ಕರಾವಳಿ

ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದಲ್ಲಿ ಸುಮಾರು 20 ವರ್ಷಗಳ ಕಾಲ ಪ್ಲ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಜೆ. ಕೇಶವ ಇವರು ಜೂನ್ 23 ರಂದು ದೈವಾಧೀನರಾಗಿರುತ್ತಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಜುಲೈ 24 ರಂದು ಜಿಲ್ಲಾ ಗೃಹರಕ್ಷಕ ದಳ ಕಚೇರಿ ಮೇರಿಹಿಲ್‍ನಲ್ಲಿ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು.

ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ Read More »

ಕರಾವಳಿ

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವವರು ನಿಗದಿತ ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯುವುದು. ಅರ್ಜಿಗಳನ್ನು ಜುಲೈ 12 ರೊಳಗೆ ಪಡೆಯಬೇಕು. . ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 22 ರೊಳಗೆ ಸಲ್ಲಿಸಬೇಕು .ಸಾಮಾನ್ಯ ಅರ್ಹತೆಗಳು. ನಿಗಮದ ಯೋಜನೆಗಳಲ್ಲಿ

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ Read More »

ಕರಾವಳಿ

ಭ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್ ಗಳ ಮಾಹಿತಿ ನೀಡಿದರೆ ಸಿಗಲಿದೆ ನಗದು ಬಹುಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ಕಾನೂನಿನ ವಿರುದ್ಧವಾಗಿ ಭ್ರೂಣ ಲಿಂಗ ಪತ್ತೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್‍ಗಳ ಮಾಹಿತಿ ನೀಡಿದವರಿಗೆ ರೂ. 10000 ಹಾಗೂ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭ್ರೂಣ ಹತ್ಯೆ ಕಾನೂನು ಬಾಹಿರ ಚಟುವಟಿಕೆಯಾಗಿದ್ದರೂ ಇಂತಹ ಘಟನೆಗಳು

ಭ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್ ಗಳ ಮಾಹಿತಿ ನೀಡಿದರೆ ಸಿಗಲಿದೆ ನಗದು ಬಹುಮಾನ Read More »

ಕರಾವಳಿ

ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ಮಹಿಳೆಯರಿಗೆ ಸಂಬಂಧಿಸಿದ ಸರ್ಕಾರದ ಪ್ರತಿಯೊಂದು ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಮಹಿಳೆಗೂ ದೊರಕಬೇಕು. ಯಾವುದೇ ಒಬ್ಬ ಮಹಿಳೆಯು ವಂಚಿತರಾಗದಂತೆ ಮತ್ತು ಅವರಿಗೆ ಸರಿಯಾದ ಸಮಯದಲ್ಲಿ ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಹಾಗಾಗಿ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‍ರವರು ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ

ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸೂಚನೆ Read More »

ಕರಾವಳಿ

ಕೆಂಪೇಗೌಡ ಜಯಂತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಇವರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಜೂನ್ 27 ರಂದು ರವೀಂದ್ರ ಸಭಾಭವನ, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ನಡೆಯಲಿದೆ. ಪೂರ್ವಾಹ್ನ 10.30 ಗಂಟೆಗೆ ಕಾರ್ಯಕ್ರಮವು ನಡೆಯಲಿದ್ದು ನಗರಾಭಿವೃದ್ಧಿ ಸಚಿವ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮಂಗಳೂರು ದಕ್ಷಿಣ ಶಾಸಕರಾದ ಡಿ.

ಕೆಂಪೇಗೌಡ ಜಯಂತಿ Read More »

ಕರಾವಳಿ

ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ➤ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಡ್ಯಡ್ಕ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಉಮೇಶ ಬಿ. ಮಾತನಾಡಿ, ಪೂಜ್ಯ ಖಾವಂದರ ಆಶಯದಂತೆ ಪ್ರತಿಯೊಬ್ಬರು ತಿಂಗಳಿಗೊಂದರಂತೆ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಸುಮಾಧರ ಇಡ್ಯಡ್ಕ

ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ➤ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ Read More »

ಕರಾವಳಿ

ನೀರಿನ ಟ್ಯಾಂಕರ್, ಬೈಕ್ ಮುಖಾಮುಖಿ ಡಿಕ್ಕಿ ➤ ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂನ್.24.ಚಿಕ್ಕಮಗಳೂರಿನ ಹಳೆ ಲಕ್ಯಾ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಅಣ್ಣ, ತಂಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಸ್.ಬಿದರೆಯಿಂದ ಚಿಕ್ಕಮಗಳೂರಿಗೆ ಬೈಕ್ ನಲ್ಲಿ ಅಣ್ಣ, ತಂಗಿ ಹಾಗೂ ಮಗು ತೆರಳುತ್ತಿದ್ದ ಸಂದರ್ಭದಲ್ಲಿ ನೀರಿನ ಟ್ಯಾಂಕರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಲತಾಮಣಿ (25ವರ್ಷ), ಅಶೋಕ್ (30ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ

ನೀರಿನ ಟ್ಯಾಂಕರ್, ಬೈಕ್ ಮುಖಾಮುಖಿ ಡಿಕ್ಕಿ ➤ ಇಬ್ಬರ ದುರ್ಮರಣ Read More »

ಕರಾವಳಿ

ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಗುರುಪುರ ಸೇತು

(ನ್ಯೂಸ್ ಕಡಬ) newskadaba.com ಗುರುಪುರ, ಜೂನ್.24.ಶನಿವಾರ ಗುರುಪುರದಲ್ಲಿ ಸೇತುವೆ ಕಾಮಗಾರಿಯ ಪ್ರಗತಿ ವೀಕ್ಷಿಸಲು  ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ ಕುಮಾರ್‌ ಕಟೀಲು ಆಗಮಿಸಿ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಗುರುಪುರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸೇತುವೆ ಕಾಮಗಾರಿ 2019ರ ಫೆಬ್ರವರಿ 21ಕ್ಕೆ ಆರಂಭಗೊಂಡಿದ್ದು, 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ

ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಗುರುಪುರ ಸೇತು Read More »

ಕರಾವಳಿ

ಮದುವೆ ಸವಿನೆನಪಿಗೆ ಪುಸ್ತಕ ತಾಂಬೂಲದ ವಿಶಿಷ್ಟ ಪರಿಕಲ್ಪನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.24.ಮದುವೆ ಮನೆಯಲ್ಲಿ ಊಟ ಮುಗಿಸಿ ಹೊರಡುವಾಗ ಕೊನೆಗೆ ಸವಿನೆನಪಿಗೆಂದು ಸ್ವೀಟ್ ಬಾಕ್ಸ್ ನೀಡುವುದು ಸಾಮಾನ್ಯ. ಇಂಥದೇ ಭಿನ್ನ ಚಿಂತನೆ ಮಾಡಿದ ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕ, ರಾಷ್ಟ್ರೀಯ ಚಿಂತಕ ಚ.ನ.ಶಂಕರ್ ರಾವ್ ತನ್ನ ಮೂವರು ಮಕ್ಕಳ ಮದುವೆ ಸವಿನೆನಪಿಗೆ ಪುಸ್ತಕ ತಾಂಬೂಲದ ವಿಶಿಷ್ಟ ಪರಿಕಲ್ಪನೆ ಸಮಾಜದ ಮುಂದಿಟ್ಟಿದ್ದಾರೆ. ಚ.ನ ಶಂಕರ್ ರಾವ್ ಪುತ್ರಿ ದೀಪ್ತಿ ಹಾಗೂ ರಾಹುಲ್ ವಿವಾಹ ಜೂನ್ 9ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿತ್ತು. ಮದುವೆಯ ಭೋಜನ ಆತಿಥ್ಯದ ಬಳಿಕ ಆಗಮಿಸಿದ

ಮದುವೆ ಸವಿನೆನಪಿಗೆ ಪುಸ್ತಕ ತಾಂಬೂಲದ ವಿಶಿಷ್ಟ ಪರಿಕಲ್ಪನೆ Read More »

ಕರಾವಳಿ

ಅಭಿವೃದ್ಧಿಯ ಹೆಸರಿನಲ್ಲಿ ನಗರದ ಹಸಿರು ಮಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.24.ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು, ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ ಬಂದರು ಮತ್ತು ಕುದ್ರೋಳಿ ವಾರ್ಡ್‌ ಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮರ–ಗಿಡಗಳಿವೆ.ಕುದ್ರೋಳಿ, ಬಂದರು ವಾರ್ಡ್‌ ಗಳಲ್ಲಿ ಕೇವಲ ಶೇ. 0.5ನಷ್ಟು ಪ್ರದೇಶದಲ್ಲಿ ಮಾತ್ರ ಮರ–ಗಿಡಗಳಿವೆ. ಈ ವಿಚಾರವನ್ನು ಅರಣ್ಯ ಇಲಾಖೆ ಇದೀಗ ಗಂಭೀರವಾಗಿ ಪರಿಗಣಿ ಸಿದ್ದು, ಈ ಎರಡೂ ವಾರ್ಡ್‌ ಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 100 ಗಿಡ ನೆಡುವ ಯೋಜನೆಯನ್ನು ಹಾಕಿದೆ. ಬಂದರು ವಾರ್ಡ್‌ನಲ್ಲಿ ಸದ್ಯ

ಅಭಿವೃದ್ಧಿಯ ಹೆಸರಿನಲ್ಲಿ ನಗರದ ಹಸಿರು ಮಾಯ Read More »

ಕರಾವಳಿ
Scroll to Top