ಕರಾವಳಿ

ಕಡಬ ಠಾಣಾ ಸಿಬ್ಬಂದಿ ಅಂಜನಪ್ಪ ಹುಟ್ಟೂರಿಗೆ ವರ್ಗಾವಣೆ ► ಠಾಣೆಯಲ್ಲಿ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ನ.26. ಕಡಬ ಠಾಣೆಯಲ್ಲಿ ಕಳೆದ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಯನ್ನು ಬೀಳ್ಕೊಡಲಾಯಿತು. ಮೂಲತಃ ದಾವಣಗೆರೆಯವರಾದ ಪೊಲೀಸ್ ಸಿಬ್ಬಂದಿ ಅಂಜನಪ್ಪ ಹಾಗೂ ಅವರ ಪತ್ನಿಯನ್ನು ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಶಾಲು ಹೊದಿಸಿ, ಫಲ ಪುಷ್ಪ ನೀಡುವ ಮೂಲಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಕಡಬ ಠಾಣಾ ಸಿಬ್ಬಂದಿಗಳು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಡಬ ಠಾಣಾ ಸಿಬ್ಬಂದಿ ಅಂಜನಪ್ಪ ಹುಟ್ಟೂರಿಗೆ ವರ್ಗಾವಣೆ ► ಠಾಣೆಯಲ್ಲಿ ಬೀಳ್ಕೊಡುಗೆ Read More »

ಕರಾವಳಿ

ಕಡಬ ತಾಲೂಕು ಉದ್ಘಾಟನೆ ಮುಂದೂಡಿರುವುದು ನೋವು ತಂದಿದೆ ► ಕೂಡಲೇ ತಾಲೂಕು ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು: ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ನ.26. ಆರು ದಶಕಗಳ ಕಡಬ ತಾಲೂಕು ಬೇಡಿಕೆ ಕೊನೆಗೂ ಈಡೇರುತ್ತದೆ ಎನ್ನುವ ಸಂದರ್ಭ ಒದಗಿ ಬಂದಾಗ ಹಠಾತ್ತನೆ ಉದ್ಘಾಟನಾ ಸಮಾರಂಭ ರದ್ದಾಗಿರುವುದು ನೋವು ತಂದಿದ್ದು, ಆದಷ್ಟು ಬೇಗ ಕಡಬ ತಾಲೂಕನ್ನು ಉದ್ಘಾಟಿಸಬೇಕೆಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಕೃಷ್ಣ ಶೆಟ್ಟಿ ಕಡಬ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಭಾನುವಾರದಂದು ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನೆಯನ್ನು ಮುಂದೂಡಲಾಗಿದ್ದು, ಆರು ವರ್ಷಗಳ ಹಿಂದೆ ಒಮ್ಮೆ ಘೋಷಣೆಯಾದ ಕಡಬ ತಾಲೂಕನ್ನು

ಕಡಬ ತಾಲೂಕು ಉದ್ಘಾಟನೆ ಮುಂದೂಡಿರುವುದು ನೋವು ತಂದಿದೆ ► ಕೂಡಲೇ ತಾಲೂಕು ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕು: ಕೃಷ್ಣ ಶೆಟ್ಟಿ Read More »

