ಕರಾವಳಿ

ಬಲ್ಯ – ಪದವು ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಉಪ್ಪಿನಂಗಡಿ – ಸುಬ್ರಹ್ಮಣ್ಯ ರಸ್ತೆಯಲ್ಲಿ ರಾತ್ರಿ ಹೊತ್ತು ಸಂಚರಿಸುವವರಿಗೆ ಎಚ್ಚರ

(ನ್ಯೂಸ್ ಕಡಬ) newskadaba.com ಕಡಬ, ಅ.30. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಕಾಡಾನೆಯು ಪ್ರತ್ಯಕ್ಷವಾಗಿದ್ದು, ಪರಿಸರದ ಜನರನ್ನು ಭಯಭೀತರನ್ನಾಗಿಸಿದೆ‌. ಕಳೆದೆರಡು ದಿನಗಳ ಹಿಂದೆ ಇಚಿಲಂಪಾಡಿ ಪರಿಸರಕ್ಕೆ ಕಾಡಾನೆ ಆಗಮಿಸಿದೆ ಎಂಬ ವದಂತಿ ಹಬ್ಬಿತ್ತಾದರೂ, ಮಂಗಳವಾರ ಸಂಜೆಯ ವೇಳೆಗೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಇಚಿಲಂಪಾಡಿಯಿಂದ ಬಲ್ಯ ಮೂಲವಾಗಿ ಕಾಡಿನಲ್ಲಿ ಸಂಚರಿಸಿದ ಆನೆಯು ಪದವು ಗೇರುತೋಪಿನಿಂದ ನೇರವಾಗಿ ರಸ್ತೆಗಿಳಿದಿದೆ. ಆನೆಯು ರಸ್ತೆಯಲ್ಲಿ ಸಂಚರಿಸುತ್ತಿದ್ದುದನ್ನು ಬೈಕ್ ಸವಾರರೊಬ್ಬರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ […]

ಬಲ್ಯ – ಪದವು ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಉಪ್ಪಿನಂಗಡಿ – ಸುಬ್ರಹ್ಮಣ್ಯ ರಸ್ತೆಯಲ್ಲಿ ರಾತ್ರಿ ಹೊತ್ತು ಸಂಚರಿಸುವವರಿಗೆ ಎಚ್ಚರ Read More »

ಕರಾವಳಿ

ಮೆಲ್ಕಾರ್: ಬೈಕಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ಪರಾರಿ ► ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.29. ಟ್ಯಾಂಕರೊಂದು ಬೈಕಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಮೃತ‌ ಸವಾರನನ್ನು‌ ಕೆಲಿಂಜ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಸನ್ ಸಾಹಿಕ್(28) ಎಂದು ಗುರುತಿಸಲಾಗಿದೆ. ಮೂಡಬಿದಿರೆಯ ಬುರ್ಖಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಸನ್ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮೆಲ್ಕಾರ್ ಸಮೀಪದ ಬೋಳಂಗಡಿ ಮಸೀದಿ ಬಳಿ ಹಿಂದಿನಿಂದ ಅತೀ ವೇಗವಾಗಿ ಬಂದ ಟ್ಯಾಂಕರೊಂದು ಢಿಕ್ಕಿ ಹೊಡೆದು

ಮೆಲ್ಕಾರ್: ಬೈಕಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ಪರಾರಿ ► ಬೈಕ್ ಸವಾರ ಮೃತ್ಯು Read More »

