ಕರಾವಳಿ

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.06. ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿರುವ ಬಂಟ್ವಾಳ ಪೊಲೀಸರು ವಿವಿಧ ಕಂಪೆನಿಗಳ ಮದ್ಯವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಕಡೇಶ್ವಾಲ್ಯದಲ್ಲಿ ಸೋಮವಾರದಂದು ನಡೆದಿದೆ. ಕಡೆಶ್ವಾಲ್ಯದ ನೆಕ್ಕಿಲಾಡಿಯ ಹೊಟೆಲ್ ನಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ 4,720 ರೂ ಬೆಲೆಯ ವಿವಿಧ ಕಂಪನಿಗಳ 11.880 ಲೀಟರ್ […]

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ Read More »

ಕರಾವಳಿ

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಾರೋಗ್ಯದಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಕೌಕ್ರಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೌಕ್ರಾಡಿ ಗ್ರಾಮದ ಕೊಕ್ಕಡ ಕಾಪಿನ ಬಾಗಿಲು ನಿವಾಸಿ ದಿ| ದುಗ್ಗಣ್ಣ ಗೌಡ ಎಂಬವರ ಪುತ್ರ ನೇಮಣ್ಣ ಗೌಡ (56) ಎಂದು ಗುರುತಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ವಾಸವಾಗಿದ್ದರು. ಅವಿವಾಹಿತರಾಗಿದ್ದ ಇವರು ಸೋಮವಾರ ಸಂಜೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಮುಲ್ಕಿ: ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮುಲ್ಕಿ, ಫೆ.05. ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಲ್ಕಿಯ ಪೆಟ್ರೋಲ್ ಪಂಪು ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಕಾರ್ನಾಡು ಸಮೀಪದ ಸುಖಾನಂದ ನಗರ ನಿವಾಸಿ ಮಧುಸೂಧನ್ ಕಾಮತ್ (61) ಎಂದು ಗುರುತಿಸಲಾಗಿದೆ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು ಮಧುಸೂಧನ್ ಕಾಮತ್‌ ಸೋಮವಾರ ರಾತ್ರಿ ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆದಿದ್ದು, ಗಂಭೀರ

ಮುಲ್ಕಿ: ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ನೇತ್ರಾವತಿ ನದಿಯಲ್ಲಿನ ಅಕ್ರಮ ಮರಳು ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ, 15 ಲಕ್ಷದ ಸೊತ್ತು ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.05. ನಾಡ ದೋಣಿಯನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳು 15 ಲಕ್ಷ ಮೌಲ್ಯದ ಸೊತ್ತುಗಳ ಸಹಿತ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಭಾನುವಾರದಂದು ತಾಲೂಕಿನ ಅರಳ ಗ್ರಾಮದ ಮುಲಾರ ಪಟ್ಟಣದ ನೇತ್ರಾವತಿ ನದಿ ದಂಡೆಯಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಎಸ್ಪಿ ರವಿಕಾಂತೇಗೌಡ IPS ರವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಸಜಿತ್ ರವರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರ್

ನೇತ್ರಾವತಿ ನದಿಯಲ್ಲಿನ ಅಕ್ರಮ ಮರಳು ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ, 15 ಲಕ್ಷದ ಸೊತ್ತು ವಶಕ್ಕೆ Read More »

ಕರಾವಳಿ

ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.05. ಇಲ್ಲಿನ ಬೊಳುವಾರು ಸಮೀಪವಿರುವ ಗುಜಿರಿ ಅಂಗಡಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ಭಾನುವಾರದಂದು ಮಧ್ಯಾಹ್ನ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೆಂಕಿ ಇನ್ನಷ್ಟು ವಿಪರೀತವಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಸ್ಥಳೀಯ ಮನೆಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಘಟನಾ ಸ್ಥಳದಲ್ಲಿ ನರೆದಿದ್ದವರನ್ನು ಚದುರಿಸಲು

ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ Read More »

ಕರಾವಳಿ

ಕರೋಪಾಡಿ: ಜುಗಾರಿ ಅಡ್ಡೆಗೆ ದಾಳಿ ► ನಾಲ್ವರ ಬಂಧನ, ನಗದು ಸೇರಿದಂತೆ ನಾಲ್ಕು ಬೈಕ್ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ‌.04. ಠಾಣಾ ವ್ಯಾಪ್ತಿಯ ಕರೊಪಾಡಿ ಗ್ರಾಮದ ಆನೇಕಲ್ಲು ಎಂಬಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಗಳನ್ನು ಬಂಧಿಸಿ 6250/- ರೂ, ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಟ್ಲ ಠಾಣಾ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜೇಶ್ವರ ನಿವಾಸಿ ಜಿತೇಂದ್ರ(23), ಸಾಲೆತ್ತೂರು ನಿವಾಸಿ ಹ್ಯಾರಿಸ್ (25), ದೇರಳಕಟ್ಟೆ ನಿವಾಸಿ ಅಬ್ಬಾಸ್(48) ಹಾಗೂ ಮಂಜೇಶ್ವರ

ಕರೋಪಾಡಿ: ಜುಗಾರಿ ಅಡ್ಡೆಗೆ ದಾಳಿ ► ನಾಲ್ವರ ಬಂಧನ, ನಗದು ಸೇರಿದಂತೆ ನಾಲ್ಕು ಬೈಕ್ ವಶಕ್ಕೆ Read More »

