ಕರಾವಳಿ

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್, ಪ್ರ.ಕಾರ್ಯದರ್ಶಿಯಾಗಿ ಹಾಜಿ| ಮುಹಮ್ಮದ್ ರಫೀಕ್ ಆಯ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.18. ನೇರಳಕಟ್ಟೆ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ರಫೀಕ್ ಎಸ್.ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಪಿ.ಕೆ. ಅಬ್ಬಾಸ್ ಪರ್ಲೊಟ್ಟು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಸ್.ಎಂ.ಮುಹಮ್ಮದ್ ಶಾಫಿ, ಹಮೀದ್ ಇನಾಮ್ ಮಾಣಿ, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಹಾಜಿ ಮುಹಮ್ಮದ್ […]

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್, ಪ್ರ.ಕಾರ್ಯದರ್ಶಿಯಾಗಿ ಹಾಜಿ| ಮುಹಮ್ಮದ್ ರಫೀಕ್ ಆಯ್ಕೆ Read More »

ಕರಾವಳಿ

ಕಡಬ: ನಾಪತ್ತೆಯಾಗಿದ್ದ ತಾಯಿ ಮತ್ತು ಮಕ್ಕಳು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಕಳೆದ ಡಿಸೆಂಬರ್ ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯನ್ನು ಶುಕ್ರವಾರದಂದು ಕಡಬ ಪೊಲೀಸರು ಕಾಸರಗೋಡು ಸಮೀಪ ಪತ್ತೆಹಚ್ಚಿ ಕರೆತಂದಿದ್ದಾರೆ. 2017 ಡಿಸೆಂಬರ್ 18 ರಂದು ಐತ್ತೂರು ಗ್ರಾಮದ ಓಟಕಜೆ ನಿವಾಸಿ ಸೆಲ್ವಕುಮಾರ್ ಎಂಬವರ ಪತ್ನಿ ಶ್ರೀಮತಿ ಜ್ಯೋತಿ ಮಲಾರ್ ಹಾಗೂ ಮಕ್ಕಳಾದ ನಿದೀಶ್(7) ವರ್ಷಿಣಿ(9) ನಾಪತ್ತೆಯಾಗಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದ ಕಡಬ ಪೊಲೀಸರು ಶುಕ್ರವಾರದಂದು ಕಾಸರಗೋಡಿನ ಕಿನ್ನಿಂಗಾರು ಎಂಬಲ್ಲಿ ಪತ್ತೆಹಚ್ಚಿದ್ದು, ಮಹಿಳೆಯನ್ನು ಆಕೆಯ ತಾಯಿಯ ಜೊತೆ ಕಳುಹಿಸಿಕೊಡಲಾಗಿದೆ.

ಕಡಬ: ನಾಪತ್ತೆಯಾಗಿದ್ದ ತಾಯಿ ಮತ್ತು ಮಕ್ಕಳು ಪತ್ತೆ Read More »

ಕರಾವಳಿ

ಸುಬ್ರಹ್ಮಣ್ಯ: ತಾಯಿ, ಮಗು ಆತ್ಮಹತ್ಯೆ ► ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.17. ಎರಡು ವರ್ಷದ ಮಗುವಿಗೆ ನೇಣಿಗೆ ಕೊಂದಿದ್ದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯದ ನಾಲ್ಕೂರು ಎಂಬಲ್ಲಿ ಶನಿವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಮೀಪದ ಸಾಲ್ತಾಡಿ ನಿವಾಸಿ ಗಾರೆ ಕೆಲಸ ನಿರ್ವಹಿಸುತ್ತಿರುವ ಯತೀಂದ್ರ ಎಂಬವರ ಪತ್ನಿ ಶ್ರೀಮತಿ ಗೋಪಿ(30) ಹಾಗೂ ಎರಡು ವರ್ಷದ ಪುತ್ರಿ ಮನ್ವಿತಾ ಎಂದು ಗುರುತಿಸಲಾಗಿದೆ. ತನ್ನ ಹಿರಿಯ ಪುತ್ರಿ ಧನ್ವಿತಾಳನ್ನು ಅಂಗನವಾಡಿಗೆ ಕಳುಹಿಸಿ ಕಿರಿಯ ಪುತ್ರಿ ಮನ್ವಿತಾಳನ್ನು ನೇಣಿಗೇರಿಸಿ ಆತ್ಮಹತ್ಯೆಗೆ

ಸುಬ್ರಹ್ಮಣ್ಯ: ತಾಯಿ, ಮಗು ಆತ್ಮಹತ್ಯೆ ► ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ Read More »