ಕರಾವಳಿ

ದಿನಪೂರ್ತಿ ನಡೆಯಬೇಕಿದ್ದ ಪ್ರತಿಭಟನೆಯನ್ನು ತನ್ನ ಭರವಸೆಯಲ್ಲೇ ಅಂತ್ಯಗಾಣಿಸಿದ ಉಪ್ಪಿನಂಗಡಿ ಎಸ್ಐ ► ನಂದಕುಮಾರ್ ರ ನಡೆಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಅ.29. ಕೇವಲ ಒಂದು ಭರವಸೆಯ ಮೂಲಕ ಹಿರಿಯ ಅಧಿಕಾರಿಗಳು ಬಂದು ಮಾಡಬೇಕಿದ್ದ ಕೆಲಸವನ್ನು ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕ ನಂದಕುಮಾರ್ ತನ್ನ ಮಾತಿನ ಮೋಡಿಯಲ್ಲೇ ಮಾಡಿ ಮುಗಿಸುವುದರೊಂದಿಗೆ ಇಡೀ ಒಂದು ದಿನದ ಪ್ರತಿಭಟನೆಯನ್ನು ಕೆಲವೇ ತಾಸುಗಳಲ್ಲಿ ಶಾಂತಿಯುತವಾಗಿ ಅಂತ್ಯಗೊಳಿಸಿದ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ. ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕ ಹಾಗೂ ಕಡಬ ತಹಶಿಲ್ದಾರ್‍ರವರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕಡಬ

ದಿನಪೂರ್ತಿ ನಡೆಯಬೇಕಿದ್ದ ಪ್ರತಿಭಟನೆಯನ್ನು ತನ್ನ ಭರವಸೆಯಲ್ಲೇ ಅಂತ್ಯಗಾಣಿಸಿದ ಉಪ್ಪಿನಂಗಡಿ ಎಸ್ಐ ► ನಂದಕುಮಾರ್ ರ ನಡೆಗೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಕಡಬ ಪೊಲೀಸ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳಿಂದ ದಲಿತ ವಿರೋಧಿ ನೀತಿಯ ಆರೋಪ ► ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.29. ಕಡಬ ಪೊಲೀಸ್ ಉಪ ನಿರೀಕ್ಷಕರು ಹಾಗೂ ಕಡಬ ತಹಶಿಲ್ದಾರರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕು ದಲಿತ ಸಂಘಟನೆಗಳ ಮಹಾ ಒಕ್ಕೂಟದ ವತಿಯಿಂದ ಕಡಬದಲ್ಲಿ ಸೋಮವಾರದಂದು ಪ್ರತಿಭಟನೆ ನಡೆಯಿತು. ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಹಾಗೂ ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ರೋಡ್ರಿಗಸ್ ರವರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಂಡು ತಕ್ಷಣವೇ ವರ್ಗಾಯಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಡಬ ಪೊಲೀಸ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳಿಂದ ದಲಿತ ವಿರೋಧಿ ನೀತಿಯ ಆರೋಪ ► ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ Read More »

ಕರಾವಳಿ

ಸಂಪ್ಯ ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸ್ವಿಫ್ಟ್ ಕಾರು ಕಳ್ಳತನ ► ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.19. ಕಳೆದ ನಾಲ್ಕು ದಿನಗಳ ಹಿಂದೆ ಸಂಪ್ಯ ಮಸೀದಿಯ ಬಳಿ ನಿಲ್ಲಿಸಲಾಗಿದ್ದ ಸ್ವಿಫ್ಟ್ ಕಾರು ಕಳ್ಳತನ ಪ್ರಕರಣವನ್ನು ಭೇದಿಸಿರುವ ಪುತ್ತೂರು ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ಠಾಣೆಯ ರೌಡಿ ಶೀಟರ್ ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಜುನೈದ್ ಯಾನೆ ಜುನ್ನಿ ಮತ್ತು ಕೆದಿಲ ಗ್ರಾಮದ ಗಡಿಯಾರ ನಿವಾಸಿ ಹಸನ್ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ಟೋಬರ್ 24 ರಂದು

ಸಂಪ್ಯ ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸ್ವಿಫ್ಟ್ ಕಾರು ಕಳ್ಳತನ ► ಆರೋಪಿಗಳಿಬ್ಬರ ಬಂಧನ Read More »

