ಕರಾವಳಿ

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಮಾ.10: ರಾಜ್ಯದಲ್ಲಿ ಬಿಸಿಲಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಬಿಸಿಲಿನಿಂದ ಕೂಡಿದ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ದಂಧೆ ಬಯಲು; ಬೈಕ್ ಸವಾರನ ವಿರುದ್ಧ ಕೇಸ್ ದಾಖಲು!

(ನ್ಯೂಸ್‌ ಕಡಬ) newskadaba.com, ಮಾ.09 : ನಕಲಿ ದಾಖಲೆಗಳ ಜೊತೆಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೈಕ್ ಅನ್ನು ಚಲಾಯಿಸುತ್ತಿದ್ದ ಸವಾರನನ್ನು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದು, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.ಬಂಧಿತ ಆರೋಪಿಯನ್ನು ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ನವಾಜ್ (19) ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯ ಸಂತೆಕಟ್ಟೆ ಎಂಬಲ್ಲಿ ನವಾಜ್ ಬೈಕ್ ಚಲಾಯಿಸುತ್ತಿದ್ದಾಗ, ಬೆಳ್ತಂಗಡಿ ಸಂಚಾರಿ ಉಪನಿರೀಕ್ಷಕ ಕಿಶೋರ್ ಕುಮಾರ್ ಪಿ. ಮತ್ತು ಸಿಬ್ಬಂದಿ ಶಿವಾನಂದ ಅವರು ವಾಹನವನ್ನು

ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ದಂಧೆ ಬಯಲು; ಬೈಕ್ ಸವಾರನ ವಿರುದ್ಧ ಕೇಸ್ ದಾಖಲು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com, ಮಾ.09 : ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಜಿಗಿದಿದ್ದ ಇದರ ಬೆಲೆ ಇವತ್ತು ಸೋಮವಾರ ಗ್ರಾಮ್​ಗೆ 180 ರೂಗಳಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ (Gold Rates) ಮತ್ತೊಮ್ಮೆ 15,000 ರೂ ಗಡಿಯೊಳಗೆ ಬಂದಿದೆ. ಕಳೆದ ವಾರ ಸತತ ನಾಲ್ಕೈದು ದಿನ ಬಂಗಾರದ ಬೆಲೆ ಇಳಿಕೆಯಾಗಿತ್ತು. ಇನ್ನು, ಬೆಳ್ಳಿ ಬೆಲೆಯೂ ಇವತ್ತು ಕಡಿಮೆಗೊಂಡಿದೆ. ಗ್ರಾಮ್​ಗೆ 5 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ

ಇಂದಿನ ಚಿನ್ನದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

(ನ್ಯೂಸ್‌ ಕಡಬ) newskadaba.com, ಮಾ.09 : ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದಲ್ಲಿ ನಡೆದಿದೆ. ಮಾರ್ಚ್ 6ರಂದು ಸಂಜೆ, ಯೇನೆಕಲ್ಲು ಗ್ರಾಮದ ಸಂಕಡ್ಕ ಎಂಬಲ್ಲಿ ತೋಟವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿದೆ ಎಂಬ ಎಂಬ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ‌. ಈ ಸಂದರ್ಭ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದಾಳಿ ಸಂದರ್ಭ ಸ್ಥಳದಲ್ಲಿ 2 ಕೋಳಿಗಳು ಪತ್ತೆಯಾಗಿದ್ದು, ಇವುಗಳ ಪೈಕಿ

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಾರು-ಬೈಕ್ ನಡುವೆ ಭೀಕರ ಡಿಕ್ಕಿ; ದ್ವಿಚಕ್ರ ಸವಾರ ಮೃತ್ಯು

(ನ್ಯೂಸ್‌ ಕಡಬ) newskadaba.com, ಮಾ.09 : ನಗರದ ಸಮೀಪದ 34 ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಬೈಕೊಂದಕ್ಕೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ (56) ಎಂಬವರು ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಭವಿಸಿದೆ. ಬಂದಾರು ಗ್ರಾಮದ ಕುರಾಯ ನಿವಾಸಿಯಾಗಿರುವ ಚಿದಾನಂದ ಗೌಡರವರು ಕಾರ್ಯನಿಮಿತ್ತ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಬೊಳ್ಳಾರ್ ಎಂಬಲ್ಲಿ ಕಾರೊಂದು ಡಿಕ್ಕಿ ಹೊಡೆಯಿತು. ಈ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ,

ಉಪ್ಪಿನಂಗಡಿ: ಕಾರು-ಬೈಕ್ ನಡುವೆ ಭೀಕರ ಡಿಕ್ಕಿ; ದ್ವಿಚಕ್ರ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

