆದ ಡಿಸೆಂಬರ್ 26 ರಂದು ಕಲ್ಲಡ್ಕದಲ್ಲಿ ಕೇಶವ ಎಂಬವರಿಗೆ ಚೂರಿ‌ಇರಿದ ಪ್ರಕರಣದ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಪಿಎಫ್ಐ ಕಾರ್ಯಕರ್ತರಾದ ಕಲ್ಲಡ್ಕ ನಿವಾಸಿ ಉಮರಬ್ಬ ಎಂಬವರ ಪುತ್ರ ಮಹಮ್ಮದ್ ಇಕ್ಬಾಲ್, ಪಾಣೆಮಂಗಳೂರು ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮಹಮ್ಮದ್ ಶರೀಫ್ ಹಾಗೂ ಬಂದರ್ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಪುತ್ರ ನಿಝಾಮ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 26 ರಂದು ಕಲ್ಲಡ್ಕ

ಕಲ್ಲಡ್ಕ: ಚೂರಿ‌ ಇರಿತ ಪ್ರಕರಣ ► ಮೂವರು ಪಿಎಫ್ಐ ಕಾರ್ಯಕರ್ತರ ಬಂಧನ Read More »

ಕರಾವಳಿ

ಕಾಟಿಪಳ್ಳ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.03. ಯುವಕನೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಬುಧವಾರದಂದು ಹಾಡುಹಗಲೇ ನಡೆದಿದೆ. ಕೊಲೆಯಾದ ಯುವಕನನ್ನು ಮೊಬೈಲ್ ಕಂಪೆನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಸೂರಿಂಜೆ‌ ನಿವಾಸಿ ದೀಪಕ್ ಪೂಜಾರಿ(32) ಎಂದು‌ ಗುರುತಿಸಲಾಗಿದೆ. ದೀಪಕ್ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ದೀಪಕ್ ರನ್ನು ಹತ್ಯೆಗೈಯಲು ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

ಕಾಟಿಪಳ್ಳ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ Read More »

ಕರಾವಳಿ

ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ► ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಜ.02. ರಕ್ತ ಮನುಷ್ಯನ ಮುಗಿಯದ ಸಂಪತ್ತು.  ಎಲ್ಲಾ ದಾನಗಳಿಗಿಂತಲೂ ರಕ್ತದಾನ ಮಾನವ ಧರ್ಮದ ಪ್ರಮುಖದ ದಾನವಾಗಿದೆ ಎಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ|| ರಾಮಚಂದ್ರ ಭಟ್ ಹೇಳಿದರು. ಅವರು ಆಲಂಕಾರು  ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ  ಆಶ್ರಯದಲ್ಲಿ ಆಲಂಕಾರು ಗ್ರಾಮ ಪಂಚಾಯಿತಿ  ಸಭಾಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮಾನವ ಇಂದು ತನ್ನ ಆಸ್ತಿ, ಸಂಪತ್ತು, ವಾಸ ಸ್ಥಳ, ಜೀವನ ಶೈಲಿಯನ್ನು ಒಂದು ದಿನದಲ್ಲಿ ಬದಲಾಯಿಸಬಹುದು. ಆದರೆ

ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ► ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಕ್ತದಾನ ಶಿಬಿರ Read More »

ಕರಾವಳಿ

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಕಡಬದ ► ಕದಂಬ ಅಟೋ ಚಾಲಕ-ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಡಿ.02. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೋರ್ವರಿಗೆ ಕಡಬದ ಕದಂಬ ಆಟೋ ಚಾಲಕ-ಮಾಲಕ ಸಂಘದಿಂದ ಮಂಗಳವಾರದಂದು ಸಹಾಯಧನವನ್ನು ನೀಡಲಾಯಿತು. ಹೃದಯಾಘಾತದಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಆರ್ಥಿಕವಾಗಿ ಕಷ್ಟಕರ ಜೀವನವನ್ನು ನಿರ್ವಹಿಸುತ್ತಿದ್ದ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೇಕಿ ಬೈದ್ರಿಜಾಲು ನಿವಾಸಿ ಪೂವಪ್ಪ ಗೌಡರವರ ಚಿಕಿತ್ಸೆಗಾಗಿ ಅವರ ಪತ್ನಿಯವರಿಗೆ ಕಡಬದ ಕದಂಬ ಆಟೋ ಚಾಲಕ-ಮಾಲಕ ಸಂಘದಿಂದ 12500 ನಗದನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಸನ್ನ ಕೆ., ಸದಸ್ಯರಾದ ಜಗದೀಶ್

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಕಡಬದ ► ಕದಂಬ ಅಟೋ ಚಾಲಕ-ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ Read More »

ಕರಾವಳಿ
Scroll to Top