ಕರಾವಳಿ

ಕಬಕ: ನಾಡ ಬಾಂಬ್ ಸ್ಫೋಟಿಸಿ ಮನೆ ಧ್ವಂಸಕ್ಕೆ ಯತ್ನ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.27. ಠಾಣಾ ವ್ಯಾಪ್ತಿಯ ಪೋಳ್ಯ ಎಂಬಲ್ಲಿ ತಡ ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಿಸಿ ಮನೆಯನ್ನು ಧ್ವಂಸಗೈಯಲು ಸಂಚು ರೂಪಿಸಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ ಬಾಬು ಯಾನೆ ಬಾಲನ್ ಎಂದು ಗುರುತಿಸಲಾಗಿದೆ. ಆರೋಪಿಯು ಅಕ್ಟೋಬರ್ 15 ರಂದು ತಡ ರಾತ್ರಿ ಪೋಳ್ಯ ನಿವಾಸಿ ನಾರಾಯಣ ಪ್ರಸಾದ್ ಎಂಬವರ ಮನೆಯನ್ನು ಧ್ವಂಸಗೈಯುವ ಉದ್ದೇಶದಿಂದ ಮೂರು

ಕಬಕ: ನಾಡ ಬಾಂಬ್ ಸ್ಫೋಟಿಸಿ ಮನೆ ಧ್ವಂಸಕ್ಕೆ ಯತ್ನ ► ಆರೋಪಿಯ ಬಂಧನ Read More »

ಕರಾವಳಿ

ಕಡಬ: ಅಸಂತಡ್ಕ ಕಾಲೋನಿಗೆ ನೀರಿನ ವ್ಯವಸ್ಥೆ, ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.27. ಕೋಡಿಂಬಾಳ ಗ್ರಾಮದ ಅಸಂತಡ್ಕ ಪರಿಶಿಷ್ಟ ಕಾಲೋನಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ವ್ಯವಸ್ಥೆ ಹಾಗೂ ಅಸಂತಡ್ಕ ಕಾಲೋನಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ಅಲ್ಲಿನ ನಿವಾಸಿಗಳು ಕಡಬ ಗ್ರಾ.ಪಂ.ಸದಸ್ಯೆ ನೇತ್ರಾ ರವರ ನೇತೃತ್ವದಲ್ಲಿ ಅ.25 ರಂದು ಶಾಸಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಎಸ್.ಅಂಗಾರರಿಗೆ ಮನವಿ ಸಲ್ಲಿಸಿದರು. ಕಡಬದಲ್ಲಿ ನಡೆದ ಶಾಸಕ ಎಸ್.ಅಂಗಾರರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಸಂತಡ್ಕ ಪರಿಶಿಷ್ಟ ಕಾಲೋನಿಯನ್ನು ಹಾಗೂ ಅಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಶ್ರೀ ನಾಗಕನ್ನಿಕೆ, ರಕ್ತೇಶ್ವರಿ ಸನ್ನಿಧಿಯನ್ನು

ಕಡಬ: ಅಸಂತಡ್ಕ ಕಾಲೋನಿಗೆ ನೀರಿನ ವ್ಯವಸ್ಥೆ, ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಶಾಸಕರಿಗೆ ಮನವಿ Read More »

ಕರಾವಳಿ

ಧರ್ಮಸ್ಥಳ ಕಾಡಿನಿಂದ ಬೆಲೆಬಾಳುವ ಮರಗಳ ಕದ್ದು ಸಾಗಾಟ ► ಓಮ್ನಿ ಸಹಿತ ಓರ್ವನ ಬಂಧನ, ಮೂವರು ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27. ಧರ್ಮಸ್ಥಳ ಸಮೀಪದ ಪುದುವೆಟ್ಟು ಕಾಡಿನಿಂದ ಬೀಟಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮಾರುತಿ ಓಮ್ನಿಯಲ್ಲಿ ತುಂಬಿಸಿಟ್ಟಿದ್ದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಕೋಟೆಕಾರು ಅಜ್ಜಿನಡ್ಕ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಬ್ಬಾಸ್ ಎಂದು ಗುರುತಿಸಲಾಗಿದೆ. ನೆಲ್ಯಾಡಿಯ ಹೊಸಮಜಲು ನಿವಾಸಿಗಳಾದ ಅಬ್ದುಲ್ಲಾ ಎಂಬವರ ಪುತ್ರ ಮಹಮ್ಮದ್ ಬಾವಾ, ಅಬ್ದುಲ್ಲಾ ಎಂಬವರ

