ಕರಾವಳಿ

ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್” ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಭತ್ತದ ಬೇಸಾಯವನ್ನು ಸತತವಾಗಿ ಹಲವಾರು ವರ್ಷಗಳಿಂದ ಅಧಿಕ ಮಳೆ ಬೀಳುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಈ ಜಿಲ್ಲೆಗಳ ಪ್ರದೇಶವು ಭೌಗೋಳಿಕವಾಗಿ ತಗ್ಗು ದಿಣ್ಣೆಯಿಂದ ಕೂಡಿದ್ದು ಮಣ್ಣಿನ ಫಲವತ್ತತೆಯು ಸಂರಕ್ಷಣೆ ಕಷ್ಟಸಾಧ್ಯ, ಕಡಿಮೆ ಹಿಡುವಳಿ, ಕೃಷಿ ಕಾರ್ಮಿಕ ಸಮಸ್ಯೆ ಅಧಿಕವಾಗಿರುವುದರಿಂದ ಭತ್ತದ ಬೆಳೆ ಉತ್ಪಾದನಾ ವೆಚ್ಚ ಅಧಿಕವಾಗಿರುತ್ತದೆ. ರೈತರಿಗೆ ಸಾಂಸ್ಥಿಕ ಸಾಲ ಸೌಲಭ್ಯದ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಭತ್ತ ಬೆಳೆಯುವಲ್ಲಿ […]

ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್” ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ ➤ ದ.ಕ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣ ಮಾಡಲು ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು. ಸೋಮವಾರ ಪುರಭವನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರ ಸಭೆಯಲ್ಲಿ ಮಾತಾನಾಡಿದ ಅವರು, ಡೆಂಗ್ಯೂ ಸುಲಭವಾಗಿ ನಿಯಂತ್ರಿಸುವ ರೋಗ, ಏಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯು ಸ್ವಚ್ಚ ನೀರಿನಲ್ಲಿ ಸಾಮಾನ್ಯವಾಗಿ ಸಂತಾನಾಭಿವೃದ್ದಿ

ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ ➤ ದ.ಕ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಪಿಲಿಕುಳ ಆಟಿಕೂಟ ➤ ವಿಶೇಷ ಭೋಜನ ಸಾರ್ವಜನಿಕರಿಗೆ ಕೂಪನ್ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಪಿಲಿಕುಳದ ಗುತ್ತು ಮನೆಯಲ್ಲಿ ಆಗಸ್ಟ್ 4 ರಂದು ಪೂರ್ವಾಹ್ನ 10 ಗಂಟೆಯಿಂದ ಪಿಲಿಕುಳ ಆಟಿಕೂಟವನ್ನು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗಗೆ ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಸೀತಾರಾಮ್ ಕುಮಾರ್ ಕಟೀಲ್ ಇವರ ಸಾರಥ್ಯದಲ್ಲಿ “ಯಕ್ಷ, ನೃತ್ಯ ಮತ್ತು ಹಾಸ್ಯ ವೈಭವ” ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದವರಿಂದ ಆಟಿಯ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನವೂ ನಡೆಯಲಿದೆ. ಮಧ್ಯಾಹ್ನ 1

ಪಿಲಿಕುಳ ಆಟಿಕೂಟ ➤ ವಿಶೇಷ ಭೋಜನ ಸಾರ್ವಜನಿಕರಿಗೆ ಕೂಪನ್ ವ್ಯವಸ್ಥೆ Read More »

ಕರಾವಳಿ

ಹಿರಿಯ ಸುನ್ನೀ ನೇತಾರ, ‘ಶರಫುಲ್ ಉಲಮಾ’ ಅಬ್ಬಾಸ್ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.29. ಸುನ್ನೀ ನೇತಾರ, ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ ‘ಶರಫುಲ್ ಉಲಮಾ’ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಅಪರಾಹ್ನ ನಿಧನರಾದರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಜನಿಸಿದ ಅಲ್‌ಹಾಜ್ ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ 1994 ರಲ್ಲಿ ಮಂಜನಾಡಿಯಲ್ಲಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸ್ಥಾಪಿಸುವ ಮೂಲಕ

