ಕರಾವಳಿ

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಫೆ.06: ರಾಜ್ಯದಲ್ಲಿ ಚಳಿಯ ಕಡಿಮೆಯಾಗುತ್ತಿದೆ. ಬಹುತೇಕ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಮಾತ್ರ ಚಳಿ ಇರಲಿದ್ದು, ಮಧ್ಯಾಹ್ನದ ಬಿಸಿಲು ನೆತ್ತಿ ಸುಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಚ್ಚನಾಡಿಯಲ್ಲಿ ದುರಂತ: ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾದ ಯುವಕ

(ನ್ಯೂಸ್‌ ಕಡಬ) newskadaba.com,ಫೆ.05 : ಮಂಗಳೂರಿನ ಪಚ್ಚನಾಡಿ ಪರಿಸರದ ರೈಲ್ವೇ ಹಳಿಯ ಬಳಿ ಅಪರಿಚಿತ ಯುವಕನ ಮೃತದೇಹವೊಂದು ಇಂದು ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣವು ಸಂಶಯಾಸ್ಪದವಾಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಬ್ಯಾಗ್ ಸೇರಿದಂತೆ ಮೃತನಿಗೆ ಸೇರಿದ್ದ ಇತರ ವಸ್ತುಗಳು ಪತ್ತೆಯಾಗಿದ್ದು, ​ ಇದು ಚಲಿಸುವ ರೈಲಿನಿಂದ ಬಿದ್ದು ಸಂಭವಿಸಿದ ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಸ್ಥಳಕ್ಕೆ ಮಂಗಳೂರು

ಪಚ್ಚನಾಡಿಯಲ್ಲಿ ದುರಂತ: ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾದ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ- ಸಂಸದ ಕ್ಯಾ.  ಚೌಟ

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 05.  ಭಾರತದ ಗ್ರೀನ್ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ (‘ಸಮುದ್ರ ತೀರದ ಪವನ ಶಕ್ತಿ’ Offshore Wind Energy) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.   ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ ಅವರು, ಕಡಲನಗರಿ ಮಂಗಳೂರು ಸಮುದ್ರ ತೀರದ ಪವನ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶವಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಓಷಿಯಾನೋಗ್ರಫಿ (NIO) ವರದಿಯನ್ನು ಉಲ್ಲೇಖಿಸಿ, ಭಾರತದ ಭರವಸೆಯ ಕಡಲ ಪವನ ಇಂಧನ ‘ವಲಯ-2ರಲ್ಲಿ ಮಂಗಳೂರು ಕರಾವಳಿ’ ಗುರುತಿಸಿಕೊಂಡಿದ್ದು, ಮಂಗಳೂರು ಕರಾವಳಿಯು ಸುಮಾರು 6,490 ಚ.ಕಿಮೀ. ಪ್ರದೇಶವು ಪವನ ಇಂಧನ ಉತ್ಪಾದನೆಗೆ ಹೆಚ್ಚು ಪೂರಕವಾಗಿದೆ. ಇಲ್ಲಿ ಭೂಕಂಪನ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅಪಾಯ ಕಡಿಮೆ ಇರುವುದರಿಂದ ದೀರ್ಘಕಾಲದ ಪವನ ಇಂಧನ ಯೋಜನೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಪ್ರದೇಶವಾಗಿದೆ. ಹೀಗಾಗಿ, ಮಂಗಳೂರು ಕಡಲ ತೀರವನ್ನು ಪವನ ಶಕ್ತಿ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಕ್ಯಾ. ಚೌಟ ಅವರು ಹೇಳಿದ್ದಾರೆ.   ನವ ಮಂಗಳೂರು ಬಂದರಿನ ಕಾರ್ಯತಂತ್ರದ ಪ್ರಯೋಜನವನ್ನು ಒತ್ತಿ ಹೇಳಿದ ಕ್ಯಾ.

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ- ಸಂಸದ ಕ್ಯಾ.  ಚೌಟ Read More »

ಕರಾವಳಿ, ಕರ್ನಾಟಕ

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್‌ಪಾಟ್!

