ಕರಾವಳಿ

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ರವರು ಫೆ.4ರಂದು ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಗೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಶಾಲೆಯಲ್ಲಿ ಈಗಾಗಲೇ 8ನೇ ತರಗತಿ ಪ್ರಾರಂಭಿಸಲಾಗಿದ್ದು, ಮುಂದೆ 9 ಹಾಗೂ 10ನೇ ತರಗತಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಪರಿಸರದ ಕಿ.ಪ್ರಾ ಹಾಗೂ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹತ್ತಿರವೆಲ್ಲಿಯೂ ಸರಕಾರಿ ಶಾಲೆಗಳಿಲ್ಲದೇ ಖಾಸಗಿ ಶಾಲೆಗಳನ್ನು ಅವಲಂಭಿಸುತ್ತಿದ್ದು, ನೂಜಿಬಾಳ್ತಿಲದಲ್ಲಿ ಹೈಸ್ಕೂಲ್ […]

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ Read More »

ಕರಾವಳಿ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.comಕಡಬ,ಫೆ.06. ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಸಾರಿಮಂಟಮೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಜನ್ ದೈವದ ನೇಮೋತ್ಸವ ಫೆ.3 ಹಾಗೂ 4ರಂದು ನಡೆಯಿತು.ಫೆ.3ರಂದು ಸಾರಿಮಂಟಮೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಅಮ್ಮಣ್ಣಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾತ್ರಿ ಬಾಳ್ತಿಲ ಗುತ್ತುಮನೆಯಿಂದ ಶ್ರೀ ರಾಜನ್ ದೈವದ ಭಂಡಾರ ಸಾರಿಮಂಟಮೆಗೆ ಬ್ಯಾಂಡ್ ವಾದ್ಯಗಳೊಂದಿಗೆ ತರಲಾಯಿತು. ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದರೆ, ಉದ್ಯಮಿ ಬಾಲಕೃಷ್ಣ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ Read More »

ಕರಾವಳಿ

ಫೆ 7 ರಂದು ಆತೂರಿನಲ್ಲಿ ಏಕದಿನ ಮತಪ್ರಭಾಷಣ►ನೌಶಾದ್ ಬಾಖವಿ ಪ್ರಮುಖ ಭಾಷಣ

(ನ್ಯೂಸ್ ಕಡಬ) newskadaba.comಆತೂರು,ಫೆ.06.ಆತೂರು ಶಂಸುಲ್ ಉಲಾಮ ಕ್ರಿಯಾ ಸಮಿತಿಯ ಪಂಚ ವಾರ್ಷಿಕೋತ್ಸವ ಪ್ರಯುಕ್ತ ಏಕದಿನ ಮತ ಪ್ರಭಾಷಣ ಆತೂರು ಸಂಶುಲ್ ಉಲಾಮ ನಗರದ ಜೆಎಮ್‍ಜೆ ವಠಾರದಲ್ಲಿ ಫೆ 7 ರಂದು ನಡೆಯಲಿದೆ, ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವಾಗ್ಮಿ ಕೇರಳ ತಿರುವನಂತಪುರದ ಎ.ಎಂ.ನೌಶಾದ್ ಬಾಖವಿ ಭಾಗವಹಿಸಲಿದ್ದಾರೆ ಎಂದು ಆತೂರು ಎಮ್‍ಜೆಎಂ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು ಹೇಳಿದರು. ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆತೂರಿನಲ್ಲಿ ಕುರಾನ್ ಕಂಠಪಾಠಮಾಡುವ ವಿಫುಲ್ ಕಾಲೇಜು ಸ್ಥಾಪನೆಯ ಹಿನ್ನೆಯಲ್ಲಿ ಈ ಮತಪ್ರಭಾಷಣವನ್ನು ಏರ್ಪಡಿಸಲಾಗಿದೆ ಎಂದರು. ಬೆಳಿಗ್ಗೆ

ಫೆ 7 ರಂದು ಆತೂರಿನಲ್ಲಿ ಏಕದಿನ ಮತಪ್ರಭಾಷಣ►ನೌಶಾದ್ ಬಾಖವಿ ಪ್ರಮುಖ ಭಾಷಣ Read More »