ಹಿರಿಯ ಸುನ್ನೀ ನೇತಾರ, ‘ಶರಫುಲ್ ಉಲಮಾ’ ಅಬ್ಬಾಸ್ ಮುಸ್ಲಿಯಾರ್ ನಿಧನ Read More »

ಕರಾವಳಿ

ಜೋಕಟ್ಟೆ ಅಂಜುಮಾನ್ ಸುವರ್ಣ ಮಹೋತ್ಸವ ಸಮಾರೋಪ

  (ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.29. ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಜು.31ರಿಂದ ಆ.4ರ ವರೆಗೆ ನಡೆಯಲಿದೆ. ೩೧ರಂದು ಶೈಖುನಾ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಅಂಜುಮಾನ್ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಹುಸೈನ್ ತಿಳಿಸಿದ್ದಾರೆ.ಆ.೧ರಂದು ಕಾವಳಕಟ್ಟೆ ಇಸ್ಲಾಮಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಫಿಲ್ ಸುಫ್ಯಾನ್ ಸಖಾಫಿ, ಆ.೨ರಂದು ಅಬೂಬಕ್ಕರ್ ಫೈಝಿ ಕುಂಭರಾಜೆ, ಆ.೩ರಂದು ಅಲ್ ಹಾಫಿಲ್ ಕುಮ್ಮನಮ್ ನಿಝಾಮುದ್ದಿನ್ ಅಝ್ಹರಿ ಅಲ್ ಖಾಸಿಮಿ

ಜೋಕಟ್ಟೆ ಅಂಜುಮಾನ್ ಸುವರ್ಣ ಮಹೋತ್ಸವ ಸಮಾರೋಪ Read More »

ಕರಾವಳಿ

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಂ‌ ಭಾನುವಾರದಂದು ಭೇಟಿ ನೀಡಿದರು. ಪಿ.ಸಿ.ಜಯರಾಂ‌ರವರನ್ನು ದೇವಸ್ಥಾನದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಗೌರವಿಸಿದರು. ಈ ಸಂದರ್ಭದಲ್ಲಿ ಜೇಸಿಐ ಪಂಜ ಪಂಚಶ್ರೀ ಘಟಕದ ಅಧ್ಯಕ್ಷ ವಾಸುದೇವ ಮೇಲ್ಪಾಡಿ, ಗ್ರಾಮ ಗೌಡ ಸಮಿತಿಯ ದೇವಿಪ್ರಸಾದ್ ಜಾಕೆ ಉಪಸ್ಥಿತರಿದ್ದರು.

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ Read More »

ಕರಾವಳಿ

ತಡ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಅನರ್ಹ ಶಾಸಕರ ಆಗಮನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.29.ಅನರ್ಹಗೊಂಡ ಶಾಸಕರು  ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಆದೇಶ ಹೊರಡಿಸಿದ ಬೆನ್ನಲ್ಲೆ ಮುಂಬೈನಿಂದ ತಂಡವಾಗಿ ಬೆಂಗಳೂರಿಗೆ ಆಗಮಿಸಿದೆ. ಮುನಿರತ್ನ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರೂ ಮುಂಬೈನಿಂದ ಒಂದೇ ವಿಮಾನದಲ್ಲಿ ಆಗಮಿಸಿದ್ದಾರೆ. ಅವರ ನಂತರ ಮತ್ತೊಂದು ವಿಮಾನದಲ್ಲಿ ಎಸ್.ಟಿ ಸೋಮಶೇಖರ್, ಬೈರತಿ ಬಸವಾರಾಜ್, ಗೋಪಾಲಯ್ಯ ಹಾಗೂ ಎಂ.ಟಿ.ಬಿ ನಾಗರಾಜ್ ಬೆಂಗಳೂರಿಗೆ ಆಗಮಿಸಿದ್ದಾರೆ.ಭಾನುವಾರ  ತಡ ರಾತ್ರಿ  ಅನರ್ಹಗೊಂಡ ಶಾಸಕರು  ಮುಂಬೈನಿಂದ ತಂಡವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ತಡ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಅನರ್ಹ ಶಾಸಕರ ಆಗಮನ Read More »