(ನ್ಯೂಸ್‌ ಕಡಬ) newskadaba.com,ಫೆ.05 : ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಶಂತನು ಶೆಟ್ಟಿಗಾರ್ ಅವರು ಫೆಬ್ರವರಿ 3, 2026 ರಂದು ನಡೆದ ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ 20 ಮಿಲಿಯನ್ ದಿರ್ಹಮ್ (ಸುಮಾರು 45 ರಿಂದ 49 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್‌ಪಾಟ್ ಗೆದ್ದಿದ್ದಾರೆ. 20 ಮಿಲಿಯನ್ ದಿರ್ಹಮ್‌ಗಳು (ಭಾರತೀಯ ರೂಪಾಯಿ ಮೌಲ್ಯದಲ್ಲಿ ಅಂದಾಜು ₹49 ಕೋಟಿ).ಶಂತನು ಅವರು ಜನವರಿ 20 ರಂದು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ಈ ಬೃಹತ್ ಬಹುಮಾನ ಲಭಿಸಿದೆ. ಇದು

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಉಡುಪಿಯ ಶಂತನುಗೆ 49 ಕೋಟಿ ರೂ. ಜಾಕ್‌ಪಾಟ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ – ಸಹಸವಾರೆ ಸಾವು

(ನ್ಯೂಸ್‌ ಕಡಬ) newskadaba.com,ಫೆ.05 ಮಂಗಳೂರು: ನಗರದ ನಂತೂರು ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸಹಸವಾರೆಯೊಬ್ಬರು ಮೃತಪಟ್ಟಿದ್ದಾರೆ. ಬಲ್ಲಾಳ್‌ಬಾಗ್ ನಿವಾಸಿ ದೀಪ್ತಿ (26) ಮೃತ ದುರ್ದೈವಿ. ದ್ವಿಚಕ್ರ ವಾಹನ ಸವಾರ ಕಿಶೋರ್ (32) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನವು ಬಲ್ಲಾಳ್‌ಬಾಗ್ ಕಡೆಯಿಂದ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಹಸವಾರೆ ದೀಪ್ತಿ ಬಸ್‌ನ ಮುಂಭಾಗದ ಚಕ್ರಕ್ಕೆ

ಮಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ – ಸಹಸವಾರೆ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಫೆ.05: ರಾಜ್ಯದಲ್ಲಿ ಚಳಿಯ ಕಡಿಮೆಯಾಗುತ್ತಿದೆ. ಬಹುತೇಕ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಮಾತ್ರ ಚಳಿ ಇರಲಿದ್ದು, ಮಧ್ಯಾಹ್ನದ ಬಿಸಿಲು ನೆತ್ತಿಸುಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ .. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.  

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಕಂಬಳಕ್ಕೂ ತಟ್ಟಿದ ಚಿನ್ನದ ದರ ಏರಿಕೆಯ ಹೊಡೆತ!

(ನ್ಯೂಸ್‌ ಕಡಬ) newskadaba.com,ಫೆ.03 ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಗುರುತಿಸುವಂತಹ ಕಂಬಳಕ್ಕೂ ಇದೀಗ ಚಿನ್ನದ ದರ ಏರಿಕೆಯ ನೇರ ಪರಿಣಾಮ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಾಗಾಲೋಟದಂತೆ ಏರಿಕೆಯಾಗುತ್ತಿದ್ದು, ಇದರ ಹೊರೆ ಕಂಬಳ ಕೂಟಗಳ ಮೇಲೂ ಹೆಚ್ಚಾಗಿದೆ. ಸದ್ಯ ಚಿನ್ನದ ದರ ಇಳಿಕೆಯ ಯಾವುದೇ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕಂಬಳ ಸಂಘಟಕರಿಗೆ ಬಹುಮಾನವಾಗಿ ನೀಡಬೇಕಾದ ಚಿನ್ನದ ವೆಚ್ಚ ಭಾರವಾಗುತ್ತಿದೆ. ಈ

ಮಂಗಳೂರು : ಕಂಬಳಕ್ಕೂ ತಟ್ಟಿದ ಚಿನ್ನದ ದರ ಏರಿಕೆಯ ಹೊಡೆತ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ

