ಕರಾವಳಿ

ಸಿರಿ ತೋಟಗಾರಿಕೆ ಸಂಘದ ವತಿಯಿಂದ ➤ ಆರ್ಕಿಡ್ ಮತ್ತು ಅಂಥೂರಿಯಮ್ ಬೇಸಾಯ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.14.ಸಿರಿ ತೋಟಗಾರಿಕೆ ಸಂಘದ ವತಿಯಿಂದ ಆಗಸ್ಟ್ 17 ರಂದು ಆರ್ಕಿಡ್ ಮತ್ತು ಅಂಥೂರಿಯಮ್ ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಬಾಲಭವನ ಕದ್ರಿ ಉದ್ಯಾನವನದ ಹತ್ತಿರ ಆಯೋಜಿಸಲಾಗಿದೆ. ಆಸಕ್ತರು ಸಿರಿ ತೋಟಗಾರಿಕೆ ಸಂಘ ಬೆಂದೂರುವೆಲ್ ಇಲ್ಲಿ ತರಬೇತಿ ಶುಲ್ಕ ನೀಡಿ ಆಗಸ್ಟ್ 15ರೊಳಗೆ ನೊಂದಾಯಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ರುಕ್ಮಯ್ಯ ದೂರವಾಣಿ ಸಂಖ್ಯೆ-9845523944 ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲಯ ಮಂಗಳೂರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳು ಸಿರಿ ತೋಟಗಾರಿಕೆ ಸಂಘ ಮಂಗಳೂರು ಇವರ […]

ಸಿರಿ ತೋಟಗಾರಿಕೆ ಸಂಘದ ವತಿಯಿಂದ ➤ ಆರ್ಕಿಡ್ ಮತ್ತು ಅಂಥೂರಿಯಮ್ ಬೇಸಾಯ ತರಬೇತಿ Read More »

ಕರಾವಳಿ

ಪ್ರಗತಿ ಪರಿಶೀಲನಾ ಸಭೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.14. ಇಂದು ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಬೇಕಾದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ. ಎಂದು ಮುಖ್ಯ ಯೋಜನಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ, ಕೆ.ಡಿ.ಪಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಪ್ರಗತಿ ಪರಿಶೀಲನಾ ಸಭೆ ಮುಂದೂಡಿಕೆ Read More »

ಕರಾವಳಿ

ತೋಟಗಾರಿಕೆ ಇಲಾಖೆ ದ.ಕ ಜಿಲ್ಲೆ,ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ➤ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.14.ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದವತಿಯಿಂದ ಆಗಸ್ಟ್ 8 ರಂದು ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಕಚೇರಿ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಮಂಗಳೂರು ಪ್ರವೀಣ ಕೆ, ರವರು ಗಿಡಕ್ಕೆ ನೀರು ಹಾಕುವ ಮೂಲಕ ತರಬೇತಿಗೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಮಹಾವಿದ್ಯಾಲಯ,

ತೋಟಗಾರಿಕೆ ಇಲಾಖೆ ದ.ಕ ಜಿಲ್ಲೆ,ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ➤ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ Read More »

ಕರಾವಳಿ

‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.13.‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ.ಇದು ಕನ್ನಡ ಸಾಹಿತ್ಯವನ್ನು ಲೋಕಕ್ಕೆ ಪರಿಚಯಿಸುವ ನೆಟ್ವರ್ಕ್ ಇದಾಗಿದೆ.   ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಸುಮಾರು 6000 ಪುಸ್ತಕಗಳ ಪೈಕಿ ಸರಿ ಸುಮಾರು 1,000 ಪುಸ್ತಕಗಳಿಗೆ ಮಾತ್ರ ವಿವಿಧ ಮಾಧ್ಯಮ (ಪತ್ರಿಕೆ, ಸೋಷಿಯಲ್ ಮೀಡಿಯಾ)ಗಳಿಂದ ‘ಪರಿಚಯ’ದ ಅವಕಾಶ ದೊರೆಯುತ್ತಿದೆ. ಅದರಿಂದಾಗಿ ಓದುಗರಿಗೆ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ, ಎಲ್ಲಾ ಲೇಖಕರಿಗೆ ಓದುಗರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ ಮತ್ತು ಪುಸ್ತಕದ ವಿಮರ್ಶೆಯೂ ಸಾಧ್ಯವಾಗುತ್ತಿಲ್ಲ. ಈ

‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆ Read More »

ಕರಾವಳಿ

ಗಂಡಿಬಾಗಿಲು: ಬಕ್ರೀದ್ ಆಚರಣೆ ➤ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸು-ಅನಸ್ ತಂಙಳ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಆಗಸ್ಟ್.13.ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವನ್ನು ಪ್ರತಿಪಾದಿಸುವ “ಈದುಲ್ ಅಝ್”ಹಾ ಪವಿತ್ರ ಬಕ್ರೀದ್ ಹಬ್ಬದ ವಿಶೇಷ ನಮಾಜು ಮತ್ತು ಕುತುಬಾ, ಪ್ರಾರ್ಥನೆ ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಆ. 12ರಂದು ನಡೆಯಿತು. ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಹಾದಿ ಅನಸ್ ತಂಙಳ್ ಹಬ್ಬದ ಸಂದೇಶ ನೀಡಿ ಮಾತನಾಡಿ ನೆಬಿವರ್ಯರ ಸಂದೇಶವನ್ನು ಸಮೀಕರಿಸುವ ಮತ್ತು ಅದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇಬ್ರಾಹಿಂ ನೆಬಿವರ್ಯರ ಸರಳ, ತ್ಯಾಗ ಜೀವನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರವಾಹ ಸಂತ್ರಸ್ಥರ ಸಂಕಷ್ಠಗಳಿಗೆ ಸಹಕಾರ