ಕರಾವಳಿ

ಬೆಳ್ಳಾರೆ: ಸಾಲಭಾದೆ ತಾಳಲಾರದೆ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.comಬೆಳ್ಳಾರೆ,ಫೆ.05.ಮಹಿಳೆಯೊಬ್ಬರು ತಾನು ಮಾಡಿದ ಸಾಲ ಕಟ್ಟಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೋಲಿಸ್ ಠಾಣೆಯಿಂದ ವರದಿಯಾಗಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಸುಳ್ಯ ತಾಲೂಕು ಮುಪ್ಪೇರಿಯಾ ಗ್ರಾಮದ ಕಂಡಿಕಟ್ಟ ನಿವಾಸಿಯಾದ ಸುಂದರ ಎಂಬವರ ಪತ್ನಿ ವಾರಿಜ ಎಂದು ಗುರುತಿಸಲಾಗಿದೆ. ವಾರಿಜರವರು ಸಾಲ ಕಟ್ಟಲು ಸಾಧ್ಯವಾಗದೆ ಜೀವನ ದಲ್ಲಿ ಜಿಗುಪ್ಸೆಗೊಂಡು ಯಾವುದೋ ಕೀಟನಾಶಕ ಸೇವಿಸಿ  ಆತ್ಮಹತ್ಯೆ ಮಾಡಿಕೊಳ್ಳಲು  ಹೋಗಿ ಅಸ್ವಸ್ಥಗೊಂಡವರನ್ನು ಮನೆಯವರು ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ

ಬೆಳ್ಳಾರೆ: ಸಾಲಭಾದೆ ತಾಳಲಾರದೆ ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಪುತ್ತೂರಿನಲ್ಲಿ ಬೈಕ್ – ಆ್ಯಕ್ಟಿವಾ ನಡುವೆ ಢಿಕ್ಕಿ ► ಕಡಬ ನಿವಾಸಿ ಮೃತ್ಯು

(ನ್ಯೂಸ್ ಕಡಬ) ‌‌‌‌‌ newskadaba.com ಕಡಬ, ಫೆ.05. ಬೈಕ್ ಮತ್ತು ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿ ಗಾಯಗೊಂಡಿದ್ದ ಕಡಬದ ವ್ಯಕ್ತಿಯೋರ್ವರು ಮಂಗಳವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕಡಬ ಸಮೀಪದ ಕೊಠಾರಿ ನಿವಾಸಿ ಶೇಖರ್ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಭಾನುವಾರ ರಾತ್ರಿ ಪುತ್ತೂರಿನ ತನ್ನ ಮನೆಯಿಂದ ಕೋಳಿ ಮಾಂಸ ತರಲೆಂದು ಬೈಕಿನಲ್ಲಿ ಎಳ್ಮುಡಿ ಸೇತುವೆ ಬಳಿ ತಲುಪಿದಾಗ ವಿರುದ್ಧ ದಿಕ್ಕಿನಿಂದ ಬಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶೇಖರ್ ನಾಯ್ಕ್

ಪುತ್ತೂರಿನಲ್ಲಿ ಬೈಕ್ – ಆ್ಯಕ್ಟಿವಾ ನಡುವೆ ಢಿಕ್ಕಿ ► ಕಡಬ ನಿವಾಸಿ ಮೃತ್ಯು Read More »

ಕರಾವಳಿ

ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ►ಯುವಕರ ಗುಪೊಂದರಿಂದ ಹಲ್ಲೆ

(ನ್ಯೂಸ್ ಕಡಬ) newskadaba.comಕಡಬ,ಫೆ.05.ಸಂಬದಿಕಕರ ಮನೆಯಿಂದ  ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಪೊಂದು ಹಲ್ಲೆ ನಡೆಸಿದ ಪ್ರಕರಣ ಕಡಬ ಪೊಲೀಸ್ ಠಾಣೆಯಿಂದ ವರದಿಯಾಗಿದೆ.ಪುತ್ತೂರು ತಾಲೂಕು ದೋಳ್ಪಾಡಿ ಗ್ರಾಮದ ಕೂರೇಲು ನಿವಾಸಿಯಾದ ವಿಶ್ವನಾಥ ಎಂಬವರ ಮೇಲೆ  ಅದೇ ಗ್ರಾಮದ ವಿಶ್ವನಾಥ, ದಯಾನಂದ, ಪುರಂದರ, ಯುವರಾಜ್, ಎಂಬವರು ಹಲ್ಲೆನಡೆಸಿದ್ದಾರೆ. ಯುವಕರ  ಗುಂಪು ವಿಶ್ವನಾಥ,ರಿಗೆದೋಣ್ಣೆಯಿಂದ ಹೊಡೆದ ಪರಿಣಾಮ ಅವರಿಗೆ ವಿಪರೀತ ಗಾಯವಾಗಿದ್ದು  ಚಿಕಿತ್ಸೆ ಗಾಗಿ  ಕಡಬ ಸರಕಾರಿ ಆಸ್ಬತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ

ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ►ಯುವಕರ ಗುಪೊಂದರಿಂದ ಹಲ್ಲೆ Read More »