ಕರಾವಳಿ

ಗೋಳಿತ್ತಡಿ – ಏಣಿತ್ತಡ್ಕ ನೂತನ ರಸ್ತೆಯಲ್ಲಿ ಮೊದಲ ಅಪಘಾತ ► ದ್ವಿಚಕ್ರ ವಾಹನ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಬೈಕ್ ಹಾಗೂ ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ಗಾಯಗೊಂಡ ಘಟನೆ ಗೋಳಿತ್ತಡಿಯ ಅಂಬಾ ಕ್ರಾಸ್ ಎಂಬಲ್ಲಿ ಶನಿವಾರದಂದು ನಡೆದಿದೆ. ಘಟನೆಯಲ್ಲಿ ಕೊಯಿಲ ಗ್ರಾಮದ ಸುಣ್ಣಾಡಿ ಸಮೀಪದ ನಿವಾಸಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಕೌಶಿಕ್ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಣ್ಣಾಡಿಯಿಂದ ಗೋಳಿತ್ತಡಿಗೆ ಆಗಮಿಸುತ್ತಿದ್ದ ಆಕ್ಟಿವಾ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಕಳೆದೆರಡು ದಿನಗಳ ಹಿಂದೆ ಈ

ಗೋಳಿತ್ತಡಿ – ಏಣಿತ್ತಡ್ಕ ನೂತನ ರಸ್ತೆಯಲ್ಲಿ ಮೊದಲ ಅಪಘಾತ ► ದ್ವಿಚಕ್ರ ವಾಹನ ಸವಾರನಿಗೆ ಗಾಯ Read More »

ಕರಾವಳಿ

ಎಡಮಂಗಲ: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಬೈಕೊಂದು ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಸವಾರ ಗಾಯಗೊಂಡ ಘಟನೆ ಕಡಬ ಸಮೀಪದ ಎಡಮಂಗಲ ಎಂಬಲ್ಲಿ ಶನಿವಾರದಂದು ನಡೆದಿದೆ. ಗಾಯಾಳುವನ್ನು ಬೈಕ್ ಸವಾರ ನಿಂತಿಕಲ್ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್(19) ಎಂದು ಗುರುತಿಸಲಾಗಿದೆ. ಈತ ಚಲಾಯಿಸುತ್ತಿದ್ದ ಬೈಕ್ ಎಡಮಂಗಲ ದೇವಸ್ಥಾನದ ಸಮೀಪ ಸ್ಕಿಡ್ ಆಗಿ ಬಿದ್ದಿದ್ದು, ಗಾಯಗೊಂಡ ಪ್ರಜ್ವಲ್ ನನ್ನು ಕಡಬದ 108 ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಡಮಂಗಲ: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಕೊಂಬಾರು: ನಾಯಿ ಅಡ್ಡ ಬಂದು ಬೈಕ್ ಪಲ್ಟಿ ► ಸಹ ಸವಾರೆಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮವಾಗಿ ಬೈಕ್ ಪಲ್ಟಿಯಾಗಿ ಸಹ ಸವಾರೆ ಗಾಯಗೊಂಡ ಘಟನೆ ಶನಿವಾರದಂದು ನಡೆದಿದೆ. ಗಾಯಾಳು ಮಹಿಳೆಯನ್ನು ಕೊಂಬಾರಿನ ತಿಮ್ಮಕ್ಕ(65) ಎಂದು ಗುರುತಿಸಲಾಗಿದೆ. ಗಾಯಾಳು ಮಹಿಳೆಯನ್ನು 108 ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗಿದೆ.

ಕೊಂಬಾರು: ನಾಯಿ ಅಡ್ಡ ಬಂದು ಬೈಕ್ ಪಲ್ಟಿ ► ಸಹ ಸವಾರೆಗೆ ಗಾಯ Read More »

ಕರಾವಳಿ

ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಯುವತಿಯರ ಜೊತೆಗಿನ ಸೆಲ್ಫಿ ವೈರಲ್ ► ಜವಾಬ್ದಾರಿಯುತ ಸ್ಥಾನದಲ್ಲಿದ್ದ ಯುವಕನ ಕಾಮದಾಟ ಬಹಿರಂಗ

(ನ್ಯೂಸ್ ಕಡಬ) newskadaba.com ಉಡುಪಿ, ಮಾ.16. ಒಬ್ಬಳಲ್ಲ… ಇಬ್ಬರಲ್ಲ… ಬರೋಬ್ಬರಿ 11 ಯುವತಿಯರ ಜೊತೆ ಹೋಂ ಗಾರ್ಡ್ ಓರ್ವ ಇರುವಂತಹ ಸೆಲ್ಫೀ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನಲ್ಲಿ, ಕಾಡಿನಲ್ಲಿ, ರೂಂನಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ವಿವಿಧ ಯುವತಿಯರ ಜೊತೆ ಒಂಟಿ ಸೆಲ್ಫಿ ತೆಗೆದುಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನನ್ನು ಕಾರ್ಕಳ ತಾಲೂಕಿನ ಸುಜೀತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಉಡುಪಿ ಜಿಲ್ಲೆಯ ಶಿರ್ವ ಠಾಣೆಯಲ್ಲಿ ಕೆಲಸ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನೆಂಬ ಎಂಬ

ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಯುವತಿಯರ ಜೊತೆಗಿನ ಸೆಲ್ಫಿ ವೈರಲ್ ► ಜವಾಬ್ದಾರಿಯುತ ಸ್ಥಾನದಲ್ಲಿದ್ದ ಯುವಕನ ಕಾಮದಾಟ ಬಹಿರಂಗ Read More »