ಗಂಡಿಬಾಗಿಲು: ಬಕ್ರೀದ್ ಆಚರಣೆ ➤ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸು-ಅನಸ್ ತಂಙಳ್ Read More »

ಕರಾವಳಿ

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ

(ನ್ಯೂಸ್ ಕಡಬ) newskadaba.com , ಆಗಸ್ಟ್.13.ವಿಶೇಷ ಲೇಖನ: ಆಗಸ್ಟ್ 13ನ್ನು ಭಾರತದಾದ್ಯಂತ “ಅಂಗಾಂಗ ದಾನಿಗಳ ದಿನ” ಎಂದು ಆಚರಿಸಲಾಗುತ್ತಿದೆ. ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 130 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ Read More »

ಕರಾವಳಿ, ವಿಶೇಷ ಲೇಖನಗಳು

ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.12.ಮರ್ದಾಳ -ಕೆರ್ಮಯಿ ರಸ್ತೆಯ ಶಿವಾಜಿ ನಗರದಲ್ಲಿ ಕಳೆದ 5,6 ದಿನಗಳಿಂದ ಸುರಿಯುತ್ತಿದ್ದ ವಿಪರೀತ ಮಳೆಯಿಂದ ರಸ್ತೆಯಲ್ಲಿ ಒಸರು ಬಂದು ಭೂಕಂಪವಾಗಿ ರಸ್ತೆ ಸಂಪೂರ್ಣ ಹೂತುಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಆ. 11ರಂದು ನಡೆದಿದೆ. ರಸ್ತೆ ಹೊಂಡಬಿದ್ದು ಕೆಸರುಮಯವಾಗಿ ಆಟೋರಿಕ್ಷಾ ಸೇರಿದಂತೆ 2ವೀಲರ್, 4ವೀಲರ್ ಗಾಡಿಗಳು ಕೆಸರಿನಲ್ಲಿ ಹೂತು ಹೋಗುತ್ತಿದ್ದು ಮುಂದಕ್ಕೆ ಚಲಿಸದೆ ಪರಿಸರದವರು ಬಂದು ಮರದ ತುಂಡುಗಳನ್ನು ಹಾಕಿ ವಾಹನ ಮೇಲಕ್ಕೆ ಎತ್ತಲು ಸಹಕರಿಸಿದ್ದು ನಂತರ ಯಾವುದೇ ವಾಹನ ಆ

ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ Read More »

ಕರಾವಳಿ

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಇಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆಮಾಡಿದರು. ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ ಬಿ.ಎಸ್.ವೈ. ಅವರು ಅಲ್ಲಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ಸ್ಥಳೀಯ ಶಾಸಕರಾಗಿರುವ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಶಾಸಕರು ಮತ್ತು ಸ್ಥಳೀಯ ಮುಖಂಡರು ಬಿ.ಎಸ್.ವೈ. ಅವರಿಗೆ ಸಾಥ್ ನೀಡಿದರು.ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಯ ಕೇಳಿ ಗಂಭೀರತೆ

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ Read More »

ಕರಾವಳಿ

ಕಬಕ: ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಆ.12. ಖಾಸಗಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಬಕ ಎಂಬಲ್ಲಿ ಸೋಮವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮುಂಡೋಳೆ ನಿವಾಸಿ ಸಿದ್ದೀಕ್ ಅಝ್ಹರಿ ಉಸ್ತಾದ್ ರವರ ಸಹೋದರ ಅಬ್ದುಲ್ ಹಕೀಂ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮಾರುತಿ ಆಲ್ಟೋ 800 ಕಾರು ನಡುವೆ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಢಿಕ್ಕಿ

ಕಬಕ: ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕ ಮೃತ್ಯು Read More »

ಕರಾವಳಿ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಭೂ ಕುಸಿತ ಹೆಚ್ಚಳವಾದ ಕಾರಣ ಸಂಪೂರ್ಣ ರಸ್ತೆಯೇ ನಾಶವಾಗುವ ಹಂತದಲ್ಲಿದೆ. ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಇದರಿಂದಾಗಿ ಬೆಳ್ತಂಗಡಿ ಚಿಕ್ಕಮಗಳೂರು ಸಂಪರ್ಕ ಕಡಿತವಾಗಿದ್ದು, ಮುಂದಿನ ನಾಲ್ಕು ತಿಂಗಳು ಚಾರ್ಮಾಡಿ ಘಾಟಿಯ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.ಒಂದು ವಾರದಿಂದ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು Read More »

ಕರಾವಳಿ
Scroll to Top