ಕರಾವಳಿ

ಸವಣೂರು: ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಅಂಗಾರರಿಂದ ಕಾರ್ಯಕರ್ತರ ಬೇಟಿ, ಮತಯಾಚನೆ

(ನ್ಯೂಸ್ ಕಡಬ) newskadaba.com ಸವಣೂರು, ಎ.18. ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್.ಅಂಗಾರ ಅವರು ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಬೇಟಿ ಮಾಡಿ ಸಮಾಲೋಚನೆ ನಡೆಸಿ ಮತದಾರರಲ್ಲಿ ಮತಯಾಚಿಸಿದರು. ಸವಣೂರು ಚಂದ್ರನಾಥ ಬಸದಿಯ ಪದ್ಮಾವತಿ ದೇವಿ ಸನ್ನಿದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮತಯಾಚನೆ ನಡೆಸಿದರು. ಸವಣೂರು ಗ್ರಾಮದ ಪರಣೆ, ಪುಣ್ಚಪ್ಪಾಡಿ ಗ್ರಾಮದ ಮುಂಡತ್ತಡ್ಕ, ಸೋಂಪಾಡಿಯಲ್ಲಿ, ಪಾಲ್ತಾಡಿ ಗ್ರಾಮದ ಪಾದೆಬಂಬಿಲ, ಪಂಚೋಡಿಯಲ್ಲಿ ಸಮಾಲೋಚನೆ ಸಭೆ ನಡೆಸಿ ಕಾರ್ಯಕರ್ತರನ್ನು ಬೇಟಿ ಮಾಡಿದರು. ಈ […]

ಸವಣೂರು: ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಅಂಗಾರರಿಂದ ಕಾರ್ಯಕರ್ತರ ಬೇಟಿ, ಮತಯಾಚನೆ Read More »

ಕರಾವಳಿ

ಸವಣೂರು: ವಿದ್ಯಾರಶ್ಮಿ ಕಾಲೇಜು ವಿದ್ಯಾರ್ಥಿಗಳಿಂದ ತಾರಾಲಯ ಬೇಟಿ

(ನ್ಯೂಸ್ ಕಡಬ) newskadaba.com ಸವಣೂರು, ಎ.18. ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿವೃಂದ ಮಂಗಳೂರು ಪಿಲಿಕುಳ ಸ್ವಾಮಿ ವಿವೇಕಾನಂದ ತಾರಾಲಯಕ್ಕೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಸವಣೂರು: ವಿದ್ಯಾರಶ್ಮಿ ಕಾಲೇಜು ವಿದ್ಯಾರ್ಥಿಗಳಿಂದ ತಾರಾಲಯ ಬೇಟಿ Read More »

ಕರಾವಳಿ

ಎಪ್ರಿಲ್ 21ರ ತುಳು ಅಕಾಡೆಮಿಯಲ್ಲಿ ‘ತುಳು ಬದ್‍ಕ್’  ಚಿತ್ರಕಲಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು  ಜಗದೀಶ್ ಅಮ್ಮುಂಜೆ ಸ್ಮಾರಕ ಆರ್ಟ್ ಗ್ಯಾಲರಿಯ  ಸಂಯುಕ್ತ ಆಶ್ರಯದಲ್ಲಿ ಎ.21 ರಂದು ಮಂಗಳೂರಿನ  ಉರ್ವಾಸ್ಟೋರ್  ತುಳುಭವನದ ಸಿರಿ ಚಾವಡಿಯಲ್ಲಿ ‘ ತುಳು ಬದ್‍ಕ್ ‘ ಎಂಬ ವಿಷಯದಲ್ಲಿ  ಚಿತ್ರಕಲಾ ಶಿಬಿರ ನಡೆಯಲಿದೆ.  ಹಿರಿಯ ಕಲಾವಿದರಾಗಿದ್ದ ಜಗದೀಶ್ ಅಮ್ಮುಂಜೆ ಅವರ ನೆನಪಿನಲ್ಲಿ ಆಯೋಜಿಸಲಾಗಿರುವ ಒಂದು ದಿನದ ಚಿತ್ರಕಲಾ ಶಿಬಿರದಲ್ಲಿ ಮಂಗಳೂರಿನ ಮಹಾಲಸ ಚಿತ್ರಕಲಾ ಮಹಾವಿದ್ಯಾಲಯದ 25 ಮಂದಿ ಯುವ ಕಲಾವಿದರು ತುಳುನಾಡಿನ ಬದುಕು, ಸಂಸ್ಕೃತಿ ಬಗ್ಗೆ ಕಲಾಕೃತಿಗಳನ್ನು ರಚಿಸಲಿದ್ದಾರೆ.

