ಕರಾವಳಿ

ಬಂಟ್ವಾಳ: ಸ್ನಾನಕ್ಕೆಂದು ನದಿಗಿಳಿದ ಬಾಲಕ ನೀರುಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ಸ್ನಾನಕ್ಕೆಂದು ತೆರಳಿದ ಐವರು ಬಾಲಕರ ಪೈಕಿ ಓರ್ವ ಬಾಲಕ ನೀರುಪಾಲಾದ ಘಟನೆ ಮಂಗಳವಾರದಂದು ಬಂಟ್ವಾಳದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಂಟ್ವಾಳ ತಾಲೂಕಿನ ಅಮ್ಮೆಮ್ಮಾರ್ ನಿವಾಸಿ ಅಬ್ದುಲ್ ಬಶೀರ್ ಎಂಬವರ ಪುತ್ರ ಅಬ್ದುಲ್ ಸತ್ತಾರ್(13) ಎಂದು ಗುರುತಿಸಲಾಗಿದೆ. ಮೃತ ಬಾಲಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸಮುದ್ರದ ಹಿನ್ನೀರಿನಲ್ಲಿ ಸಿಗುವ ಕಪ್ಪೆ ಚಿಪ್ಪುಗಳನ್ನು ತೆಗೆದು ಕೊಂಡು ಬರಲೆಂದು ದೊಣಿಯ ಮೂಲಕ ನದಿಯ ಮತ್ತೊಂದು ದಡಕ್ಕೆ ತೆರಳಿದ್ದು, ಬಳಿಕ ಸ್ನಾನಕ್ಕೆಂದು ನೀರಿಗೆ ಇಳಿದಾಗ ಈ […]

ಬಂಟ್ವಾಳ: ಸ್ನಾನಕ್ಕೆಂದು ನದಿಗಿಳಿದ ಬಾಲಕ ನೀರುಪಾಲು Read More »

ಕರಾವಳಿ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.comಪುತ್ತೂರು, ಜ.7.ಆರ್ಲಪದವಿನಲ್ಲಿ ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳನ್ನು ಕಳವುಗೈದವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಬೇಜಾರು ನಿವಾಸಿ ರಿಯಾಝ್, ನೆಕ್ಕಿಲಾಡಿಯ ಸಿರಾಜು ದ್ದೀನ್‌, ಬಂಧಿತರು.   ಆರ್ಲಪದವಿನಲ್ಲಿ ಮನೆಗೆ ಹೊಂದಿಕೊಂಡಿರುವ ಅಶ್ರಫ್‌  ಅವರ ಗೂಡಂಗಡಿಯಿಂದ 5 ಸಾವಿರ ಹಾಗೂ ಮೊಬೈಲ್‌ ಫೋನ್‌  ಅನ್ನು ಇವರು ಕಳವು ಮಾಡಿದ್ದರು. ಕಳ್ಳತನ ಅರಿವಿಗೆ ಬಂದ ತತ್‌ಕ್ಷಣ ಅಶ್ರಫ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಆರ್ಲಪದವು ಚೆಕ್‌ ಪೋಸ್ಟ್‌ ಬಳಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ ಕಳವುಗೈದ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ Read More »

ಕರಾವಳಿ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ?

(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.7. ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ. ಯಾವ ಯಾವ ಸೌಲಭ್ಯಗಳಿಗೆ ಬಂದ್ ಇರುವುದಿಲ್ಲ: ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಸಾರ್ವಜನಿಕರಿಗೆ  ದೈನಂದಿನಂತೆ ವ್ಯವಹಾರ ನಡೆಯುತ್ತದೆ. ಯಾವ  ಯಾವ ಕಾರಣಕ್ಕೆ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ? Read More »

ಕರಾವಳಿ

ಪುತ್ತೂರು: 26ನೇ ವರ್ಷದ ಕೋಟಿ -ಚೆನ್ನಯ ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ

