ಕರಾವಳಿ

ಆತೂರು ರೇಂಜ್ ಆಶ್ರಯದಲ್ಲಿ ಪ್ರಚಾರ ಸಮಾವೇಶ

(ನ್ಯೂಸ್ ಕಡಬ) newskadaba.com, ಕಡಬ, ಡಿ.28   ಆತೂರು ರೇಂಜ್ ಜಂ – ಇಯ್ಯತುಲ್ ,ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಮತ್ತು ಎಸ್.ಕೆ.ಎಸ್.ಬಿ.ವಿ ಆತೂರು ರೇಂಜ್ ಜಂಟಿ ಆಶ್ರಯದಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ 60ನೇ ವಾರ್ಷಿಕೋತ್ಸವದ ಪ್ರಚಾರ ಪ್ರಯುಕ್ತ ರೇಂಜ್ ಗೆ ಒಳಪಟ್ಟ ಎಲ್ಲಾ ಮದರಸಗಳ ವ್ಯಾಪ್ತಿಯಲ್ಲಿ ಸಮ್ಮೇಳನ ಪ್ರಚಾರ ಸಮಾವೇಶ, ವಾಹನ ಸಂದೇಶ ಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮ ಬದ್ರಿಯಾ ಹಾಲ್ ಆತೂರಿನಲ್ಲಿ ಆತೂರು ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷ […]

ಆತೂರು ರೇಂಜ್ ಆಶ್ರಯದಲ್ಲಿ ಪ್ರಚಾರ ಸಮಾವೇಶ Read More »

ಕರಾವಳಿ

ಮಂಗಳೂರು ಪೊಲೀಸರ ದೌರ್ಜನ್ಯ ವಿರುದ್ದ ತೀವ್ರ ಪ್ರತಿರೋಧ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಡಿ.28. ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ವತಿಯಿಂದ ಮಂಗಳೂರಿನಲ್ಲಿ ನಡೆದ ಪೋಲೀಸ್ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿರೋಧ ಮತ್ತು ಕರಪತ್ರ ಪ್ರದರ್ಶನ ಶುಕ್ರವಾರ ಜುಮಾ ಬಳಿಕ ಮಸ್ಜಿದ್ ವಠಾರ ತೆಕ್ಕಾರುನಲ್ಲಿ ನಡೆಯಿತು. ಜಮಾಅತ್ ಆಡಳಿತ ಸಮಿತಿ ಸದಸ್ಯ ಉಸ್ಮಾನ್ ಸಹದಿ ತೆಕ್ಕಾರು ಖಂಡನಾ ಬಾಷಣ ನಡೆಸಿದರು. ಸ್ಥಳೀಯ ಖತೀಬ್ ಅಬ್ದುಲ್ ರವೂಫ್ ಅಹ್ಸನಿ ಕಾಸರಗೋಡು ಪ್ರಸ್ತುತ ಪೋಲೀಸ್ ಗೋಲಿಬಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಎಂ ತೆಕ್ಕಾರು ಪ್ರಧಾನ ಕಾರ್ಯದರ್ಶಿ

ಮಂಗಳೂರು ಪೊಲೀಸರ ದೌರ್ಜನ್ಯ ವಿರುದ್ದ ತೀವ್ರ ಪ್ರತಿರೋಧ Read More »

ಕರಾವಳಿ

ಜ.3 ರಿಂದ ರಾಜ್ಯ ಮಟ್ಟದ ಯುವಜನೋತ್ಸವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.28   2019-20 ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 3 ರಿಂದ 5 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ. ದ.ಕ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳು ಈ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಸ್ಪರ್ಧಿಗಳು ಜನವರಿ 3 ರಂದು ಬೆಳಿಗ್ಗೆ 10 ಗಂಟೆಯ ಒಳಗೆ ನಿಗದಿತ ನಮೂನೆಯ ಪ್ರವೇಶ ಅರ್ಜಿಯೊಂದಿಗೆ ಸಂಘಟಕರಲ್ಲಿ ವರದಿ ಮಾಡಬೇಕು ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ

ಜ.3 ರಿಂದ ರಾಜ್ಯ ಮಟ್ಟದ ಯುವಜನೋತ್ಸವ Read More »