ಕರಾವಳಿ

ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.comಬಂಟ್ವಾಳ,ಫೆ.05.ಯಕ್ಷಗಾನ ನೋಡಲು ಹೋದವರು  ನದಿಗೆ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಕಸಬ ಗ್ರಾಮದ ಎಸ್.ವಿ.ಎಸ್ ಕಾಲೇಜು ರಸ್ತೆ  ನಿವಾಸಿ ಪ್ರವೀಣ್  ಕುಮಾರ್ ಎಂದು ಗುರುತಿಸಲಾಗಿದೆ. ಪ್ರವೀಣ್  ಕುಮಾರ್ ರವರು ಸ್ಪರ್ಶ ಕಲಾಮಂದಿರದಲ್ಲಿನ ನಡೆಯುವ ಯಕ್ಷಗಾನ  ಸಂಜೆ  ವೇಳೆ ಯಕ್ಷಗಾನ ನೋಡಲೆಂದು  ಮನೆಯಿಂದ ತೆರಳಿದ್ದರು. ಆದರೆ ತುಂಬಾ ಹೊತ್ತಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಹುಡುಕಾಡಿದಾಗ ಮೂಡ ಗ್ರಾಮದ ನೇತ್ರಾವತಿ ನದಿಯ ಹೊಸ

ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ Read More »

ಕರಾವಳಿ

ಪುತ್ತೂರು-ಉಪ್ಪಿನಂಗಡಿ ಚತುಷ್ಪಥಕ್ಕೆ ಕಾಮಗಾರಿಗೆ 12 ಕೋ. ರೂ.► ಶಾಸಕ ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.comಕೋಡಿಂಬಾಡಿ,ಫೆ.05.ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ, ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ನ ಸುಮಾರು 1.50 ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಬಳಿಕ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.ಪುತ್ತೂರು- ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿಗೆ 12 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಇದರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು. ಜನತೆಯ ಅಗತ್ಯಕ್ಕೆ ಅನುಗುಣವಾಗಿ ರಸ್ತೆಗಳೂ ಅಭಿವೃದ್ಧಿಯಾಗಬೇಕು.

ಪುತ್ತೂರು-ಉಪ್ಪಿನಂಗಡಿ ಚತುಷ್ಪಥಕ್ಕೆ ಕಾಮಗಾರಿಗೆ 12 ಕೋ. ರೂ.► ಶಾಸಕ ಸಂಜೀವ ಮಠಂದೂರು Read More »

ಕರಾವಳಿ

ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ► ಹರ್ಷದ್ ವರ್ಕಾಡಿ

(ನ್ಯೂಸ್ ಕಡಬ) newskadaba.com ಕಡಬ,ಫೆ.05.“ವಿಶ್ವ ಕ್ಯಾನ್ಸರ್ ತಿಳುವಳಿಕಾ ದಿನ ಫೆಬ್ರವರಿ 4” ಇದರ ಅಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ, ಮಂಜೇಶ್ವರ ಇಲ್ಲಿ ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಮಾನ್ಯ ಹರ್ಷದ್ ವರ್ಕಾಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಯಿ ಕ್ಯಾನ್ಸರ್ ಎನ್ನುವುದು ಹೆಚ್ಚಾಗಿ ಎಲೆ ಅಡಿಕೆ, ಹೊಗೆ ಸೊಪ್ಪು, ಗುಟ್ಕಾ, ಪಾನ್ ಪರಾಗ್, ಬೀಡಿ ಸಿಗರೇಟ್, ಮುಂತಾದ ತಂಬಾಕು ಉತ್ಪನ್ನಗಳಿಂದ ಬರುತ್ತದೆ

ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ► ಹರ್ಷದ್ ವರ್ಕಾಡಿ Read More »

ಕರಾವಳಿ

ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಸರಕಾರಕ್ಕೆಶಿಫಾರಸ್ಸು► ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ

(ನ್ಯೂಸ್ ಕಡಬ) newskadaba.com ಕಡಬ,ಫೆ.04.ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಆಯೋಗವು ಸರಕಾರಕ್ಕೆ ಶಿಫಾರಸ್ಸು  ಮಾಡಲಿದೆ ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ ಹೇಳಿದರು.ಅವರು  ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಯಲ್ಲಿ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಪಡಿತರ ಯುನಿಟ್‍ವೊಂದರ 5 ಕಿಲೋ ಅಕ್ಕಿ ಮತ್ತು ಎರಡು ಕಿಲೋ ರಾಗಿ, ಜೋಳ

ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಸರಕಾರಕ್ಕೆಶಿಫಾರಸ್ಸು► ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ Read More »

ಕರಾವಳಿ
Scroll to Top