(ನ್ಯೂಸ್ ಕಡಬ)newskadaba.com. ಪುತ್ತೂರು. ಜ.7 .ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜ. 19ರಂದು ನಡೆಯುವ 26ನೇ ವರ್ಷದ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡುಕರೆ ಕಂಬಳ ಕೂಟಕ್ಕೆ ಕರೆ ನಿರ್ಮಾಣ ಕಾರ್ಯ ಭಾಗಶ: ಪೂರ್ಣಗೊಂಡಿದೆ.ಕಂಬಳ ಕರೆಗಳನ್ನು ಹದಗೊಳಿಸಿ ಸಮಗೊಳಿಸಲಾಗಿದೆ. ಕರೆಗಳಲ್ಲಿ ನೀರು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜೋಡುಕರೆಗಳನ್ನು ಇನ್ನಷ್ಟು ಪಕ್ವಗೊಳ್ಳುವ ನಿಟ್ಟಿನಲ್ಲಿ ಕಂಬಳ ಪೂರ್ವವಾಗಿ ಓಟದ ಕೋಣಗಳನ್ನು ಕರೆಗಳಲ್ಲಿ ಓಡಿಸುವ ಕುದಿ ಕಂಬಳವನ್ನು ನಡೆಸಲಾಗುತ್ತದೆ.   ಜಿಲ್ಲೆಯಲ್ಲಿ ನಡೆಯುವ ಕಂಬಳಗಳಲ್ಲಿ ಪುತ್ತೂರಿನ ಕಂಬಳಕ್ಕೆ

ಪುತ್ತೂರು: 26ನೇ ವರ್ಷದ ಕೋಟಿ -ಚೆನ್ನಯ ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ Read More »

ಕರಾವಳಿ

ಶತಾಯುಷಿ ಕೆಮ್ಮಾರ ಇಸ್ಮಾಯಿಲ್ ಹಾಜಿ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಜ.07. ಹಲವಾರು ದಶಕಗಳ ಕಾಲ ಕೆಮ್ಮಾರ ಮುಹಿಯದ್ದೀನ್ ಜುಮಾ ಮಸ್ಜಿದ್ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕೆಮ್ಮಾರ ಇಸ್ಮಾಯಿಲ್ ಹಾಜಿ(107) ಸೋಮವಾರ ಬೆಳಗ್ಗಿನ ಜಾವ ತನ್ನ ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ರೋಗದಿಂದ ಬಳಲುತ್ತಿದ್ದ ಅವರು, ಸಕಲೇಶಪುರದಲ್ಲಿ ಟಿಂಬರ್ ಮರ್ಚೆಂಟ್ ಉದ್ಯಮ ನಡೆಸುತ್ತಿದ್ದರು. ತದನಂತರದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಪ್ರಗತಿಪರ ಕೃಷಿಕರಾಗಿ ಹಲವಾರು ಕೂಲಿ ಕಾರ್ಮಿಕ ಜೀವನಕ್ಕೆ ಸಹಕಾರಿಯಾಗಿದ್ದರು. ಮೃತರು ತನ್ನ ಕುಟುಂಬದ ಐದು ತಲೆಮಾರುಗಳನ್ನು ಒಳಗೊಂಡಂತೆ ಅಪಾರ ಬಂಧುಬಳಗವನ್ನು

ಶತಾಯುಷಿ ಕೆಮ್ಮಾರ ಇಸ್ಮಾಯಿಲ್ ಹಾಜಿ ವಿಧಿವಶ Read More »

ಕರಾವಳಿ

ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ

(ನ್ಯೂಸ್ ಕಡಬ)newskadaba.com.ಇಚ್ಲಂಪಾಡಿ,ಜ.7.  ಶಬರಿಮಲೆಗೆ 10ರಿಂದ 50ವರ್ಷ ಒಳಗಿನ ಮಹಿಳೆಯರ ಪ್ರವೇಶಕ್ಕೆ ಕಾರಣವಾದ ಕೇರಳ ಸರಕಾರದ ವಿರುದ್ದ ಇಚ್ಲಂಪಾಡಿಯಲ್ಲಿ ಶಬರಿಮಲೆ ಪಾವಿತ್ರ್ಯ ಉಳಿಸಿ ಎಂದು ಅಯ್ಯಪ್ಪ ಭಕ್ತರು ಗೋಳಿಯಡ್ಕದವರೆಗೆ ಮೆರವಣಿಗೆ ನಡೆಸಿದ ಘಟನೆ ಜ.6ರಂದು ನಡೆಯಿತು. ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಭಕ್ತರು ಮೆರವಣಿಗೆಯಲ್ಲಿ ಹೊರಟು ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರಕ್ಕೆ ಆಗಮಿಸಿ ಅಲ್ಲಿ ಸಭಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಉಣ್ಣಿಕೃಷ್ಣನ್, ಖಜಾಂಜಿ ವಿನೋದ್ ಕುಮಾರ್, ಗುರುಸ್ವಾಮಿಗಳಾದ

ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ Read More »

ಕರಾವಳಿ

ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿ ►ಚಕ್ರಪಾಣಿ ಗೌಡ ಬಾಕಿಲ ಆಯ್ಕೆ

(ನ್ಯೂಸ್ ಕಡಬ)newskadaba.com.ಕಡಬ,ಜ.6. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿ ಚಕ್ರಪಾಣಿ ಗೌಡ ಬಾಕಿಲ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ, ಕೋಶಾಧಿಕಾರಿಯಾಗಿ ಆನಂದ ಗೌಡ ಪಜ್ಜಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರವಿಕುಮಾರ್ ನೆಕ್ಕಿಲಾಡಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರದೀಪ್ ಬಾಕಿಲ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಆಲಂಕಾರಿನಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶೇಖರ ಗೌಡ ಕಟ್ಟಪುಣಿ, ನವೀನ ಗೌಡ ಕಕ್ವೆ, ಸಂಚಾಲಕರಾಗಿ ಅಶೋಕ ಗೌಡ ಪಜ್ಜಡ್ಕ, ಗೌರವ ಸಲಹೆಗಾರರಾಗಿ ಜನಾರ್ಧನ ಗೌಡ, ಗೌರವಾಧ್ಯಕ್ಷರಾಗಿ ಪ್ರಕಾಶ್ ವಳೆಂಜ

ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿ ►ಚಕ್ರಪಾಣಿ ಗೌಡ ಬಾಕಿಲ ಆಯ್ಕೆ Read More »

ಕರಾವಳಿ

ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ಹಿಂಪಡೆಯುವಂತೆ ಅಗ್ರಹ ► ಜ. 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ 

(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.6.ಮೋಟಾರ್ ವಾಹನ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿವೆ. ಇದು ಚಾಲಕರ ವಿರೋಧಿ ಮಸೂದೆ ಅಂತಾ ಸಾರಿಗೆ ಇಲಾಖೆ ಕಾರ್ಮಿಕರು ಕಿಡಿಕಾರಿದ್ದು ಈ ಹಿನ್ನಲೆಯಲ್ಲಿ ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದೆ.  ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ವಾಪಸ್​ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ.

ಮೋಟಾರ್ ವಾಹನ ತಿದ್ದುಪಡಿ ಮಸೂದೆ-2017ನ್ನು ಹಿಂಪಡೆಯುವಂತೆ ಅಗ್ರಹ ► ಜ. 8 ಮತ್ತು 9 ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ  Read More »

ಕರಾವಳಿ

ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.6. ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ಜನವರಿ 26ರಂದು ಪ್ರಶಸ್ತಿ ನೀಡುವ ಕುರಿತು ರಾಜ್ಯ ಮಟ್ಟದ ಮಾದರಿಯನ್ನೇ ಜಿಲ್ಲಾ ಮಟ್ಟದಲ್ಲೂ ನೀಡಲು ಅನುಸರಿಸುತ್ತಿದ್ದು ಒಟ್ಟು 6 ಅರ್ಹ ಜನರು ಗ್ರೂಪ್ 1, ಗ್ರೂಪ್ 2, ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ನೀಡಲಾಗುವುದು. ಜಿಲ್ಲಾವಾರು ಒಟ್ಟು 6 ಪ್ರಶಸ್ತಿಗಳಿದ್ದು, ಗೃಹ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳು

ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಅಹ್ವಾನ Read More »

ಕರಾವಳಿ

ಕಡಬ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಬುಲ್ ಬುಲ್ಸ್ ವಾರ್ಷಿಕ ಮೇಳ 2019

(ನ್ಯೂಸ್ ಕಡಬ)newskadaba.com.ಕಡಬ,ಜ.6. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಮತ್ತು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ ಬುಲ್  ವಾರ್ಷಿಕ ಮೇಳ 2019 ಉದ್ಘಾಟನಾ ಸಮಾರಂಭ ಜ.4ರಂದು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮಕ್ಕೆಶುಭಹಾರೈಸಿದರು.ಉಪ್ಪಿನಂಗಡಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಅಬ್ರಾಹಂ ವರ್ಗೀಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.   ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ

ಕಡಬ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಬುಲ್ ಬುಲ್ಸ್ ವಾರ್ಷಿಕ ಮೇಳ 2019 Read More »

ಕರಾವಳಿ
Scroll to Top