ಕರಾವಳಿ

ಬಿ.ಐ.ಇ.ಆರ್.ಟಿ. ಪ್ರೌಢ ಹಾಗೂ ಪ್ರಾಥಮಿಕ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.28   2019-20ನೇ ಸಾಲಿಗೆ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಪ್ರೌಢ ಹಾಗೂ ಪ್ರಾಥಮಿಕ ಹುದ್ದೆಗೆ ವಿಶೇಷ ಡಿ.ಇಡಿ/ವಿಶೇಷ ಬಿ.ಇಡಿ ವಿದ್ಯಾರ್ಹತೆ ಪ್ರಮಾಣ ಪತ್ರ ಹೊಂದಿರುವ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಿದ್ದು, ಸೂಕ್ತ ದಾಖಲೆಯೊಂದಿಗೆ ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಮಂಗಳೂರು, ಜಿಲ್ಲಾ ಕಚೇರಿಗೆ ಜನವರಿ 2 ರೊಳಗೆ  ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ

ಬಿ.ಐ.ಇ.ಆರ್.ಟಿ. ಪ್ರೌಢ ಹಾಗೂ ಪ್ರಾಥಮಿಕ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಮಸೀದಿಗಳಲ್ಲಿ ಡಿ ಪಿ ಟಿ ಮತ್ತು ಟಿ ಡಿ ಲಸಿಕಾ ಮಾಹಿತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.28  ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸೂಚನೆಯಂತೆ ರಾಜ್ಯದ ಆರೋಗ್ಯ ಇಲಾಖೆಯ ಪ್ರಕಾರ ಗಂಟಲು ಮಾರಿ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು ಈಗಾಗಲೇ 500 ಕ್ಕೂ ಹೆಚ್ಚು ಸಂಕಿತ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಶೇಕಡಾ 70 ರಷ್ಟು 5 ರಿಂದ 16 ವರ್ಷ ವಯಸ್ಸಿನಲ್ಲಿ ಕಂಡು ಬಂದಿದೆ. ಇದಲ್ಲದೆ ರಾಜ್ಯದ 9 ಜಿಲ್ಲೆಗಳಲ್ಲಿ 370 ಪ್ರಕರಣಗಳು ವರದಿಯಾಗಿರುತ್ತದೆ. ಆದುದರಿಂದ ಈ ರೋಗ ಬರದಂತೆ /ಹೆಚ್ಚಾಗದಂತೆ ರಾಜ್ಯದಲ್ಲಿ ಗಂಟಲು ಮಾರಿ ಕಾಯಿಲೆಗೆ

ಮಸೀದಿಗಳಲ್ಲಿ ಡಿ ಪಿ ಟಿ ಮತ್ತು ಟಿ ಡಿ ಲಸಿಕಾ ಮಾಹಿತಿ Read More »

ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣ: ಸಿಐಡಿ ತನಿಖೆ ಆರಂಭ

ಮಂಗಳೂರು, ಡಿ.28: ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ ಶುಕ್ರವಾರ ತನಿಖೆ ಆರಂಭಿಸಿದೆ. ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದಲ್ಲಿ 5 ಮಂದಿ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡಿದೆ. ಸಿಐಡಿ ತಂಡಕ್ಕೆ ತನಿಖೆ ನಡೆಸಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಕಮಿಷನರ್ ಕಚೇರಿಗೆ ಆಗಮಿಸಿದ ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದ ತನಿಖಾ

ಮಂಗಳೂರು ಗೋಲಿಬಾರ್ ಪ್ರಕರಣ: ಸಿಐಡಿ ತನಿಖೆ ಆರಂಭ Read More »

ಕರಾವಳಿ

ಕುರಿಯಾಳಕೊಪ್ಪ: ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com, ಕಡಬ, ಡಿ.28   ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ 4ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ಮಂಗಳವಾರ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಕ್ಷೇತ್ರದ ಅರ್ಚಕ ಕೆ. ವೆಂಕಟ್ರಮಣ ಅಮ್ಮಣ್ಣಾಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ನಡೆಯಿತು. ಗೊನೆ ಮುಹೂರ್ತ, ಭಕ್ತಾದಿಗಳಿಂದ ಹಸುರುವಾಣಿ ಸಮರ್ಪಣೆ, ದುರ್ಗಾಪೂಜೆ, ರಂಗಪೂಜೆ ನಡೆದು ಸೋಮವಾರ ಉಗ್ರಾಣ ಮುಹೂರ್ತ ನಡೆದು ಮಂಗಳವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಆಚಾರ್ಯವಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ

ಕುರಿಯಾಳಕೊಪ್ಪ: ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ Read More »

ಕರಾವಳಿ

ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ

ಮಣಿಪಾಲ, ಡಿ.28: ನ್ಯುಮೋನಿಯಾದಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ  ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ. ಹಾಗೆಯೇ ಇಂದಿನಿಂದ ಗಣ್ಯರ ಭೇಟಿಗೆ ನಿರ್ಭಂದ ಮಾಡಲಾಗಿದೆ. ಶುಕ್ರವಾರ ಮಣಿಪಾಲ ಆಸ್ಪತ್ರೆ ಹೆಲ್ತ್ ಬುಲೆಟಿನ್‌ ಬಿಡುಗಡೆ ಮಾಡಿದ್ದು, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ತಿಳಿಸಿದೆ. ಸ್ವಾಮೀಜಿ ಅವರ ಪ್ರಜ್ಞೆಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಜೀವರಕ್ಷಕ ಸಾಧನಗಳ ಸಹಾಯದಲ್ಲಿ ಅವರಿದ್ದಾರೆ ಎಂದು ಹೇಳಿದ್ದಾರೆ. ಶುಕ್ರವಾರ

ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ Read More »

ಕರಾವಳಿ

ರೆಂಜಿಲಾಡಿ: ಭಜನಾ ಮಹಾಮಂಡಲ ಆಮಂತ್ರಣ ಪತ್ರಿಕೆ ವಿತರಣೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.28   ಪುತ್ತೂರು ತಾಲೂಕಿನ ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಡಿ.29ರಂದು ನಡೆಯಲಿರುವ ಭಜನಾ ಮಹಾಮಂಡಲದ ಆಮಂತ್ರಣ ಪತ್ರಿಕೆಯನ್ನು ರೆಂಜಿಲಾಡಿ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದಲ್ಲಿ ಗುರುಸ್ವಾಮಿ ರವೀಂದ್ರನ್ ಅವರಿಗೆ ಕಡಬ ತಾಲೂಕು ಭಜನಾ ಮಹಾಮಂಡಲದ ಸಂಯೋಜಕ ಉಮೇಶ್ ಶೆಟ್ಟಿ ಸಾಯಿರಾಮ್ ವಿತರಿಸಿದರು. ಈ ಸಂದರ್ಭದಲ್ಲಿ ಧರ್ಮಶಿಖರದ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಪದಕ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ರೆಂಜಿಲಾಡಿ: ಭಜನಾ ಮಹಾಮಂಡಲ ಆಮಂತ್ರಣ ಪತ್ರಿಕೆ ವಿತರಣೆ Read More »

ಕರಾವಳಿ

ಕಡಬ: ಮನೆಗೆ ನುಗ್ಗಿ ಕಳ್ಳತನ ➤ ಚಿನ್ನಾಭರಣ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಕೋಡಂದೂರು ಎಂಬಲ್ಲಿನ ಮನೆಯೊಂದಕ್ಕೆ ಶುಕ್ರವಾರ ಹಾಡುಹಗಲೇ ಒಳ ನುಗ್ಗಿರುವ ಕಳ್ಳರು ಮನೆಯೊಳಗಿಟ್ಟಿದ್ದ 16 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ‌. ಕೋಡಂದೂರು ನಿವಾಸಿ ಕಮಲ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗಿದ್ದ ಕಪಾಟನ್ನು ಜಾಲಾಡಿದ್ದಲ್ಲದೆ 16 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ಮನೆಯ ಬೀಗದ ಕೀಯನ್ನು ಹೊರಗಡೆ ಇಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ಕಮಲರವರು ಸಂಜೆ ಮನೆಗೆ ಹಿಂತಿರುಗಿದಾಗ ಬೀಗ ತೆರೆದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.

ಕಡಬ: ಮನೆಗೆ ನುಗ್ಗಿ ಕಳ್ಳತನ ➤ ಚಿನ್ನಾಭರಣ ಕಳ್ಳರ ಪಾಲು Read More »

ಕರಾವಳಿ
Scroll to Top