ಕರಾವಳಿ

ಕೋಡಿಂಬಾಳ: ಎಂಸಿವೈಎಂ ವತಿಯಿಂದ ಗ್ರೀನ್ ಸಂಡೇ ಕಾರ್ಯಕ್ರಮ ➤ ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೊಲಿಕ್‌ ಯೂತ್ ಮೂವ್ ಮೆಂಟ್ (ಎಂ.ಸಿ.ವೈ.ಯಂ) ನ ವತಿಯಿಂದ ಗ್ರೀನ್ ಸಂಡೇ ಆಚರಿಸಲಾಯಿತು. ಭಾನುವಾರದ ದಿವ್ಯ ಬಲಿಪೂಜೆಯ ನಂತರ ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಸಿ. ಮಾಥ್ಯು ರವರು ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ಧರ್ಮಪ್ರಾಂತ್ಯದ ಪ್ರೋಕ್ಯುರೇಟರ್, ಕಿಡ್ಸ್ ನಿರ್ದೇಶಕರು ಹಾಗೂ ಕೋಡಿಂಬಾಳ ಚರ್ಚ್ ಧರ್ಮಗುರುಗಳಾದ ವಂದನೀಯ ರೆ| ಫಾ| ಜಾನ್ ಕುನ್ನತ್ತ್ ರವರು ಗಿಡಗಳನ್ನು ವಿತರಿಸಿ

ಕೋಡಿಂಬಾಳ: ಎಂಸಿವೈಎಂ ವತಿಯಿಂದ ಗ್ರೀನ್ ಸಂಡೇ ಕಾರ್ಯಕ್ರಮ ➤ ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ Read More »

ಕರಾವಳಿ

ಮೂಡುಬಿದರೆ: ಯಕ್ಷಸಂಗಮ ➤ 20ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜುಲೈ.27.ದ.ಕ ಜಿಲ್ಲೆಯ ಜಾನಪದ ಕಲೆ ಯಕ್ಷಗಾನ.ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಕಾರ್ಯಕ್ರಮ ಇಂದು  ಸಮಾಜಮಂದಿರ ಮೂಡಬಿದರೆ ಇಲ್ಲಿ ರಾತ್ರಿ 9.00ಗಂಟೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೂಲತಃ ಮಿಜಾರಿನ ಪ್ರಮುಖ  ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್‌ ಶೆಟ್ಟಿಗಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಇವರ ಸಾಧನೆ ಅಪಾರ, 15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.ಕುಲಕಸುಬಾದ ಕೈಮಗ್ಗದಲ್ಲೇ ಮುಂದುವರಿದರೂ ಹಲವಾರು ಮೇಳಗಳಿಗೆ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದರು.1982ರಲ್ಲಿ ಕಟೀಲಿನ

ಮೂಡುಬಿದರೆ: ಯಕ್ಷಸಂಗಮ ➤ 20ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭ Read More »

ಕರಾವಳಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕರ ಬಾಲಮಂದಿರ, ಮಂಗಳೂರು ಸಂಸ್ಥೆಗೆ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸೇವೆಯನ್ನು ಒಂದು ವರ್ಷದ ಅವಧಿಗೆ ಸೂಕ್ತ ದರ್ಜೆಯ ನೊಂದಾಯಿತ ಸಂಸ್ಥೆಗಳಿಂದ  ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪತ್ರಗಳನ್ನು ಕರ್ನಾಟಕ ಸರಕಾರದ ಇ-ಪ್ರೂಕ್ಯೂರ್‍ಮೆಂಟ್ ಪೋರ್ಟಲ್‍ನಿಂದ ಜುಲೈ 15 ರಿಂದ ಡೌನ್‍ಲೋಡ್ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನ. ಆಗಸ್ಟ್ 17 ಸಂಜೆ 4.30 ಗಂಟೆಗೆ ಅಧೀಕ್ಷಕರು, ಸರ್ಕಾರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಆಹ್ವಾನ Read More »

ಕರಾವಳಿ
Scroll to Top