ಎಪ್ರಿಲ್ 21ರ ತುಳು ಅಕಾಡೆಮಿಯಲ್ಲಿ ‘ತುಳು ಬದ್‍ಕ್’  ಚಿತ್ರಕಲಾ ಶಿಬಿರ Read More »

ಕರಾವಳಿ

ಪುತ್ತೂರು ಜಾತ್ರೆ: ನಿಷೇಧಾಜ್ಞೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ  ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಪುತ್ತೂರು ನಗರ ಪ್ರದೇಶವು ಮತೀಯವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, ಶಾಂತಿ ಕಾಪಾಡುವ ಹಿತದೃಷ್ಠಿಯಿಂದ ಎಪ್ರಿಲ್ 18 ರ ಮಧ್ಯರಾತ್ರಿಯವರೆಗೆ ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈನ್ ಶಾಪ್ ಮತ್ತು ಬಾರ್‍ಗಳನ್ನು ಮುಚ್ಚಲು ಅಬಕಾರಿ ಕಾಯ್ದೆ 1965 ಸೆಕ್ಷನ್ 21(1)ರ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ದ.ಕ ಜಿಲ್ಲಾಧಿಕಾರಿ, ಹಾಗೂ ಜಿಲ್ಲಾ ದಂಢಾಧಿಕಾರಿ ಆದೇಶಿಸಿದ್ದಾರೆ.

ಪುತ್ತೂರು ಜಾತ್ರೆ: ನಿಷೇಧಾಜ್ಞೆ Read More »

ಕರಾವಳಿ

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿ.ಸಿ. ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.  ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕುಗಳು ತಮ್ಮ  ಶಾಖೆಗಳಲ್ಲಿ ನಡೆಯುವ ದೊಡ್ಡ ಮೊತ್ತದ ವ್ಯವಹಾರದ ಸಮಗ್ರ ವಿವರ ಪ್ರತೀನಿತ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವನ್ನು ಸಹಿಸಲಾಗದು.

ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿ.ಸಿ. ಸೂಚನೆ Read More »

ಕರಾವಳಿ

ಕಥುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಖಂಡನೆ ► ಇತಿಕಾಫ್ ಮೀಲಾದ್ ಕಮಿಟಿಯ ವತಿಯಿಂದ ಗಡಿಯಾರದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.17. ಜಮ್ಮು ಕಾಶ್ಮೀರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಂಟ್ವಾಳ ತಾಲೂಕಿನ ಗಡಿಯಾರದ ಇತಿಕಾಫ್ ಮೀಲಾದ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗಡಿಯಾರ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಿತ್ತಿಚಿತ್ರಗಳನ್ನ ಹಿಡಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಶಂಶೀರ್ ಬುಡೋಳಿ, ‘ಈ ಎರಡು ಪ್ರಕರಣಗಳನ್ನ ವಿರೋಧಿಸಿ ಇವತ್ತು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜಾತಿ, ಧರ್ಮ ಮೀರಿ ಇವತ್ತು

ಕಥುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಖಂಡನೆ ► ಇತಿಕಾಫ್ ಮೀಲಾದ್ ಕಮಿಟಿಯ ವತಿಯಿಂದ ಗಡಿಯಾರದಲ್ಲಿ ಪ್ರತಿಭಟನೆ Read More »

ಕರಾವಳಿ

ಆಲಂಕಾರು: ಬೈಕ್ ಢಿಕ್ಕಿ ► ಪಾದಚಾರಿಗೆ ಗಾಯ

ಕಡಬ, ಎ.17. ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಗಾಯಗೊಂಡ ಘಟನೆ ಆಲಂಕಾರು – ಶರವೂರು ರಸ್ತೆಯ ದುರ್ಗಾಂಬಾ ಪದವಿ ಪುರ್ವ ಕಾಲೇಜಿನ ಮುಂಭಾಗದಲ್ಲಿ ಎ.16 ರಂದು ರಾತ್ರಿ ನಡೆದಿದೆ.   ಗಾಯಾಳು ಪಾದಚಾರಿಯನ್ನು ಆಲಂಕಾರು ಗ್ರಾಮದ ಕಜೆ ನಿವಾಸಿ ಸೂರಪ್ಪ ಪುಜಾರಿ ಎಂದು ಗುರುತಿಸಲಾಗಿದೆ. ಇವರು ಸೋಮವಾರದಂದು ತನ್ನ  ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶರವೂರು ಕಡೆಯಿಂದ ಬಂದ ಟಿವಿಎಸ್ ವಿಕ್ಟರ್ ಬೈಕು ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ

ಆಲಂಕಾರು: ಬೈಕ್ ಢಿಕ್ಕಿ ► ಪಾದಚಾರಿಗೆ ಗಾಯ Read More »