ಕರಾವಳಿ

ನ್ಯಾಯಾಲಯ ಸಂಕೀರ್ಣದಲ್ಲಿ ಸ್ವಚ್ಛತಾ ಸೇವೆ ► ಹೊರಗುತ್ತಿಗೆ ಏಜೆನ್ಸಿಗಳಿಂದ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.16. ಜಿಲ್ಲಾ ನ್ಯಾಯಲಯ ಸಂಕೀರ್ಣ ಮಂಗಳೂರು ಹಾಗೂ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಮೂಡಬಿದ್ರೆ ನ್ಯಾಯಾಲಯ ಸಂಕೀರ್ಣಗಳಲ್ಲಿ ಸ್ವಚ್ಛತಾ ಸೇವೆಗೆ ಮಾನವ ಸಂಪನ್ಮೂಲ ಸೇವೆ ನೀಡಲು ಹೊರಗುತ್ತಿಗೆ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಮಾರ್ಚ್ 20 ಅಂತಿಮ ದಿನವಾಗಿದೆ‌. ಹೆಚ್ಚಿನ ಮಾಹಿತಿಗೆ ಜಿಲ್ಲಾ ನ್ಯಾಯಾಲಯ ಕಚೇರಿಯನ್ನು ಮಂಗಳೂರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನ್ಯಾಯಾಲಯ ಸಂಕೀರ್ಣದಲ್ಲಿ ಸ್ವಚ್ಛತಾ ಸೇವೆ ► ಹೊರಗುತ್ತಿಗೆ ಏಜೆನ್ಸಿಗಳಿಂದ ಟೆಂಡರ್ ಆಹ್ವಾನ Read More »

ಕರಾವಳಿ

ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರದ ಗುಣಮಟ್ಟ ಮತ್ತು ಶುಚಿತ್ವದಲ್ಲಿ ರಾಜಿ ಇಲ್ಲ: ಯು.ಟಿ‌.ಖಾದರ್ ► ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ಪ್ರಗತಿ ಪರಿಶೀಲನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.16. ಬಡವರಿಗಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ನ ಊಟ, ತಿಂಡಿಯ ಗುಣಮಟ್ಟ, ಪ್ರಮಾಣ ಮತ್ತು ಶುಚಿತ್ವದ ವಿಷಯದಲ್ಲಿ ರಾಜಿ ಬೇಡ. ಎಲೆಕ್ಟ್ರಿಕಲ್ ಸ್ಕೇಲ್‍ನ್ನು ಕೌಂಟರ್‍ನಲ್ಲಿ ಅಳವಡಿಸಿದ್ದು, ಆಹಾರದ ಪ್ರಮಾಣದಲ್ಲಿ ಗ್ರಾಹಕರಿಗೆ ಅನುಮಾನವಿದ್ದಲ್ಲಿ ಪರಿಹರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬಾರಾಜು ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದಿರಾ ಕ್ಯಾಂಟೀನ್‍ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಆಹಾರದ ರುಚಿಯಲ್ಲಿ ವ್ಯತ್ಯಾಸವಾಗಬಾರದು. ಸರಿಯಾದ ರೂಪದಲ್ಲಿ ಸರಿಯಾದ ಗುಣಮಟ್ಟದಲ್ಲಿ ಆಹಾರವನ್ನು ಒದಗಿಸಬೇಕು.

ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರದ ಗುಣಮಟ್ಟ ಮತ್ತು ಶುಚಿತ್ವದಲ್ಲಿ ರಾಜಿ ಇಲ್ಲ: ಯು.ಟಿ‌.ಖಾದರ್ ► ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ಪ್ರಗತಿ ಪರಿಶೀಲನಾ ಸಭೆ Read More »

ಕರಾವಳಿ

ಕಡಬ: ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಸಚಿವ ರಮಾನಾಥ ರೈಯವರ ಭಾಷಣಕ್ಕೂ ತಟ್ಟಿತು ವಿದ್ಯುತ್ ಕಡಿತದ ಬಿಸಿ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಕಡಬ ಭಾಗಕ್ಕೆ  ಕಾಂಗ್ರೆಸ್ ಸರಕಾರ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದು, ಇದನ್ನೆಲ್ಲ ತಿಳಿದುಕೊಂಡು ಮತದಾರರ ಬಳಿ ತಲುಪಿಸುವ ಜಾಣ್ಮೆ ಕಾರ್ಯಕರ್ತರಲ್ಲಿ ಇರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಗುರುವಾರ ಕಡಬದ ಒಕ್ಕಲಿಗ ಗೌಡ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೊೖಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಾಲೇಜು, ಶಾಂತಿಮೊಗರು ಸೇತುವೆ, ಮರ್ದಾಳ

ಕಡಬ: ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಸಚಿವ ರಮಾನಾಥ ರೈಯವರ ಭಾಷಣಕ್ಕೂ ತಟ್ಟಿತು ವಿದ್ಯುತ್ ಕಡಿತದ ಬಿಸಿ Read More »

ಕರಾವಳಿ
Scroll to Top