(ನ್ಯೂಸ್‌ ಕಡಬ) newskadaba.com, ಮಾ.09 : ಒಂದು ಕಡೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದ ಕಾರ್ಮೋಡ ಹಾಗೂ ರಮ್ಜಾನ್‌ ಉಪವಾಸದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಇವೆರಡೂ ಅಂಶಗಳು ಭಾರತದ ಮೊಟ್ಟೆ ಮಾರುಕಟ್ಟೆಯ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿವೆ. ರಫ್ತು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ ಕಂಡಿದ್ದು, ಜನಸಾಮಾನ್ಯರ ಜೇಬಿಗೆ ತುಸು ಸಮಾಧಾನ ತಂದಿದೆ. ಮೊಟ್ಟೆ ದರ ಇಳಿಕೆಗೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು. ರಫ್ತು ಸ್ಥಗಿತ: ಭಾರತದಲ್ಲಿಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳಲ್ಲಿಸುಮಾರು ಶೇ.80ರಷ್ಟು ಮೊಟ್ಟೆಗಳು ಕೊಲ್ಲಿರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ,

ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಮಾದಕ ದ್ರವ್ಯ ಸಾಗಾಟ ಜಾಲ ಪತ್ತೆ; ಇಬ್ಬರು ಪೊಲೀಸರ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಮಾ.09 : ಮಾದಕ ವಸ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಶಿರ್ವ ಪೊಲೀಸರು ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಎಂಬಲ್ಲಿ ಬಂಧಿಸಿದ್ದಾರೆ. ಬೆಳಪು ಗ್ರಾಮದ ದರ್ಗಾ ಸಮೀಪದ    ನಿವಾಸಿ ಝಹೀರ್ ಅಹ್ಮದ್(66) ಮತ್ತು ಬೆಳಪು ಸ್ಟಡಿ ಸರ್ಕಲ್ ನಿವಾಸಿ ಸಯ್ಯದ್ ಶಮೀಮ್(28) ಬಂಧಿತ ಆರೋಪಿಗಳು. ಇವರಿಂದ 2.83 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಪೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ

ಉಡುಪಿ: ಮಾದಕ ದ್ರವ್ಯ ಸಾಗಾಟ ಜಾಲ ಪತ್ತೆ; ಇಬ್ಬರು ಪೊಲೀಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ

(ನ್ಯೂಸ್ ಕಡಬ) newskadaba.com ಮಾ. 09. ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರೇಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಕಳೆದ ಹಲವಾರು ಸಭೆಗಳಲ್ಲಿ ಮಂಗಳೂರು ಮಾರ್ಗವಾಗಿ ಮೂಡುಜೆಪ್ಪು -ಉಳಾಯಿಬೆಟ್ಟು ಪ್ರದೇಶಕ್ಕೆ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಸ್ತಾವನೆಯಂತೆ ಹೊಸ ಕೆ.ಎಸ್.ಆರ್.ಟಿ.ಸಿ ಪ್ರಾರಂಭಿಸಿರುವುದಕ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕಿ ನಿರ್ಮಲಾ ಅವರನ್ನು ಸಮಿತಿ ಸದಸ್ಯ ನವಾಜ್

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ Read More »

ಕರಾವಳಿ

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com, ಮಾ.09 : ರಾಜ್ಯದಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಇಂದು ಸಹ ಬಿಸಿಲಿನಿಂದ ಕೂಡಿದ ಒಣಹವೆಯ ವಾತಾವರಣ ಮುಂದುವರೆಯಲಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿತ್ತೀಯ ಶಿಸ್ತಿಲ್ಲದ, ರಾಜ್ಯವನ್ನು ಸಾಲದ ಬಿಕ್ಕಟ್ಟಿಗೆ ಸಿಲುಕಿಸಿದ ದೂರದೃಷ್ಟಿಹೀನ ಬಜೆಟ್ ಸಂಸದ ಕ್ಯಾ.ಚೌಟ

(ನ್ಯೂಸ್ ಕಡಬ) newskadaba.com ಮಾ. 09. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಆಯವ್ಯಯವು ರಾಜ್ಯದ ಆರ್ಥಿಕ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವುದು ಮಾತ್ರವಲ್ಲದೆ ಕರಾವಳಿ ಭಾಗದ ಆಶೋತ್ತರಗಳಿಗೂ ತಣ್ಣೀರೆರಚುವ ಕೆಲಸ ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸಂಸದರು, ಬಜೆಟ್‌ನಲ್ಲಿ ದಾಖಲಾಗಿರುವ 22,000 ಕೋಟಿ ರೂ.ಗಳ ಬೃಹತ್ ರೆವೆನ್ಯೂ ಕೊರತೆಯು ಕಾಂಗ್ರೆಸ್ ಸರ್ಕಾರದ ದಿವಾಳಿತನ ತೋರಿಸುತ್ತಿದ್ದು, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೂ ಸಾಲದ ಹಣವನ್ನೇ

ವಿತ್ತೀಯ ಶಿಸ್ತಿಲ್ಲದ, ರಾಜ್ಯವನ್ನು ಸಾಲದ ಬಿಕ್ಕಟ್ಟಿಗೆ ಸಿಲುಕಿಸಿದ ದೂರದೃಷ್ಟಿಹೀನ ಬಜೆಟ್ ಸಂಸದ ಕ್ಯಾ.ಚೌಟ Read More »

ಕರಾವಳಿ
Scroll to Top