ಕರಾವಳಿ

ವಿಶೇಷ ಆಕರ್ಷಣೆಯೊಂದಿಗೆ ನಡೆಯುತ್ತಿದೆ ಕಡಬದ ಆಯನ

(ನ್ಯೂಸ್ ಕಡಬ) newskadaba.com ಕಡಬ, ಎ.17. ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವ ಹಾಗೂ ಇತರ ದೈವಗಳ ನೇಮೋತ್ಸವ ಎಪ್ರಿಲ್ 15 ರಿಂದ ಕೊಡಿಯೇರುವ ಮೂಲಕ ಪ್ರಾರಂಭಗೊಂಡಿದ್ದು, ವಿಶೇಷ ದೈವಾರಾಧನೆಯೊಂದಿಗೆ ನಡೆಯುತ್ತಿದೆ. ಮಂಗಳವಾರದಂದು ಮಾಡ ದೈವಸ್ಥಾನದಿಂದ ಮುಡಿ ಆಗುವ ಮಜಲಿಗೆ ಪಯ್ಯೋಳಿಗೆ ಹೋಗಿ ಬರಲಾಯಿತು. ವರ್ಷಂಪ್ರತಿ ಜರಗುವ ಕಡಬ ಜಾತ್ರೆಯು ಈ ಭಾಗದ ಪ್ರಸಿದ್ಧ ಆಯನವಾಗಿದ್ದು, ಊರ – ಪರವೂರ ಅದೆಷ್ಟೋ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ದೈವದ ಭಕ್ತಿಗೆ ಪಾತ್ರರಾಗುತ್ತಿದ್ದಾರೆ. ಶ್ರೀ ಕಡಂಬಳಿತ್ತಾಯ ಹಾಗೂ

ವಿಶೇಷ ಆಕರ್ಷಣೆಯೊಂದಿಗೆ ನಡೆಯುತ್ತಿದೆ ಕಡಬದ ಆಯನ Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜು: ಜಿ. ಎಸ್. ಟಿ. ಕುರಿತು ವಿಚಾರ ಸಂಕಿರಣ

(ನ್ಯೂಸ್ ಕಡಬ) newskadaba.com ಕುಂತೂರು, ಎ.17. ಇಲ್ಲಿನ ಮಾರ್ ಇವಾನಿಯೋಸ್ ಪದವಿ ಕಾಲೇಜಿನ ವಾಣಿಜ್ಯ ಸಂಘ ಹಾಗೂ ಬಿ. ಎಡ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಜಿ. ಎಸ್. ಟಿ. ಕುರಿತು ವಿಚಾರ ಸಂಕಿರಣ ನಡೆಯಿತು. ಬಂಟ್ವಾಳದ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ರವಿ ಎಮ್. ಎನ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಜಿ. ಎಸ್. ಟಿ. ಕುರಿತಾದ ಸವಿವರವಾದ ಮಾಹಿತಿಯೊಂದಿಗೆ ವಿಚಾರ ಸಂಕಿರಣ ನಡೆಸಿಕೊಟ್ಟರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕಿ, ಉಪನ್ಯಾಸಕಿ ಶ್ರೀಮತಿ. ರಾಜಿ

ಮಾರ್ ಇವಾನಿಯೋಸ್ ಕಾಲೇಜು: ಜಿ. ಎಸ್. ಟಿ. ಕುರಿತು ವಿಚಾರ ಸಂಕಿರಣ Read More »

ಕರಾವಳಿ

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ವಾರ್ಷಿಕೋತ್ಸವ ► ಧನಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿ ಸಾಧಿಸಿ- ಡಾ|ವೇದಾವತಿ

(ನ್ಯೂಸ್ ಕಡಬ) newskadaba.com ಕುಂತೂರು, ಎ.17. ಶೈಕ್ಷಣಿಕವಾಗಿ ನಿರೀಕ್ಷಿತ ಗುರಿ ತಲುಪಲು ಸತತ ಪರಿಶ್ರಮ ಹಾಗೂ ಧನಾತ್ಮಕ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರಬೇಕಾದ್ದು ಮುಖ್ಯ. ಯಾವುದೇ ವೈಫಲ್ಯಗಳಿಗೂ ಧೃತಿಗೆಡದೆ ಋಣಾತ್ಮಕವಾಗಿ ಚಿಂತಿಸದೆ ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಜೀವನದಲ್ಲಿ ಸಫಲತೆಯನ್ನು ಕಾಣಲು ಸಾಧ್ಯವಿದೆ ಎಂಬುದಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಕಡಬ ಇಲ್ಲಿ ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲೆ ಡಾ|ವೇದಾವತಿ ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ಮಾರ್ ಇವಾನಿಯೋಸ್ ಕಾಲೇಜಿನ ಪದವಿ ಹಾಗೂ ಬಿ.ಎಡ್. ವಿಭಾಗಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ವಾರ್ಷಿಕೋತ್ಸವ ► ಧನಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿ ಸಾಧಿಸಿ- ಡಾ|ವೇದಾವತಿ Read More »

ಕರಾವಳಿ
Scroll to Top