ಕರಾವಳಿ

ಕಳಾರ: ಕಟ್ಟಡದಲ್ಲಿನ ಸಾಮಾಗ್ರಿ ತೆರವುಗೊಳಿಸದೆ ಬೆದರಿಕೆ ► ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜ.26. ಕಡಬ ಗ್ರಾಮದ ಕಳಾರ ನಿವಾಸಿ ಪಿಜಿನರವರ ಸ್ವಂತ ಕಟ್ಟಡದಲ್ಲಿ ಸ್ಥಳೀಯ ನಿವಾಸಿ ಸಯ್ಯದ್ ಹುಸೈನ್ ಎಂಬವರು ಇಟ್ಟಿರುವ ಶಾಮಿಯಾನ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡರು ತೆರವುಗೊಳಿಸದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕಡಬ ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ) ಸಂಚಾಲಕ ವಸಂತ ಕುಬಲಾಡಿಯವರು ಜಿಲ್ಲಾಧಿಕಾರಿ, ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಕಡಬ ಗ್ರಾಮದ ಕಳಾರ ದಿ.ಕೊರಗ ಮುಗೇರರವರ ಪುತ್ರ ಪಿಜಿನ ಮುಗೇರರವರು ಅವರ ಪಟ್ಟಾ ಸ್ಥಳದ ಸ.ನಂ.16/3ರಲ್ಲಿ ಕೃಷಿ ಸಾಮಾಗ್ರಿಗಳ […]

ಕಳಾರ: ಕಟ್ಟಡದಲ್ಲಿನ ಸಾಮಾಗ್ರಿ ತೆರವುಗೊಳಿಸದೆ ಬೆದರಿಕೆ ► ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ದೂರು Read More »

ಕರಾವಳಿ

ಇಂದು ಕಡಬದಲ್ಲಿ ರಕ್ತದಾನ ಶಿಬಿರ, ರಕ್ತವರ್ಗೀಕರಣ, ಮಧುಮೇಹ ಪರೀಕ್ಷೆ

(ನ್ಯೂಸ್ ಕಡಬ) newskadaba.com ಕಡಬ, ಜ.26. ಕದಂಬ- ಸಾಮಾಜಿಕ ಹಿತರಕ್ಷಣಾ ಸಂಘಟನೆಯ 4ನೇ ವರ್ಷದ ಪಾದಾರ್ಪಣೆ ಹಾಗೂ ಗೌರವ ಸಲಹೆಗಾರ ದಿ.ಗೋಪಾಲ ರಾವ್‍ರವರ ಸ್ಮರಣಾರ್ಥ ಇಂದು ಕಡಬದಲ್ಲಿ ರಕ್ತದಾನ ಶಿಬಿರ ನಡೆಯಲಿದೆ‌. ಮಂಗಳೂರಿನ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ರಕ್ತನಿಧಿ ಮತ್ತು ಲೇಡಿಗೋಷನ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ರಕ್ತದಾನ ಶಿಬಿರ ಹಾಗೂ ಕಡಬ ಸ್ವಸ್ತ್ಯ ಕ್ಲಿನಿಕಲ್ ಲ್ಯಾಬೊರೇಟರಿ ಸಹಕಾರದೊಂದಿಗೆ ರಕ್ತವರ್ಗೀಕರಣ ಮತ್ತು ಮಧುಮೇಹ ಪರೀಕ್ಷೆ ಜನವರಿ 26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30ರ ತನಕ ಕಡಬ

ಇಂದು ಕಡಬದಲ್ಲಿ ರಕ್ತದಾನ ಶಿಬಿರ, ರಕ್ತವರ್ಗೀಕರಣ, ಮಧುಮೇಹ ಪರೀಕ್ಷೆ Read More »

ಕರಾವಳಿ

ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ► ಕಾರ್ಕಳ ಶಾಸಕರ ವಿರುದ್ಧ ಕ್ರಮಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ

( ನ್ಯೂಸ್ ಕಡಬ) newskadaba.com ಕಡಬ, ಜ.25. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಬಂಟ್ವಾಳದಲ್ಲಿ ಅಲ್ಲಾಹು-ರಾಮನ ನಡುವಿನ ಸ್ಪರ್ಧೆ ಎಂದು ಸಂವಿಧಾನ ಬಾಹಿರ ಹಾಗೂ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಡಬ ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಎಂ.ಹನೀಫ್ ಆಗ್ರಹಿಸಿದ್ದಾರೆ. ಸುನೀಲ್‍ಕುಮಾರ್‍ರವರು ಜನರಲ್ಲಿ ಧಾರ್ಮಿಕ ಧ್ವೇಷ ಉಂಟಾಗುವಂತೆ ಮಾತನಾಡಿ ಧರ್ಮಗಳ ಮಧ್ಯೆ ಕಂದಕ ಉಂಟುಮಾಡಿ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಅಲ್ಲದೇ ರಾಜಕಾರಣಕ್ಕೆ ದೇವರ

ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ► ಕಾರ್ಕಳ ಶಾಸಕರ ವಿರುದ್ಧ ಕ್ರಮಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ Read More »

ಕರಾವಳಿ

ಅಕ್ರಮ ಗಾಂಜಾ ಮಾರಾಟ ಪತ್ತೆ ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೋಲಿಸರು ಬುಧವಾರದಂದು ಬಂಧಿಸಿದ್ದಾರೆ. ಕೊಂಡಾಣ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮಂಜೇಶ್ವರದ ಬದಿಮಲೆ ಪಾತೂರು ನಿವಾಸಿ ಮುಹಮ್ಮದ್ ಮನ್ಸೂರ್ ಯಾನೆ ಮನ್ಸೂರ್ (20), ತಲಪಾಡಿ ಗ್ರಾಮದ ಮೇಗಿನ ಪಂಜಾಳ ನಿವಾಸಿ ಮುಹಮ್ಮದ್ ಅಶ್ರಫ್ (28), ಇರಾ ಗ್ರಾಮ ಬಾಳೆಪುಣಿ ಬಳಿಯ ನಿವಾಸಿಗಳಾದ ಉಮರ್ ಫಾರೂಕ್ (22) ಮತ್ತು ಸಿಯಾದ್

ಅಕ್ರಮ ಗಾಂಜಾ ಮಾರಾಟ ಪತ್ತೆ ► ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ

ಆಳ್ವಾಸ್ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ► ಡೆತ್ ನೋಟ್ ಬರೆದಿಟ್ಟು ಐದನೇ ಮಹಡಿಯಿಂದ ಹಾರಿದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ಮೂಡುಬಿದಿರೆ ಆಳ್ವಾಸ್​ ಕಾಲೇಜಿನ ಐದನೇ ಮಹಡಿಯಿಂದ ವಿದ್ಯಾರ್ಥಿನಿಯೋರ್ವಳು ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚಿತ್ರದುರ್ಗದ ರಚನಾ ಎಂದು ಗುರುತಿಸಲಾಗಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ರಚನಾ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳ್ವಾಸ್ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ► ಡೆತ್ ನೋಟ್ ಬರೆದಿಟ್ಟು ಐದನೇ ಮಹಡಿಯಿಂದ ಹಾರಿದ ವಿದ್ಯಾರ್ಥಿನಿ Read More »

ಕರಾವಳಿ

ಕಳಾರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಪೌಷ್ಟಿಕ ಆಹಾರ ಸಪ್ತಾಹ

(ನ್ಯೂಸ್ ಕಡಬ) newskadaba.com ಕಡಬ, ಜ.25. ಕಡಬ ಗ್ರಾ.ಪಂ.ವ್ಯಾಪ್ತಿಯ ಕಳಾರ ಅಂಗನವಾಡಿ ಕೇಂದ್ರದಲ್ಲಿ ಜ.24ರಂದು ಬಾಲವಿಕಾಸ ಸಮಿತಿಯ ವತಿಯಿಂದ ಬಾಲಮೇಳ ಕಾರ್ಯಕ್ರಮ, ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಉದ್ಘಾಟಿಸಿ ಮಾತನಾಡಿ ಸರಕಾರ ಅಂಗನವಾಡಿಗಳ ಮೂಲಕ ಗರ್ಭಿಣಿ ಬಾಣಂತಿಯರಿಗೆ, ಮಕ್ಕಳಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದ್ದು ಸಮಾಜದಲ್ಲಿ ಮಹಿಳೆಯರು ಸಬಲೀಕರಣ ಹೊಂದುವುದರೊಂದಿಗೆ ಪುಟಾಣಿಗಳು ದೇಶದ ಮುಂದಿನ ಶಕ್ತಿಗಳಾಗಿ ಬೆಳೆಯಬೇಕೆಂಬ ಆಶಯದಿಂದ ಅದೆಷ್ಟೋ ಯೋಜನೆಗಳನ್ನು ನೀಡುತ್ತಿದೆ. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು

ಕಳಾರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಪೌಷ್ಟಿಕ ಆಹಾರ ಸಪ್ತಾಹ Read More »