(ನ್ಯೂಸ್‌ ಕಡಬ) newskadaba.com,ಫೆ.03 ಬೆಂಗಳೂರು: ಚಿನ್ನದ ಬೆಲೆಯ ಸತತ ಕುಸಿತ ಮುಂದುವರಿಯುತ್ತಿದೆ. ನಿನ್ನೆ ಸೋಮವಾರ ಸುಮಾರು 700-800 ರೂಗಳಷ್ಟು ಇಳಿದಿದ್ದ ಚಿನ್ನದ ಬೆಲೆ  ಇವತ್ತು ಮಂಗಳವಾರ 100-150 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ 15,175-15,200 ರೂ ಶ್ರೇಣಿಯಲ್ಲಿದೆ. ಆಭರಣ ಚಿನ್ನದ ಬೆಲೆ 13,900 ರೂನಿಂದ 13,925 ರೂ ಶ್ರೇಣಿಯಲ್ಲಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಸಖತ್ ಕುಸಿತವಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಕುಸಿತವೂ ಮುಂದುವರಿದಿದೆ. ಮಂಗಳವಾರ ಗ್ರಾಮ್​ಗೆ 20 ರೂ ಕಡಿಮೆ ಆಗಿದೆ. ಕೆಲ

ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಭಾಗ್ಯ: ರಾಜ್ಯದ 3862 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಸ್ಥಾಪನೆ

(ನ್ಯೂಸ್‌ ಕಡಬ) newskadaba.com,ಫೆ.03:  ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಭಾಗ್ಯ ನೀಡಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ, ಸಮಗ್ರ ಶಿಕ್ಷಣ ಕರ್ನಾಟಕದಡಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್(Smart Class) ಸ್ಥಾಪನೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ . ಡಿಜಿಟಲ್ ಶಿಕ್ಷಣಕ್ಕೆ ಒತ್ತು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಡಿಜಿಟಲ್‌ ಶಿಕ್ಷಣದ ಸೌಲಭ್ಯಗಳು ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಯೋಜನಾ ಅನುಮೋದನ ಮಂಡಳಿ,  ಸಮಗ್ರ ಶಿಕ್ಷಣ ಕರ್ನಾಟಕದಡಿ ಸ್ಮಾರ್ಟ್ ಕ್ಲಾಸ್‌ ಸ್ಥಾಪನೆಗೆ ಅನುಮೋದನೆ ನೀಡಿದ್ದು, ರಾಜ್ಯದ 3862 ಶಾಲೆಗಳಲ್ಲಿ 9154.80 ಲಕ್ಷ

ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಭಾಗ್ಯ: ರಾಜ್ಯದ 3862 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಸ್ಥಾಪನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಸಾಧ್ಯವಿಲ್ಲದಿದ್ದರೆ ಭಾರತ ತೊರೆಯಿರಿ’ – ವಾಟ್ಸಾಪ್‌ಗೆ ಸುಪ್ರೀಂ ಕೋರ್ಟ್ ತರಾಟೆ

(ನ್ಯೂಸ್‌ ಕಡಬ) newskadaba.com,ಫೆ.03: ವಾಟ್ಸಾಪ್‌ನ 2021ರ ಗೌಪ್ಯತಾ ನೀತಿ ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದೆ. ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಯಾವುದೇ ರೀತಿಯ ಸಂಧಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ಎಚ್ಚರಿಕೆ ನೀಡಿದೆ.ಮಂಗಳವಾರ (ಫೆ.3) ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ, “ನೀವು ನಮ್ಮ ಸಂವಿಧಾನವನ್ನು ಪಾಲಿಸಲು ಸಾಧ್ಯವಿಲ್ಲ ಎಂದರೆ ಭಾರತದಿಂದ ನಿರ್ಗಮಿಸಿ. ಭಾರತೀಯ ಪ್ರಜೆಯ ಒಂದು ಡಿಜಿಟ್ ದತ್ತಾಂಶವನ್ನೂ

‘ಸಾಧ್ಯವಿಲ್ಲದಿದ್ದರೆ ಭಾರತ ತೊರೆಯಿರಿ’ – ವಾಟ್ಸಾಪ್‌ಗೆ ಸುಪ್ರೀಂ ಕೋರ್ಟ್ ತರಾಟೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top