ಕರಾವಳಿ

ಖ್ಯಾತ ನಟ ಅಂಬರೀಶ್ ನಿಧನದ ಹಿನ್ನೆಲೆ ► ಕಡಬ ತಾಲೂಕು ಉದ್ಘಾಟನೆ ರದ್ದು

(ನ್ಯೂಸ್ ಕಡಬ) newskadaba.com ಕಡಬ, ನ.25. ಪರಿಸರದ ಜನತೆಯ ಬಹು ದಶಕಗಳ ಬೇಡಿಕೆಯಾದ ‘ನೂತನ ಕಡಬ ತಾಲೂಕು ಉದ್ಘಾಟನೆ’ ನೆರವೇರಲು ಕೆಲವೇ ತಾಸುಗಳು ಬಾಕಿ ಉಳಿದಿರುವಾಗ ತಾಲೂಕು ಉದ್ಘಾಟನೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಉದ್ಘಾಟನಾ ಸಮಾರಂಭವನ್ನು ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಜದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೋಕಾಚರಣೆ ನಡೆಯುತ್ತಿರುವುದರಿಂದ ಭಾನುವಾರದಂದು ನಡೆಯಬೇಕಾಗಿದ್ದ ಕಡಬ ಹಾಗೂ ಮೂಡಬಿದಿರೆ ತಾಲೂಕು ಉದ್ಘಾಟನಾ ಕಾರ್ಯವನ್ನು ಮುಂದೂಡಲಾಗಿದೆ. ಅಂತೂ

ಖ್ಯಾತ ನಟ ಅಂಬರೀಶ್ ನಿಧನದ ಹಿನ್ನೆಲೆ ► ಕಡಬ ತಾಲೂಕು ಉದ್ಘಾಟನೆ ರದ್ದು Read More »

ಕರಾವಳಿ

ಮರ್ಧಾಳ: ಕಿರು ಸೇತುವೆಗೆ ಢಿಕ್ಕಿ ಹೊಡೆದು ಕೆಳಕ್ಕುರುಳಿದ ಕಾರು ► ಮಗು ಸೇರಿದಂತೆ ಪ್ರಯಾಣಿಕರು ಪವಾಡ ಸದೃಶ ಪಾರು

(ನ್ಯೂಸ್ ಕಡಬ) newskadaba.com ಕಡಬ, ನ.24. ಸ್ವಿಫ್ಟ್ ಡಿಸೈರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ‌ ಹೆದ್ದಾರಿಯ ಪಕ್ಕದ ಕಿರು ಸೇತುವೆಗೆ ಉರುಳಿ ಬಿದ್ದ ಘಟನೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಬೆಂಗಳೂರು ಮೂಲದ ಕುಟುಂಬವು ಧರ್ಮಸ್ಥಳ ದೇವರ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಅಳೇರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಿರು ಸೇತುವೆಯ ತಡೆ ಗೋಡೆಗೆ ಢಿಕ್ಕಿ ಹೊಡೆದು ಕೆಳಕ್ಕುರುಳಿದೆ. ಘಟನೆಯಲ್ಲಿ ಸಣ್ಣ ಮಗು ಸೇರಿದಂತೆ

ಮರ್ಧಾಳ: ಕಿರು ಸೇತುವೆಗೆ ಢಿಕ್ಕಿ ಹೊಡೆದು ಕೆಳಕ್ಕುರುಳಿದ ಕಾರು ► ಮಗು ಸೇರಿದಂತೆ ಪ್ರಯಾಣಿಕರು ಪವಾಡ ಸದೃಶ ಪಾರು Read More »

ಕರಾವಳಿ

ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಕ್ಕೆ ಕೃಷ್ಣಪ್ಪ ಸ್ಥಾಪಿತ ದಸಂಸ ಬೆಂಬಲವಿಲ್ಲ ► ದಲಿತ ಮುಖಂಡ ಆನಂದ ಮಿತ್ತಬೈಲ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ನ.24. ಕಂದಾಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕು ಉದ್ಘಾಟನೆಗೆ ಆಗಮಿಸುವ ಕಂದಾಯ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ವಸಂತ ಕುಬುಲಾಡಿ ನೀಡಿದ್ದ ಹೇಳಿಕೆಗೆ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಸಂಸ ನ ಸಹಮತ ಇಲ್ಲ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಸಂ‌ಸ ಮುಖಂಡ ಆನಂದ ಮಿತ್ತಬೈಲು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ

ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಕ್ಕೆ ಕೃಷ್ಣಪ್ಪ ಸ್ಥಾಪಿತ ದಸಂಸ ಬೆಂಬಲವಿಲ್ಲ ► ದಲಿತ ಮುಖಂಡ ಆನಂದ ಮಿತ್ತಬೈಲ್ ಸ್ಪಷ್ಟನೆ Read More »