ಕರಾವಳಿ

ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿ ► ಕಡಬ ನಾಡಕಛೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿಗೆ ರ್ಯಾಂಕಿಂಗ್ ವ್ಯವಸ್ಥೆ ನೀಡಲಾಗುತ್ತಿದ್ದು, ಕಡಬ ನಾಡಕಛೇರಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸುರತ್ಕಲ್ ನಾಡಕಛೇರಿಯು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ 37 ನೇ ಸ್ಥಾನದಲ್ಲಿದೆ. ಕಡಬ ನಾಡಕಛೇರಿಯು ರಾಜ್ಯದಲ್ಲಿ 137 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ 17 ನಾಡಕಛೇರಿಗಳ ಪೈಕಿ ಸಿಗ್ಮಾ 06.02 ರ್ಯಾಂಕಿನೊಂದಿಗೆ ಸುರತ್ಕಲ್ ಮೊದಲ ಸ್ಥಾನವನ್ನು

ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿ ► ಕಡಬ ನಾಡಕಛೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ Read More »

ಕರಾವಳಿ

ರಬ್ಬರ್ ಟ್ಯಾಪಿಂಗ್ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ರಬ್ಬರು ಮಂಡಳಿಯ ಬಂಟ್ವಾಳ ತಾಲೂಕಿನ ಕೆದ್ದಳಿಕೆಯಲ್ಲಿರುವ ರಬ್ಬರು ಟ್ಯಾಪಿಂಗ್ ಅಭಿವೃದ್ದಿ ತರಬೇತಿ ಶಾಲೆಯಲ್ಲಿ 30 ದಿನಗಳ ಟ್ಯಾಪಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯು ಜನವರಿ 21 ರಂದು ಆರಂಭಗೊಂಡಿದ್ದು, ಆಸಕ್ತರು ನೇರವಾಗಿ ತರಬೇತಿ ಶಾಲೆಗೆ ಹಾಜರಾಗಿ ಅರ್ಜಿಯನ್ನು ನೀಡಿ ತರಬೇತಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ ; 0824-2429229 ಅಥವಾ ಮೊ.ಸಂ 9448429100 ಸಂಪರ್ಕಿಸಲು ರಬ್ಬರ್ ಉತ್ಪಾದನಾ ಉಪ ಆಯುಕ್ತರ ಪ್ರಕಟನೆ ತಿಳಿಸಿದೆ.

ರಬ್ಬರ್ ಟ್ಯಾಪಿಂಗ್ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ..?

(ನ್ಯೂಸ್ ಕಡಬ) newskadaba.com ಪುತ್ತೂರು, ಜ.25. ಎಲ್ಲರಂತೆ ನಡೆದಾಡಿ ಸುಂದರ ಜೀವನ ನಿರ್ವಹಿಸಬೇಕಿದ್ದ ಯುವಕನೋರ್ವ ಸುಮಾರು ಆರು ವರ್ಷಗಳಿಂದ ಕಿಡ್ನಿ ವೈಫಲ್ಯ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ. ಇಲ್ಲಿನ ಮೊಟ್ಟೆತಡ್ಕ ನಿವಾಸಿಯಾದ ಅಬ್ದುಲ್ ಶಕೀರ್(30) ಸುಮಾರು 6 ವರುಷಗಳಿಂದ ಎರಡು ಕಾಲಿನ ಶಕ್ತಿಯನ್ನು ಕಳೆದುಕೊಂಡು ನಡೆದಾಡಲು ಆಗದೆ ಕಷ್ಟಕರ ಜೀವನ ಸಾಗಿಸುತ್ತಿದ್ದಾನೆ. ವಯಸ್ಸಾದ ತಾಯಿ ಮತ್ತು ಮಗ ಒಂದು ಸಣ್ಣ ಬಾಡಿಗೆ ಮನೆಯಲ್ಲಿ‌ ವಾಸಮಾಡುತ್ತಿದ್ದಾರೆ. ಇವರ ದಯನೀಯ ಸ್ಥಿತಿ ನೋಡುಗರ ಕಣ್ಣಲ್ಲಿ ನೀರು

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ..? Read More »

ಕರಾವಳಿ

ಹಿರಿಯ ಸಾಮಾಜಿಕ ಮುಂದಾಳು ಹಮೀದ್ ಕಂದಕ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.24. ಹಿರಿಯ ಸಾಮಾಜಿಕ ಮುಂದಾಳು, ಧಾರ್ಮಿಕ ನೇತಾರ ಹಾಜಿ ಹಮೀದ್ ಕಂದಕ್(68) ಬುಧವಾರ ಸಂಜೆ ಇಹಲೋಕ ತ್ಯಜಿಸಿದರು. ನಗರದ ವುಡ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯುತ್ತಿದ್ದ ಅಹಿಂದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡುತ್ತಿದ್ದಾಗ ಹಮೀದ್ ಕಂದಕ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಯುನಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಹಮೀದ್ ಕಂದಕ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಹಿರಿಯ ಸಾಮಾಜಿಕ ಮುಂದಾಳು ಹಮೀದ್ ಕಂದಕ್ ಇನ್ನಿಲ್ಲ Read More »

ಕರಾವಳಿ
Scroll to Top