ಕರಾವಳಿ

ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com  ಮಂಗಳೂರು,  ನ.1  ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಸ್ಕೂಲ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಆಚರಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಧನಂಜಯ ಕುಂಬ್ಳೆ ಅವರು ಅತಿಥಿಯಾಗಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ರಾಜ್ಯೋತ್ಸವ ಸಂದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಗಾರ ಕೆ.ಸಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ […]

ಕನ್ನಡ ರಾಜ್ಯೋತ್ಸವ ಆಚರಣೆ Read More »

ಕರಾವಳಿ

ನಾಪತ್ತೆಯಾದ ಬಾಲಕ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ,  ನ.1    ಪುತ್ತೂರಿನ ಹಾಸ್ಟೆಲ್ ನಿಂದ ಅಸೌಖ್ಯದ ನಿಮಿತ್ತ ಮನೆಗೆ ಬಂದ ಬಾಲಕ ಹಾಸ್ಟೆಲ್ ಗೆ ಹೋಗುತ್ತೇನೆಂದು ಮನೆಯಿಂದ ಹೊರಟು ಹೋದವನು ಹಾಸ್ಟೇಲ್ ಗೂ ಹೋಗದೇ, ಮನೆಗೂ ಬಾರದೇ ಕಾಣೆಯಾಗಿದ್ದಾನೆ. ಶ್ರೀಮತಿ ಮೀನಾಕ್ಷಿಯವರ ಪುತ್ರ ಮನೋಹರ ಸಿ (14 ವರ್ಷ) ಪುತ್ತೂರು ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲ್ ನಲ್ಲಿ ಕಲಿಯುತ್ತಾ ಅಲ್ಲೆ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದವನು ದಿನಾಂಕ 18.10.2019 ರಂದು ಹಾಸ್ಟೆಲ್ ನಿಂದ ಮನೆಗೆ ಬಂದಿದ್ದು, 31.10.2019 ರಂದು ಹಾಸ್ಟೆಲ್ ಗೆ ಹೋಗುತ್ತೆಂದು

ನಾಪತ್ತೆಯಾದ ಬಾಲಕ Read More »

ಕರಾವಳಿ

ಬಿಸಿಯೂಟ ಮೆನು ಬದಲಾವಣೆಯ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,  ನ.1  ಸರಕಾರಿ ಶಾಲೆಗಳಲ್ಲಿನ ಬಿಸಿಯೂಟ ಮೆನು ಬದಲಾವಣೆಯ ಆದೇಶವನ್ನು ಮರುಪರಿಶೀಲಿಸುವಂತೆ ನೂಜಿಬಾಳ್ತಿಲ ತೆಗ್‍ರ್ ತುಳುಕೂಟ ಸಂಚಾಲಕ ಉಮೇಶ್ ಸಾಯಿರಾಮ್ ಅವರು ರಾಜ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಸರಕಾರವು ನ.1 ರಿಂದ ಸರಕಾರಿ ಶಾಲೆಗಳ ಬಿಸಿಯೂಟದ ಮೆನು ಬದಲಾವಣೆಗೆ ಆದೇಶಿಸಿದ್ದು, ಈ ಆದೇಶವು ಇಡೀ ರಾಜ್ಯಕ್ಕೆ ಒಂದೇ ರೀತಿಯ ಆಹಾರ ಪದ್ಧತಿಯನ್ನು ಸೂಚಿಸುತ್ತದೆ. ಆದರೆ ಈ ಆಹಾರ ಪದ್ಧತಿಯು ಕೇವಲ ಕೆಲವೇ ಜಿಲ್ಲೆಗಳಿಗೆ ಅನ್ವಯವಾಗುತ್ತಿದೆ. ಈ ಆಹಾರ

ಬಿಸಿಯೂಟ ಮೆನು ಬದಲಾವಣೆಯ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ Read More »

ಕರಾವಳಿ

‘ಕ್ಯಾರ್’ ಚಂಡಮಾರುತದ ಬೆನ್ನಲ್ಲೇ ‘ಮಹಾ’ ಚಂಡಮಾರುತ ➤ ಆತಂಕದಲ್ಲಿ ಕರಾವಳಿ ಜನತೆ

(ನ್ಯೂಸ್ ಕಡಬ) newskadaba.com, ಉಡುಪಿ, ಅ.31. ಕರಾವಳಿಯಲ್ಲಿ ಕ್ಯಾರ್ ಚಂಡಮಾರುತದ ಬೆನ್ನಲ್ಲೇ “ಮಹಾ” ಚಂಡಮಾರುತ ಅಪ್ಪಳಿಸುವ ಸೂಚನೆ ದೊರೆತಿದೆ. ವಾರದ ಹಿಂದಷ್ಟೇ ‘ಕ್ಯಾರ್’ ಚಂಡಮಾರುತ ಕರಾವಳಿ ಜನರನ್ನು ಭಯಭೀತಿತರನ್ನಾಗಿಸಿದೆ.ಇದೀಗ ಮುಂದಿನ 24ಗಂಟೆಗಳಲ್ಲಿ ಮಹಾ ಚಂಡಮಾರುತ ಅಪ್ಪಳಿಸಲಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮಹಾ ಚಂಡಮಾರುತದ ಕಾರಣದಿಂದ ನವೆಂಬರ್ 4ರವರೆಗೂ ಮೀನುಗಾರಿಕೆಗೆ ತೆರಳದಂತೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕೋಸ್ಟ್​ ಗಾರ್ಡ್​ ಆಪರೇಟಿಂಗ್ ಕೇಂದ್ರದಿಂದ ಸೂಚನೆ ದೊರೆತಿದೆ. ಈ ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆಯಿದೆ

‘ಕ್ಯಾರ್’ ಚಂಡಮಾರುತದ ಬೆನ್ನಲ್ಲೇ ‘ಮಹಾ’ ಚಂಡಮಾರುತ ➤ ಆತಂಕದಲ್ಲಿ ಕರಾವಳಿ ಜನತೆ Read More »

ಕರಾವಳಿ

ಕಡಬ: ಕಾರು – ಬೈಕ್ ಢಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಅ.30. ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಕಡಬದ ಕಾಲೇಜು ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ. ಗಾಯಾಳು ಸವಾರನನ್ನು ಕಡಬ ಸಮೀಪದ ಪಣೆಮಜಲು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ಸರ್ಕಾರಿ ಕಾಲೇಜು ಕಡೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಮಾರುತಿ ಎ-ಸ್ಟಾರ್ ಕಾರು ನಡುವೆ

ಕಡಬ: ಕಾರು – ಬೈಕ್ ಢಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ

ಅಟೋರಿಕ್ಷಾ ಮತ್ತು ಬೈಕ್ ಡಿಕ್ಕಿ ➤ಗಾಯಗೊಂಡ ಬೈಕ್ ಸವಾರ

(ನ್ಯೂಸ್ ಕಡಬ) newskadaba.com  ಪುತ್ತೂರು, ಅ.30  ಅಟೋರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಸವಾರ ಯಾದವ ಪೂಜಾರಿ ಎಂಬವರು ಗಾಯಗೊಂಡ ಘಟನೆ ಮಂಗಳವಾರದಂದು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಜಂಕ್ಷನ್ ಬಳಿ ನಡೆಯಿತು. ಡಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸವಾರ ಯಾದವ ಪೂಜಾರಿ ಎಂಬವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದುದರಿಂದ, ಅವರಿಗೆ ತಲೆಗೆ ಮತ್ತು ಕೈಗೆ ಗಾಯವಾಗಿರುತ್ತದೆ. ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ

ಅಟೋರಿಕ್ಷಾ ಮತ್ತು ಬೈಕ್ ಡಿಕ್ಕಿ ➤ಗಾಯಗೊಂಡ ಬೈಕ್ ಸವಾರ Read More »

ಕರಾವಳಿ

ಕೊಣಾಜೆ: ಬಸ್ – ಬೈಕ್ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕೊಣಾಜೆ, ಅ.29. ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ಠಾಣಾ ವ್ಯಾಪ್ತಿಯ ಕೊಣಾಜೆಯಲ್ಲಿ ನಡೆದಿದೆ. ಮೃತ ಯುವಕನನ್ನು ಪಜೀರು ಗ್ರಾಮದ ಬಾಕಿಮಾರು ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಸಂತೋಷ್ (26) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಇಲೆಕ್ಟ್ರಿಕಲ್ ಕೆಲಸದಲ್ಲಿದ್ದ ಈತ ಸೋಮವಾರ ರಾತ್ರಿ ಮನೆಗೆ ಹೋಗುತ್ತಿದ್ದಾಗ ಬಸ್ ಢಿಕ್ಕಿ ಎನ್ನಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಣಾಜೆ: ಬಸ್ – ಬೈಕ್ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಟಿ.ಜೆ. ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಅ.29. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದ ಜೋಸೆಫ್ ಟಿ.ಜೆಯವರು ಹೃದಯಾಘಾತದಿಂದ ಮಂಗಳವಾರದಂದು ನಿಧನ ಹೊಂದಿದರು. ಮಂಗಳವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಅದಾಗಲೇ ಹೃದಯಘಾತದಿಂದ ನಿಧನ ಹೊಂದಿದ್ದರು. ಮೃತರ ಅಂತ್ಯಸಂಸ್ಕಾರವು ಅಕ್ಟೋಬರ್ 30 ರಂದು ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ನಡೆಯಲಿದ್ದು, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ವಂದನೀಯ ಲಾರೆನ್ಸ್ ಮುಕ್ಕುಯಿರವರ ನೇತೃತ್ವದಲ್ಲಿ ನಡೆಯಲಿದೆ.

ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಟಿ.ಜೆ. ವಿಧಿವಶ Read More »

ಕರಾವಳಿ
Scroll to Top