ಕರಾವಳಿ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಬೈಕ್ ನಡುವೆ ಅಪಘಾತ ► ಬೈಕ್ ಸವಾರ ಛಿದ್ರಗೊಂಡು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.23. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪ ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತ ಸವಾರನನ್ನು ಸ್ಥಳೀಯ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ. ನೆಲ್ಯಾಡಿಯ ಆರ್ಲ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಗ್ಯಾಸ್ ಟ್ಯಾಂಕರ್ ರಸ್ತೆಗಡ್ಡವಾಗಿ ಮಗುಚಿ ಬಿದ್ದುದರಿಂದ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ – ಬೈಕ್ ನಡುವೆ ಅಪಘಾತ ► ಬೈಕ್ ಸವಾರ ಛಿದ್ರಗೊಂಡು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.22. ಕಡಬ ತಹಸೀಲ್ದಾರ್ ಹಾಗೂ ಕಡಬ ಆರಕ್ಷಕ ಉಪ ನಿರೀಕ್ಷಕರು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಕಡಬದಲ್ಲಿ ಪ್ರತಿಭಟನೆ ನಡೆಸಿದ್ದರೂ ಆರೋಪಿತರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ನ.25ರಂದು ಕಡಬ ತಾಲೂಕು ಉದ್ಘಾಟನೆಗೆ ಆಗಮಿಸುವ ಕಂದಾಯ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ವಸಂತ ಕುಬಲಾಡಿ ಹೇಳಿದರು. ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಂದಾಯ ಹಾಗೂ ಪೋಲೀಸ್

ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ Read More »

ಕರಾವಳಿ

ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ..!! ► ಪ್ರತಿದಿನ ರಾತ್ರಿಯಾಗುತ್ತಿದ್ದಂತೆ ಸಾಗುತ್ತದೆ ಲೋಡುಗಟ್ಟಲೆ ಮರಳು..!! ► ಅಧಿಕಾರಿಗಳೇ ನೇರವಾಗಿ ಶಾಮೀಲಾಗಿ ನಡೆಯುತ್ತದಂತೆ ಈ ದಂಧೆ..??

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.20. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾದು ಹೋಗಿರುವ ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ಕಳೆದೆರಡು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದಲಿತ ಮುಖಂಡ ವಸಂತ ಕುಬುಲಾಡಿ ನೇರ ಆರೋಪ‌ ಮಾಡಿದ್ದಾರೆ. ‘ನ್ಯೂಸ್ ಕಡಬ’ದೊಂದಿಗೆ ಮಾತನಾಡಿದ ಅವರು, ಇಚಿಲಂಪಾಡಿ ಸೇತುವೆಯ ಅನತಿ ದೂರದಲ್ಲೇ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕತ್ತಲು ಆವರಿಸುತ್ತಿದಂತೆಯೇ ಅಕ್ರಮ ಮರಳುಗಾರಿಕೆ ನಡೆಯಲು ಅರಂಭವಾಗುತ್ತದೆ. ರಾತ್ರೆಯಾಗುತ್ತಿದ್ದಂತೆಯೇ ಸುಮಾರು ಹತ್ತಿಪ್ಪತ್ತು ಮಂದಿ ನದಿಗೆ

ಇಚಿಲಂಪಾಡಿ ಸೇತುವೆಯ ಅಡಿಭಾಗದಲ್ಲಿ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ..!! ► ಪ್ರತಿದಿನ ರಾತ್ರಿಯಾಗುತ್ತಿದ್ದಂತೆ ಸಾಗುತ್ತದೆ ಲೋಡುಗಟ್ಟಲೆ ಮರಳು..!! ► ಅಧಿಕಾರಿಗಳೇ ನೇರವಾಗಿ ಶಾಮೀಲಾಗಿ ನಡೆಯುತ್ತದಂತೆ ಈ ದಂಧೆ..?? Read More »