ಧರ್ಮಸ್ಥಳ ಕಾಡಿನಿಂದ ಬೆಲೆಬಾಳುವ ಮರಗಳ ಕದ್ದು ಸಾಗಾಟ ► ಓಮ್ನಿ ಸಹಿತ ಓರ್ವನ ಬಂಧನ, ಮೂವರು ಪರಾರಿ Read More »

ಕರಾವಳಿ

ಬೆಳ್ತಂಗಡಿ: ಮನೆ ಮಂದಿ ಮಲಗಿದ್ದ ವೇಳೆ ಪ್ರಜ್ಞೆ ತಪ್ಪಿಸಿದ ಕಳ್ಳರು ► ಲಕ್ಷಾಂತರ ರೂ. ಮೌಲ್ಯದ ನಗ,‌ ನಗದು ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27. ಮನೆಮಂದಿ ರಾತ್ರಿ ಮಲಗಿದ್ದ ವೇಳೆ ಮುಖಕ್ಕೆ ಯಾವುದೋ ಅರಿವಳಿಕೆಯನ್ನು ಸಿಂಪಡಿಸಿ ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ನಡೆದಿದೆ. ಹೊಸಂಗಡಿ ಗ್ರಾಮದ ಮಸ್ಕಲ ನಿವಾಸಿ ಕರುಣಾಕರ ಕೋಟ್ಯಾನ್ ಹಾಗೂ ಲೀಲಾ ದಂಪತಿ ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಗ್ಗೆ ಎದ್ದು ನೋಡುವಾಗ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿಟ್ಟಿದ್ದ ಚಿನ್ನದ ಸರ, ನೆಕ್ಲೆಸ್, ಬಳೆ,

ಬೆಳ್ತಂಗಡಿ: ಮನೆ ಮಂದಿ ಮಲಗಿದ್ದ ವೇಳೆ ಪ್ರಜ್ಞೆ ತಪ್ಪಿಸಿದ ಕಳ್ಳರು ► ಲಕ್ಷಾಂತರ ರೂ. ಮೌಲ್ಯದ ನಗ,‌ ನಗದು ಕಳ್ಳರ ಪಾಲು Read More »

ಕರಾವಳಿ

ಮಿತ್ತಕೋಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ► ಮದುವೆಗೆಂದು ಶಾಪಿಂಗ್ ಮುಗಿಸಿ ಪತಿಯೊಂದಿಗೆ ಬರುತ್ತಿದ್ದ ಪತ್ನಿ ಮೃತ್ಯು, ಪತಿ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.26. ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಆಕೆಯ ಪತಿ ಗಂಭೀರ ಗಾಯಗೊಂಡ ಘಟನೆ ಮುಡಿಪು ಸಮೀಪದ ಮಿತ್ತಕೋಡಿ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತ ಮಹಿಳೆಯನ್ನು ಬಂಟ್ವಾಳ ತಾಲೂಕಿನ ಪಾನೇಲ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಝುಬೈದಾ(35) ಮೃತರು ಎಂದು ಗುರುತಿಸಲಾಗಿದೆ. ಮೃತರು ಮುಂದಿನ ಭಾನುವಾರದಂದು ತನ್ನ ಮನೆಯಲ್ಲಿ ಮದುವೆ ಕಾರ್ಯ ನಡೆಯಲಿದ್ದ ಕಾರಣ ಬಟ್ಟೆ ಬರೆಗಳನ್ನು ಖರೀದಿಸಿ ತನ್ನ ಪತಿಯ

ಮಿತ್ತಕೋಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ► ಮದುವೆಗೆಂದು ಶಾಪಿಂಗ್ ಮುಗಿಸಿ ಪತಿಯೊಂದಿಗೆ ಬರುತ್ತಿದ್ದ ಪತ್ನಿ ಮೃತ್ಯು, ಪತಿ ಗಂಭೀರ Read More »

ಕರಾವಳಿ
Scroll to Top