ಕರಾವಳಿ

ಫಳ್ನೀರ್: ದರೋಡೆಗೆ ಸಂಚು ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.04. ನಗರದ ಫಳ್ನೀರ್ ಬಳಿಯಲ್ಲಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದರೆನ್ನಲಾದ ನಾಲ್ವರು ಆರೋಪಿಗಳನ್ನು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತೊಕ್ಕೊಟ್ಟು ಒಳಪೇಟೆ ನಿವಾಸಿ ಮನೋಜ್ ಕುಮಾರ್ (33), ಮೊಗವೀರಪಟ್ಣ ಬೀಚ್ ಬಳಿಯ ನಿವಾಸಿ ಪ್ರಸಾದ್ ಯಾನೆ ಪಚ್ಚು (28), ಮೊಗವೀರಪಟ್ಣ ವ್ಯಾಘ್ರ ಚಾಮುಂಡೇಶ್ವರಿ ದೇವಳದ ಬಳಿಯ ನಿವಾಸಿ ಶ್ರವಣ್ (22) ಹಾಗೂ ತೊಕ್ಕೊಟ್ಟು ಭಟ್ ನಗರ ನಿವಾಸಿ ಸುಜಿತ್ (27) ಎಂದು

ಫಳ್ನೀರ್: ದರೋಡೆಗೆ ಸಂಚು ► ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ

ಆಲಂಕಾರು: ಟೂರಿಸ್ಟ್ ಕಾರು ಢಿಕ್ಕಿ ► ಶಾಲಾ ವಿದ್ಯಾರ್ಥಿನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಟೊಯೋಟಾ ಇಟಿಯೋಸ್ ಕಾರೊಂದು ಢಿಕ್ಕಿಯಾದ ಪರಿಣಾಮ ಶಾಲಾ ಬಾಲಕಿಯೋರ್ವಳು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರಿನಲ್ಲಿ ಶನಿವಾರದಂದು ನಡೆದಿದೆ. ಗಾಯಾಳುವನ್ನು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಎಂದು ಗುರುತಿಸಲಾಗಿದೆ. ಈಕೆ ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿಯಾಗಿ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲಂಕಾರು: ಟೂರಿಸ್ಟ್ ಕಾರು ಢಿಕ್ಕಿ ► ಶಾಲಾ ವಿದ್ಯಾರ್ಥಿನಿಗೆ ಗಾಯ Read More »

ಕರಾವಳಿ

ಕೊಯಿಲ: ಜೀವನದಲ್ಲಿ ಜಿಗುಪ್ಸೆಯುಂಟಾಗಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಠಾಣಾ ವ್ಯಾಪ್ತಿಯ ಕೊಯಿಲ ಫಾರ್ಮ್ ನಲ್ಲಿ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಮಕುಂಜ ಗ್ರಾಮದ ಪೆರ್ಜಿ ಮನೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ಖಲಂದರ್ ಶಾಫಿ(34) ಎಂದು ಗುರುತಿಸಲಾಗಿದೆ. ಗುರುವಾರದಂದು ಮನೆಯಿಂದ ಹೊರಹೋಗಿದ್ದ ಈತ ಸಂಜೆಯಾದರೂ ಮನೆಗೆ ಬರದೆ ಇದ್ದುದರಿಂದ ಗಾಬರಿಗೊಂಡ ಮನೆಯವರು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದು, ಪತ್ತೆಯಾಗಿರಲಿಲ್ಲ. ಶನಿವಾರದಂದು ಕೊಯಿಲ ರೇಷ್ಮೆ ಫಾರ್ಮಿನ ಕಟ್ಟಡದಲ್ಲಿ ನೇಣುಬಿಗಿದು

ಕೊಯಿಲ: ಜೀವನದಲ್ಲಿ ಜಿಗುಪ್ಸೆಯುಂಟಾಗಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ಸಂಪಾಜೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಹಿನ್ನೆಲೆ ► ಗುಡ್ಡೆಗದ್ದೆ ಪರಿಸರದಲ್ಲಿ ಕೂಂಬಿಂಗ್ ಆರಂಭ

ಸಂಗ್ರಹ ಚಿತ್ರ (ನ್ಯೂಸ್ ಕಡಬ) newskadaba.com ಸುಳ್ಯ, ಫೆ.03. ಶುಕ್ರವಾರ ಸಂಜೆ ಸಂಪಾಜೆ ಗ್ರಾಮದ ಕೊಯಿನಾಡು ಸಮೀಪದ ಗುಡ್ಡೆಗದ್ದೆ ಎಂಬಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎನ್ನಲಾಗಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯ ಆರಂಭವಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದರು. ತದನಂತರ ಶುಕ್ರವಾರ ಸಂಜೆ ಗುಡ್ಡೆಗದ್ದೆಯ ಮಲೆಕುಡಿಯ ಜನಾಂಗದ ಕೆಲ ಮನೆಗಳಿಗೆ ಮೂವರು ನಕ್ಸಲರು ಬಂದು ತಲಾ‌ 05 ಕೆ.ಜಿ.ಯಂತೆ ಒಟ್ಟು 20 ಕೆ.ಜಿ ಅಕ್ಕಿ ಪಡೆದುಕೊಂಡಿದ್ದಾರಲ್ಲದೆ, ಆ ಮನೆಯ ಸದಸ್ಯನೊಬ್ಬನನ್ನು ಪೇಟೆಗೆ ಕಳುಹಿಸಿ ದಿನಸಿ

ಸಂಪಾಜೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಹಿನ್ನೆಲೆ ► ಗುಡ್ಡೆಗದ್ದೆ ಪರಿಸರದಲ್ಲಿ ಕೂಂಬಿಂಗ್ ಆರಂಭ Read More »

ಕರಾವಳಿ
Scroll to Top