ಕರಾವಳಿ

ಬಿಸಿ ನೀರಿನ ಪಾತ್ರೆಗೆ ಬಿದ್ದು ಏಳು ವರ್ಷ ಪ್ರಾಯದ ಬಾಲಕಿ ಮೃತ್ಯು ► ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ ಎಂದು ಕುಟುಂಬಿಕರ ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು, ನ.20. ಆಕಸ್ಮಿಕವಾಗಿ ಬಿಸಿನೀರಿನ ಪಾತ್ರೆಗೆ ಬಿದ್ದು ಏಳು ವರ್ಷದ ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಪುತ್ತೂರು ಸಾಂದಿಪನಿ ಶಾಲೆಯ ವಿದ್ಯಾರ್ಥಿನಿ, ಕೆಮ್ಮಿಂಜೆ ಬೆದ್ರಾಳ ನಿವಾಸಿ ರಮೇಶ್ – ಭವ್ಯಾ ದಂಪತಿಯ ಪುತ್ರಿ ತನ್ವಿ ಆರ್.ಬಿ. (7) ಎಂದು ಗುರುತಿಸಲಾಗಿದೆ. ಬಾಲಕಿಯು ಎರಡು ದಿನಗಳ ಹಿಂದೆ ಆಟವಾಡುತ್ತಿದ್ದಾಗ ಬಿಸಿನೀರಿನ ಪಾತ್ರೆಗೆ ಬಿದ್ದಿದ್ದಾಳೆ ಎನ್ನಲಾಗಿದ್ದು, ಗಂಭೀರ ಸುಟ್ಟ ಗಾಯಗೊಂಡ ಈಕೆಯನ್ನು ಪುತ್ತೂರು ಧನ್ವಂತರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ

ಬಿಸಿ ನೀರಿನ ಪಾತ್ರೆಗೆ ಬಿದ್ದು ಏಳು ವರ್ಷ ಪ್ರಾಯದ ಬಾಲಕಿ ಮೃತ್ಯು ► ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ ಎಂದು ಕುಟುಂಬಿಕರ ಆರೋಪ Read More »

ಕರಾವಳಿ

ಕಾರ್ಕಳ: ಆಸ್ತಿ ವಿಚಾರದಲ್ಲಿ ಜಗಳ ► ಒಡಹುಟ್ಟಿದ ತಮ್ಮನನ್ನೇ ಬಡಿದು ಕೊಂದ ಪಾಪಿ

(ನ್ಯೂಸ್ ಕಡಬ) newskadaba.com ಕಾರ್ಕಳ, ನ.19. ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ರಾಡ್‌ನಿಂದ ಬಡಿದು ಕೊಂದು ಮೃತದೇಹವನ್ನು ಸುಟ್ಟುಹಾಕಿದ ಪ್ರಕರಣವನ್ನು ಭೇದಿಸಿರುವ ಕಾರ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳ ನಗರದ ಮಂಗಲಪಾದೆ ಅವೇ ಮರಿಯ ನಿವಾಸಿ ಮೆಲ್ವಿನ್ ಸಂತೋಷ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಈತನ ಸೋದರ ಅವಿಲ್ ಡಿಸೋಜಾ ರವರ ಮಧ್ಯೆ 2018 ರ ಮಾರ್ಚ್ ನಲ್ಲಿ ಆಸ್ತಿಯ ವಿಚಾರದಲ್ಲಿ ಪರಸ್ಪರ ಜಗಳಗಳಾಗಿದ್ದು, ಆ ಸಂದರ್ಭದಲ್ಲಿ ಅವಿಲ್ ಡಿಸೋಜಾ ತನ್ನ ಅಣ್ಣ ಮೆಲ್ವಿನ್

ಕಾರ್ಕಳ: ಆಸ್ತಿ ವಿಚಾರದಲ್ಲಿ ಜಗಳ ► ಒಡಹುಟ್ಟಿದ ತಮ್ಮನನ್ನೇ ಬಡಿದು ಕೊಂದ ಪಾಪಿ Read More »

ಕರಾವಳಿ
Scroll to Top